
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರಲ್ಲಿ ನಡೆಯುತ್ತಿರುವ ಕಿರಿಕಿರಿಗಳು ದೊಡ್ಡ ಸುದ್ದಿಯಾಗುತ್ತಿದೆ. ಜಗದೀಶ್ ಮತ್ತು ಮಾನಸಾ ನಡುವೆ ನಡೆದ ಬಿಸಿ ಮಾತುಕತೆಯಿಂದ ಇಡೀ ಮನೆಯಲ್ಲಿ ಜಗಳದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಇದಕ್ಕೆಲ್ಲಾ ಕಾರಣವಾಗಿರುವ ಉಗ್ರಂ ಮಂಜು ವಿರುದ್ಧ ವೀಕ್ಷಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಮನೆಯಲ್ಲಿ ಇರುವ ಪಾಪದ ಜನರಿಗೆ ಈ ಜಗಳದಿಂದ ಅನ್ಯಾಯವಾಗುತ್ತಿದೆ ಯಾಕೆ ಬಿಗ್ ಬಾಸ್ ಪ್ರಶ್ನೆ ಮಾಡುತ್ತಿಲ್ಲ ಅನ್ನೋದು ವೀಕ್ಷಕರ ಪ್ರಶ್ನೆ.
ಜಗದೀಶ್ ಸಣ್ಣ ಪುಟ್ಟ ಮಾತುಗಳನ್ನು ಪದೇ ಪದೇ ಟಾರ್ಗೆಟ್ ಮಾಡಿ ಕೊಂಕು ಮಾಡುತ್ತಿರುವ ಉಗ್ರಂ ಮಂಜು ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳು ಹೆಚ್ಚಾಗುತ್ತಿದೆ. ಜಗಳವನ್ನು ಮಾತಿನಲ್ಲಿ ಮುಗಿಸಬೇಕು ಆದರೆ ಉಗ್ರಂ ಮಂಜು ಚಪ್ಪಲಿ ಎಸೆಯುವುದು, ಉಗುಳುವುದು ಸರಿ ಅಲ್ಲ ಅಂತಿದ್ದಾರೆ. ಜಗದೀಶ್ ಮಲಗಿದ್ದರೂ ಪಕ್ಕದಲ್ಲಿರುವ ಟೇಬಲ್ ಮೇಲೆ ಚಪ್ಪಲಿ ಧರಿಸಿ ಪೋಸ್ ಕೊಡುವುದು ಅಗೌರವ. ಸಿನಿಮಾದಲ್ಲಿ ಹೀರೋ ಆಗಿ ರಿಯಲ್ ಲೈಫ್‌ನಲ್ಲಿ ವಿಲ್ ಆಗಿಬಿಟ್ಟರು ಎಂದು ಕಾಲೆಳೆಯುತ್ತಿದ್ದಾರೆ.
ಪತಿ ತುಕಾಲಿಗೆ ಗೌರವ ಕೊಡದ ಹೆಣ್ಣು ಬೇರೆ ಗಂಡಸರಿಗೆ ಗೌರವ ಕೊಡ್ತಾರಾ?; ಮಾನಸ ಬಗ್ಗೆ ವೀಕ್ಷಕರಿಗೆ ಅಸಮಾಧಾನ
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಉಗ್ರಂ ಮಂಜು ಮಿಂಚುತ್ತಿದ್ದಾರೆ. ಸ್ಟಾರ್ ನಟರ ಜೊತೆ ಸಿನಿಮಾ ಮಾಡಿದ್ದಾರೆ ಆದರೆ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿಯಿಂದ ಫ್ಯಾನ್ಸ್‌ಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಉಗ್ರಂ ಮಂಜು ಮಾಡುತ್ತಿರುವ ಕಿರಿಕಿರಿಗೆ ಮನೆ ಮಂದಿ ಸಪೋರ್ಟ್ ಮಾಡುತ್ತಿದ್ದಾರೆ. 16 ಜನರ ವಿರುದ್ಧ ಜಗದೀಶ್ ಒಂಟಿಯಾಗಿ ನಿಂತಿರುವುದಕ್ಕೆ ವೀಕ್ಷಕರು ಅಯ್ಯೋ ಪಾಪಾ ಎನ್ನುತ್ತಿದ್ದಾರೆ. ಕ್ಯಾಪ್ಟನ್ ಶಿಶಿರ್ ಪ್ರಶ್ನೆ ಮಾಡುವ ಹಕ್ಕು ಇದ್ದರೂ, ಮನೆಯಲ್ಲಿ ನಡೆಯುತ್ತಿರುವ ಘಟನೆಯನ್ನು ನಿಲ್ಲಿಸುವ ಶಕ್ತಿ ಇದ್ದರೂ ಸುಮ್ಮನಾಗಿರುವುದು ತಪ್ಪು ಎನ್ನಲಾಗಿದೆ.
'ಜಗ್ಗುVs ಗುಳ್ಳೆನರಿ ಗ್ಯಾಂಗ್..' ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದಾ ಜಗ್ಗು ದಾದಾ!
ಒಟ್ಟಾರೆ ಉಗ್ರಂ ಮಂಜು ವಿರುದ್ಧ ವೀಕ್ಷಕರು ಆಕ್ರೋಶ ವ್ಯಕ್ತ ಪಡಿಸುತ್ತಿರುವುದಕ್ಕೆ ಬಿಗ್ ಬಾಸ್ ರಿಯಾಕ್ಟ್ ಮಾಡಲೇ ಬೇಕು ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.