
ರಜತ್ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಇರುವಾಗಲೇ ಅವರ ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್ ಆಗಿತ್ತು. ಈಗ ರಜತ್ ಪತ್ನಿ ಅಕ್ಷಿತಾ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ʼಬಿಗ್ ಬಾಸ್ʼ ಮನೆಯಿಂದ ಹೊರಗಡೆ ಬಂದ ರಜತ್ ಅವರು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಜತ್ ಉತ್ತರ ಏನು?
ರಜತ್ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬರುತ್ತಿದ್ದಂತೆ ಮಾಧ್ಯಮದವರ ಪ್ರಶ್ನೆ ಉತ್ತರ ಕೊಟ್ಟಿದ್ದಾರೆ. “ನನ್ನ ಎಕ್ಸ್, ನಾನು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದೀನಿ, ನಾನು ನೋಡ್ಕೋತಿನಿ” ಎಂದು ಹೇಳಿದ್ದರು. ಇನ್ನು ಸುದ್ದಿಗೋಷ್ಠಿಯಲ್ಲಿಯೂ ಕೂಡ ಈ ಬಗ್ಗೆ ಮಾತನಾಡಿರುವ ಅವರು, “ನನಗೆ ನೂರು ಎಕ್ಸ್ ಇದ್ದಾರೆ, ಯಾವ ಎಕ್ಸ್ ಬಗ್ಗೆ ಮಾತಾಡ್ತಿದ್ದೀರಾ. ನನ್ನ ಎಕ್ಸ್ ತಾನೇ, ನನ್ನ ಹೆಂಡ್ತಿ ತಾನೇ, ನಾನ್ ನೋಡ್ಕೋತೀನಿ” ಎಂದು ರಜತ್ ಅವರು ಉತ್ತರ ಕೊಟ್ಟಿದ್ದಾರೆ.
ಇದು ಮದ್ವಿ ವಿಷ್ಯ ಐತ್ರಿ..! ಕಿಚ್ಚ ಸುದೀಪ್ ಅವ್ರ ಮುಂದ ಹನುಮಂತನ ಅಪ್ಪ-ಅಮ್ಮ ಮಾತು ಕೊಟ್ಟಾರೀ...!
ನಿಜಕ್ಕೂ ಏನಾಗಿತ್ತು?
ರಜತ್ ಅವರು ʼಬಿಗ್ ಬಾಸ್ʼ ಮನೆಯಲ್ಲಿದ್ದಾಗ, ಅವರ ಮಾಜಿ ಗೆಳತಿ ಜೊತೆಗಿನ ಫೋಟೋಗಳು ವೈರಲ್ ಆಗಿತ್ತು. ಹತ್ತಕ್ಕೂ ಅಧಿಕ ಟ್ರೋಲ್‌ಪೇಜ್‌ಗಳು ಈ ಫೋಟೋಗಳನ್ನು ವೈರಲ್ ಮಾಡಿದ್ದವು. ಇದು ರಜತ್ ಪತ್ನಿ ಅಕ್ಷಿತಾಗೆ ಗೊತ್ತಾಗಿತ್ತು. ಹೀಗಾಗಿ ಅವರು ಟ್ರೋಲ್ ಪೇಜ್‌ಗಳಿಗೆ “ಈ ರೀತಿ ಮಾಡಬೇಡಿ, ದಯವಿಟ್ಟು ನಿಲ್ಲಿಸಿ” ಎಂದು ಮನವಿ ಮಾಡಿದ್ದಾರೆ. ಆದರೆ ಕೆಲವು ಟ್ರೋಲ್ ಪೇಜ್‌ಗಳು ಈ ಮಾತನ್ನು ಕಿವಿಗೆ ಹಾಕಿಕೊಳ್ಳದೆ, ಡಿಲಿಟ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದ್ದರಿಂದ ಅಕ್ಷಿತಾ ಅವರು ಒಂದಷ್ಟು ಹಣ ನೀಡಿದ್ದರು. ಆದರೆ ಮತ್ತೆ ಟ್ರೋಲ್ ಪೇಜ್‌ಗಳು ಪೋಸ್ಟ್ ಡಿಲಿಟ್ ಮಾಡದೆ, ಮತ್ತಷ್ಟು ವೈರಲ್ ಮಾಡಿದ್ದು, ಇನ್ನೊಂದಿಷ್ಟು ಹಣಕ್ಕೆ ಬೇಡಿಕೆ ಇಟ್ಟರು. ಅಕ್ಷಿತಾಗೆ ಬೇರೆ ದಾರಿ ಕಾಣದೆ ಸೈಬರ್‌ಕ್ರೈಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಎರಡನೇ ಬಾರಿಗೆ ಮದುವೆಗೆ ಸಜ್ಜಾದ ನಿರೂಪಕಿ ಚೈತ್ರಾ ವಾಸುದೇವನ್; ಪ್ಯಾರೀಸ್‌ನಲ್ಲಿ ಅಬ್ಬರದ ಪ್ರಿ ವೆಡ್ಡಿಂಗ್ ಶೂಟ್
ಪೇಜ್ ಅಡ್ಮಿನ್ ಯಾರು?
ಅಕ್ಷಿತಾ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಮ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ಆ ಬಳಿಕ ಟ್ರೋಲ್‌ಪೇಜ್‌ಗಳು ತಮ್ಮ ಖಾತೆಯನ್ನು ಡಿಲಿಟ್ ಮಾಡಿವೆ. ಸದ್ಯ ಆ ಟ್ರೋಲ್ ಪೇಜ್ ಖಾತೆಗಳು ಡಿಆಕ್ಟಿವೇಟ್ ಆಗಿವೆ. ಇನ್ನು ಪೊಲೀಸರು ಆ ಪೇಜ್ ಅಡ್ಮಿನ್ ಯಾರು ಅಂತ ಹುಡುಕುತ್ತಿದ್ದಾರೆ.
ಲವ್ ಮ್ಯಾರೇಜ್ ಮಾಡ್ಕೊಂಡಿದ್ರು..!
ರಜತ್, ಅಕ್ಷಿತಾರದ್ದು ಲವ್ ಮ್ಯಾರೇಜ್. ಇವರ ಮದುವೆಯಾಗಿ 10 ವರ್ಷಗಳು ಆಗಿವೆ. ಅಕ್ಷಿತಾಗೂ, ರಜತ್‌ಗೂ ರಿಯಾಲಿಟಿ ಶೋ ಹೊಸತಲ್ಲ. ಈ ಹಿಂದೆ ಅಕ್ಷಿತಾ ʼಪ್ಯಾಟೇ ಹುಡ್ಗೀರ್ ಹಳ್ಳಿ ಲೈಫುʼ ಶೋನಲ್ಲಿ ಭಾಗವಹಿಸಿ, ಗೆದ್ದಿದ್ದರು. ಆಮೇಲೆ ರಜತ್ ಅವರು ʼಗೀತಾಂಜಲಿʼ ಸೀರಿಯಲ್‌ನಲ್ಲಿ ನಟಿಸಿದ್ದರು. ಇನ್ನು ಇವರಿಬ್ಬರು ಸೇರಿಕೊಂಡು ʼರಾಜಾ ರಾಣಿʼ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಅಂದಹಾಗೆ ಈ ದಂಪತಿಗೆ ಇಬ್ಬರು ಮಕ್ಕಳಿವೆ.
ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟರು..!
ರಜತ್ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಮನೆಯ ಗೇಮ್ ಚೇಂಜರ್ ಎಂದು ಕಿಚ್ಚ ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಅವರು ನಿಜಕ್ಕೂ ಈ ಸೀಸನ್‌ಗೆ ಮೆರುಗು ತುಂಬಿದ್ದಂತೂ ಹೌದು. ಖಡಕ್ ಮಾತುಗಳು, ಪ್ರಾಮಾಣಿಕತೆ, ಪಂಚಿಂಗ್ ಡೈಲಾಗ್, ಕಾಮಿಡಿ ಈ ಎಲ್ಲ ವಿಚಾರದಲ್ಲಿಯೂ ರಜತ್ ಅವರು ಸೈ ಎನಿಸಿಕೊಂಡಿದ್ದರು. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟು, ಮೂರನೇ ಸ್ಥಾನ ಪಡೆದಿರೋದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಹೇಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.