
ಕೆಲ ದಿನಗಳ ಹಿಂದಷ್ಟೇ ಸತ್ಯಾ ಸೀರಿಯಲ್ ಸತ್ಯ ಎಂದಾಕ್ಷಣ ಎಲ್ಲರ ಗಮನ ಧಾರಾವಾಹಿಯ ರಗಡ್ ಪಾತ್ರಧಾರಿಯ ನೆನಪಾಗುತ್ತಿತ್ತು. ಗಂಡುಬೀರಿಯಿಂದ ಶುರುವಾದ ಸತ್ಯಳ ಪಯಣ, ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುವ ಸೊಸೆಯಾಗಿ ನಂತರ ಎಲ್ಲರಿಂದಲೂ ಇದ್ದರೆ ಇಂಥ ಸೊಸೆ ಇರಬೇಕು ಎಂದು ಹೊಗಳಿಸಿಕೊಳ್ಳುವ ಹೆಣ್ಣಾದವಳದ್ದೇ ನೆನಪಾಗುತ್ತಿತ್ತು. ಆದರೆ ಇಂದು ಸತ್ಯಾ ಹೆಸರು ಬಿಗ್ಬಾಸ್ನಲ್ಲಿ ಕೇಳಿಬರುತ್ತಿದೆ. ಆದರೆ ಇಲ್ಲಿ ಸತ್ಯಾ ತಮ್ಮ ನಿಜ ರೂಪದ ಗೌತಮಿ ಜಾಧವ್ ಆಗಿ ರೂಪು ಪಡೆದು ಆಟವಾಡುತ್ತಿದ್ದಾರೆ. ರಗಡ್ ಗಂಡುಬೀರಿಯ ಲುಕ್ಕಿನಿಂದ ಸುರಸುಂದರಿ ಉದ್ದ ಕೂದಲ ಬೆಡಗಿ ಎಂದು ಹಲವರ ಕ್ರಷ್ ಕೂಡ ಆಗಿದ್ದಾರೆ. ಆದರೆ ರಿಯಲ್ ಲೈಫ್ನಲ್ಲಿ ಈಕೆಗೆ ಮದುವೆಯಾಗಿರುವ ಸುದ್ದಿ ಕೇಳಿ ಹಲವರಿಗೆ ನಿರಾಶೆಯಾದದ್ದೂ ಇದೆ!
ಹೌದು. ಸತ್ಯ ಉರ್ಫ್ ಗೌತಮಿ ಅವರ ಪತಿ ಅಭಿಷೇಕ್ ಕಾಸರಗೋಡು ಕ್ಯಾಮರಾಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾನು ನಟಿಯಾಗಿದ್ದೆ, ಅವರು ಕ್ಯಾಮೆರಾಮನ್ ಆಗಿದ್ರು... ಅಲ್ಲಿಂದಲೇ ಶುರುವಾಯ್ತು ನಮ್ಮ ಲವ್ ಪಯಣ ಎಂದು ಗೌತಮಿ ಜೋರಾಗಿ ನಗುತ್ತಾರೆ. ಅಂದಹಾಗೆ, ಇವರ ಲವ್ ಶುರುವಾಗಿದ್ದು ಕಿನಾರೆ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ. ಗೌತಮಿ ಅವರಿಗೆ ಕಿರುತೆರೆಯಂತೆಯೇ ಸಿನಿಮಾ ಕೂಡ ಹೊಸತಲ್ಲ. 2021 ರ ಫೇಮಸ್ ಸೀರಿಯಲ್ 'ನಾಗರ ಪಂಚಮಿ'ಯಲ್ಲಿ ಈಕೆ ನಟಿಸಿದ್ರು. ಆ ಬಳಿಕ ಸಿನಿಮಾ ಫೀಲ್ಡ್ ಗೆ ಹೋದ ಗೌತಮಿ 'ಲೂಟಿ', 'ಆದ್ಯಾ', 'ಕಿನಾರೆ' ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೊಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಸಹಜ ನಟನೆಗೆ ಹೆಸರಾದ ಈಕೆಗೆ ಸಿನಿಮಾ ಯಾಕೋ ಕೈ ಹಿಡೀಲಿಲ್ಲ. ಸೀರಿಯಲ್ ಜಗತ್ತು ಕೈ ಬಿಡಲಿಲ್ಲ. ಸತ್ಯಾ ಮೂಲಕ ಸಕತ್ ಮಿಂಚಿದರು.
ಇದೇ ಮೊದಲ ಬಾರಿಗೆ ಬಿಗ್ಬಾಸ್ ನಿರ್ಧಾರವನ್ನೇ ಪ್ರಶ್ನಿಸಿದ ಸುದೀಪ್! ಪ್ರೊಮೋ ರಿಲೀಸ್
ಕಿನಾರೆಯಲ್ಲಿ ಅವರ ಲವ್ ಸ್ಟೋರಿ ಶುರುವಾದದ್ದು. ಅಂದಹಾಗೆ ಇವರು ಮದುವೆಯಾಗಿ ಐದು ವರ್ಷಗಳಾಗಿವೆ. 2019ರಲ್ಲಿ ಇವರ ಮದುವೆ ನಡೆದಿದೆ. ಕಿನಾರೆ ಶೂಟಿಂಗ್ ಸಮಯದಲ್ಲಿ ನಾಯಕಿಯಾಗಿದ್ದ ಗೌತಮಿ ಈ ಚಿತ್ರದಲ್ಲಿ ಸುಮಾರು ಮೂರು ವರ್ಷ ಶೂಟಿಂಗ್ ನಡೆಸಿದರು. ಈ ಅವಧಿಯಲ್ಲಿ ಇಬ್ಬರ ನಡುವೆ ಪ್ರೀತಿ ಮೊಳಗಿದೆ. ಅಷ್ಟಕ್ಕೂ ಇವರ ಲವ್ ಆರಂಭವಾಗಿದ್ದೇ ಕುತೂಹಲಕರವಾದದ್ದು. ‘ಕಿನಾರೆ’ ಚಿತ್ರದ ಶೂಟಿಂಗ್ ಸಮಯದಲ್ಲಿ ಗೌತಮಿ ಜಾಧವ್ ಅವರ ಫೋಟೋವನ್ನ ತಮ್ಮ ಫೋನ್‌ನ ವಾಲ್‌ಪೇಪರ್ ಆಗಿ ಅಭಿಷೇಕ್ ಹಾಕಿಕೊಂಡಿದ್ದರಂತೆ. ಆದರೆ ಅದು ಲವ್ಗೆ ಅಲ್ಲ ಅನ್ನೋದು ಅವರ ಮಾತು. ಫ್ರೇಮ್ ಚೆನ್ನಾಗಿತ್ತು ಅಂತ ವಾಲ್‌ಪೇಪರ್ ಹಾಕಿಕೊಂಡಿದ್ರಂತೆ. ಅದನ್ನು ಗೌತಮಿ ಜಾಧವ್ ನೋಡಿದರು. ಅಲ್ಲಿಂದಲೇ ಲವ್ ಶುರುವಾದದ್ದು ಎನ್ನುತ್ತದೆ ಈ ಜೋಡಿ.
ಇವರ ಲವ್ಸ್ಟೋರಿಗೆ ಮನೆಯವರ ಅಂಕಿತ ಬಿದ್ದಾಗ 2019 ರಂದು ಇಬ್ಬರೂ ಮದುವೆಯಾಗಿದ್ದಾರೆ. ಬೆಂಗಳೂರಿನ ಆರ್‌ಆರ್‌ನಗರದಲ್ಲಿ ನಿಮಿಷಾಂಬ ದೇವಸ್ಥಾನದಲ್ಲಿ ಮದುವೆ ನೆರವೇರಿದೆ. ಇನ್ನು ಅಭಿಷೇಕ್ ಕುರಿತು ಹೇಳುವುದಾದರೆ, ಛಾಯಾಗ್ರಹಣದಲ್ಲಿ ಡಿಪ್ಲೊಮಾ ಪಡೆದ ಅವರು 'ಸೂಪರ್', 'ಪೊರ್ಕಿ', 'ಜಂಗ್ಲಿ' ಮತ್ತು 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಮುಂತಾದ ಚಲನಚಿತ್ರಗಳಿಗೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಅಭಿನಯದ ʼಪೆಪೆʼ ಸಿನಿಮಾದ ಸಿನಿಮಾಟೋಗ್ರಫಿ ಮಾಡಿದ್ದು ಇವರೇ. ಜೊತೆಗೆ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ, ಮಾಯಾಬಜಾರ್, ಕೃಷ್ಣ ಟಾಕೀಸ್ ಎಂಬ ಕನ್ನಡ ಪ್ರಮುಖ ಸಿನಿಮಾಗಳಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.
ಇಂಥ ಗಂಡ ಯಾರಿಗೆ ಬೇಕು ... ಎಲ್ಲಾ ಬಿಟ್ಟು ಹೋಗ್ತೇನೆ... ಭಾಗ್ಯಳ ಬಾಯಲ್ಲಿ ಬಂದೇ ಬಿಡ್ತು ಭಯಾನಕ ಸತ್ಯ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.