Bigg Boss Kannada 11 ವಿಜೇತ ಹನುಮಂತ ಅಣ್ಣ ಮಾರುತಿ ಕೂಡ ರಿಯಾಲಿಟಿ ಶೋ ಸ್ಪರ್ಧಿಯೇ! ಯಾರದು?

Published : Feb 09, 2025, 09:32 PM ISTUpdated : Feb 10, 2025, 09:59 AM IST
Bigg Boss Kannada 11 ವಿಜೇತ ಹನುಮಂತ ಅಣ್ಣ ಮಾರುತಿ ಕೂಡ ರಿಯಾಲಿಟಿ ಶೋ ಸ್ಪರ್ಧಿಯೇ! ಯಾರದು?

ಸಾರಾಂಶ

ಈಗಾಗಲೇ ಹನುಮಂತ ಅವರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು, ಹೆಸರು ಮಾಡಿದ್ದಾರೆ. ಆದರೆ ಅವರ ಅಣ್ಣ ಕೂಡ ರಿಯಾಲಿಟಿ ಶೋನಲ್ಲಿ ಹೆಸರು ಮಾಡಿದ್ದಾರೆ.   

ರಿಯಾಲಿಟಿ ಶೋಗಳ ಮೂಲಕ ಹೆಸರು ಮಾಡಿರುವ ಹಾವೇರಿಯ ಹನುಮಂತ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಟ್ರೋಫಿ ಪಡೆದಾಗಿದೆ. ಹನುಮಂತ ಮುಗ್ಧ ಅಥವಾ ಬುದ್ಧಿವಂತ ಎಂಬ ಬಗ್ಗೆ ಚರ್ಚೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ನಡುವೆ ಹನುಮಂತ ಸಹೋದರ ಕೂಡ ರಿಯಾಲಿಟಿ ಶೋ ಅಭ್ಯರ್ಥಿ ಎನ್ನೋದು ಇತ್ತೀಚೆಗೆ ಬೆಳಕಿಗೆ ಬಂದಿದ್ದೆ. ಅಂದಹಾಗೆ 2015ರಲ್ಲಿ ಈ ಶೋ ತೆರೆಕಂಡಿತ್ತು. 

ಪ್ರೋಮೋ ರಿಲೀಸ್‌ ಆಗಿತ್ತು! 
‘ಹಳ್ಳಿ ಹೈದ ಪ್ಯಾಟೆಗ್‌ ಬಂದ’ ರಿಯಾಲಿಟಿ ಶೋನಲ್ಲಿ ಹನುಮಂತ ಅವರ ಅಣ್ಣ ಮಾರುತಿ ಭಾಗವಹಿಸಿದ್ದರು. ಈ ಶೋವನ್ನು ಸಂತೋಷ್‌ ನಿರೂಪಣೆ ಮಾಡಿದ್ದರು. ಈ ಶೋನ ಮೊದಲ ಸೀಸನ್‌ನ್ನು ಅಕುಲ್‌ ಬಾಲಾಜಿ ಅವರು ನಿರೂಪಣೆ ಮಾಡಿದ್ದರೆ, ಎರಡನೇ ಸೀಸನ್‌ನ್ನು ಸಂತೋಷ್‌ ನಿರೂಪಣೆ ಮಾಡಿದ್ದರು. ʼಹಳ್ಳಿ ಹೈದʼ ಸೀಸನ್‌ ಎರಡರಲ್ಲಿ ಶಿವಕುಮಾರ್‌ ವಿನ್ನರ್‌ ಆಗಿದ್ದರು. ಈ ಶೋನಲ್ಲಿ ಭಾಗವಹಿಸುವಾಗ ಸೆರೆ ಹಿಡಿದಿದ್ದ ಪ್ರೋಮೋದಲ್ಲಿ ಮಾರುತಿ ಕುರಿ ಕಾಯೋದು, ಹನುಮಂತ ತಂದೆ-ತಾಯಿ ಮಾತನಾಡಿರುವ ಕಂಟೆಂಟ್‌ ಇದೆ.

ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿಗೆ ಕರೆ ಮಾಡಿದ ಮಾಜಿ ಸಚಿವ; ರಾಜಕೀಯಕ್ಕೆ ಬರ್ತಾನಾ ಹಳ್ಳಿ ಹೈದ!

ಹನುಮಂತ ಬಗ್ಗೆ ಮಾತನಾಡಿಲ್ಲ..! 
ಮಾರುತಿ ಮೂರನೇ ಕ್ಲಾಸ್‌ ಮಾತ್ರ ಓದಿದ್ದರು. ಶಾಲೆಯಲ್ಲಿ ಮಾರುತಿ ಬಗ್ಗೆ ಬರೀ ದೂರುಗಳು ಕೇಳಿಬರುತ್ತಿದ್ದವಂತೆ. ಬ್ಯಾಗ್‌ ಕಳೆದೋಯ್ತ, ಪೆನ್ಸಿಲ್ ಇಲ್ಲ, ಪಾಠಿ ಇಲ್ಲ ಅಂತ ಹೇಳೋದು ಆಗಿತ್ತು. ಹೀಗಾಗಿ ಮಾರುತಿ ಶಾಲೆ ಬಿಟ್ಟು ಕುರಿ ಕಾಯಲು ಆರಂಭಿಸಿದ್ದರು. ಈ ಪ್ರೋಮೋದಲ್ಲಿ ಹನುಮಂತ ಬಗ್ಗೆ ಮಾತನಾಡಲಾಗಿಲ್ಲ, ಮುಖವನ್ನು ತೋರಿಸಿರಲಿಲ್ಲ. ಆದರೆ ಹನುಮಂತ ತಂದೆ-ತಾಯಿ ಮಾತ್ರ ಇದ್ದರು. 

ಅಣ್ಣ ಏನಂದ್ರು? 
ಅಣ್ಣನ ಬಗ್ಗೆ ಹನುಮಂತ ಅಷ್ಟಾಗಿ ಮಾತನಾಡಿರಲಿಲ್ಲ. ʼಬಿಗ್‌ ಬಾಸ್ʼ‌ ಮನೆಯಲ್ಲಿಯೂ ಅವರು ತನ್ನ ಅಣ್ಣ ಇನ್ನೊಂದು ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ವಿಷಯದ ಬಗ್ಗೆ ಹೇಳಿರಲಿಲ್ಲ. ಇನ್ನು ಅಂದು ವಾಹಿನಿಯಲ್ಲಿ ಕಾಣಿಸಿದ್ದ ಮಾರುತಿಗೂ, ಇಂದು ಇರುವ ಮಾರುತಿಗೂ ಗುರುತು ಸಿಗದಷ್ಟು ಬದಲಾಗಿದ್ದಾರೆ. ಇನ್ನು ಹನುಮಂತ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋ ಗೆದ್ದಾಗ ಅವರು “ಹನುಮಂತ ಯಾವ ಹುಡುಗಿಯನ್ನು ಇಷ್ಟಪಟ್ಟಿದ್ದಾನೆ ಎನ್ನೋದು ಗೊತ್ತಿಲ್ಲ. ಆ ಹುಡುಗಿ ಯಾರು ಅಂತ ಗೊತ್ತಾದಮೇಲೆ ಅಥವಾ ನಾವು ಹುಡುಗಿ ಹುಡುಕಿ ಮದುವೆ ಮಾಡ್ತೀವಿ. ನಮ್ಮ ಸಂಪ್ರದಾಯದ ಪ್ರಕಾರ ನಾವು ಮದುವೆ ಮಾಡ್ತೀವಿ” ಎಂದು ಹೇಳಿದ್ದರು. 

ಅಣ್ಣ-ತಮ್ಮ ಸೂಪರ್!‌ 
ʼಸರಿಗಮಪʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಹನುಮಂತ ʼಭರ್ಜರಿ ಬ್ಯಾಚುಲರ್ಸ್ʼ‌, ʼಕಾಮಿಡಿ ಕಿಲಾಡಿಗಳುʼ ಶೋನಲ್ಲಿಯೂ ಭಾಗವಹಿಸಿದ್ದರು. ಗ್ರಾಮೀಣ ಪ್ರತಿಭೆಯ ಮುಗ್ಧತೆ ಅನೇಕ ಮನಸ್ಸು ಗೆದ್ದಿತ್ತು. ʼಬಿಗ್‌ ಬಾಸ್ʼ‌ ಮನೆಯಲ್ಲಿಯೂ ಅವರು ನೇರವಾಗಿ ಮಾತನಾಡೋದು, ಸರಳತೆ, ಹಳ್ಳಿ ಸೊಗಡು ನೋಡಿ ಅನೇಕರು ಇಷ್ಟಪಟ್ಟಿದ್ದರು. ಒಮ್ಮೊಮ್ಮೆ ಕಿಚ್ಚ ಸುದೀಪ್‌ಗೂ ಅಚ್ಚರಿ ಎನಿಸುವ ರೀತಿಯಲ್ಲಿ ಹನುಮಂತ ಅವರು ಪಂಚಿಂಗ್‌ ಡೈಲಾಗ್‌ ಹೇಳಿದ್ದುಂಟು. ಒಟ್ಟಿನಲ್ಲಿ ಅಣ್ಣ-ತಮ್ಮ ಇಬ್ಬರೂ ರಿಯಾಲಿಟಿ ಶೋ ಸ್ಪರ್ಧಿಗಳೇ ಅಂದಹಾಗಾಯ್ತು..! 

ಹನುಮಂತ ನಾಟಕ ಮಾಡ್ತಾನೆ ಅನ್ನೋರು ನೋಡ್ಬೇಕಂತೆ ಇದು.. ಏನಂತೆ 'ಬಿಗ್ ಬಾಸ್' ಮ್ಯಾಟರ್?

ಹನುಮಂತ ಅವರು ʼಬಾಯ್ಸ್‌ v/s ಗರ್ಲ್ಸ್ʼ‌ ಶೋನಲ್ಲಿ ಭಾಗವಹಿಸಿದ್ದರು. ಆದರೆ ಒಂದು ಎಪಿಸೋಡ್‌ನಲ್ಲಿ ಮಾತ್ರ ಕಾಣಿಸಿದ್ದ ಹನುಮಂತ ಮತ್ತೆ ಕಾಣಿಸಿರಲಿಲ್ಲ. ಇದಕ್ಕೆ ಕಾರಣ ಏನು ಎಂದು ವಾಹಿನಿಯವರಾಗಲೀ, ಹನುಮಂತ ಆಗಲೀ ಹೇಳಿಲ್ಲ. ಒಟ್ಟಿನಲ್ಲಿ ಹನುಮಂತ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಹೇಗೆ ಆಕ್ಟಿವ್‌ ಆಗಿರಲಿದ್ದಾರೆ ಎಂದು ಕಾದು ನೋಡಬೇಕಿದೆ. ಇನ್ನೊಂದು ಕಡೆ ಅವರು ಯಾರನ್ನು ಮದುವೆ ಆಗ್ತಾರೆ ಎಂಬ ವಿಷಯ ಕೂಡ ಭಾರೀ ಕುತೂಹಲವನ್ನು ಉಂಟು ಮಾಡಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?