ಈ ವಾರದ ಬಿಗ್ ಬಾಸ್ ಮನೆ ರಣರಂಗವಾಗಿದೆ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣಕ್ಕೆ ಜಗದೀಶ್ ಅವರನ್ನು ಮನೆಯಿಂದ ಹೊರಕಳಿಸಲಾಗಿದ್ದರೆ, ಜಗದೀಶ್ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ರಂಜಿತ್ ಅವರನ್ನು ಹೊರಹಾಕಲಾಗಿದೆ.
ಬೆಂಗಳೂರು (ಅ.19): ಈ ವಾರದ ಬಿಗ್ ಬಾಸ್ ಮನೆ ರಣಾಂಗಣವಾಗಿದೆ. ಮನೆಯ ಎಲ್ಲರೂ ಸೇರಿ ಜಗದೀಶ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇದರಿಂದ ಸಿಟ್ಟಾಗಿದ್ದ ಜಗದೀಶ್ ಮನೆಮಂದಿಗೆಲ್ಲಾ, ಕೊನೆಗೆ ಬಿಗ್‌ಬಾಸ್‌ಗೂ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಮನೆಯಲ್ಲಿದ್ದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣಕ್ಕೆ ಬಿಗ್ ಬಾಸ್ ಜಗದೀಶ್ ಅವರನ್ನು ಮನೆಯಿಂದ ಹೊರಹಾಕಿದ್ದಾರೆ. ಇನ್ನು ಜಗದೀಶ್ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಕಾರಣಕ್ಕೆ ಕಿರುತೆರೆ ನಟ ರಂಜಿತ್ ಅವರನ್ನು ಮನೆಯೊಂದ ಹೊರದಬ್ಬಲಾಗಿದೆ. ಇವರಿಬ್ಬರೂ ಮನೆಯಿಂದ ಹೊರಹೋಗಿದ್ದು ಹೌದೋ? ಅಲ್ಲವೋ? ಎನ್ನುವ ಪ್ರಶ್ನೆಗಳ ನಡುವೆ ಶನಿವಾರದ ಕಿಚ್ಚನ ಪಂಚಾಯ್ತಿ ವೇದಿಕೆ ಸಿದ್ದವಾಗಿದೆ. ಇದರಲ್ಲಿ ಸ್ವತಃ ಕಿಚ್ಚ ಸುದೀಪ್ ಮೊಟ್ಟ ಮೊದಲ ಬಾರಿಗ ಬಿಗ್ ಬಾಸ್‌ಅನ್ನೇ ಪ್ರಶ್ನೆ ಮಾಡಿದ್ದಾರೆ. ಅದರೊಂದಿಗೆ ಜಗದೀಶ್ ಅವರಿಗೆ ತಮ್ಮ ಮಾತಿನ ಮೂಲಕವೇ ಕೆಣಕಿದ ಮನೆಮಂದಿಗೆ ದೊಡ್ಡ ಮಟ್ಟದಲ್ಲಿ ಪ್ರಶ್ನೆ ಮಾಡಿದ್ದಾರೆ.
ತಪ್ಪು ಮಾಡಿದವರು ಹೊರಗಡೆ ಹೋಗಿದ್ದಾರೆ. ಆದರೆ, ನಿಮ್ಮ ಪೈಕಿ ಎಷ್ಟು ಜನರು ಸರಿ ಇದ್ದೀರಿ ಎಂದೇ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಒಬ್ಬ ವ್ಯಕ್ತಿ ತನ್ನ ಚಪ್ಪಲಿಯನ್ನು (ಉಗ್ರಂ ಮಂಜು) ಎತ್ತಿ ಬಿಸಾಡುತ್ತಾನೆ. ಅದು ನಿಮಗೆ ಒಕೆನಾ? ಎಂದು ಸುದೀಪ್ ಕೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎಂದು ಹಂಸಾ ಮಾತು ಆರಂಭಿಸಿದ ವೇಳೆ,'ಪ್ರಾಮಾಣಿಕತೆ ಅನ್ನೋ ಶಬ್ದವೇ ಈ ಮನೆಗೆ ಎಂದೂ ಸೂಟ್ ಆಗೋದಿಲ್ಲ'ಎಂದು ಕಿಡಿಕಿಡಿಯಾಗಿದ್ದಾರೆ.
undefined
ಮಾನಸ ಮೇಡಮ್, ಮಾತುಗಳಿಂದಲೇ ಒಬ್ಬ ವ್ಯಕ್ತಿ ಮನೆಯಿಂದ ಹೊರಗಡೆ ಹೋದ ಅನ್ನೋದಾಗಿದ್ರೆ, ನೀವು ಮಾತಾಡಿರೋ ಕೆಲವು ತಪ್ಪು ಮಾತುಗಳನ್ನು ಇಟ್ಟುಕೊಂಡು ನಿಮ್ಮನ್ನು ಯಾಕೆ ಮನೆಯಲ್ಲಿ ಇಟ್ಟುಕೊಂಡಿರಬೇಕು ಎಂದು ನೇರಪ್ರಶ್ನೆ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಬಿಗ್‌ಬಾಸ್ ನಿರ್ಧಾರವನ್ನೇ ಪ್ರಶ್ನಿಸಿದ ಸುದೀಪ್! ಪ್ರೊಮೋ ರಿಲೀಸ್
ಚೈತ್ರಾ ಅವರೇ, ಹೆಣ್ಣುಮಕ್ಕಳ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ ಎಂದು ನೀವು ಹೇಳುತ್ತೀರಿ. 'ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂದ್ರೆ..' ಅಲ್ಲಿ ಯಾರೂ ಕೂಡ ಅಪ್ಪನಿಗೆ ಬೈತಾ ಇರೋದಿಲ್ಲ.ಅವನು ಅಲ್ಲಿ ತಾಯಿಗೆ ಬೈತಾ ಇರ್ತಾನೆ.. ಎಂದು ಸಿಟ್ಟಿನಲ್ಲಿಯೇ ಹೇಳಿದ್ದಾರೆ. ಸುದೀಪ್ ಅವರ ಒಂದೊಂದು ಪ್ರಶ್ನೆಗಳಿಗೂ ಮನೆಯ ಸದಸ್ಯರ ತಲೆ ಕೆಳಗಾಗಿದೆ.
ಕಿಚ್ಚ ಮಾತಿನಂತೆಯೇ ಆಯ್ತು, ಅನಿರೀಕ್ಷಿತ ತಿರುವಿನಲ್ಲಿ ಬಿಗ್‌ಬಾಸ್ ಮನೆಯಿಂದ ಇಬ್ಬರು ಔಟ್! ಹೋಗಿದ್ದೆಲ್ಲಿಗೆ?
ಜಗದೀಶ್ ಮತ್ತೆ ಮನೆಗೆ ಬರಬೇಕು, ವೀಕ್ಷಕರ ಒತ್ತಾಯ: ಕಿಚ್ಚ ಸುದೀಪ್ ಮನೆಯಲ್ಲಿ ಸ್ಪರ್ಧಿಗಳ ಬೆಂಡೆತ್ತಿದ ಬೆನ್ನಲ್ಲಿಯೇ ಜಗದೀಶ್ ಮತ್ತೆ ಮನೆಗೆ ಬರಬೇಕು ಅನ್ನೋ ಒತ್ತಾಯ ಜೋರಾಗಿದೆ. 'ಬಿಗ್ ಬಾಸ್ ನ ಹಣ ಮತ್ತು ಟ್ರೋಫಿ ಗೆಲ್ಲದೇ ಇದ್ರೂ ಪರವಾಗಿಲ್ಲ ಜಗದೀಶ್ ಸರ್. ನೀವು ಮಾತ್ರ ಕರ್ನಾಟಕ ಜನತೆಯ ಮನಸ್ಸನ್ನ ಗೆದ್ದಿದ್ದೀರಾ' ಎಂದು ಕಾಮೆಂಟ್ ಮಾಡಿದ್ದಾರೆ. 'ಅಬ್ಬಬ್ಬಾ ಜಗದೀಶ್ ಅವರು ಮನೆ ಒಳಗೆ ಎಂಟ್ರಿ ಕೊಟ್ಟೆ ಕೊಡುತ್ತಾರೆ ಅನ್ನೋರು, ಸುದೀಪ್ ಸರ್ ಕ್ಲಾಸ್ ಮಸ್ತಾಗಿದೆ ಅನ್ನುವರು ಲೈಕ್ ಮಾಡಿ' ಎಂದು ಕಾಮೆಂಟ್ ಬರೆದಿದ್ದಾರೆ.
'ಅವರಿಗೆಲ್ಲಾ ಫುಲ್ ಕ್ಲಾಸ್ ತೆಗೊಬೇಕು ಆವಾಗ್ಲೇ ಜಗದೀಶ್ ಸರ್ ಗೆ ನ್ಯಾಯ ಸಿಗೋದು..', 'ಜಗ್ಗುನ Return ಕರ್ಸಿ biggboss ಮರ್ಯಾದೆನ ಉಳಿಸ್ಕೊಳ್ಳಿ ಇಲ್ಲ , ಜಗ್ಗು " ನನ್ ಬಿಟ್ಟು bigboss ನಡೆಸ್ತಿರ ಅಂತ ಹೇಳಿದ್ನೆ ನಿಜ ಮಾಡ್ತಾನೆ, ಈಚೆ ಇದ್ದೋರಿಗೆ ಬಿಟ್ಟಿಲ್ಲ ಅವ್ನು ಇನ್ನು ಇಂತ ನರಿಗಳನ್ನ ಬಿಡ್ತನ ಸೈಲೆಂಟ್ ಆಗಿ ಇದ್ದ ಅಂದ್ರೆ ದೊಡ್ಡದಾಗಿ ತಲೆ ಓಡಿಸಿರ್ತಾನೆ. We want ಜಗದೀಶ್' ಎಂದು ಕಾಮೆಂಟ್ ಬರೆದಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಬಿಗ್ ಸೆಲ್ಯೂಟ್ Button ಎಂದು ಬರೆಯಲಾಗಿದೆ.
ಪಂಚಾಯ್ತಿ ಕಟ್ಟೇಲಿ ನ್ಯಾಯ ಎತ್ತಿ ಹಿಡಿದ ಕಿಚ್ಚ!
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
pic.twitter.com/hlpGSm2BvY