ಲಾಯರ್ ಜಗದೀಶ್- ನಟ ರಂಜಿತ್ ಹೊಡೆದಾಟ; ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಫೋಟೋ ವೈರಲ್?

By Vaishnavi Chandrashekar  |  First Published Oct 16, 2024, 12:53 PM IST

ಬಿಗ್ ಬಾಸ್ ಮನೆಯಲ್ಲಿ ಬಿಸಿ ಬಿಸಿ ಚರ್ಚೆ. ಲಾಯರ್ ಜಗದೀಶ್‌ನ ಟಾರ್ಗೆಟ್ ಮಾಡಿದ ಮನೆ ಮಂದಿ...ಜಗದೀಶ್ ಮತ್ತು ರಂಜಿತ್ ಔಟ್?


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರಿಂದ ಲಾಯರ್ ಜಗದೀಶ್ ಮತ್ತು ನಟ ರಂಜಿತ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವು ದಿನಗಳಿಂದ ಮನೆಯಲ್ಲಿರುವ ಸದಸ್ಯರು ಲಾಯರ್ ಜಗದೀಶ್‌ ಅವರನ್ನು ಟಾರ್ಗೆಟ್ ಮಾಡುತ್ತಿದ್ದರು, ಈ ವಿಚಾರವಾಗಿ ಉಗ್ರಂ ಮಂಜು, ನಟ ರಂಜಿತ್ ಮತ್ತು ತ್ರಿವಿಕ್ರಮ್ ಆಗಾಗ ಜಗಳವಾಡುತ್ತಿದ್ದರು. ಕಳೆದೆರಡು ದಿನಗಳಿಂದ ಬಿಗ್ ಬಾಸ್ ನೀಡುತ್ತಿರುವ ಆದೇಶವನ್ನೂ ಯಾರೂ ಪಾಲಿಸುತ್ತಿರಲಿಲ್ಲ ಹೀಗಾಗಿ ಬೇಸರಗೊಂಡು ಬ್ರೇಕ್ ತೆಗೆದುಕೊಳ್ಳುವುದಾಗಿ ಬಿಗಾ ಬಾಸ್ ಘೋಷಣೆ ಮಾಡಿದ್ದರು. ಇದೀಗ ಬಿಗ್ ಬಾಸ್ ಆದೇಶದ ನಡುವೆಯೂ ಲಾಯರ್ ಜಗದೀಶ್ ಮತ್ತು ರಂಜಿತ್ ಕಿತ್ತಾಡಿಕೊಂಡಿದ್ದು, ಇಬ್ಬರನ್ನೂ ಮನೆಯಿಂದ ಹೊರ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. 

ಈ ಗಾಳಿ ಸುದ್ದಿಗೆ ಪುಷ್ಟಿ ನೀಡುವಂತೆ, _rajuraj_01 ಎಂಬುವವರು ಲಾಯರ್ ಜಗದೀಶ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಸ್ಟೇಟಸ್‌ಗೆ ಹಾಕಿ ಕೊಂಡಿದ್ದಾರೆ. ಇವತ್ತಿನ ಫೋಟೋ 16/10/24 ಎಂದು ಮೆನ್ಷನ್ ಮಾಡಿದ್ದು, ಮತ್ತಷ್ಟು ಊಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿದೆ. ಯಾವುದೋ ಬೆಂಗಳೂರಿನ ಔಟ್‌ ಸ್ಕರ್ಟ್‌ ಬಳಿ ಲಾಯರ್ ಜಗದೀಶ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದ್ದು, ಬಿಗ್ ಬಾಸ್ ಮನೆಯಲ್ಲಿದ್ದಾಗ ಜಗದೀಶ್ ಧರಿಸುತ್ತಿದ್ದ ಕಪ್ಪು ಜಾಕೆಟ್‌ ಅನ್ನೇ ಈ ಫೋಟೋದಲ್ಲೂ ಧರಿಸಿದ್ದಾರೆ. ಫೋಟೋದಲ್ಲಿ ಜಗದೀಶ್ ನಗುತ್ತಿದ್ದು, ಮುಖದಲ್ಲಿ ಅಥವಾ ಮೈ ಕೈ ಮೇಲೆ ಯಾವುದೇ ಗಾಯಗಳೇನೂ ಕಾಣಿಸುತ್ತಿಲ್ಲ.

Tap to resize

Latest Videos

undefined

ಮನೆಯಲ್ಲಿ ಲಾಯರ್ ಜಗದೀಶ್ ವರ್ತನೆ ಹೇಗಿರುತ್ತೆ? ಪತಿಯ ಗುಟ್ಟು ಬಿಚ್ಚಿಟ್ಟ 2ನೇ ಪತ್ನಿ!

ಶಿಶಿರ್ ಮನೆ ಕ್ಯಾಪ್ಟನ್ ಆದ ಕ್ಷಣದಿಂದ ಲಾಯರ್ ಜಗದೀಶ್ ಮೂಲೆ ಗುಂಪಾಗಿದ್ದರು. ಇತರೆ ಸ್ಪರ್ಧಿಗಳದ್ದೊಂದು ಗುಂಪು ಮಾಡಿಕೊಂಡು, ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡುತ್ತಿದ್ದರು. ಎರಡು ಮೂರು ಸಲ ರಂಜಿತ್ ಕೂಡ ಪರೋಕ್ಷವಾಗಿ ಬೆದರಿಕೆ ಹಾಕಿದ್ದರು, ನನ್ನ ಕೈಯಿಂದ ವದೆ ತಿಂದು ಹೋಗಬೇಕು ಎಂದು ಈ ರೀತಿ ಆಟವಾಡುತ್ತಿದ್ದಾನೆ ಎಂದಿದ್ದರು. ಯಾರ ಜೊತೆಗಾದರೂ ಜಗಳ ಮಾಡಿಕೊಂಡು, ಹೊರ ಹೋಗಿ ಹೀರೋ ಆಗಬೇಕು ಅನ್ನೋ ಉದ್ದೇಶದಲ್ಲಿ ಜಗದೀಶ್ ಹೀಗೆ ಮಾಡುತ್ತಿರುವುದು. ಹೀಗಾಗಿ ನಾವು ರಿಯಾಕ್ಟ್ ಮಾಡುವುದು ಬೇಡವೆಂದು ಮನೆ ಮಂದಿ ನಿರ್ಧರಿಸಿದ್ದರು. ಶಿಶಿರ್ ಯಾರನ್ನೇ ನಾಮಿನೇಟ್ ಮಾಡಿದ್ದರೂ, ಲಾಯರ್ ಜಗದೀಶ್ ಪ್ರಶ್ನಿಸುತ್ತಿದ್ದರು. ಜಗದೀಶ್ ಮತ್ತು ರಂಜಿತ್ ನಡುವೆ ಜಗಳ ಆಗಿರುವ ಪ್ರೋಮೋ ಅಥವಾ ವಿಡಿಯೋ ರಿಲೀಸ್ ಆಗಿಲ್ಲ. ಅಲ್ಲದೇ ಜಗದೀಶ್ ಹಳೆ ಫೋಟೋವನ್ನು ಅಭಿಮಾನಿ ಶೇರ್ ಮಾಡಿದ್ದಾರಾ ಎನ್ನುವ ಗೊಂದಲವೂ ಇದೆ. ಈ ಬಗ್ಗೆ ಇನ್ನೂ ಸ್ಪಷ್ಟನೆ ಕೊಡಬೇಕು ವಾಹಿನಿಯವರು. 

ಮನೆಯಲ್ಲಿ ಕೊಂಚ ಕಿರಿಕಿರಿ ವಾತಾವರಣ ಸೃಷ್ಟಿ ಆಗಲು ಉಗ್ರಂ ಮಂಜು ಕಾರಣ ಎಂದು ವೀಕ್ಷಕರು ಕಾಮೆಂಟ್ ಮೂಲಕ ಆರೋಪಿಸುತ್ತಿದ್ದಾರೆ. ಅಲ್ಲದೇ ರಂಜಿತ್ ಹೊರ ಬಂದಿರುವ ಫೋಟೋ ಅಥವಾ ವಿಡಿಯೋ ಸಾಕ್ಷಿಯೂ ಸಿಕ್ಕಿಲ್ಲ. ಇಲ್ಲವಾದರೂ ಹೊರಗಿನಿಂದ ಪಬ್ಲಿಸಿಟಿ ಸಿಗಬೇಕು ಎಂದು ಜಗದೀಶ್ ತಂಡದವರು ಈ ಗೇಮ್ ಪ್ಲ್ಯಾನ್ ಮಾಡಿರಬಹುದು ಎಂಬ ಗೊಂದಲವಿದೆ. 

ಬಾಬಾ ಸಿದ್ದಿಕಿ ಶೂಟೌಟ್‌ನಿಂದ ಹೆಚ್ಚಾಯ್ತು ಸಲ್ಮಾನ್ ಹಾರ್ಟ್​ಬೀಟ್; ಫ್ರೆಂಡ್‌ಶಿಪ್‌ನಿಂದ ಇಷ್ಟೆಲ್ಲಾ ಆಯ್ತಾ?

ಇಂದು ರಿಲೀಸ್ ಆದ ಪ್ರೋಮೋದಲ್ಲಿ ಬಿಗ್ ಬಾಸ್ ವಾರ್ನಿಂಗ್ ಮಾಡಿರುವ ಧ್ವನಿ ಕೇಳಿಸಿ ಬಂದಿದೆ. ಉಗ್ರಂ ಮಂಜು ಮತ್ತು ರಂಜಿತ್ ಒಟ್ಟಾಗಿ ಲಾಯರ್ ಜಗದೀಶ್ ವಿರುದ್ಧ ಜಗಳವಾಡುತ್ತಾರೆ. ಜಗಳ ನಿಲ್ಲಿಸಿ ಲಿವಿಂಗ್ ಏರಿಯಾ ಸೋಫಾ ಮೇಲೆ ಪ್ರತಿಯೊಬ್ಬರೂ ಕುಳಿತುಕೊಳ್ಳಬೇಕು ಎಂದು ಬಿಗ್ ಬಾಸ್ ಆದೇಶಿಸುತ್ತಾರೆ. ಬಿಗ್ ಬಾಸ್ ಮಾತಿಗೆ ಕಿವಿಗೊಡದ ಸ್ಪರ್ಧಿಗಳು ಜಗಳ ಮುಂದುವರಿಸುತ್ತಾರೆ, ಆಗ ಸದ್ದು ಎಂದು ಜೋರಾಗಿ ಬಿಗ್ ಬಾಸ್ ಕೂಗುತ್ತಾರೆ. ಅಲ್ಲಿಗೆ ಪ್ರತಿಯೊಬ್ಬರೂ ಸುಮ್ಮನಾಗುತ್ತಾರೆ. ಇದಾದ ಮೇಲೆ ಏನಾಗಿದೆ ಎಂದು ತಿಳಿದುಕೊಳ್ಳಲು ಮುಂದೆ ರಿಲೀಸ್ ಆಗುವ ಪ್ರೋಮೋವನ್ನು ಕಾದು ನೋಡಬೇಕಿದೆ. 
 

click me!