ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡಗೆ ಊಸರವಳ್ಳಿ ಪಟ್ಟ, ಗೌತಮಿ ಮೇಲೆ ಸಾಫ್ಟ್ ಕಾರ್ನರ್ಡ್

By Roopa Hegde  |  First Published Oct 1, 2024, 10:19 AM IST

ಬಿಗ್ ಬಾಸ್ ಮನೆಯಲ್ಲಿಂದು ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಆಗಿದ್ದು, ಇಂದಿನ ಫೈಟ್ ನೋಡಲು ಫ್ಯಾನ್ಸ್ ಸಿದ್ಧವಾಗಿದ್ದಾರೆ. ಈ ಮಧ್ಯೆ ಗೀತಾ ಫೇಮ್ ಭವ್ಯಾ ಗೌಡ ಮೇಲೆ ವೀಕ್ಷಕರು ಮುನಿಸಿಕೊಂಡಂತಿದೆ. 
 


ಬಿಗ್ ಬಾಸ್ (Big Boss) ಮನೆಗೆ ಪ್ರವೇಶ ಮಾಡ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ತಾರಕಕ್ಕೇರಿದೆ. ನಿರೀಕ್ಷೆಗೂ ಮೀರಿ ಬಿಗ್ ಬಾಸ್ ಸ್ಪರ್ಧಿಗಳು ಜಗಳಕ್ಕಿಳಿದಿದ್ದಾರೆ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಒಂದೆರಡು ಧ್ವನಿಗಳು ಮಾತ್ರ ಜೋರಾಗಿ ಕೇಳ್ತಿರೋದು ಬೇಸರದ ಸಂಗತಿ. 17 ಸ್ಪರ್ಧಿಗಳು ನರಕ, ಸ್ವರ್ಗ (Hell Heaven) ಕ್ಕೆ ಡಿವೈಡ್ ಆಗಿದ್ದು, ನರಕದಲ್ಲಿರುವವರ ಆಟಕ್ಕೆ ಸ್ವರ್ಗವಾಸಿಗಳು ಶಾಕ್ ಆಗಿದ್ದಾರೆ. ಸಮಾಜಸೇವಕಿ ಚೈತ್ರಾ ಕುಂದಾಪುರ (Chaitra Kundapur) ಆಟ ಸರ್ಕಸ್ ಕಂಡಿದ್ದು, ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ನೀಡಿದ್ದ ಲಗ್ಜುರಿ ಬಜೆಟನ್ನು ಬಿಗ್ ಬಾಸ್ ವಾಪಸ್ ಪಡೆದಿದ್ದಾರೆ. ಹಾಗೆಯೇ ಚೈತ್ರಾ ಕುಂದಾಪುರ ನೇರವಾಗಿ ನಾಮೀನೆಟ್ ಆಗಿದ್ದು, ಈಗ ಎರಡನೇ ನಾಮಿನೇಷನ್ ಯಾರದ್ದು ಎನ್ನುವ ಪ್ರಶ್ನೆ ಬಂದಿದೆ.

ಕಲರ್ಸ್ ಕನ್ನಡ (Colors Kannada) ತನ್ನ ಇನ್ಸ್ಟಾಖಾತೆಯಲ್ಲಿ ಇಂದಿನ ಬಿಗ್ ಬಾಸ್ ಪ್ರೋಮೋ ರಿಲೀಸ್ ಮಾಡಿದೆ. ಅದ್ರ ಪ್ರಕಾರ, ಬಿಗ್ ಬಾಸ್ ಎರಡನೇ ನಾಮಿನೇಷನ್ ಸ್ವರ್ಗವಾಸಿಗಳನ್ನೂ ತಟ್ಟಿದೆ. ಮೊದಲ ನಾಮಿನೇಷನ್ ಸಂದರ್ಭದಲ್ಲಿ ಸ್ವರ್ಗದಲ್ಲಿರುವವರು ನರಕದಲ್ಲಿರುವವರನ್ನು ನಾಮಿನೇಟ್ ಮಾಡ್ಬೇಕಿತ್ತು. ಈಗ ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ. ಅದ್ರ ಮೂಲಕ ನಾಮಿನೇಷನ್ ನಡೆಯಲಿದೆ. ನಾಮಿನೇಷನ್ ನಲ್ಲಿ ಗೌತಮಿ ಹೆಸರು ಹೆಚ್ಚಾಗಿ ಕೇಳಿ ಬಂದಿದೆ. ಹಾಗೆ ಗೀತಾ ಖ್ಯಾತಿಯ ಭವ್ಯ ಗೌಡ (Bhavya Gowda) ಮತ್ತು ಯಮುನಾ ಮಾತು ದೊಡ್ಡದಾಗಿ ಕೇಳಿಸ್ತಿದೆ. 

Tap to resize

Latest Videos

undefined

BBK11: ಯುಮುನಾ-ಚೈತ್ರಾ ಮಧ್ಯೆ ಜಗಳಕ್ಕೆ ಪಿನ್ ಇಟ್ಟ ವಕೀಲ ಜಗದೀಶ್!

ಪ್ರೋಮೋ ನೋಡಿದ ಫ್ಯಾನ್ಸ್ ಕಮೆಂಟ್ ಶುರು ಮಾಡಿದ್ದಾರೆ. ಗೀತಾ ಸೀರಿಯಲ್ ನಲ್ಲಿ ಎಲ್ಲ ಸಾಹಸ ಮಾಡಿ, ವೀಕ್ಷಕರಿಗೆ ಹತ್ತಿರವಾಗಿದ್ದ ಭವ್ಯ ಗೌಡ ಮೇಲೆ ವೀಕ್ಷಕರ ಕೋಪ ಹೆಚ್ಚಾಗಿದೆ. ಯಾಕೋ ಭವ್ಯ ಗೌಡ ಓವರ್ ಆಕ್ಟಿಂಗ್ ಮಾಡ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಭವ್ಯ ಗೌಡ, ಚಮಚ ಅಂತ ಒಬ್ಬರು ಕಮೆಂಟ್ ಮಾಡಿದ್ರೆ, ಇನ್ನೊಬ್ಬರು ಭವ್ಯ ಡಾಮಿನೇಟ್ ಮಾಡ್ತಿದ್ದಾರೆಂದು ಕಮೆಂಟ್ ಮಾಡಿದ್ದಾರೆ. ಭವ್ಯ ಊಸರವಳ್ಳಿ ತರ ಆಡ್ತಿದ್ದಾರೆ ಎಂದ ವೀಕ್ಷಕರು, ಮೊದಲ ದಿನದಿಂದಲೇ ಅಸಲಿ ಆಟ ಶುರುವಾಗುತ್ತೆ ಎಂಬುದು ಗೊತ್ತಿರಲಿಲ್ಲ ಎನ್ನುತ್ತಿದ್ದಾರೆ. 

ಗೌತಮಿ ಫ್ಯಾನ್, ಭವ್ಯ ಗೌಡ ಕಾಲೆಳೆದಿದ್ದಾರೆ. ಭವ್ಯ ಜೊತೆ ಗೌತಮಿ ಮಾತನಾಡಿಲ್ಲ. ಹಾಗಾಗಿಯೇ ಗೌತಮಿ ಮೇಲೆ ಭವ್ಯಗೆ ಸಿಟ್ಟು ಎಂಬುದು ಅಭಿಮಾನಿಗಳ ಮಾತು. ಇನ್ನು ಯಮುನಾ ಬಗ್ಗೆಯೂ ವೀಕ್ಷಕರು ಕೋಪ ವ್ಯಕ್ತಪಡಿಸಿದ್ದಾರೆ. ಯಮುನಾ ಬರೀ ಕಿರುಚಾಡಿ, ವೀಕ್ಷಕರ ವೋಟ್ ಗಿಟ್ಟಿಸಿಕೊಳ್ಳಬಹುದು, ಬಿಗ್ ಬಾಸ್ ಮನೆಯಲ್ಲಿ ಇರ್ಬಹುದು ಅಂದ್ಕೊಂಡಿದ್ದಾರೆ. ಅವರ ಧ್ವನಿ ಕೇಳಿದ್ರೆ ಹಿಂಸೆಯಾಗುತ್ತೆ ಎನ್ನುತ್ತಿದ್ದಾರೆ ಬಿಗ್ ಬಾಸ್ ವೀಕ್ಷಕರು.

Bigg boss ಸ್ವರ್ಗವಾಸಿಗಳಿಗೆ ನರಕ ತೋರಿಸಿದ ಚೈತ್ರಾ ಕುಂದಾಪುರ ಮೊದಲ ವಾರದಲ್ಲೇ ನಾಮಿನೇಟ್!

ಬಿಗ್ ಬಾಸ್ ಸೀಸನ್ 11 ಆರಂಭದಿಂದಲೇ ಗಲಾಟೆ ಮನೆಯಾಗಿದ್ದು, ರೂಲ್ಸ್ ಬ್ರೇಕ್ ಆರಂಭದಲ್ಲೇ ಶುರುವಾಗಿದೆ. ಇದ್ರ ಜೊತೆ ಸ್ಪರ್ಧಿಗಳ ಕಣ್ಣಿರು ಮೊದಲೇ ದಿನವೇ ನೋಡಲು ಸಿಗ್ತಿದೆ. ಗೌತಮಿ ವಿಗ್ ತೆಗೆಯೋ ಮುನ್ನ ಕಣ್ಣಿರು ಹಾಕಿದ್ದಾರೆ.ಸ್ವರ್ಗವನ್ನು ನರಕ ಮಾಡಿರುವ ನರಕವಾಸಿಗಳ ಗೇಮ್ ಪ್ಲಾನ್ ಈವರೆಗೆ ವರ್ಕ್ ಆಗಿದೆ. ಶಿಶಿರ ಸೇರಿದಂತೆ ಕೆಲ ಆಟಗಾರರು ಇನ್ನೂ ತಣ್ಣಗಿದ್ದು, ಅವರ ಆಟ ಯಾವಾಗ ಶುರು ಎನ್ನುವ ವೀಕ್ಷಕರಿಗೆ ಇಂದು ಶಿಶಿರ ಮತ್ತು ಯಮುನಾ ಮಾತಿನ ಫೈಟಿಂಗ್ ನೋಡಲು ಸಿಗಲಿದೆ. ಬಿಗ್ ಬಾಸ್ ಮೊದಲ ದಿನವೇ ಫೈರ್ ಬ್ರ್ಯಾಂಡ್ ಆಗಿ ಮಿಂಚಿದ್ದು ಚೈತ್ರಾ ಕುಂದಾಪುರ್. ನೇರವಾಗಿ ನಾಮಿನೇಟ್ ಆದ್ರೂ ಎಲ್ಲರ ಪ್ರಶ್ನೆಗೆ ನೇರವಾಗಿಯೇ ಉತ್ತರ ನೀಡಿದ ಅವರು, ಯಾವುದಕ್ಕೂ ಹೆದರುವಂತೆ ಕಾಣ್ತಿಲ್ಲ. ಸೈಲೆಂಟ್ ಗೌತಮಿ ಹಾಗೂ ಮಾತಿನ ಮಲ್ಲಿ ಚೈತ್ರಾ ಕುಂದಾಪುರ್ ಬಿಗ್ ಬಾಸ್ ಕೊನೆಯವರೆಗೂ ಇರೋದು ಗ್ಯಾರಂಟಿ ಎನ್ನುತ್ತಿದ್ದಾರೆ ಫ್ಯಾನ್ಸ್.  

click me!