ದರ್ಶನ್- ಸುದೀಪ್ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ ರಜತ್; ಬಿಗ್ ಬಾಸ್‌ ಮನೆಯಲ್ಲಿ ಅಸಲಿ ಆಟ ಶುರು ಮಾಡಿದ್ರಾ?

Published : Nov 26, 2024, 10:43 AM IST
ದರ್ಶನ್- ಸುದೀಪ್ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ ರಜತ್; ಬಿಗ್ ಬಾಸ್‌ ಮನೆಯಲ್ಲಿ ಅಸಲಿ ಆಟ ಶುರು ಮಾಡಿದ್ರಾ?

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಬಾಸ್ ಹಾವಳಿ ಹೆಚ್ಚಿಸಿದ ರಜತ್ ಕಿಶನ್. ಉದ್ದೇಶ ತಿಳಿಯದೆ ವೀಕ್ಷಕರು ಶಾಕ್........

ಬಿಗ್ ಬಾಸ್ ಸೀಸನ್ 11ರಲ್ಲಿ ಈ ವಾರ ಉಗ್ರಂ ಮಂಜು ಕ್ಯಾಪ್ಟನ್ ಆಗಿದ್ದಾರೆ. ಸಖತ್ ಸಂಭ್ರಮಿಸುತ್ತಿರುವ ಮಂಜುಗೆ ಬಿಗ್ ಬಾಸ್ ಬಂಪರ್ ಆಫರ್ ಕೊಟ್ಟಿದ್ದಾರೆ...ಅದುವೇ ಬಿಗ್ ಬಾಸ್ ಸಾಮ್ರಾಜ್ಯದ ಅಧಿಪತಿಯಾಗಿದೆ. ಉಳಿದು ಸ್ಪರ್ಧಿಗಳಲ್ಲಿ ಯಾರು ಸೇವಕರು ಯಾರು ಕೆಲಸದವರು ಯಾರು ಮನೋರಂಜನೆ ನೀಡಬೇಕು ಎಂದು ಮಂಜು ನಿರ್ಧಾರ ಮಾಡಬೇಕು. ಇಷ್ಟು ಜನರಲ್ಲಿ ರಜತ್ ಮತ್ತು ತ್ರಿವಿಕ್ರಮ್‌ರನ್ನು ಸೇನಾಧಿಪತಿಗಳಾಗಿ ಆಯ್ಕೆ ಮಾಡಿದ್ದಾರೆ, ಗೋಲ್ಡ್‌ ಸುರೇಶ್‌ರನ್ನು ಸಲಹೆಗಾರನಾಗಿ ಆಯ್ಕೆ ಮಾಡಿದ್ದಾರೆ. ಉಳಿದವರು ಪ್ರಜೆಗಳಾಗಿರುತ್ತಾರೆ. 

ಮಹಾರಾಜ ಸಿಂಹಾಸನದಲ್ಲಿ ಕುಳಿತಿರುವಾಗ ತಮ್ಮ ಸೇನಾಧಿಪತಿ ಆಗಿರುವ ರಜತ್‌ಗೆ ಒಂದು ಹಾಡನ್ನು ಹಾಡಲು ಹೇಳುತ್ತಾರೆ. ಮೊದಲು ಜೋಗಿ ಚಿತ್ರದ 'ಅಯ್ಯೂ ದೇವರೆ ನೀನು ಇದ್ದರೆ ಇಂತ ಶಾಪ್ ಯಾವ ಪಾಪಿಗೂ ಕೊಡಬೇಡ' ಎಂದು ರಜತ್ ಹಾಡುತ್ತಾರೆ. ರಜತ್ ಬೇಕೆಂದು ಕಾಲೆಳೆಯುತ್ತಿರುವುದು ತಿಳಿಯುತ್ತದೆ ಹೀಗಾಗಿ ಪ್ರಜೆಗಳು ಕದ್ದು ಮುಚ್ಚಿ ನಗುವುದಕ್ಕೆ ಶುರು ಮಾಡುತ್ತಾರೆ. ಇದನ್ನು ಗಮನಿಸಿದ ಮಂಜು ಮತ್ತೊಂದು ಹಾಡು ಹಾಡಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ, ಒಂದು ನಿಮಿಷವೂ ಯೋಚನೆ ಮಾಡದೆ ರಜತ್ ದರ್ಶನ್ ಚಿತ್ರದ ಹಾಡನ್ನು ಹಾಡುತ್ತಾರೆ.

ಜೈಲಿನಲ್ಲಿ 'ಬಾಸ್‌' ಗುಣಗಾನ ಮಾಡಿದ ರಜತ್ ಕಿಶನ್; ವೀಕ್ಷಕರ ತಲೆಗೆ ಹೊಳೆದಿದ್ದೇ ಬೇರೆ ಬಾಸ್?

ಹೌದು! ಜೋಗಿ ಪ್ರೇಮ್ ನಿರ್ದೇಶನ, ದರ್ಶನ್ ನಟನೆಯ ಕರಿಯ ಚಿತ್ರದ 'ಕೆಂಚಾಲೋ ಮಂಚಾಲೋ ಹೆಂಗವ್ಳಾ ನಿನ್ ಡವ್‌ಗಳು' ಎಂದು ರಜತ್ ಹಾಡುತ್ತಾರೆ. ಈ ಹಾಡನ್ನು ಕೇಳಿ ಪ್ರಜೆಗಳು ಮತ್ತಷ್ಟು ನಗು ಜೋರು ಮಾಡುತ್ತಾರೆ ಹೀಗಾಗಿ ಈ ಹಾಡನ್ನು ಮತ್ತೊಂದು ಹಾಡಿಕೊಂಡು ಡ್ಯಾನ್ಸ್ ಮಾಡಬೇಕು ಎಂದು ಮಂಜು ಆರ್ಡರ್ ಮಾಡುತ್ತಾರೆ. ಇಲ್ಲಿ ರಜತ್ ಆಂಗ್ಲ ಪದ ಬಳಸಿದ್ದಕ್ಕೆ ಶಿಕ್ಷೆಯಾಗಿ ಮತ್ತೊಂದು ಹಾಡಿಗೆ ಕುಣಿಯಬೇಕು ಎಂದು ಮಂಜು ಆದೇಶಿಸುತ್ತಾರೆ. ಆಗ ಕಿಚ್ಚ ಸುದೀಪ್ ಅಭಿನಯದ ಚಂದು ಚಿತ್ರದ ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ ಹಾಡಿಗೆ ಡ್ಯಾನ್ಸ್ ಮಾಡುತ್ತಾರೆ. 

ಹೆಂಡ್ತಿ ಪಕ್ಕದ್ದಲೇ ಇದ್ರೂ ಮಿಡಲ್ ಫಿಂಗರ್‌ ತೋರಿಸಿದ ಬಿಗ್ ಬಾಸ್ ರಜತ್; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್!

ರಜತ್ ಹಾಡುಗಳ ಆಯ್ಕೆ ಪ್ರಜೆಗಳಿಗೆ ಮಾತ್ರವಲ್ಲದೆ ವೀಕ್ಷಕರಿಗೂ ಮನೋರಂಜನೆ ನೀಡಿದೆ ಆದರೆ ಪದೇ ಪದೇ ಬಾಸ್ ಎಂದು ಹೇಳಿಕೊಂಡು ಓಡಾಡುತ್ತಿರುವ ಕಾರಣ ವೀಕ್ಷಕರಿಗೆ ಆಶ್ಚರ್ಯವಾಗಿದೆ. ಇಷ್ಟು ದಿನ ದರ್ಶನ್ ಚಿತ್ರದ ಹಾಡುಗಳನ್ನು ಬಿಗ್ ಬಾಸ್ ಮನೆಯಲ್ಲಿ ಹಾಕುತ್ತಿರಲಿಲ್ಲ ಅಥವಾ ಯಾರೂ ಹಾಡಲು ಆಯ್ಕೆ ಮಾಡಿಕೊಳ್ಳುತ್ತಿರಲಿಲ್ಲ ಆದರೆ ಈ ಸಲ ರಜತ್ ಪದೇ ಪದೇ ಹೇಳುತ್ತಿದ್ದರೂ ಯಾವುದೇ ರೂಲ್ಸ್‌ ಇಲ್ಲದೆ ಕಾಮ್ ಆಗಿರುವುದನ್ನು ನೋಡಿ ವೀಕ್ಷಕರಿಗೆ ಡಬಲ್ ಆಶ್ಚರ್ಯವಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!