ಯಾವ ಜನ್ಮದ ಪುಣ್ಯನೋ, ಬಿಗ್‌ಬಾಸ್ ಮನೆಗೆ ಬಂತು ಕಿಚ್ಚನ ಕೈರುಚಿ, ಸ್ಪರ್ಧಿಗಳಿಗೆ ಸರ್‌ಪ್ರೈಸ್‌!

Published : Jan 03, 2025, 07:36 PM ISTUpdated : Jan 03, 2025, 07:45 PM IST
ಯಾವ ಜನ್ಮದ  ಪುಣ್ಯನೋ, ಬಿಗ್‌ಬಾಸ್ ಮನೆಗೆ ಬಂತು ಕಿಚ್ಚನ ಕೈರುಚಿ,  ಸ್ಪರ್ಧಿಗಳಿಗೆ  ಸರ್‌ಪ್ರೈಸ್‌!

ಸಾರಾಂಶ

ಬಿಗ್‌ಬಾಸ್‌ 11ರಲ್ಲಿ ಕುಟುಂಬಸ್ಥರ ಭೇಟಿಯ ಬಳಿಕ, ಸುದೀಪ್‌ ಸ್ಪರ್ಧಿಗಳಿಗೆ ತಾವೇ ತಯಾರಿಸಿದ ಊಟ ಕಳುಹಿಸಿದರು. ಪ್ರತಿ ಸ್ಪರ್ಧಿಗೂ ವೈಯಕ್ತಿಕ ಸಂದೇಶಗಳನ್ನೂ ಬರೆದಿದ್ದು, ಸ್ಪರ್ಧಿಗಳು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು. ಕಿಚ್ಚನ ಕೈರುಚಿಗೆ ಮನೆಮಂದಿ ಸಂತಸಪಟ್ಟರು.

ಬಿಗ್‌ಬಾಸ್ ಕನ್ನಡ 11 ಅಂತಿಮ ಘಟ್ಟಕ್ಕೆ ದಿನಗಣನೆ ಆರಂಭವಾಗಿದೆ. ಈ ವಾರ ಮನೆಯಲ್ಲಿ ಫ್ಯಾಮಿಲಿ ರೌಡ್‌ ಇತ್ತು. ಸದ್ಯ ಮನೆಯಲ್ಲಿರುವ ಎಲ್ಲಾ 9 ಮಂದಿ ಸದಸ್ಯರ ಮನೆಯವರು ದೊಡ್ಮನೆಗೆ ಭೇಟಿ ಕೊಟ್ಟು  ಸ್ಪರ್ಧಿಯ ಓರ್ವ ಸದಸ್ಯರಿಗೆ ಮನೆಯಲ್ಲೇ 1 ದಿನ ಉಳಿದುಕೊಳ್ಳುವ ಅವಕಾಶ ನೀಡಿದ್ದರು.

ಇದೀಗ ಎಲ್ಲಾ ಮನೆಯವರು ಭೇಟಿ ಕೊಟ್ಟು ಹೋದ ಬಳಿಕ ಕಿಚ್ಚ ಸುದೀಪ್‌ ತಮ್ಮ ಕೈಯಾರೇ ರುಚಿ ರುಚಿಯಾದ ಅಡುಗೆ ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ. ಪ್ರತೀ ಸೀಸನ್‌ ನಲ್ಲೂ ಪ್ರೀತಿಯಿಂದ ತಮ್ಮ ಕೈಯಾರೆ ಅಡುಗೆ ಮಾಡಿ ಕಳಿಸಿ ಕೊಡುತ್ತಿದ್ದ ಕಿಚ್ಚ ಈ ಬಾರಿ ಕೂಡ ಮನೆಯವರಿಗೆ ರುಚಿರುಚಿಯಾದ ಅಡುಗೆ ಮಾಡಿ ಜೊತೆಗೆ ಸಂದೇಶ ಬರೆದು ಕಳುಹಿಸಿಕೊಟ್ಟಿದ್ದಾರೆ.

ವೀಕೆಂಡ್‌ನಲ್ಲಿ ಕಿಚ್ಚನನ್ನು ಯಾವ ಚಾನೆಲ್‌ನಲ್ಲಿ ನೋಡ್ಬೇಕು ಎಂಬುದೇ ಫುಲ್ ಕನ್ಫ್ಯೂಸ್!

ಪ್ರತೀ ಸೀಸನ್‌ ನಲ್ಲೂ ಸುದೀಪ್  ಊಟದ ಜೊತೆಗೆ ಎಲ್ಲಾ ಸ್ಪರ್ಧಿಗಳಿಗೂ  ವಿಶೇಷ ಸಂದೇಶಗಳನ್ನು ಬರೆದು ಕಳುಹಿಸಿಸುತ್ತಿದ್ದರು. ಆ ಒಂದೊಂದು ಸಂದೇಶದಲ್ಲಿ ಒಳಾರ್ಥವಿರುತ್ತದೆ. ಈ ಬಾರಿಯ ಸ್ಪರ್ಧಿಗಳಿಗೆ ಕಿಚ್ಚ ಏನು ಸಂದೇಶ ಕೊಟ್ಟಿರಬಹುದು ಎಂಬ ವಿಚಾರ ಇಂದಿನ ಎಲಿಸೋಡ್‌ ನಲ್ಲಿ ತಿಳಿಯಲಿದೆ. 

ಹಸಿದವರಿಗೆ ಊಟ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ  ಇಲ್ಲ. ಅಂತೆಯೇ ಕಿಚ್ಚನ ಸಂದೇಶದ ಜೊತೆಗೆ ಕೈಯಾರೆ ಅಡುಗೆ ತಿನ್ನುವ ಅದೃಷ್ಟ ರಜತ್‌, ಮಂಜು, ಹನುಮಂತ, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಗೌತಮಿ, ಚೈತ್ರಾ, ಧನ್‌ರಾಜ್‌ ಅವರ ಪಾಲಾಗಿದೆ.

ಬಿಗ್‌ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಫಿನಾಲೆ ಡೇಟ್‌, ಫೈನಲಿಸ್ಟ್‌ಗಳ ಹೆಸರು ಲೀಕ್‌!

ಕಿಚ್ಚ ಕಳಿಸಿದ ಕೈರುಚಿಗೆ ಮನೆ ಮಂದಿ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ, ಇಂತಹ ಒಂದು ಸಪ್ರೈಸಸ್‌, ಇಂತಹ ಒಂದು ಮೂಮೆಂಟ್‌ ಕ್ರಿಯೇಟ್‌ ಮಾಡೋದು ನಿಮ್ಮಿಂದ ಮಾತ್ರ ಸಾಧ್ಯ ಸರ್‌ ಎಂದು ರಜತ್‌ ಹೇಳಿದ್ದಾರೆ. ನಿಮ್ಮ ಕೈನಿಂದ ನನ್ನ ಹೆಸರನ್ನು ಬರೆಸಿಕೊಳ್ಳುವುದೇ ನನ್ನ ಭಾಗ್ಯ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಚ, ಬಿಗ್‌ಬಾಸ್‌ ಮನೆಗೆ ಬಂದಿದ್ದು ಸಾರ್ಥಕವಾಯ್ತು ಎಂದು ಹನುಮಂತು ಹೇಳಿದ್ದಾರೆ.

ಸೊಸೆ ಹೇಗಿರಬೇಕೆಂದ ಹನುಮಂತನ ಅವ್ವ:  ಹನುಮಂತನ ತಂದೆ-ತಾಯಿ ಬಿಗ್‌ಬಾಸ್‌ ಮನೆಯಲ್ಲಿ ಒಂದು ದಿನ ತಂಗಿದ್ದಾರೆ. ಮಗನ ಮದುವೆ ಬಗ್ಗೆ ಮಾತನಾಡಿದ್ದು, ತಮ್ಮ ಮನೆಯ ಸೊಸೆ ಆಗುವವಳು ಯಾವ ರೀತಿ ಇರಬೇಕು ಎಂಬುದನ್ನು ತಾಯಿ ಹೇಳಿದ್ದಾರೆ. ಆಕೆಗಾಗಿ ನಾನು ಬಟ್ಟೆ ಹೊಲಿದಿಟ್ಟಿರುವೆ. ತಮ್ಮ ರೀತಿಯೇ ಬಟ್ಟೆ ಧರಿಸಬೇಕು ಎಂದು ಅವರು ಷರತ್ತು ಹಾಕಿದ್ದಾರೆ. ಜೊತೆಗೆ ಹನುಮಂತ ನಡಿತೈತಿ ಎಂದು ಹೇಳಿದ್ದಕ್ಕೆ, ಆಗಕ್ಕಿಲ್ಲ ಎಂದು ಕಣ್ಣು ಹೊಡೆದಿದ್ದಾರೆ. 

ಈ ಬಾರಿಯ ಬಿಗ್ ಬಾಸ್​ನಲ್ಲಿ ಎಲಿಮಿನೇಷನ್ ಇಲ್ಲ: ಒಂದು ವಾರ ಹೊಡೆದಾಡಿಕೊಂಡು ಇಬ್ಬರು ಎಲಿಮಿನೇಷನ್ ಆದರು ಎಂಬ ಕಾರಣಕ್ಕೆ, ಮತ್ತೊಂದು ವಾರ ಹಬ್ಬದ ಕಾರಣಕ್ಕೆ, ಮತ್ತೊಂದು ವಾರ ಯಾವುದೇ ಕಾರಣ ಇಲ್ಲದೆ, ಇನ್ನೊಂದು ವಾರ  ಸುರೇಶ್ ಹೊರ ಹೋಗಿದ್ದಕ್ಕೆ,  ಹೀಗೆ ಅನೇಕ ಬಾರಿ ‘ನೋ ಎಲಿಮಿನೇಷನ್ ವೀಕ್’ ಬಿಗ್‌ಬಾಸ್‌ ಮನೆಯಲ್ಲಿ ನಡೆದಿದೆ. ಈ ವಾರ ಫ್ಯಾಮಿಲಿ ವೀಕ್‌, ಹೊಸ ವರ್ಷಾಚರಣೆ ಎಂಬ ಕಾರಣಕ್ಕೇನೋ ಎಲಿಮಿನೇಶನ್‌ ಇಲ್ಲ. ಹೀಗಾಗಿ ಮುಂದಿನ ವಾರ ಡಬಲ್‌ ಎಲಿಮಿನೇಶನ್‌ ಪಕ್ಕಾ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಯಾರಗಲಿದ್ದಾರೆ ಎಂಬ ಕುತೂಹಲವೂ ಹೆಚ್ಚಿದೆ. ಇಂದಿನ ಎಪಿಸೋಡ್‌ ನಲ್ಲಿ ಇದಕ್ಕೆ ಉತ್ತರ ಸಿಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?