
ಬಿಗ್ ಬಾಸ್ ಸೀಸನ್ 11ರಲ್ಲಿ 11ನೇ ವಾರ ಗೌತಮಿ ಜಾದವ್ ಕ್ಯಾಪ್ಟನ್ ಆಗಿದ್ದರು, ವಾರ ಅಂತ್ಯವಾಗುವಷ್ಟರಲ್ಲಿ ಯಾರು ಕಳಪೆ ಯಾರು ಉತ್ತಮ ಎಂದು ಕೊಡಬೇಕು. ಈ ವೇಳೆ ಧನರಾಜ್ ತಮ್ಮ ಅಭಿಪ್ರಾಯ ಹೇಳುವಾಗ ರಜತ್ ಮಾತಿಗೆ ಮಾತು ಬೆಳೆದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ ರಿಲೀಸ್ ಆಗಿರುವ ಪ್ರೋಮೋದಲ್ಲಿ ರಜತ್ ಅಟ್ಯಾಕ್ ಮಾಡುತ್ತಿರುವುದು ಸ್ಪಷ್ಟವಾಗಿ ಹಾಗೂ ಮನೆ ಮಂದಿ ಬಿಡಿಸಲು ಸಖತ್ ಕಷ್ಟ ಪಟ್ಟಿದ್ದಾರೆ. ದಿನದಿಂದ ದಿನಕ್ಕೆ ರಜತ್ ವರ್ತನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟ್ರೋಲ್ ಎದುರಾಗುತ್ತಿದೆ.
ಧನರಾಜ್: ಕಳಪೆ ಬಂದುಬಿಟ್ಟು ರಜತ್‌ಗೆ ಕೊಡುತ್ತೀನಿ ಏಕೆಂದರೆ ನಾನು ಏನೇ ಮಾತನಾಡಿದ್ದರೂ ಕೈ ಕಾಲು ಮುರಿಯುತ್ತೀನಿ ಎನ್ನುತ್ತಾರೆ. ಅವರ ಮಾತುಗಳು ಬೆದರಿಕೆ ಹಾಕುವ ರೀತಿ ಇರುತ್ತದೆ.
ರಜತ್: ನನ್ನ ಮುಖ ಮುಟ್ಟಿದಾಗ ನೀನು ಸಾಫ್ಟ್ ಆಗಿ ಇರಲಿಲ್ಲ.
ಧನರಾಜ್: ನನಗೆ ಗೊತ್ತು ನಾನು ಎಷ್ಟು ಸಾಫ್ ಆಗಿ ಮುಟ್ಟಿದ್ದೀನಿ ಎಂದು.
ರಜತ್: ಸಾಫ್ ಆಗಿ ಅಂದ್ರೆ ಮಗುವಿಗೆ ಮುಟ್ಟ ರೀತಿಯಲ್ಲಿ ಮುಟ್ಟಿದಾ? ನಾನು ನಿನ್ನೆ ಹುಟ್ಟಿ ಇಂದು ಬಿಗ್ ಬಾಸ್‌ಗೆ ಬಂದಿಲ್ಲ. ನನಗೆ ಕೋಪ ಹತ್ತಿದ್ದಿಕ್ಕೆ ನಿನ್ನ ಮುಖ ಮೂತಿ ಹೊಡೆದಾಕಿನೇ ಆಚೆ ಹೋಗ್ಬೇಕಿತ್ತು.
ಧನರಾಜ್: ಮುಖ ಮೂತಿ ಹೊಡಿತ್ತೀನಿ ಅಂತೀರಾ ಅಲ್ವಾ ಹೊಡೀರಿ...
ರಜತ್: ತಾಕತ್ತು ಇದ್ದರೆ ನನ್ನನ್ನು ಮುಟ್ಟು ತೋರಿಸು ಆಮೇಲೆ ನಾನು ಏನು ಅಂತ ತೋರಿಸುತ್ತೀನಿ ಏನ್ ಆಗುತ್ತೆ ಅಂತ.
ಧನರಾಜ್: ಮುಟ್ಟಿ ಮುಟ್ಟಿ ಮುಟ್ಟಿ.....
ಮತ್ತೆ ಕೂದಲಿಗೆ ಕತ್ತರಿ ಹಾಕಿದ ರಚಿತಾ ರಾಮ್; ಸಿಕ್ಕಾಪಟ್ಟೆ ಶಾರ್ಟ್ ಹೇರ್ ಯಾಕೆ ಬುಲ್ ಬುಲ್ ಎಂದ ನೆಟ್ಟಿಗರು
ಧನರಾಜ್ ಮಾತು ಮುಗಿಸುವಷ್ಟರಲ್ಲಿ ರಜತ್ ಹಲ್ಲೆ ಮಾಡಲು ಮುಂದಾಗುತ್ತಾರೆ. ಮಾತುಕತೆ ಆರಂಭದಲ್ಲಿ ತ್ರಿವಿಕ್ರಮ್ ರಜತ್‌ನ ತಡೆಯಲು ಪ್ರಯತ್ನಿಸುತ್ತಾರೆ ಆದರೆ ಎಲ್ಲರನ್ನು ಮೀರಿ ರಜತ್ ಹಲ್ಲೆ ಮಾಡಲು ಮುಂದಾಗುತ್ತಾರೆ. ಶಿಶಿರ್ ಮತ್ತು ಉಗ್ರಂ ಮಂಜು ಜಗಳವನ್ನು ತಡೆಯಲು ಮುಂದಾಗುತ್ತಾರೆ. 'ರೌಡಿಸಂ ಮಾಡುವವರನ್ನು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಆಟವಾಡಲು ಯಾವಾಗಿನಿಂದ ಆಯ್ಕೆ ಮಾಡಿದ್ದು? ಬಿಗ್ ಬಾಸ್ ಶೋನಲ್ಲಿ ಈ ರೀತಿ ವ್ಯಕ್ತಿಗಳನ್ನು ಆಯ್ಕೆ ಮಾಡಲು ಯಾರು ಶುರು ಮಾಡಿದ್ದು? ಇವರಿಗೆ ಬುದ್ಧಿ ಹೇಳುವವರು ಯಾರೂ ಇಲ್ವಾ? ' ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ರಚಿತಾ ರಾಮ್‌ಗೆ 'ಲೇಡಿ ಸೂಪರ್ ಸ್ಟಾರ್' ಎಂದ ನಟ; ಈ ಬಿರುದು ಬೇಡ ನಾನು ಬುಲ್ ಬುಲ್ ಆಗೇ ಇರ್ತೀನಿ ಎಂದ ನಟಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.