ತ್ರಿವಿಕ್ರಮ್ ಗುರಿಗೆ ನೆಲಕಚ್ಚಿದ ಎದುರಾಳಿ, ಗೆಲುವಿಗಾಗಿ ಮನುಷ್ಯತ್ವ ಮರೆತ ಸ್ಪರ್ಧಿಗಳು!

By Gowthami K  |  First Published Oct 22, 2024, 11:42 PM IST

ಬಿಗ್‌ಬಾಸ್‌ ಕನ್ನಡ 11ರ ನಾಲ್ಕನೇ ವಾರದ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಮಿತಿಮೀರಿ ವರ್ತಿಸಿದ್ದಾರೆ. ಅನುಷಾ ರೈ ಅವರನ್ನು ಟಾರ್ಗೆಟ್ ಮಾಡಿ ದಿಂಬಿನಿಂದ ಹೊಡೆದು ಬೀಳಿಸಿದ್ದಾರೆ.


ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ನ ನಾಲ್ಕನೇ ವಾರದ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಮನುಷ್ಯತ್ವವನ್ನೇ ಮರೆದು ಮನಬಂದತೆ ಆಡಿದ್ದಾರೆ. ಅ.22ರ ಸಂಚಿಕೆಯಲ್ಲಿ ಸ್ಪರ್ಧಿಗಳು ಎಷ್ಟು ಕೀಳುಮಟ್ಟಕ್ಕೆ ಇಳಿದು ಆಡಿದರು ಎಂಬುದು ಎದ್ದು ಕಾಣುತ್ತಿತ್ತು. 

ಮನೆಯ ಜೋಡಿ  ಕ್ಯಾಪ್ಟನ್‌ ಟಾಸ್ಕ್‌ ನಲ್ಲಿ 17 ನಿಮಿಷ ಸುತ್ತುವುದು ಟಾಸ್ಕ್‌ ಆಗಿತ್ತು. ಅನುಷಾ ರೈ ಮತ್ತು ಮಂಜು ಜೋಡಿಯಾಗಿ ಆಡುವಾಗ ಮನೆಯವರೆಲ್ಲರೂ ಅನುಷಾ ಅವರನ್ನೇ ಟಾರ್ಗೆಟ್‌ ಮಾಡಿ ಹೊಡೆದರು. ಎರಡೆರಡು ಬಾರಿ ಅನುಷಾ ರೈ  ಅವರನ್ನು ದಿಂಬಿನಿಂದ ಹೊಡೆದು ಬೀಳಿಸಿದರು. ನೋವು ತಡೆಯಲಾಗದ ಅನುಷಾ ಏಳಲು ಕಷ್ಟಪಟ್ಟರು. ಜೊತೆಗೆ ಅತ್ತುಕೊಂಡೇ ಟಾಸ್ಕ್‌ ಮುಗಿಸಿದರು.

Tap to resize

Latest Videos

undefined

ಹರಿದ ನೋಟುಗಳನ್ನು ಬದಲಾಯಿಸುವುದು ಹೇಗೆ? ಯಾವ ನೋಟಿಗೆ ಬದಲಾವಣೆ ಇದೆ?

ಮೈ, ಮುಖ ಅಂತ ನೋಡದೆ ಮನಬಂದತೆ ತೆಂಗಿನ ಎಣ್ಣೆ, ಶ್ಯಾಂಪೂ, ಸರ್ಫ್ ಸೇರಿ ಅನೇಕ ಲಿಕ್ವಿಡ್‌ ಗಳನ್ನು ಬಳಸಿ ನೀರಿನಲ್ಲಿ ಕಲಕಿ ಎರೆಚಲಾಗಿದೆ. ಅಷ್ಟೇ ಅಲ್ಲದೇ ದಿಂಬಿನಿಂದ ಹೊಡೆದು ಬೀಳಿಸಲಾಗಿದೆ. ಬೆನ್ನಿಗೆ ಬಲವಾದ ನೋವಾಗುವ ರೀತಿಯಲ್ಲಿ ಅನುಷಾ ಈ ಹೊಡೆತದಿಂದ ಬಿದ್ದಾಗ ಎಲ್ಲರೂ ಶಾಕ್ ಆಗಿದ್ದಾರೆ. ಭವ್ಯಾ ಗೌಡ ಖಂಡನೆ ವ್ಯಕ್ತಪಡಿಸಿದರೆ, ಮೋಕ್ಷಿತಾ ಅತ್ತೇ ಬಿಟ್ಟರು. ಗೌತಮಿ ಕೂಡ ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟಾಸ್ಕ್‌ ಮಾಡುವಾಗ ಪ್ರೋಪರ್ಟಿಯೇ ತುಂಡಾಗಿ ಹೋಯ್ತು. ಹೀಗಾಗಿ ಸ್ವಲ್ಪ ಹೊತ್ತಿನ ಕಾಲ ಟಾಸ್ಕ್‌ ಗೆ ವಿರಾಮ ಘೋಷಿಸಲಾಯ್ತು. ಈ ವೇಳೆ ತ್ರಿವಿಕ್ರಮ್‌ ಮತ್ತು ಶಿಶರ್ ಆಕೆ ತುಂಬಾ ಸ್ಟ್ರಾಂಗ್‌, ಮೆಂಟಲಿ ಸ್ಟ್ರಾಂಗ್‌ ಇದ್ದಾಳೆ  ಎಂದು ಅನುಷಾ ಬಗ್ಗೆ ಮಾತನಾಡಿಕೊಂಡರು. ಇನ್ನು  ಅನುಷಾ ನೋವು ತಾಳಲಾರದೆ ಅತ್ತರು.  ಮತ್ತೆ ಟಾಸ್ಕ್‌ ಗೆ ಬಂದಾಗ ಮನೆಯವರೆಲ್ಲಾ ಅಳುತ್ತಿರುವುದ್ಯಾಕೆ ಎಂದಿದ್ದಕ್ಕೆ, ಅತ್ತಿಲ್ಲ ಫೇಸ್‌ವಾಶ್‌ ಮಾಡಿ ಬಂದೆ ಅಷ್ಟೇ ಎಂದು ಹೇಳಿದರು.

ನಟ ಪ್ರಭಾಸ್ ಮದುವೆ ಬಗ್ಗೆ ಒಳ್ಳೆ ಸುದ್ದಿ ಹೇಳಿದ ಅಜ್ಜಿ ಶ್ಯಾಮಲಾ ದೇವಿ!

ಅನುಷಾ ರೈ ಪೆಟ್ಟಾಗಿದ್ದರೂ ಕೂಡ ಗಟ್ಟಿಯಾಗಿ ನಿಂತು ಟಾಸ್ಕ್​ ಅನ್ನು ಫಿನಿಶ್ ಮಾಡಿದರು. ಗೋಲ್ಡ್ ಸುರೇಶ್, ಶಿಶಿರ್, ತ್ರಿವಿಕ್ರಮ್ ಹೆಚ್ಚು ಟಾರ್ಗೆಟ್‌ ಮಾಡಿ ಹೊಡೆದರು. ಟಾಸ್ಕ್‌ ಬಳಿಕ ಭವ್ಯ ಹುಡುಗಿಯರನ್ನು ಟಾರ್ಗೆಟ್​ ಮಾಡಿ ಹೊಡೆದಿದ್ದು ಯಾಕೆ ಎಂದು ಕೇಳಿದ್ದು, ಪುರುಷ ಸದಸ್ಯರು ವಿರೋಧಿಸಿದರು. ಇನ್ನೊಂದು ಕಡೆ ಗೊತ್ತಿದ್ದೇ ನಾನು ಹೊಡೆದೆ ಎಂದು ತ್ರಿವಿಕ್ರಮ್‌ ಹೇಳಿದ್ದು ಮೋಕ್ಷಿತಾ, ಮಂಜು, ಗೌತಮಿ ಅವರು ಇದು ತಪ್ಪು ಭವಿಷ್ಯದಲ್ಲಿ ಆಡಬೇಕಲ್ವಾ? ಬೇಕೆಂತಲೇ ಮಾಡಿರುವುದು ಸರಿಯಲ್ಲ ಎಂದರು.

ಇದೇ ರೀತಿ ಜೋಡಿಯಾಗಿ ಕೆಲವರು ಟಾಸ್ಕ್‌ ಫಿನಿಶ್ ಮಾಡಿದರು. ಮಿಕ್ಕವರು ಮಧ್ಯದಲ್ಲೇ ಹೊರ ಹೋದರು. ಈ ಟಾಸ್ಕ್‌ ನಲ್ಲಿ ಕೊನೆಗೆ ಮೂರು ಜೋಡಿ 17 ನಿಮಿಷಕ್ಕೆ ಹತ್ತಿರದಲ್ಲಿ ಟಾಸ್ಕ್‌ ಮುಗಿಸಿದರು. ಅವರೇ ಮಂಜು-ಅನುಷಾ, ಮೋಕ್ಷಿತಾ-ಗೌತಮಿ, ತ್ರಿವಿಕ್ರಮ್-ಐಶ್ವರ್ಯಾ ಇದರಲ್ಲಿ ತ್ರಿವಿಕ್ರಮ್-ಐಶ್ವರ್ಯಾ ಗೆದ್ದು ಮನೆಯ ಜೋಡಿ ಕ್ಯಾಪ್ಟನ್‌ ಆಗಿದ್ದಾರೆ.

ಮೈ, ಮುಖ ಅಂತ ನೋಡದೆ ಮನಬಂದಂತೆ ತೆಂಗಿನ ಎಣ್ಣೆ, ಶ್ಯಾಂಪೂ, ಸರ್ಫ್ ಸೇರಿ ಅನೇಕ ಲಿಕ್ವಿಡ್‌ ಗಳನ್ನು ಬಳಸಿ ನೀರಿನಲ್ಲಿ ಕಲಕಿ ಎರೆಚಿರುವುದು ಬಿಗ್‌ಬಾಸ್‌ 10 ನೇ ಸೀಸನ್‌ ಅನ್ನು ನೆನಪಿಸಿತು. ಆ ಸೀಸನ್‌ ನಲ್ಲಿ ಚಯರ್‌ ನಿಂದ ಎಬ್ಬಿಸಲು ಸ್ಪರ್ಧಿಗಳು ಇದೇ ರೀತಿಯ ಪ್ರಯೋಗ ಮಾಡಿದ್ದರು. ಆಗ ಸಂಗೀತಾ ಶೃಂಗೇರಿ ಮತ್ತು ಡ್ರೋಣ್ ಪ್ರತಾಪ್ ಕಣ್ಣಿಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿ ಬಳಿಕ ಕಪ್ಪು ಕನ್ನಡಕ ಧರಿಸಿ ಮನೆಗೆ ಬಂದಿದ್ದರು. ಇದೆಲ್ಲದರ ನಡುವೆ ಶೋ ಆಯೋಜಕರು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಆರೋಪ ಕೇಳಿಬಂದಿದೆ.

click me!