ʻಒಂದು ಜನ ಅದು ಮಾಡ್ಲಿಕ್ಕೆʼ..ಯಕ್ಷಗಾನದಲ್ಲಿ Rakshita Dialogue ಕೇಳಿ ನಕ್ಕಿದ್ದೇ ನಕ್ಕಿದ್ದು

Published : Nov 06, 2025, 02:10 PM IST
BBK 12 Rakshita Shetty

ಸಾರಾಂಶ

ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಮಾತ್ರ ಫೇಮಸ್ ಆಗ್ಲಿಲ್ಲ. ಅವರ ರಸಗುಲ್ಲ, ಅವ್ರ ಡೈಲಾಗ್ಸ್ ಕೂಡ ಅಷ್ಟೇ ಫೇಮಸ್ ಆಗಿವೆ. ತುಳುನಾಡಿನಲ್ಲಿ ರಕ್ಷಿತಾ ಮಾತುಗಳು ಈಗ ಎಲ್ಲೆಡೆ ಕೇಳಿ ಬರ್ತಿದೆ. ಯಕ್ಷಗಾನದಲ್ಲೂ ಅವ್ರ ಡೈಲಾಗ್ ಬಳಸಲಾಗಿದೆ.

ತಮ್ಮ ಮಾತಿನ ಮೂಲಕವೇ ಲಕ್ಷಾಂತರ ವೀಕ್ಷಕರನ್ನು ಹಿಡಿದಿಟ್ಟುಕೊಂಡವರು ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ (Bigg Boss contestant Rakshita). ಸೋಶಿಯಲ್ ಮೀಡಿಯಾದಲ್ಲಿ ಅಡುಗೆ ಮಾಡ್ತಾ, ರಸಗುಲ್ಲ ತಿಂತಾ, ಮಿಕ್ಸ್ ಕನ್ನಡ ಮಾತನಾಡ್ತಾ ಗಮನ ಸೆಳೆದಿದ್ದ ರಕ್ಷಿತಾ, ಬಿಗ್ ಬಾಸ್ ಮನೆಯಲ್ಲಿ ಚುರುಕಿನ ಆಟ ಆಡ್ತಿದ್ದಾರೆ. ಕರಾವಳಿ ಹುಡುಗಿ ಮೇಲೆ ಕರಾವಳಿ ಜನತೆಗೆ ಮಾತ್ರವಲ್ಲ ಉಳಿದ ಕರ್ನಾಟಕದ ಜನರಿಗೂ ವಿಶೇಷ ಒಲವಿದ್ದಂತೆ ಕಾಣ್ತಿದೆ. ಈ ಎಲ್ಲದರ ಮಧ್ಯೆ ರಕ್ಷಿತಾ ಮಾತೇ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕ್ಯಾಮರಾ ಹಿಂದೆ ಸರಿಯಾಗಿ ಕನ್ನಡ ಮಾತನಾಡುವ ರಕ್ಷಿತಾ ಕ್ಯಾಮರಾ ಮುಂದೆ, ಕಿಚ್ಚ ಸುದೀಪ್ (Kichcha Sudeep) ಮುಂದೆ ತಡವರಿಸ್ತಾರೆ, ಅದು ಇದು ಅಂತ ಮಾತನಾಡ್ತಾರೆ ಎನ್ನುವ ಆರೋಪ ರಕ್ಷಿತಾ ಮೇಲಿದೆ. ಅದೇನೇ ಇರಲಿ, ರಕ್ಷಿತಾ ಅದು, ಇದು , ಹಾಗೆ ಹೀಗೆ ಎನ್ನುವ ಡೈಲಾಗ್ ಮಾತ್ರ ಹೊರಗೆ ಸಿಕ್ಕಾಪಟ್ಟೆ ಸದ್ದು ಮಾಡಿದೆ. ರಕ್ಷಿತಾ ಮಾತುಗಳನ್ನು ಡಿಜೆ ಮಾಡಿ ವೈರಲ್ ಮಾಡಲಾಗ್ತಿದೆ. ಈಗ ಯಕ್ಷಗಾನ ಕಲಾವಿದರ ಬಾಯಲ್ಲೂ ರಕ್ಷಿತಾ ಡೈಲಾಗ್ ಕೇಳುವ ಸಮಯ ಬಂದಿದೆ.

ರಕ್ಷಿತಾ ಡೈಲಾಗ್ ಹೇಳಿದ ಯಕ್ಷಗಾನ ಕಲಾವಿದರು : 

ಕರ್ನಾಟಕದ ಹೆಮ್ಮೆಯ ಕಲೆಯಲ್ಲಿ ಯಕ್ಷಗಾನ ಒಂದು. ಯಕ್ಷಗಾನ ಕಲಾವಿದರು ಧಾರ್ಮಿಕ ಕಥೆಗಳನ್ನು ವೇದಿಕೆ ಮೇಲೆ ಪ್ರದರ್ಶಿಸಿದ್ರೂ ಮಧ್ಯೆ ಮಧ್ಯೆ ಪ್ರಸ್ತುತ ವಿಷ್ಯಗಳನ್ನು ಹಾಸ್ಯವಾಗಿ ಬಳಸಿಕೊಳ್ತಾರೆ. ಈಗ ರಕ್ಷಿತಾ ಡೈಲಾಗನ್ನು ಕಲಾವಿದರು ಹೇಳಿದ್ದಾರೆ. ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಡೆಸಿಕೊಟ್ಟ ಯಕ್ಷಗಾನದಲ್ಲಿ ಕಲಾವಿದರು ರಕ್ಷಿತಾ ಮಾತನ್ನು ತಮ್ಮ ಡೈಲಾಗ್ ಗೆ ಸೇರಿಸಿಕೊಂಡಿದ್ದಾರೆ. 

Annayya serial: ಕೊಲ್ಲಲು ಬಂದ ವೀರಭದ್ರನ ಸೊಕ್ಕು ಮುರಿದ ಶಾರದಮ್ಮ… ಇನ್ನು ನಾಲ್ಕು ಬಾರಿಸಿ ಅಂತಿದ್ದಾರೆ ವೀಕ್ಷಕರು

ಯಮ ಎಲ್ಲಿಗೆ ಹೋದ ಎನ್ನುವಾಗ ಕೋಣನ ವಿಷ್ಯ ಬರುತ್ತೆ. ಕೋಣ ಕಂಬಳಕ್ಕೆ ಹೋಗಿದ್ದು ಎನ್ನುವಾಗ ಕಂಬಳದ ಬಗ್ಗೆ ವಿವರಣೆ ನೀಡಲಾಗುತ್ತೆ. ʻʻಕಂಬಳ ಅಂದ್ರೆ ನೋಡಿ ಎರಡು ಇದು ಇರ್ತದಲ್ಲ, ಅದು ಪಟ್ಟಿ ಇರ್ತದೆ. ಅದರಲ್ಲಿ ಅದು ನಾಲ್ಕು ಕೋಣಗಳು ಇರ್ತದೆ. ಅಲ್ಲಿ ಎರಡು – ಇಲ್ಲಿ ಎರಡು. ಅದರಲ್ಲಿ ಒಂದು ಜನ ಇದು ಮಾಡ್ಲಿಕ್ಕೆʼʼ ಅಂತ ರಕ್ಷಿತಾ ಮಾಡಿದಂತೆಯೇ ಆಕ್ಷನ್ ಮಾಡಿ ತೋರಿಸ್ತಾರೆ. ತಮ್ಮ ಡೈಲಾಗನ್ನು ರಕ್ಷಿತಾ ಶೈಲಿಯಲ್ಲಿ ಹೇಳುವ ಕಲಾವಿದನ ಮಾತು ಕೇಳಿ ಪ್ರೇಕ್ಷಕರು ಮಾತ್ರವಲ್ಲ ವೇದಿಕೆ ಮೇಲಿದ್ದ ಕಲಾವಿದರು ಕೂಡ ನಗ್ತಿರೋದನ್ನು ನೀವು ನೋಡ್ಬಹುದು.

ಇಂದು ನಾಮಿನೇಟ್ ಆಗ್ತಾರಾ ರಕ್ಷಿತಾ? : 

ಬಿಗ್ ಬಾಸ್ ಮನೆ ಈಗ ಎರಡು ಬಣವಾಗಿದೆ. ರಾಶಿಕಾ ವರ್ಸಸ್ ರಕ್ಷಿತಾ. ರಕ್ಷಿತಾಗೆ ಮನೆಯಿಂದ ಬಂದ ಲೆಟರ್ ಕೊಡ್ಬೇಕಾ ಇಲ್ಲ ರಾಶಿಕಾಗೆ ಕೊಡ್ಬೇಕಾ ಎನ್ನುವ ಬಗ್ಗೆ ಬಿಗ್ ಬಾಸ್ ಮನೆ ಸ್ಪರ್ಧಿಗಳ ಮಧ್ಯೆ ಸಾಕಷ್ಟು ಚರ್ಚೆ, ವಾದ – ವಿವಾದ ನಡೆದಿದೆ. ಕಲರ್ಸ್ ಕನ್ನಡ ಪ್ರೊಮೋ ಪ್ರಕಾರ, ರಕ್ಷಿತಾಗಿಂತ ರಾಶಿಕಾಗೆ ಹೆಚ್ಚು ವೋಟ್ ಬಿದ್ದಿದ್ದರಿಂದ ರಕ್ಷಿತಾ ಲೇಟರನ್ನು ಧ್ರುವಂತ್ ಮಶಿನ್ ಗೆ ಹಾಕಿದಂತಿದೆ. ಲೆಟರ್ ಸಿಗುತ್ತೆ ಎನ್ನುವ ಖುಷಿಯಲ್ಲಿದ್ದ ರಕ್ಷಿತಾಗೆ ನಿರಾಸೆಯಾದಂತಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಸಾಕಷ್ಟು ವಿರೋಧ ಕೇಳಿ ಬಂದಿದೆ. 

Karna Serial: ಒಡಲಾಳದ ಸತ್ಯವನ್ನು ಅಳಿಸಿ ಹಾಕಲು ಮುಂದಾದ ನಿತ್ಯಾ: ಪತ್ರ ನೋಡಿ ಕರ್ಣ ಶಾಕ್!

ರಕ್ಷಿತಾ ಪರ ನಿಂತಿದ್ದ ಧ್ರುವಂತ್ ಈಗ ಪಕ್ಷ ಬದಲಿಸಿದ್ದಾರೆ. ಇದು ತುಳುನಾಡು ಜನತೆ ಹಾಗೂ ರಕ್ಷಿತಾ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿರಲು ರಾಶಿಕಾಗಿಂತ ರಕ್ಷಿತಾ ಅರ್ಹರು ಅಂತ ಬಳಕೆದಾರರು ಮಾತನಾಡಿಕೊಳ್ತಿದ್ದಾರೆ. ಬಿಗ್ ಬಾಸ್ ಮನೆಗೆ ಒಂಟಿಯಾಗಿ ಬಂದು ಎಲ್ಲರನ್ನು ಎದುರಿಸಿ ನಿಂತ ರಕ್ಷಿತಾಗೆ ಅನೇಕ ಸ್ಟಾರ್ಸ್ ಮತ ಬೀಳ್ತಿದೆ. ಈಗಾಗಲೇ ಸಿನಿಮಾದಲ್ಲಿ ಅವಕಾಶ ನೀಡೋದಾಗಿ ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!