ಕೊಲೆ ಪ್ರಯತ್ನ, ಕಿಡ್ನ್ಯಾಪ್ ಸೇರಿ ಹಲವಾರು ಅಪರಾಧ ಮಾಡಿರುವ ಜೈದೇವ ಬಗ್ಗೆ ಇನ್ನೂ ಸಾಫ್ಟ್ ಕಾರ್ನರ್ ತೋರುವುದು ಯಾಕೆ? ಸೀರಿಯಲ್ ಬಗ್ಗೆ ನೆಟ್ಟಿಗರು ಹೇಳ್ತಿರೋದೇನು?
ಜೈದೇವ ಮತ್ತೆ ಕುತಂತ್ರ ಬುದ್ಧಿ ತೋರಿಸುತ್ತಿದ್ದಾನೆ. ಇಷ್ಟಾದರೂ ಅವನಿಗೆ ಬುದ್ಧಿ ಬರಲಿಲ್ಲ. ಹೊಟ್ಟೆಗೆ ಚಾಕು ಹಾಕಿಕೊಂಡು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರೋ ಆತ, ನಾಟಕದಲ್ಲಿ ನಿಸ್ಸೀಮ. ಎಷ್ಟೊಂದುಕೊಲೆ ಆರೋಪಗಳು ಅವನ ಮೇಲೆ ಇದ್ದರೂ, ಇನ್ನೂ ಯಾರಾದ್ರೂ ಅವನನ್ನು ನಂಬ್ತಾರೆ ಎಂದ್ರೆ ಅವರಿಗಿಂತ ಮತ್ತೆ ಮೂರ್ಖರು ಇನ್ನೊಬ್ಬರು ಇಲ್ಲ ಎಂದೇ ಹೇಳಬೇಕು. ಇದಾಗಲೇ ಸಾಕಷ್ಟು ಬಾರಿ ನಾಟಕವಾಡಿ ಎಲ್ಲರನ್ನೂ ಮರಳು ಮಾಡಿದ್ದಾನೆ ಜೈದೇವ. ಈಗಲೂ ಅದೇ ರೀತಿ ಮಾಡುತ್ತಿದ್ದಾನೆ. ತನ್ನ ಮಾಮನ ಜೊತೆಗೂಡಿ ನಾಟಕವಾಡಿದ್ದಾನೆ. ಯಾರೂ ಆತನ ಮುಖ ನೋಡಲು ಇಷ್ಟಪಡುವುದಿಲ್ಲ ಎಂದು ಗೊತ್ತಾದ ಮೇಲೆ ಚೆನ್ನಾಗಿ ನಾಟಕವಾಡಿ ಮನೆಗೆ ಬರುವಲ್ಲಿ ಸಕ್ಸಸ್ ಆಗಿದ್ದಾನೆ. ಎಲ್ಲರ ಎದುರೂ ಮತ್ತೆ ನಾಟಕ ಶುರು ಮಾಡಿಕೊಂಡಿದ್ದಾನೆ. ತನ್ನನ್ನು ಕ್ಷಮಿಸಿ ಎನ್ನುತ್ತಿದ್ದಾನೆ.
ಆದರೆ ಈ ಬಾರಿ ಅವನನ್ನು ನಂಬಲು ಗೌತಮ್ ರೆಡಿ ಇಲ್ಲ. ಏಕೆಂದ್ರೆ ಅವನು ಮಾಡಿದ್ದು, ಅಂತಿಂಥ ಅಪರಾಧವಲ್ಲ. ಎಲ್ಲರನ್ನೂ ಸಾಯಿಸಲು ಹೊರಟಿದ್ದ ಆತ. ಕಿಡ್ನಾಪ್ ಮಾಡಿಸಿ ಗೌತಮ್ ಮತ್ತು ಭೂಮಿಕಾರನ್ನು ಮುಗಿಸಲೂ ಹೊರಟವ. ಆನಂದ್ಗೆ ಅಪಘಾತ ಮಾಡಿಸಿ ಸಾಯಿಸಲು ಹೋದವ. ಪತ್ನಿ ಮಲ್ಲಿಯನ್ನು ಆಸ್ಪತ್ರೆಯಲ್ಲಿಯೇ ಸಾಯಿಸಲು ಹೋಗಿದ್ದ. ಪಾರ್ಥನ ಮೇಲೂ ಅಟ್ಯಾಕ್ ಮಾಡಿದ್ದ. ಇಷ್ಟೆಲ್ಲಾ ಗೊತ್ತಿದ್ದ ಗೌತಮ್ ಆತನನ್ನು ನಂಬುವುದೇ ಇಲ್ಲ ಎಂದಿದ್ದಾನೆ. ಆದರೆ ಯಾಕೋ ಭೂಮಿಕಾ ಮಿಸ್ಸು ಜೈದೇವ್ ಬಗ್ಗೆ ಸಾಫ್ಟ್ ಕಾರ್ನರ್ ತೋರುವಂತೆ ಕಾಣಿಸುತ್ತಿದೆ. ಗೌತಮ್ಗೆ ಬುದ್ಧಿ ಹೇಳಲು ಮುಂದಾಗಿದ್ದಾಳೆ. ಇದರ ಪ್ರೊಮೋ ಬಿಡುಗಡೆ ಆಗುತ್ತಿದ್ದಂತೆಯೇ ಅಭಿಮಾನಿಗಳು ಭೂಮಿಕಾಗೆ ಬೈಯಲು ತೊಡಗಿದ್ದಾರೆ.
undefined
ಸಿಹಿ ಅಪ್ಪನ ಸ್ಕೆಚ್ ಬಯಲಾಯ್ತು! ಸೀತಾ-ರಾಮರಿಂದ ಸಿಹಿ ದೂರವಾಗೋ ದಿನ ಬಂದೇ ಬಿಡ್ತಾ?
ಇಷ್ಟಾದ ಮೇಲೂ ಹಳ್ಳಕ್ಕೆ ಬಿದ್ದರೆ ನೀವು ಮೆಜೆಸ್ಟಿಕ್ಗೆ ಬಂದು ಏನಾದ್ರೂ ಮಾರಾಟ ಮಾಡಬೇಕಾಗುತ್ತದೆ, ಜೈದೇವ ನಿಮ್ಮನ್ನು ಬೀದಿಗೆ ತಳ್ತಾನೆ ಹುಷಾರ್ ಎನ್ನುತ್ತಿದ್ದಾರೆ. ಸದಾ ವಿಲನ್ ಅತ್ತೆಯಂದಿರ ಕೈ ಮೇಲಾಗುವ ಸೀರಿಯಲ್ಗಳೇ ಹೆಚ್ಚಾಗಿರುವ ಈ ದಿನಗಳಲ್ಲಿ ಸೊಸೆ ಭೂಮಿಕಾಳೇ ಅತ್ತೆಗೆ ಟಾಂಗ್ ಕೊಡುತ್ತಾ ಅವಳನ್ನು ಸೋಲಿಸುತ್ತಿರುವ ಕಾರಣ ಈ ಸೀರಿಯಲ್ ಹಲವರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಇದೀಗ ಕೆಲವು ಕಂತುಗಳಿಂದ ತನ್ನ ಅತ್ತೆ ವಿಲನ್ ಎಂದು ತಿಳಿದಿದ್ದರೂ ಅವಳ ಮೋಸದ ಜಾಲದಲ್ಲಿ ಭೂಮಿಕಾ ಸಿಲುಕಿ ಬಿಟ್ಟಿದ್ದಳು.
ಈ ಕುತಂತ್ರಕ್ಕೆ ತನ್ನ ಸ್ವಂತ ತಂಗಿಯನ್ನೇ ಅತ್ತೆ ಬಳಸಿಕೊಳ್ಳುತ್ತಿದ್ದಾಳೆ ಎನ್ನುವುದು ಕೂಡ ಜಾಣೆ ಭೂಮಿಕಾಗೆ ಗೊತ್ತಾಗುತ್ತಿಲ್ಲ. ಇದೀಗ ಕುತಂತ್ರಿ ಮೈದುನ ಜೈದೇವನ ತಂತ್ರವನ್ನೂ ಅವಳು ಅರಿಯುತ್ತಿಲ್ಲ ಎನ್ನುವುದು ವಿಚಿತ್ರ ಎನಿಸುತ್ತಿರುವ ಕಾರಣ ಈ ಸೀರಿಯಲ್ ಬಗ್ಗೆ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮತ್ತೆ ಜೈದೇವನ ನಂಬಿ ಮೋಸ ಹೋಗಬೇಡಿ ಎನ್ನುವುದು ಅವರ ಮಾತು. ಆದರೆ ಇನ್ನೇನು ಆಗುತ್ತದೆಯೋ ಕಾದು ನೋಡಬೇಕಿದೆ.
ಮದುಮಗಳಂತೆ ಕಂಗೊಳಿಸಿದ ಪುಟ್ಟಕ್ಕನ ಮಗಳು ಸ್ನೇಹಾ: ಸಮ್ಥಿಂಗ್ ಸ್ಪೆಷಲ್ಲಾ ಕೇಳ್ತಿದ್ದಾರೆ ಫ್ಯಾನ್ಸ್