
‘ಶ್ರೀಗಂಧದ ಗುಡಿ’ ಧಾರಾವಾಹಿಯಲ್ಲಿ ಚಂದನಾ ಹಾಗೂ ಹರಿಶ್ಚಂದ್ರ ಮದುವೆ ಆಗುವ ಸಮಯ ಬಂದಿದೆ. ಇವರಿಬ್ಬರು ಮದುವೆ ಆಗ್ತಾರಾ? ಇಲ್ಲವಾ? ಇನ್‌ಸ್ಪೆಕ್ಟರ್ ಕಾಳೆಯಿಂದ ಹರಿಶ್ಚಂದ್ರ, ಚಂದನಾ ಬದುಕಿನಲ್ಲಿ ಊಹಿಸದ ತಿರುವು ಸಿಗಲಿದೆ. ಹಾಗಾದರೆ ಏನದು?
ಖ್ಯಾತ ನಟ ರವಿ ಕಾಳೆ ಅವರು ‘ಶ್ರೀಗಂಧದಗುಡಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳಲ್ಲಿ ‘ಶ್ರೀಗಂಧದಗುಡಿ’ ಕೂಡ ಒಂದಾಗಿದ್ದು ಪ್ರತಿ ರಾತ್ರಿ 8 ಕ್ಕೆ ಪ್ರಸಾರವಾಗುತ್ತಿದೆ.
ಸದ್ಯ ಈ ಧಾರಾವಾಹಿಯ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ. ಚಂದನಾಗೆ ತನ್ನ ಮನೆಯಲ್ಲಿ ಇರೋಕೆ ಆಗೋದಿಲ್ಲ, ನನ್ನ ಗುರಿಗಳನ್ನು ಸಾಧಿಸಲು ಬೆಂಗಳೂರಿಗೆ ಹೋಗಬೇಕೆಂದು ಹೇಳುತ್ತಾಳೆ. ಹೀಗಾಗಿ ಅವಳು ಕ್ಯಾಬ್ ಡ್ರೈವರ್ ಹರಿಶ್ಚಂದ್ರನ ಸಹಾಯ ಕೇಳುತ್ತಾಳೆ. ಹರಿಶ್ಚಂದ್ರ ಆಕೆಗೆ ರಾತ್ರಿ ಮನೆ ಬಿಟ್ಟು ಬರುವಂತೆ ಹೇಳುತ್ತಾನೆ, ನಾನೇ ನಿಮ್ಮನ್ನು ಕರೆದುಕೊಂಡು ಬರುತ್ತೀನಿ ಎಂದು ಕೂಡ ಹೇಳುತ್ತಾನೆ.
ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಚಂದನಾ ಮಾಡಿದ ಒಂದು ತಪ್ಪಿನಿಂದ, ಅವಳ ಮನೆಯವರಿಗೆ ಆಕೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಗೊತ್ತಾಗುತ್ತದೆ. ತನ್ನನ್ನು ಮದುವೆ ಆಗಬೇಕಿದ್ದ ಹುಡುಗ ಸೈಕೋ ಎನ್ನೋದು ಚಂದನಾಗೆ ಗೊತ್ತು. ಫೋನ್‌ನಲ್ಲಿ ಅವಳು ಆ ಸೈಕೋ ಬಳಿ ಬಾಯಿಗೆ ಬಂದಹಾಗೆ ಮಾತನಾಡಿ, ಮನೆ ಬಿಟ್ಟಿರುವ ವಿಷಯವನ್ನು ಹೇಳುತ್ತಾಳೆ.
ಚಂದನಾಳ ತಂದೆ ಮಹಾಬಲ ತನ್ನ ಕಾಂಟ್ಯಾಕ್ಟ್ ಬಳಸಿ, ಇವರಿಬ್ಬರ ಮೇಲೆ ದಾಳಿ ಮಾಡುತ್ತಾನೆ. ತಮ್ಮನ್ನು ರಕ್ಷಿಸಿ ಎಂದು ಹರಿಶ್ಚಂದ್ರ ಪೊಲೀಸ್ ಠಾಣೆಗೆ ಬರುತ್ತಾರೆ. ಅಲ್ಲಿ ಇನ್‌ಸ್ಪೆಕ್ಟರ್ ಕಾಳೆ ಇದ್ದು, ಇವರಿಂದಲೇ ಸೀರಿಯಲ್ ಕಥೆಗೆ ಟ್ವಿಸ್ಟ್ ಸಿಗುವುದು.
ಹರಿಶ್ಚಂದ್ರ ಹಾಗೂ ಚಂದನಾ ಉಳಿಯಬೇಕು ಎಂದರೆ ಅವರಿಬ್ಬರೂ ಮದುವೆಯಾಗಬೇಕು. ಚಂದನಾಳನ್ನು ಪ್ರೀತಿ ಮಾಡುವ ಹರಿಶ್ಚಂದ್ರ, ಈ ಪರಿಸ್ಥಿತಿಯನ್ನು ತನ್ನ ಪ್ರಯೋಜನಕ್ಕೆ ಬಳಸಿಕೊಳ್ಳುತ್ತಾನೆ, ಹೇಗೆ ಅವರ ಮದುವೆ ನಡೆಯುತ್ತದೆ ಎಂಬುದು ಈಗ ಇರುವ ಟ್ವಿಸ್ಟ್.
ಹರಿಶ್ಚಂದ್ರ ಪಾತ್ರದಲ್ಲಿ ಭವಿಷ್ ಗೌಡ, ಚಂದನಾ ಪಾತ್ರದಲ್ಲಿ ಸಂಜನಾ ಬುರ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಶಿಶಿರ್ ಶಾಸ್ತ್ರೀ, ಕರಿಸುಬ್ಬು, ನೀನಾಸಂ ಅಶ್ವತ್ಥ್ ಮುಂತಾದವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.