ಗಂಡು ಮಗುವಿಗೆ ಜನ್ಮ ನೀಡಿದ ಲಕ್ಮೀ ಬಾರಮ್ಮ ನಟಿ ಕವಿತಾ ಗೌಡ!

By Santosh Naik  |  First Published Sep 18, 2024, 8:33 PM IST

ಕನ್ನಡದ ಖ್ಯಾತ ಧಾರಾವಾಹಿ ಲಕ್ಮೀ ಬಾರಮ್ಮದಲ್ಲಿ ಚಿನ್ನು ಪಾತ್ರದ ಮೂಲಕ ಖ್ಯಾತಿ ಪಡೆದಿದ್ದ ನಟಿ ಕವಿತಾ ಗೌಡ ಮತ್ತು ಅವರ ಪತಿ ಚಂದನ್ ಗೌಡ ದಂಪತಿಗೆ ಮುದ್ದಾದ ಗಂಡು ಮಗು ಜನಿಸಿದೆ. ನಟಿ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


ಬೆಂಗಳೂರು (ಸೆ.18): ಕನ್ನಡದ ಅತ್ಯಂತ ಜನಪ್ರಿಯ ಸೀರಿಯಲ್‌ ಲಕ್ಮೀ ಬಾರಮ್ಮದಲ್ಲಿ ಚಿನ್ನು ಪಾತ್ರದ ಮೂಲಕ ಪ್ರಖ್ಯಾತಿ ಪಡೆದಿದ್ದ ಕವಿತಾ ಗೌಡ ಹಾಗೂ ಚಂದನ್‌ ಗೌಡ ದಂಪತಿಗೆ ಗಂಡು ಮಗುವಾಗಿದೆ. ಗಂಡು ಮಗು ಹುಟ್ಟಿರುವ ವಿಚಾರವನ್ನುಸ್ವತಃ ಕವಿತಾ ಗೌಡ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 'ಯುವರಾಜನ ಆಗಮನ' ಎಂದು ಅವರು ಪೋಸ್ಟ್‌ ಮಾಡಿದ್ದಾರೆ. ಇತ್ತೀಚೆಗೆ ನಟಿಯರಾದ ಮಿಲನಾ ನಾಗರಾಜ್‌ ಹಾಗೂ ಪ್ರಣೀತಾ ಸುಭಾಷ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಿಲನಾ ನಾಗರಾಜ್‌ ಹಾಗೂ ಕವಿತಾ ಗೌಡ ಅವರಿಗೆ ಇದು ಮೊದಲ ಮಗುವಾಗಿದ್ದರೆ, ಪ್ರಣೀತಾ ಸುಭಾಷ್‌ಗೆ ಇದು 2ನೇ ಮಗು. ಕೆಲ ಸಮಯದ ಹಿಂದೆ ಕವಿತಾ ಗೌಡ ತಮ್ಮ ಫೇಸ್‌ಬುಕ್‌ ಅಕೌಂಟ್‌ ಮೂಲಕ ಶುಭ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸೀಮಂತದ ಸಮಯದಲ್ಲಿ ಪತಿ ಚಂದನ್‌ ಗೌಡ ತಮ್ಮ ಹೊಟ್ಟೆಗೆ ಮುತ್ತಿಡುತ್ತಿರುವ ಚಿತ್ರವನ್ನು ಅವರು ಪೋಸ್ಟ್‌ ಮಾಡುವ ಮೂಲಕ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಟಿ ಕವಿತಾ ಗೌಡ ಸೀಮಂತ ಸಂಭ್ರಮ, ತುಂಬು ಗರ್ಭಿಣಿ ನೇಹಾ ಗೌಡ ಭಾಗಿ, ಮೊದಲು ತಾಯಿ ಆಗೋದ್ಯಾರೆಂಬ ಕುತೂಹಲ!

Tap to resize

Latest Videos

undefined

ಇನ್ನು ಸೀರಿಯಲ್‌ ಹಾಗೂ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ಚಂದನ್‌ ಗೌಡ ಕುಡ ವಿಶೇಷ ವಿಡಿಯೋ ಮೂಲಕ ಮಗ ಹುಟ್ಟಿದ ಖುಷಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಕಾಲಿನ ವಿಡಿಯೋವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ತಾವು ಅಪ್ಪನಾದ ಸಂಭ್ರಮ ಹಂಚಿದ್ದಾರೆ. ನಮ್ಮ ಮುದ್ದು ಕಂದಮ್ಮೆ ಧರೆಗಿಳಿದಿದ್ದಾನೆ ಎಂದೂ ಚಂದನ್‌ ಇದರಲ್ಲಿ ಬರೆದುಕೊಂಡಿದ್ದಾರೆ. ಒಂದು ಗಂಟೆಯ ಹಿಂದೆ ಶೇರ್‌ ಮಾಡಿಕೊಂಡ ಈ ವಿಡಿಯೋಗೆ ಈಗಾಗಲೇ 36 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್‌ ಒತ್ತಿದ್ದಾರೆ. ಹೆಚ್ಚಿನವರು ಇಬ್ಬರಿಗೂ ಶುಭವಾಹಲಿ ಎಂದು ಹಾರೈಸಿದ್ದಾರೆ. ಮಗ ಬಂದ ಖುಷಿಯಲ್ಲಿಯೇ ಕವಿತಾ ಗೌಡ ಹಾಗೂ ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಅನ್ನೋ ಮಾಹಿತಿಯನ್ನೂ ಅವರು ನೀಡಿದ್ದಾರೆ.

ತುಂಬು ಗರ್ಭಿಣಿ ಚಿನ್ನುಗೆ ಮುದ್ದಿನ ಗೊಂಬೆ ಅಕ್ಕನಿಂದ ಶುಭ ಹಾರೈಕೆ…. ಅಕ್ಕ-ತಂಗಿಯ ಮುದ್ದಾದ ಫೋಟೊ ವೈರಲ್

ನಟಿ ಕವಿತಾ ಗೌಡ ಅವರ ಸೀಮಂತ ಸಮಾರಂಭ ಕೂಡ ಅದ್ದೂರಿಯಾಗಿ ನಡೆದಿತ್ತು. 5 ತಿಂಗಳು 7 ತಿಂಗಳು ಹಾಗೂ 9ನೇ ತಿಂಗಳಲ್ಲಿ ಸೀಮಂತ ಕಾರ್ಯಕ್ರಮ ಮಾಡಿದ್ದ ವಿಡಿಯೋಗಳನ್ನು ಅವರು ಪೋಸ್ಟ್‌ ಮಾಡಿದ್ದರು. ಅದರೊಂದಿಗೆ ಮಗುವಿನ ಫೋಟೋಶೂಟ್‌ ಕೂಡ ಇತ್ತೀಚೆಗೆ ಭಾರೀ ಗಮನ ಸೆಳೆದಿತ್ತು. ಗಣೇಶ ಹಬ್ಬದ ದಿನದಂದು ಕವಿತಾ ಗೌಡ ಅವರ ಫೋಟೋ ಶೂಟ್‌ ನೋಡಿಯೇ ಅಭಿಮಾನಿಗಳು ನಿಮ್ಮ ಮನೆಗೆ ಗಣೇಶನೇ ಬರುವುದು ಪಕ್ಕಾ ಎಂದಿದ್ದರು. ಅದರಂತೆ ಕವಿತಾ ಗೌಡ ಅವರ ಬಾಳಿನಲ್ಲಿ ಮುದ್ದು ಕಂದಮ್ಮನ ಎಂಟ್ರಿಯಾಗಿದೆ.

32ವರ್ಷದ ಕವಿತಾ ಗೌಡ 2021ರಲ್ಲಿ ಚಂದನ್‌ ಗೌಡ ಅವರನ್ನು ಅದ್ದೂರಿಯಾಗಿ ವಿವಾಹವಾಗಿದ್ದರು. ಲಕ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಜೊತೆಯಾಗಿ ನಟಿಸಿದ್ದ ಇಬ್ಬರ ನಡುವೆ ಅಂದೇ ಪ್ರೇಮಾಂಕುರವಾಗಿತ್ತು. ಬಹಳ ವರ್ಷಗಳ ಪ್ರೀತಿಯ ಬಳಿಕ ಇಬ್ಬರೂ ವಿವಾಹವಾಗಿದ್ದರು. ಕವಿತಾ ಗೌಡ ಕನ್ನಡದಲ್ಲಿ ಶ್ರೀನಿವಾಸ ಕಲ್ಯಾಣ, ಫರ್ಸ್ಟ್‌ ಲವ್‌, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಬೀರಬಲ್‌ ಟ್ರೈಯಾಲಜಿ, ಗೋವಿಂದ ಗೋವಿಂದ ಹಾಗೂ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

 

click me!