ಕನ್ನಡತಿಯ ಹರ್ಷನ ತಂಗಿ ಸುಚಿ ಇದೀಗ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ದತ್ತನ ಎಕ್ಸ್ ಗರ್ಲ್ ಫ್ರೆಂಡ್ ಆಗಿದ್ದಾಳೆ. ಸುಚಿ ಎಂಟ್ರಿಗೆ ನೆಟ್ಟಿಗರು ಖುಷಿ ಆಗಿದ್ದಾರೆ.
ಕನ್ನಡತಿ ಸುಚಿ ಅಂದರೆ ಸಾಕು ಕನ್ನಡಿಗರ ಮುಖದಲ್ಲಿ ನಗು ಮಿಂಚುತ್ತೆ. ಇದಕ್ಕೆ ಕಾರಣ ಆ ಪಾತ್ರ ಮತ್ತು ಅದನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ನಟಿ. ಹೌದು, ಅಮೃತಾ ಮೂರ್ತಿ ಅಂದರೆ ಕೆಲವೇ ಕೆಲವು ಮಂದಿಗೆ ಗೊತ್ತಾಗುತ್ತೆ. ಅದೇ ಕನ್ನಡತಿಯ ಸುಚಿ ಅಂದ್ರೆ ಎಲ್ಲರ ಮನಸ್ಸಿಗೆ ಥಟ್ಟನೆ ಹೊಳೆದುಬಿಡುತ್ತೆ. ಕನ್ನಡತಿ ಸೀರಿಯಲ್‌ನ ಸುಚಿ ಪಾತ್ರದಲ್ಲಿ ಏನಿತ್ತು ಏನಿರಲಿಲ್ಲ. ಬ್ಯುಸಿನೆಸ್ ಮೆನ್ ಅಣ್ಣನನ್ನು ಸದಾ ಗೋಳಾಡಿಸೋ ತಂಗಿ ಅವಳು. ಅಣ್ಣನ ಜೊತೆಗೆ ತರಲೆ ಮಾಡದಿದ್ದರೆ ತಿಂದ ಅನ್ನ ಅರಗಲ್ಲ ಅನ್ನೋ ಥರ ಈ ಪಾತ್ರ. ಹಾಗಂತ ನೆಗೆಟಿವ್ ಶೇಡ್ ಏನಲ್ಲ. ಸದಾ ಅಣ್ಣನಿಗೆ ಒಳ್ಳೆದಾಗಲಿ ಅಂತ ಬಯಸೋ ಪಾತ್ರ. ಜೊತೆಗೆ ಅಣ್ಣ ಮತ್ತು ಅವನ ಲವರ್ ಭುವಿ ಜೊತೆಯಾಗೋದಕ್ಕೆ ಏನು ಬೇಕೋ ಅದನ್ನೆಲ್ಲ ನಿರಾಯಾಸವಾಗಿ ಮಾಡುತ್ತಿದ್ದ ತಂಗಿ ಅವಳು. ಈ ಪಾತ್ರದ ಮೂಲಕ ಮನೆ ಮಾತಾದವರು ಅಮೃತಾ ಮೂರ್ತಿ. ಈಕೆ ಮಾಡಿದ ಸುಚಿ ಪಾತ್ರಕ್ಕೆ ಜನ ಬಹಳ ಕನೆಕ್ಟ್ ಆದರು.
ನಮ್ಮನೆಯಲ್ಲೂ ಇಂಥಾ ತರಲೆ ಪುಟ್ಟಿ ತಂಗಿ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಕೆಲವು ಮನೆಗಳ ಮಂದಿ ಹಂಬಲಿಸಿಯೂ ಇದ್ದರು. ಈ ಸೀರಿಯಲ್ ಕೊನೆ ತಲುಪುವವರೆಗೂ ಸುಚಿ ಪಾತ್ರಕ್ಕೆ ಸಾಕಷ್ಟು ಮಹತ್ವ ಇತ್ತು. ಆ ಬಳಿಕ ಅವರು ಬೇರೆ ಬೇರೆ ಸೀರಿಯಲ್‌ಗಳಲ್ಲಿ ಅವಕಾಶ ಕಂಡುಕೊಂಡರು. ಸ್ಟಾರ್ ಸುವರ್ಣದ ಸೀರಿಯಲ್ ಒಂದರಲ್ಲಿ ನಾಯಕಿಯಾಗಿ ನಟಿಸಿದ್ರು. ಆದರೆ ಸುಚಿಗೆ ಬಂದಷ್ಟು ಹೆಸರು ಅದರಿಂದ ಬರಲಿಲ್ಲ. ಆದರೆ ಸದ್ಯ ದತ್ತನ ಹಳೆ ಲವ್ವರ್ ಆಗಿ ಅವರಿಗೆ ಹೆಸರು ಬರುವ ಎಲ್ಲ ಸಾಧ್ಯತೆ ಇದೆ.
ಡೈರೆಕ್ಟ್ರು ಹೇಳಿದ್ರೂ ಕೇಳ್ದೇ ನನ್ ಪರವಾಗಿನೇ ಇರ್ಬೇಕು ಎಂದು ಲೈವ್‌ನಲ್ಲೇ ಚಿರುಗೆ ಧಮ್ಕಿ ಹಾಕೋದಾ ಸೌಂದರ್ಯ?
ಹಿಂದೆ ಕನ್ನಡತಿಯ ಸುಚಿಯಾಗಿ ಸಖತ್ ಪಾಪ್ಯುಲರ್ ಆದ ಅಮೃತಾ ಮೂರ್ತಿ ಅವರು ಮೂಲತಃ ಚಿಕ್ಕಮಗಳೂರಿನ ಬೆಡಗಿ. ಪಿಯುಸಿ ಮುಗಿಯುತ್ತಿದ್ದಂತೆಯೇ ನಟಿಸುವ ಆಸೆಯಿಂದ ಆಡಿಷನ್‌ಗಳನ್ನು ನೀಡುತ್ತಿದ್ದ ಅಮೃತಾ ಬಿಎಸ್ಸಿ ಫ್ಯಾಷನ್ ಮತ್ತು ಅಪಾರೆಲ್ ಡಿಸೈನಿಂಗ್ ಕಲಿತಿದ್ದಾರೆ. ಓದು ಮುಗಿದ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದ ಇವರು ಬಳಿಕ ಕಿರುತೆರೆಯಲ್ಲಿ ನಟಿಸಲು ಪ್ರಾರಂಭಿಸಿದರು. ಸೃಜನ್ ಅವರ ಪ್ರೊಡಕ್ಷನ್ ಮೂಲಕ ಮೊದಲ ಬಾರಿಗೆ ಆಡಿಷನ್ ಕೊಟ್ಟ ಅಮೃತಾ ಅವರು ಬಳಿಕ 10-15 ಆಡಿಷನ್ ಗಳನ್ನು ಕೊಟ್ಟು ಕನ್ನಡತಿ ಧಾರಾವಾಹಿಗೆ ಎಂಟ್ರಿಕೊಟ್ಟರು. ಪಾತ್ರಗಳ ಬಗ್ಗೆ ಹೆಚ್ಚು ಗಮನ ಕೊಡುವ ನಟಿ ಅಮೃತಾ ಮೂರ್ತಿ ಅವರು ಪಾತ್ರಗಳ ಆಯ್ಕೆಯಲ್ಲೂ ಚ್ಯೂಸಿಯೇ ಅನ್ನಬಹುದು.
ಧಾರಾವಾಹಿಗಳಲ್ಲಿ ಅಷ್ಟೇ ಅಲ್ಲದೇ, ನಟಿ ಅಮೃತಾ ಮೂರ್ತಿ ಅವರು ಡ್ಯಾನ್ಸಿಂಗ್ ಚಾಂಪಿಯನ್ಶಿಪ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ಶೋ ನಲ್ಲಿ ಸಖತ್ ಕ್ರಿಯೇಟಿವ್ ರೀತಿಯಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು ಅಮೃತಾ. 'ಅಪರಾಧಿ ನಾನಲ್ಲ' ಎಂಬ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದಾರೆ. ನಟಿ ಅಮೃತಾ ಅವರಿಗೆ ಫ್ಯಾಷನ್ ಫೀಲ್ಡ್ ಬಿಟ್ಟು ಬರೋಕೆ ಇಷ್ಟವಿಲ್ಲವಂತೆ. ನಟನೆಯನ್ನು ಪ್ರೊಫೆಷನ್ ಆಗಿ ನೋಡೋಕೆ ಆಗೋದಿಲ್ಲ. ಯಾಕೆಂದರೆ ಪ್ರತೀ ದಿನ ಕೆಲಸ ಇರುತ್ತೆ ಎಂದುಕೊಳ್ಳುವುದು ತಪ್ಪು. ಹಾಗಾಗಿ ನಟನೆಯ ಅವಕಾಶ ಸಿಕ್ಕಾಗ ನಟಿಸಿ, ಮಿಕ್ಕ ಸಮಯದಲ್ಲಿ ಫ್ಯಾಷನ್ ಲೋಕದಲ್ಲೇ ಇರಲು ಬಯಸುತ್ತೇನೆ ಅನ್ನೋದು ಈಕೆಯ ಮಾತು.
ನನ್ನ ಸೆಕೆಂಡ್ ಹ್ಯಾಂಡ್, ಯೂಸ್ಡ್ ಅಂತೆಲ್ಲ ಕರೆದರು ಅಂದ ಸಮಂತಾ ಮಾತಿಗೆ ನೆಟ್ಟಿಗರ ರಿಯಾಕ್ಷನ್ ನೋಡಿ!
ಸದ್ಯ ಅಮೃತಾ 'ದೃಷ್ಟಿಬೊಟ್ಟು' ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ರೌಡಿ ದತ್ತ ಭಾಯ್ ಹಳೆಯ ದಿನಗಳ ಕಥೆ ರಿವೀಲ್ ಆಗ್ತಿದೆ. ಅದರಲ್ಲಿ ದತ್ತ ಒಬ್ಬ ಮೆಕ್ಯಾನಿಕ್. ಆತನಿಗೊಬ್ಬ ಚೆಂದದ ಲವ್ವರ್ ಇದ್ದಾಳೆ. ಅವಳ ಹೆಸರೇನು? ಇವರ ಲವ್ ಸ್ಟೋರಿ ಹೇಗೆ ಶುರುವಾಯ್ತು ಅನ್ನೋದೆಲ್ಲ ಇನ್ನು ಮೇಲೇ ರಿವೀಲ್ ಆಗಬೇಕಿದೆ. ಆದರೆ ಈಕೆಯ ಕಾರಣಕ್ಕೆ ದತ್ತನಿಗೆ ಹೆಣ್ಣುಮಕ್ಕಳ ಮೇಲೆ ದ್ವೇಷ ಶುರುವಾಯ್ತು ಅನ್ನೋ ಮಾತು ದತ್ತನ ಬಾಯಿಂದ ಬಂದಿದೆ. ಅಂದರೆ ಈ ಹುಡುಗಿ ದತ್ತನಿಗೆ ಕೈಕೊಟ್ಟು ಹೋಗಿರಬಹುದೇನೋ. ಈ ಲವ್‌ಸ್ಟೋರಿ ಮೂಲಕ ಮಾಮೂಲಿ ಮೆಕ್ಯಾನಿಕ್ ಆಗಿದ್ದ ದತ್ತ ಹೇಗೆ ಡಾನ್ ಆದ ಅನ್ನೋ ಅಂಶವೂ ಬೆಳಕಿಗೆ ಬರಲಿದೆ. ಅದೆಲ್ಲ ಏನೇ ಇದ್ರೂ ಸದ್ಯ ಕನ್ನಡತಿಯ ತರಲೆ ತಂಗಿಯ ಎಂಟ್ರಿಯಂತೂ ಈ ಸೀರಿಯಲ್ ವೀಕ್ಷಕರಿಗೆ ಖುಷಿ ಕೊಟ್ಟಿದೆ.