
ಬೆಂಗಳೂರು (ಅ.03): ಬಿಗ್ ಬಾಸ್ ಕನ್ನಡ ಸೀಸನ್ 11ರಿಂದ ಮೂರನೇ ಸ್ಪರ್ಧಿಯಾಗಿ ನಾಲ್ಕನೇ ವಾರದಲ್ಲಿ ತುಕಾಲಿ ಸಂತೋಷ್ ಪತ್ನಿ ಮಾನಸಾ ಹೊರಗೆ ಬಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ, ಕಿಚ್ಚನ ಪಂಚಾಯಿತಿಯಲ್ಲಿಯೇ ಅಂತಿಮವಾಗಿ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದು ತಿಳಿಯಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ನಾಲ್ಕನೇ ವಾರದ ಕಿಚ್ಚನ ಪಂಚಾಯಿತಿ ವೇಳೆಗೆ ಮೂರನೇ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಬಿಗ್ ಸ್ಪರ್ಧಿಯಾಗಿ ಮನೆಯೊಳಗೆ ಹೋದರೂ ಆಟದಲ್ಲಿಯೂ ಹೆಚ್ಚು ಕಾಣಿಸಿಕೊಳ್ಳದ, ಎಲ್ಲರ ಮನಸ್ಸನ್ನು ಗೆದ್ದು ಒಳ್ಳೆಯ ಸ್ನೇಹಿತೆಯಾಗಿಯೂ ಕಾಣಿಸಿಕೊಳ್ಳದ ಹಾಗೂ ವೀಕ್ಷಕರಿಗೆ ತೃಪ್ತಿಕರ ಮನರಂಜನೆಯನ್ನು ನೀಡುವಲ್ಲಿ ವಿಫಲವಾಗಿರುವ ಹಾಸ್ಯ ಕಲಾವಿದೆ ತುಕಾಲಿ ಮಾನಸಾ ಅವರು ನಾಲ್ಕನೇ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎಂಬ ಸುದ್ದಿ ತಿಳಿದುಬಂದಿದೆ. ಕಿಚ್ಚನ ಪಂಚಾಯಿತಿ ಎಪಿಸೋಡ್ ವೀಕ್ಷಣೆ ಬಳಿಕವೇ ಅಧಿಕೃತ ಮಾಹಿತಿ ತಿಳಿಯಲಿದೆ.
ಮನೆಯಿಂದ 5 ಜನರು ಹೊರಗೆ, ಒಬ್ಬರು ಒಳಗೆ: ಈಗಾಗಲೇ ಬಿಗ್ ಬಾಸ್ ಮನೆಯಿಂದ ನಾಲ್ವರು ಹೊರಗೆ ಹೋಗಿದ್ದಾರೆ. ಮೊದಲ ವಾರದಲ್ಲಿ ಯಮುನಾ ಶ್ರೀನಿಧಿ ಅವರು ಹೊರಗೆ ಹೋದರೆ, 2ನೇ ವಾರದಲ್ಲಿ ದಸರಾ ಹಬ್ಬದ ನಿಮಿತ್ತ ಯಾವೊಬ್ಬ ಸದಸ್ಯರೂ ಕೂಡ ಹೊರಗೆ ಹೋಗಲಿಲ್ಲ. ಇದಾದ ನಂತರ 3ನೇ ವಾರದ ಸ್ಪರ್ಧೆಯಲ್ಲಿ ನಟ ರಂಜಿತ್ ಅವರು ಮತ್ತೊಬ್ಬ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಬಿಗ್ ಬಾಸ್ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದರು. ಇದೇ ವೇಳೆ ಮಹಿಳೆಯರಿಗೆ ಕೆಟ್ಟದಾಗಿ ಮಾತನಾಡಿದ ಆರೋಪದ ಮೇಲೆ ವಕೀಲ ಜಗದೀಶ್ ಅವರನ್ನು ಕೂಡ ಮನೆಯಿಂದ ಹೊರಗೆ ಹಾಕಲಾಗಿದೆ. ಆದರೆ, ಒಟ್ಟು 17 ಸ್ಪರ್ಧಿಗಳಲ್ಲಿ ಮೂರು ವಾರಗಳ ಮುಕ್ತಾಯಕ್ಕೂ ಮುನ್ನವೇ 3 ಜನರು ಹೊರಗೆ ಹೋಗಿದ್ದರಿಂದ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಗಾಯಕ, ಕುರಿಗಾಹಿ, ಹಳ್ಳಿ ಹೈದ ಹನುಮಂತನನ್ನು ಮನೆಯೊಳಗೆ ಕಳುಹಿಸಲಾಯಿತು. ಇದಾದ ನಂತರ 3ನೇ ವಾರದಲ್ಲಿ ಹಂಸ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋದರು.
ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಬಗ್ಗೆ ಎಲ್ಲೂ ಕೇಳದ ಕರಾಳ ಸತ್ಯ ಬಿಚ್ಚಿಟ್ಟ ನವರಸನಾಯಕ ಜಗ್ಗೇಶ್!
ಅತಿಹೆಚ್ಚು ಮನರಂಜನೆ, ಕಾಂಟ್ರವರ್ಸಿ ಮಾಡಿದ ಜಗದೀಶ್: ಸಾಮಾಜಿಕ ಜಾಲತಾಣದಲ್ಲಿ ಹಲವು ದೊಡ್ಡ ವ್ಯಕ್ತಿಗಳ (ರಾಜಕಾರಣಿಗಳು, ಸಿನಿಮಾ ನಟರು) ಬಗ್ಗೆ ಬಾಯಿ ಹರಿಬಿಟ್ಟು ಮಾತನಾಡುತ್ತಿದ್ದ ಲಾಯರ್ ಜಗದೀಶ್ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದರು. ಆದರೆ, ಈ ಸೀಸನ್‌ನ ಆರಂಭದಲ್ಲಿ ಅತ್ಯಂತ ಹೆಚ್ಚು ಕಾಂಟ್ರವರ್ಸಿ ಹಾಗೂ ಎಂಟರ್‌ಟೇನ್ ಮಾಡಿದ ಸ್ಪರ್ಧಿ ಎಂದರೆ ಅದು ವಕೀಲಸಾಬ್ ಜಗದೀಶ್ ಎಂದರೆ ತಪ್ಪಾಗಲಾರದು. ಆದರೆ, ಅವರ ನಾಲಿಗೆ ಹಿಡಿತವಿಲ್ಲದ ಮಾತುಗಳೇ ಅವರ ಸ್ಪರ್ಧೆಗೆ ಮುಳುವಾಗಿದೆ ಎಂಬುದು ನೂರಕ್ಕೆ ನೂರು ಸತ್ಯವಾಗಿದೆ. ಇದರಿಂದಾಗಿ ಕೇವಲ 3 ವಾರಗಳಲ್ಲಿ ತಮ್ಮ ಮಾತಿನಿಂದಾದ ತಪ್ಪಿನಿಂದಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.