
ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ (Colors Kannada Bhagyalakshmi Serial) ನಲ್ಲಿ ಮಹತ್ವದ ಬದಲಾವಣೆಯಾಗ್ತಿದೆ. ಭಾಗ್ಯಾ ತನ್ನ ಬದುಕಿನಲ್ಲಿ ಮಹಾ ನಿರ್ಧಾರ ತೆಗೆದುಕೊಳ್ತಿದ್ದಾಳೆ. ಪತಿ ತಾಂಡವ್ ತನ್ನನ್ನು ಪ್ರೀತಿ ಮಾಡ್ತಿಲ್ಲ ಎಂಬ ಸತ್ಯ ಗೊತ್ತಾಗಿ ಮನೆಯಿಂದ ಹೊರಗೆ ಬಂದ ಭಾಗ್ಯಾಳಿಗೆ ಕಷ್ಟ ತಪ್ಪಿಲ್ಲ. ಮಕ್ಕಳನ್ನು ತನ್ನ ಜೊತೆ ಕರೆದುಕೊಂಡು ಹೋಗಲು ಬಂದಿದ್ದ ತಾಂಡವ್ ಗೆ ಬುದ್ಧಿ ಕಲಿಸಲು ಭಾಗ್ಯಾ ನಿರ್ಧರಿಸಿದ್ದಾಳೆ. ತನ್ನ ಜೀವನಕ್ಕೆ ಅತೀ ಮಹತ್ವದ ತಿರುವು ನೀಡಲು ಮುಂದಾಗಿದ್ದಾಳೆ. ಡಿವೋರ್ಸ್ ಪೇಪರ್ (Divorce Paper) ಗೆ ಸಹಿ ಮಾಡಿ, ತಾಂಡವ್ ಮುಖಕ್ಕೆ ಎಸೆದಿದ್ದಾಳೆ.
ಭಾಗ್ಯಾ ದಿಟ್ಟ ಹೆಜ್ಜೆ ಇಂದಿನ ಎಪಿಸೋಡ್ನಲ್ಲಿ ಪ್ರಸಾರವಾಗಲಿದೆ. ತಾಂಡವ್ ಹಾಗೂ ಶ್ರೇಷ್ಠ ಪ್ರೀತಿ ವಿಷ್ಯ ಭಾಗ್ಯಾಗೆ ತಿಳಿದಾಗಿನಿಂದ ಸೀರಿಯಲ್ ಗೆ ಸಾಕಷ್ಟು ತಿರುವು ಸಿಗ್ತಾ ಬಂದಿದೆ. ಭಾಗ್ಯಾ ಮುಂದೇನು ಮಾಡ್ತಾಳೆ ಅಂತ ನಿರೀಕ್ಷೆಯಿಂದ ಕಾಯ್ತಿದ್ದ ವೀಕ್ಷಕರಿಗೆ, ಭಾಗ್ಯಾ ಮ್ಯಾರೇಜ್ ಆನಿವರ್ಸರಿ ದಿನ ಮನೆಯಲ್ಲಿ ಬಾಂಬ್ ಸಿಡಿಸಿದ್ಲು. ತಾಂಡವ್ ಮನೆ ಬಿಟ್ಟು ಬಂದಿದ್ದಲ್ಲದೆ ತನ್ನ ಜೊತೆ ಅತ್ತೆ- ಮಾವ, ಮಕ್ಕಳನ್ನು ತವರಿಗೆ ಕರೆತಂದಿದ್ದಳು. ಇದಾದ್ಮೇಲೆ ಭಾಗ್ಯಾಗೆ ಮತ್ತೊಂದಿಷ್ಟು ಸವಾಲು ಎದುರಾಯ್ತು. ಸ್ಕೂಲ್ ನಲ್ಲಿ ಮಕ್ಕಳು ಒಂದೊಂದೇ ಸಮಸ್ಯೆ ಮಾಡ್ಕೊಂಡಿದ್ದರು. ಅದನ್ನು ಬಗೆ ಹರಿಸುವ ಮೊದಲೇ ಶ್ರೇಷ್ಠಾ ಮನೆಗೆ ಬಂದು ರಾದ್ಧಾಂತ ಮಾಡಿದ್ದಳು. ತಾಂಡವ್ ಮದುವೆಯಾಗುವ ಭರದಲ್ಲಿ, ಶ್ರೇಷ್ಠಾ, ಮಕ್ಕಳನ್ನು ಕರೆತರುವಂತೆ ತಾಂಡವ್ ಕಿವಿ ತುಂಬಿದ್ದಳು. ಶ್ರೇಷ್ಠಾ ಮಾತು ನಂಬಿ, ಭಾಗ್ಯಾ ಬಳಿ ಹೋಗಿದ್ದ ತಾಂಡವ್, ಮಕ್ಕಳನ್ನು ತನ್ನ ಮನೆಗೆ ಕಳುಹಿಸುವಂತೆ ಒತ್ತಡ ಹೇರಿದ್ದ ಜೊತೆಗೆ ನೋಡ್ಕೊಳ್ತೇನೆ ಎಂಬ ಸವಾಲು ಹಾಕಿ ಹೋಗಿದ್ದ.
ನಗಿಸಲು ಬರ್ತಿದೆ ಮಜಾ ಟಾಕೀಸ್ , ಒನ್ ಆಂಡ್ ಓನ್ಲಿ ವರು ಮಿಸ್ ಮಾಡ್ಕೊಳ್ತಿದ್ದಾರೆ ಫ್ಯಾನ್ಸ್
ಇದಾದ್ಮೇಲೆ ಭಾಗ್ಯಾಗೆ ಈಗ ಅಮ್ಮ ಸುನಂದಾ ತಲೆನೋವಾಗಿದ್ದಾರೆ. ಶ್ರೇಷ್ಠಾ ಇಲ್ಲ ಅಂದ್ರೆ ಭಾಗ್ಯಾ ಜೀವನ ಚೆನ್ನಾಗಿರುತ್ತೆ ಎಂದು ಭಾವಿಸಿದ ಸುನಂದಾ, ಶ್ರೇಷ್ಠಾ ಮೇಲೆ ದಾಳಿ ಮಾಡಿದ್ದಾಳೆ. ಇದನ್ನೇ ಬಂಡವಾಳ ಮಾಡ್ಕೊಂಡ ತಾಂಡವ್ ಹಾಗೂ ಶ್ರೇಷ್ಠಾ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಕ್ಷ್ಯ ಸಿಕ್ಕ ಕಾರಣಕ್ಕೆ ಸುನಂದಾಳನ್ನು ಬಂಧಿಸಿರುವ ಪೊಲೀಸರು, ಭಾಗ್ಯಾಗೆ ಕರೆ ಮಾಡಿದ್ದಾರೆ. ಸದ್ಯ ಭಾಗ್ಯಾ ಕುಟುಂಬ ಪೊಲೀಸ್ ಠಾಣೆಯಲ್ಲಿದ್ದು, ಸುನಂದಾ ಬಿಡಿಸುವ ಪ್ರಯತ್ನ ನಡೆಸುತ್ತಿದೆ.
ಪೊಲೀಸ್ ಮುಂದೆ ಭಾಗ್ಯಾ ಕೈಮುಗಿದು ಬೇಡಿಕೊಳ್ತಿದ್ದರೆ ತಾಂಡವ್ ಮತ್ತು ಶ್ರೇಷ್ಠಾ ನಗ್ತಿದ್ದಾರೆ. ಇಂಥವರ ಮನೆಯಲ್ಲಿ ನೀವಿರೋದು ಬೇಡ ಅಂತ ಅಮ್ಮನನ್ನು ವಾಪಸ್ ಕರೆದೊಯ್ಯುವ ಪ್ರಯತ್ನ ಮಾಡ್ತಿದ್ದಾನೆ ತಾಂಡವ್. ಅದೆಷ್ಟೇ ಮಾಡಿದ್ರೂ ತಾಂಡವ್ ಸುಧಾರಿಸೋದಿಲ್ಲ ಎಂಬುದನ್ನು ಅರಿತಿರುವ ಭಾಗ್ಯಾ ಈಗ ತಾಂಡವ್ ನಿಂದ ಸಂಪೂರ್ಣ ದೂರವಾಗುವ ನಿರ್ಧಾರಕ್ಕೆ ಬಂದಿದ್ದಾಳೆ. ಡಿವೋರ್ಸ್ ಪೇಪರ್ ಗೆ ಸಹಿ ಮಾಡಿದ ಭಾಗ್ಯಾ, ನನಗೆ ಬೆಲೆ ಕೊಡದ ತಾಂಡವ್ ಇದ್ದರೆಷ್ಟು, ಬಿಟ್ಟರೆಷ್ಟು. ಇವತ್ತು ನನ್ನ ಮತ್ತು ಇವರ ಸಂಬಂಧಕ್ಕೆ ಮುಕ್ತಿ ನೀಡ್ತಿದ್ದೇನೆ ಎನ್ನುತ್ತ ತಾಂಡವ್ ಮುಖಕ್ಕೆ ಡಿವೋರ್ಸ್ ಪೇಪರ್ ಎಸೆದಿದ್ದಾಳೆ.
ರಚಿತಾ ರಾಮ್ ಮುಂದೆ ಅತ್ತಿದ್ರು ಸುಂದರ್ ರಾಜ್; ಆದ್ರೆ ಮ್ಯಾಟರ್ ಮೇಘನಾ ರಾಜ್!
ಭಾಗ್ಯಾ ಈ ನಿರ್ಧಾರವನ್ನು ವೀಕ್ಷಕರು ಮೆಚ್ಚಿದ್ದಾರೆ. ಹೊಸ ವರ್ಷಕ್ಕೆ ಭಾಗ್ಯಾಳ ಹೊಸ ಅಧ್ಯಾಯ ಶುರುವಾಗ್ತಿದೆ. ಭಾಗ್ಯಾ ದಿಟ್ಟ ಹೆಜ್ಜೆಗೆ ತುಂಬಾ ಖುಷಿಯಾಗಿದೆ, ತಾಂಡವ್ ಬೀದಿಗೆ ಬರುವ ಸೂಚನೆ ಇದು, ತಾಂಡವ್ಗೆ ಸರಿಯಾಯ್ತು, ಶ್ರೇಷ್ಠಾ ಕೈನಲ್ಲಿ ನರಕಯಾತನೆ ಅನುಭವಿಸಬೇಕು ಎಂದೆಲ್ಲ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಇನ್ಮುಂದೆ ತಾಂಡವ್ ಮುಖ ತೋರಿಸ್ಬೇಡಿ, ಭಾಗ್ಯಾ ಹೇಗೆ ಜೀವನ ಮಾಡ್ತಾಳೆ ಅನ್ನೋದನ್ನು ಮಾತ್ರ ತೋರಿಸಿ ಎನ್ನುತ್ತಿದ್ದಾರೆ ವೀಕ್ಷಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.