ಚೈತ್ರಾ ಕುಂದಾಪುರಗೆ ಸಣ್ಣ ಬುದ್ದಿ ಇದೆ ಎಂದ ಮೊಕ್ಷಿತಾ ಪೈ, ಮನೆಯ ಹೊಸ ಕ್ಯಾಪ್ಟನ್ ಇವರೇ ನೋಡಿ!

By Gowthami KFirst Published Oct 11, 2024, 11:49 PM IST
Highlights

ಬಿಗ್‌ಬಾಸ್‌ ಕನ್ನಡ 11ರಲ್ಲಿ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಕುತೂಹಲಕಾರಿಯಾಗಿ ನಡೆಯಿತು. ಐವರು ಸ್ಪರ್ಧಿಗಳಿಂದ ಆರಂಭವಾದ ರೇಸ್‌ನಲ್ಲಿ ಕೊನೆಗೆ ಶಿಶಿರ್ ವಿಜೇತರಾಗಿ ಹೊರಹೊಮ್ಮಿದರು.

ಬಿಗ್‌ಬಾಸ್‌ ಕನ್ನಡ 11ರ ಎರಡನೇ ನಾಯಕನ ಆಯ್ಕೆಗೆ ಕ್ಯಾಪ್ಟನ್ಸಿ ಟಾಸ್ಕ್‌ ರೇಸ್‌ ನಲ್ಲಿ ಮಂಜು, ಗೌತಮಿ, ಚೈತ್ರಾ ಕುಂದಾಪುರ, ಶಿಶಿರ್ ಮತ್ತು ಮೋಕ್ಷಿತಾ ಪೈ ಇದ್ದರು.  ಇದರಲ್ಲಿ 3 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. 

ನಾನೇ ಸುಪೀರಿಯರ್‌ ಅನ್ನೋ ತರ ಚೈತ್ರಾ ಇದ್ದಾರೆ. ಲೀಡರ್‌ ಕ್ವಾಲಿಟಿ ಇರೋರಿಗೆ ಸಣ್ಣ ಬುದ್ದಿ ಇರಬಾರದು ಎಂದಿದ್ದಾರೆ. ಶಿಶಿರ್ ಅವರು ಸೇವ್‌ ಮಾಡಿಲ್ಲ ಅನ್ನೋ ಕಾರಣಕ್ಕೆ ಚೈತ್ರಾ ಅವರು ಬೇಸರ ಮಾಡಿಕೊಂಡಿದ್ದಾರೆ ಅದು ಇರಬಾರದು ಎಂದ ಮೋಕ್ಷಿತಾ ಅವರು ಚೈತ್ರಾ ಅವರು ನಾಯಕನಾಗಲು ಅರ್ಹರಲ್ಲ ಎಂದು ಕಾರಣ ಕೊಟ್ಟರು.

Latest Videos

ಬೋನಿ ಕಪೂರ್‌ಗೂ ಮುನ್ನ ವಿವಾಹಿತ ನಟನೊಂದಿಗೆ ಶ್ರೀದೇವಿ ಸೀಕ್ರೆಟ್ ಮದುವೆ, ವಿಷ್ಯ ತಿಳಿದು ನಟನ ಪತ್ನಿ ಸಾಯಲು ಯತ್ನ!

ಇನ್ನು ಧನ್‌ರಾಜ್ ಅವರು ಮಂಜು ಅವರು ನಾಯಕ ಆಗಬಾರದು ಎಂದು ಕಾರಣ ಕೊಟ್ಟರು. ಅವರ ಕಾರಣಕ್ಕೆ ಮನೆಮಂದಿಯೆಲ್ಲ ನಕ್ಕರು. ಮಂಜು ಅವರು ಟಾಸ್ಕ್‌ ಬಂದಾಗ ದೊಡ್ಡ ವಿವರಣೆ ಕೊಡುತ್ತಾರೆ. ಪ್ಲಾನ್‌ ಮಾಡುತ್ತಾರೆ. ನಾವೇನೋ ಇಮ್ಯಾಜಿನೇಷನ್‌ ನಲ್ಲಿ ಬಂದರೆ ಅಲ್ಲಿ ಏನೂ ಇರುವುದಿಲ್ಲ. ಜೊತೆಗೆ ನನ್ನನ್ನು ಕಂಸಿಡರ್ ಮಾಡಿಲ್ಲ ಎಂದು ಎಂದು ಸ್ವಾರಸ್ಯಕರ ವಿವರಣೆ ನೀಡಿದ್ದು, ರೇಷ್ಮೆ ಸಾಲಿನಲ್ಲಿ ಸುತ್ತಿ ಹೊಡೆದಂಗಿತ್ತು. ಇದಾದ ಬಳಿಕ ಅಡುಗೆ ಮನೆಯಲ್ಲಿ ಧನ್‌ರಾಜ್ ಅವರನ್ನು ಮಾತನಾಡಿಸಿದ ಮಂಜು ನಾನು ಹೇಳಿದ್ದಕ್ಕೆ ನೀನು ಇಮ್ಯಾಜಿನೇಷನ್ ಮಾಡಬೇಡ ಎಂದು ಹೇಳಿದರು.

ಇನ್ನು ಅನುಷಾ ಅವರು ಗೌತಮಿ ಅವರು ನಾಯಕಿಯಾಗಲು ಅನರ್ಹ ಎನ್ನುವುದಕ್ಕೆ ಕಾರಣ ನೀಡಿದ ಸೆಲ್ಫಿಶ್ ಎಂದು ಹೇಳಿದರು. ಇದು  ಅನುಷಾ ಅವರನ್ನು ಗೌತಮಿ ನೇರ ನಾಮಿನೇಟ್‌ ಮಾಡಿದ್ದು ಹೇಳಿದ ಕಾರಣವಾಗಿತ್ತು. ಜೊತೆಗೆ ತನ್ನನ್ನು ತಾನು ಸೇವ್‌ ಮಾಡಿಕೊಂಡಿದ್ದು ಕೂಡ ಇತ್ತು.

ಸಿಲ್ಸಿಲಾದಲ್ಲಿ ಬಳಿಕ ಅಮಿತಾಬ್ ಜೊತೆ ಸಡನ್ ಆಗಿ ರೇಖಾ ನಟನೆ ನಿಲ್ಲಿಸಿದ್ದೇಕೆ?

ಹೀಗೆ ಯಾರು ನಾಯಕರಾಗಲು ಅರ್ಹರು ಎಂಬುದಕ್ಕೆ ಎಲ್ಲಾ ಸ್ಪರ್ಧಿಗಳು ಕಾರಣ ನೀಡಿ 5 ಮಂದಿಯಲ್ಲಿ ಇಬ್ಬರನ್ನು ಕಪ್ಪು ಬಣ್ಣವನ್ನು ಟೀ ಶರ್ಟ್ ಗೆ ಹೊಡೆದು ಹೊರಗುಳಿಸಿದರು. ಕೊನೆಗೆ ಶಿಶಿರ್ , ಚೈತ್ರಾ ಮತ್ತು ಗೌತಮಿ ನಾಯಕನಾಗುವ ರೇಸ್‌ ನಲ್ಲಿ ಉಳಿದರು. ಮಂಜು ಮತ್ತು ಮೋಕ್ಷಿತಾ ಅವರು ಅರ್ಹರಲ್ಲ ಎಂದು ಔಟ್‌ ಆದರು.

ಕೊನೆಗೆ ಕ್ಯಾಪ್ಟನ್ಸಿ ಟಾಸ್ಕ್‌ ನಲ್ಲಿ ಬಲೆ ಬಿಡಿಸಿಕೊಂಡು ಹೋಗುವ ಟಾಸ್ಕ್‌ ಇತ್ತು. ಮೊದಲು ಗೌತಮಿ ಅವರನ್ನು ಶಿಶಿರ್ ಔಟ್‌ ಮಾಡಿದರು. ಬಳಿಕ ಚೈತ್ರಾ ಅವರನ್ನು ಔಟ್‌ ಮಾಡಿದರು. ಶಿಶಿರ್‌ ಮನೆಯ ನಾಯಕನಾಗಿ ವಿಶೇಷ ಅಧಿಕಾರದಲ್ಲಿ ಮಾನಸ ಅವರನ್ನು ಸ್ವರ್ಗಕ್ಕೆ ಕಳುಹಿಸಿ, ತ್ರಿವಿಕ್ರಮ್ ಅವರನ್ನು ನರಕಕ್ಕೆ ಕಳುಹಿಸಿದರು. 

click me!