ಉತ್ತರ ಕರ್ನಾಟಕದವರೇ ನೆಗೆಟಿವ್ ಮೆಸೇಜ್ ಮಾಡೋದು, ನಂಬರ್ ಹುಡುಕಿ ಕಾಲ್ ಮಾಡಿದ್ದಕ್ಕೆ ಆಫ್‌ ಮಾಡ್ಕೊಂಡಿದ್ದಾನೆ: ರಜತ್

By Vaishnavi Chandrashekar  |  First Published Sep 19, 2024, 10:39 AM IST

ಸಾಮಜದಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ರಿಯಾಕ್ಟ್ ಮಾಡಿದ ರಜತ್ ಬುಜ್ಜಿ. ದರ್ಶನ್ ವಿಚಾರಕ್ಕೆ ಟ್ರೋಲ್ ಆಗಿದ್ದು ಯಾಕೆ?


2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಬುಜ್ಜಿ ಮತ್ತು ಪತ್ನಿ ಅಕ್ಷಿತಾ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಜೋಡಿ. ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವ ರಜತ್ ಕೆಲವು ದಿನಗಳ ಹಿಂದೆ ದರ್ಶನ್-ರೇಣುಕಾಸ್ವಾಮಿ ಘಟನೆ ಬಗ್ಗೆ ಧ್ವನಿ ಎತ್ತಿದ್ದರು, ಅದಾದ ಮೇಲೆ ವರುಣ್- ವರ್ಷ ಕಾವೇರಿ ಕಾಂಟ್ರವರ್ಸಿಗೂ ರಿಯಾಕ್ಟ್ ಮಾಡಿದ್ದಾರೆ

ವರುಣ್ ವರ್ಷ ಕಾಂಟ್ರವರ್ಸಿ: 

Tap to resize

Latest Videos

undefined

ನಾಲ್ಕೈದು ಸಲ ವರುಣ್ ಆರಾಧ್ಯರನ್ನು ಮಾತನಾಡಿಸಿದ್ದೀನಿ, ಆ ತರ ಮಾಡುವ ಹುಡುಗ ಅಲ್ವೇ ಅಲ್ಲ. ವರ್ಷ ಕಾವೇರಿ ಹೋಗಿ ದೂರು ನೀಡುವಷ್ಟು ಕೀಳು ಮಟ್ಟದ ಹುಡುಗ ಅಲ್ಲ ಅನ್ಸುತ್ತೆ. ಎಫ್‌ಐಆರ್‌ ಆಗಿದೆ ಅಂದ್ರೆ ಅವರಿಬ್ಬರ ನಡುವೆ ಏನ್ ಏನೇ ಆಗಿದೆ ಯಾರಿಗೂ ಗೊತ್ತಿಲ್ಲ. ಬಿಗ್ ಬಾಸ್ ಆರಂಭವಾಗುತ್ತಿರುವ ಕಾರಣ ಆಕೆ ಫ್ಲೋ ಕೊಟ್ಟ ಶೋ ಒಪ್ಪಿಕೊಂಡು ಹೋದರೂ ಗಿಮಿಕ್ ಎಂದು ಜನರು ಕಾಮೆಂಟ್ ಮಾಡುತ್ತಾರೆ. ಬಿಗ್ ಬಾಸ್‌ಗೆ ಹೋಗಿಲ್ಲ ಅಂದ್ರೆ ಸುಮ್ಮನಾಗುತ್ತಾರೆ ಇಲ್ಲ ಅಂದ್ರೆ ಇದು ಪಕ್ಕಾ ಗಿಮಿಕ್ ಎಂದು ಕಾಲೆಳೆಯುತ್ತಾರೆ. ನೆಗೆಟಿವ್ ಮಾತನಾಡುವವರು ಯಾರೂ ಬಂದು ನಮ್ಮ ಮನೆ ಬಿಲ್ ಕಟ್ಟಲ್ಲ, ಬಾಡಿಗೆ ಕಟ್ಟಲ್ಲ ನನ್ನ ಮನೆ ನಡೆಸುವುದಿಲ್ಲ ಇದೆಲ್ಲಾ ನೋಡಿಕೊಳ್ಳಬೇಕಿರುವುದು ನಾನು ಒಬ್ಬನೇ ದುಡಿದು ಜೀವನ ನಡೆಬೇಕಿರುವುದು ನಾನೊಬ್ಬನೇ. ಬಿಗ್ ಬಾಸ್ ಶೋ ಬಗ್ಗೆ ನಾನು ಮಾತನಾಡಿದ್ದರೆ ಅಯ್ಯೋ ನಾನು ಒಳಗೆ ಹೋಗಬೇಕು ಎಂದು ಟ್ರೋಲ್ ಮಾಡುತ್ತಾರೆ. ಪ್ರತಿಯೊಂದು ಶೋನಲ್ಲಿ ನಾನು ಆಂಗರಿ ಎಂಗ್ ಮ್ಯಾನ್ ಕಿರೀಟ ಪಡೆದುಕೊಂಡಿದ್ದೀನಿ...ಎಂದು ಖಾಸಗಿ ಸಂದರ್ಶನದಲ್ಲಿ ರಜತ್ ಮಾತನಾಡಿದ್ದಾರೆ.

ಮೈ ತುಂಬಾ ಬಟ್ಟೆ ಹಾಕೊಳ್ಳಿ ಇಷ್ಟ ಆಗ್ತೀರಾ; ನಮತ್ರಾ ಗೌಡ ಸೀರೆಗೆ ಫಿದಾ ಆದ ಗಂಡೈಕ್ಳು!

ದರ್ಶನ್‌ ಬಗ್ಗೆ ಮಾತನಾಡಿದ್ದಕ್ಕೆ ಟ್ರೋಲ್:

ನಟ ದರ್ಶನ್ ನಾನು ಮಾತನಾಡಿದಾಗ ಹಲವು ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ಸ್ ಬಂದಿತ್ತು. ಜನರಿಗೆ ನಾನು ಹೇಳುವುದು ಒಂದೇ ಯಾವತ್ತಿದ್ದರೂ ಎರಡು ಸೈಡ್‌ ಕಥೆಗಳನ್ನು ಕೇಳಬೇಕು. ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಮಾಡುವುದು ಉತ್ತರ ಕರ್ನಾಟಕದವರು. ನನಗೆ ಒಬ್ಬ ಮೆಸೇಜ್ ಹಾಕಿದ್ದ ಮಾತನಾಡಿಸಿ ನಂಬರ್ ಪಡೆದುಕೊಂಡೆ...ಅವತ್ತು ಅವನು ಫೋನ್ ಆಫ್ ಮಾಡಿದವರು ಇವತ್ತಿಗೂ ಆನ್ ಮಾಡಿಲ್ಲ. ಒಳ್ಳೆ ಮಾತುಗಳಲ್ಲಿ ನಾನು ಮೆಸೇಜ್ ಮಾಡಿದ್ದೆ ಆದರೆ ಯಾರೂ ಅರ್ಥ ಮಾಡಿಕೊಂಡಿಲ್ಲ. 16 ವರ್ಷ ಆಗುತ್ತಿದ್ದಂತೆ ಅಥವಾ ಸ್ಟಾರ್ ನಟರ ಮಕ್ಕಳು ಅಂತಲ್ಲೋ ಅಥವಾ ಒಂದೆರಡು ಸಿನಿಮಾಗಳಲ್ಲಿ ಸೈಡ್ ರೋಲ್ ಮಾಡಿದ ತಕ್ಷಣ ಬಂದು ಕ್ಯಾಮೆರಾ ಮುಂದೆ ಕಾಲಿ ಪಲಾವ್ ಮಾತನಾಡುವ ವ್ಯಕ್ತಿ ನಾನಲ್ಲ. 2013ರಿಂದ ರಿಯಾಲಿಟಿ ಶೋಗಳನ್ನು ಮಾಡಿಕೊಂಡು ಬಂದಿದ್ದೀನಿ....ಏನ್  ಏನೋ ಮಾತನಾಡಿದರೆ ಇಷ್ಟೋತ್ತಿಗೆ ನಾನು ಲೈಮ್‌ ಲೈಟ್‌ನಲ್ಲಿ ಇರುತ್ತಿದ್ದೆ ಎಂದು ರಜತ್ ಹೇಳಿದ್ದಾರೆ. 

ಜೊತೆಗಿದ್ದ ಯುವತಿಗೆ ಲೈಂಗಿಕ ಕಿರುಕುಳ ಕೊಟ್ರಾ ಜಾನಿ ಮಾಸ್ಟರ್; ಏನಿದು ಲವ್ ಸೆಕ್ಸ್ ಧೋಖಾ?

click me!