ನಮ್ರತಾ ಜೊತೆ ರೈನ್ ಡಾನ್ಸ್ ಮಾಡಿ ಚಳಿ ಆಗ್ತಿದೆ ಎಂದ ಕಾರ್ತಿಕ್!

By Roopa Hegde  |  First Published Oct 11, 2024, 5:39 PM IST

ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಜೋಡಿ ವೇದಿಕೆ ಮೇಲೆ ಕಿಚ್ಚು ಹಚ್ಚಲು ಸಿದ್ಧವಾಗಿದೆ. ರೈನ್ ಡಾನ್ಸ್ ತುಣುಕು ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್, ಜೋಡಿ ಸೂಪರ್ ಎಂದಿದ್ದಾರೆ.
 


ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ (Bigg Boss Season 10 Winner Karthik Mahesh) ಹಾಗೂ ನಟಿ ನಮ್ರತಾ ಗೌಡ (Actress Namrata Gowda) ಜೋಡಿಯನ್ನು ಒಟ್ಟಿಗೆ ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿರ್ತಾರೆ. ಈಗ ವೇದಿಕೆ ಮೇಲೆ ಅವರ ರೋಮ್ಯಾನ್ಸ್ (Romance) ನೋಡುವ ಅವಕಾಶ ಸಿಗ್ತಿದೆ. ಸ್ಟಾರ್ ಸುವರ್ಣ ದಸರಾ ದರ್ಬಾರ್ ನಲ್ಲಿ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಹಾಡೊಂದಕ್ಕೆ ಭರ್ಜರಿ ಡಾನ್ಸ್ ಮಾಡಿದ್ದಾರೆ. ರೈನ್ ಡಾನ್ಸ್ (Rain Dance) ಮಾಡಿರುವ ಜೋಡಿ ಅಭಿಮಾನಿಗಳ ಮೈ ಬಿಸಿ ಮಾಡಿದ್ರೆ, ಅಲ್ಲಿ ಕಾರ್ತಿಕ್ ಚಳಿಯಾಗ್ತಿದೆ ಎಂದಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ ಸ್ಟಾರ್ ಸುವರ್ಣ ದಸರಾ ದರ್ಬಾರ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಅದ್ರ ಶೂಟಿಂಗ್ ಪೂರ್ಣಗೊಂಡಿದ್ದು, ಪ್ರೋಮೋ ಪೋಸ್ಟ್ ಆಗಿದೆ. ಚಾನೆಲ್ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಕೆಲ ವಿಡಿಯೋಗಳನ್ನು ಪೋಸ್ಟ್ ಮಾಡಿದೆ. ಒಂದು ವಿಡಿಯೋದಲ್ಲಿ ನಮ್ರತಾ ಹಾಗೂ ಕಾರ್ತಿಕ್ ಡಾನ್ಸ್ ಮಾಡೋದನ್ನು ನೀವು ನೋಡ್ಬಹುದು. ಇನ್ನೊಂದರಲ್ಲಿ ಶೂಟಿಂಗ್ ವಿಡಿಯೋ ಕಾಣಸಿಗ್ತಿದೆ. ಇಬ್ಬರು ನೀರಿನ ಮಧ್ಯೆ ಡಾನ್ಸ್ ಮಾಡ್ತಿದ್ದು, ಮೈ ನವಿರೇಳಿಸುವಂತೆ ಹೆಜ್ಜೆ ಹಾಕಿ ನೋಡುಗರ ಕಣ್ಮನ ಸೆಳೆದ ಕಾರ್ತಿಕ್ ನಮ್ರತಾ ಎಂದು ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ಕೊನೆಯಲ್ಲಿ ಕಾರ್ತಿಕ್ ಹಾಗೂ ನಮ್ರತಾ, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಮೊದಲ ರೈನ್ ಡಾನ್ಸ್ ಅಂತ ಕಾರ್ತಿಕ್ ಹೇಳಿದ್ದಾರೆ. ನಮ್ರತಾ ಜೊತೆ ಡಾನ್ಸ್ ಮಾಡಿ ಚಳಿಯಾಯ್ತು ಎಂದ ಕಾರ್ತಿಕ್ ಮಹೇಶ್, ಚೆನ್ನಾಗಿತ್ತು, ಮಜವಾಗಿತ್ತು ಅಂತ ನಾಚಿಕೊಳ್ತಾರೆ. ಇನ್ನು ನಮ್ರತಾ, ಸೂಪರ್ ಎಕ್ಸ್ಪಿರಿಯನ್ಸ್ ಎಂದಿದ್ದಾರೆ. ಬೆಳಗಿನ ಜಾವ 5.45ಕ್ಕೆ ಈ ಡಾನ್ಸ್ ಶೂಟಿಂಗ್ ನಡೆದಿದೆ. ಅಧ್ಬುತ ಅನುಭವ ಎನ್ನುತ್ತಾರೆ ನಮ್ರತಾ. 

Tap to resize

Latest Videos

ಸ್ಲೀವ್ ಲೆಸ್ ಬ್ಲೌಸ್ ತೊಟ್ಟು ದುರ್ಗೆ ದರ್ಶನ ಪಡೆದ ಆಲಿಯಾ ಭಟ್, ಡ್ರೆಸ್ಸಿಗೆ ನಟಿ ಟ್ರೋಲ್!

ಈ ವಿಡಿಯೋಕ್ಕೆ ಅಭಿಮಾನಿಗಳಿಂದ ಸಾಕಷ್ಟು ಕಮೆಂಟ್ ಬಂದಿದೆ. ಇಬ್ಬರನ್ನು ಒಟ್ಟಿಗೆ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಸೂಪರ್ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ. ಇಬ್ಬರೂ ಮೇಡ್ ಫಾರ್ ಈಚ್ ಅದರ್ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

ನಮ್ರತಾ ಹಾಗೂ ಕಾರ್ತಿಕ್, ಬಿಗ್ ಬಾಸ್ ಮನೆಯಿಂದಲೇ ಸುದ್ದಿಯಲ್ಲಿದ್ದರು. ಬಿಗ್ ಬಾಸ್ ಮುಗಿದ್ಮೇಲೂ ಇಬ್ಬರು ಸ್ನೇಹ ಮುಂದುವರೆಸಿದ್ದಾರೆ. ಅನೇಕ ಇವೆಂಟ್ ಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ತಾರೆ. ಕಾರ್ತಿಕ್ ಹುಟ್ಟುಹಬ್ಬದಂತು ಸರ್ಪ್ರೈಸ್ ನೀಡಿದ್ದರು ನಮ್ರತಾ. ಇಬ್ಬರು ಮದುವೆ ಆಗ್ತಾರೆ ಎನ್ನುವ ಸುದ್ದಿಯಿತ್ತು. ಹಸೆಮಣೆ ಮೇಲೆ ಕುಳಿತಿದ್ದ ಫೋಟೋ ನೋಡಿ, ಇಬ್ಬರು ಮದುವೆ ಆಗ್ತಿದ್ದಾರೆಂಬ ಸುದ್ದಿ ಕೂಡ ಹಬ್ಬಿತ್ತು. ಈ ಜೋಡಿ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಆಗಿಯೂ ಒಟ್ಟಿಗಿರಬೇಕೆಂದು ಕೆಲ ಫ್ಯಾನ್ಸ್ ಬಯಸ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಮ್ರತಾ, ಕಿಶೋರ್ ಜೊತೆ ಡಾನ್ಸ್ ಮಾಡಿದ ವಿಡಿಯೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ನಮ್ರತಾ ಅಧ್ಬುತ ಡಾನ್ಸರ್. ಅನೇಕ ಸೀರಿಯಲ್ ನಲ್ಲಿ ನಟಿಸಿರುವ ನಮ್ರತಾ, ಒಳ್ಳೆ ಸ್ಕ್ರಿಪ್ಟ್ ಗೆ ಕಾಯ್ತಿದ್ದಾರೆ. ಇನ್ನು ಕಾರ್ತಿಕ್, ಬಿ.ಎಂ.ಗಿರಿರಾಜ್ ನಿರ್ದೇಶನದ ರಾಮರಸ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಅವರ ಹುಟ್ಟುಹಬ್ಬದಂದು ಚಿತ್ರತಂಡ ಬಿಗ್ ಗಿಫ್ಟ್ ನೀಡಿದೆ. ಚಿತ್ರದ ವಿಶೇಷ ಝಲಕ್ ಬಿಡುಗಡೆಯಾಗಿದೆ. 

ದುರ್ಗಾ ಪೆಂಡಾಲ್ ನಲ್ಲಿ ಕಾಜೋಲ್ ದರ್ಬಾರ್!

ಬಿಗ್ ಬಾಸ್ ನಂತ್ರ ಕಾರ್ತಿಕ್ ಮಹೇಶ್ ಹೆಚ್ಚು ಸುದ್ದಿಯಲ್ಲಿದ್ದಾರೆ. ಕನ್ನಡ, ತೆಲುಗು ಸೀರಿಯಲ್ ನಲ್ಲಿ ನಟಿಸಿರುವ ಕಾರ್ತಿಕ್, ಮಾಡೆಲ್ ಆಗಿ ತಮ್ಮ ವೃತ್ತಿ ಶುರು ಮಾಡಿದ್ದರು. ಡೊಳ್ಳು ಸಿನಿಮಾದಲ್ಲಿ ನಟಿಸಿರುವ ಕಾರ್ತಿಕ್, ಪುಟ್ಟಕ್ಕನ ಮಕ್ಕಳು, ಅಕ್ಕ, ಬಂಗಾರಿ, ಅಂತರಪಟ ಸೇರಿದಂತೆ ಕೆಲ ಧಾರಾವಾಹಿಯಲ್ಲಿ ನಟಿಸಿದ್ದಾರೆ.    

 
 
 
 
 
 
 
 
 
 
 
 
 
 
 

A post shared by Star Suvarna (@starsuvarna)

click me!