
ಬಿಗ್‌ಬಾಸ್ ಕನ್ನಡ ಸೀಸನ್ 11 ಹೊಸ ಅಧ್ಯಾಯ ಸ್ವರ್ಗ-ನರಕ ಎಂಬ ಥೀಮ್ ನಲ್ಲಿ ಬಂದಿತ್ತು. ನರಕದಲ್ಲಿರುವವರಿಗೆ ಸರಿಯಾಗಿ ಊಟ ಕೊಡುತ್ತಿಲ್ಲ. ಮಹಿಳಾ ಸ್ಪರ್ಧಿಗಳಿಗೆ ವಾಶ್ ರೂಂ ವ್ಯವಸ್ಥೆಗಳೂ ಸರಿ ಇಲ್ಲ ಎಂದೆಲ್ಲ ದೂರು ಬಂದಿತ್ತು. ಹೀಗಾಗಿ ಶೋ ಆಯೋಜಕರಿಗೆ ರಾಜ್ಯ ಮಹಿಳಾ ಆಯೋಗ ಪ್ರಶ್ನೆ ಮಾಡಿತ್ತು. ಸ್ವರ್ಗ, ನರಕ ವಿಚಾರವಾಗಿ ಮಹಿಳೆಯರ ಕುರಿತಾದ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದಿಂದ ದೂರು ದಾಖಲಿಸಿದ್ದು, ಮಹಿಳಾ ಆಯೋಗದ ದೂರು ಆಧರಿಸಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಇದೀಗ ಈ ಸಂಬಂಧ ಸೂಪರ್ ಸಂಡೇ ವಿಥ್ ಬಾದ್ಷಾ ಸುದೀಪ ಕಾರ್ಯಕ್ರಮದ ಆರಂಭದಲ್ಲೇ ಮಾತನಾಡಿದ ಕಿಚ್ಚ, ಇದು ಎಲ್ಲಾ ಲೇಡಿಸ್ ಗೆ ಪ್ರಶ್ನೆ ಪ್ರಮುಖವಾಗಿ ನರಕದಲ್ಲಿದ್ದ ಹೆಣ್ಣಕ್ಕಳು ನನ್ನ ಎಲ್ಲಾ ಸ್ಪರ್ಧಿಗಳಿಗೆ ಪ್ರಶ್ನೆ, ಏಕೆಂದರೆ ಇದು ತುಂಬಾ ಮುಖ್ಯ. ನರಕದಲ್ಲಿದ್ರಿ ಎಷ್ಟು ಖುಷಿಯಲ್ಲಿದ್ರಿ?
ಬಿಗ್‌ಬಾಸ್ ನಿರೂಪಣೆಗೆ ಸುದೀಪ್ ವಿದಾಯ, ಕಿಚ್ಚನ ಅಧಿಕೃತ ಘೋಷಣೆ!
ಅನುಷಾ ರೈ: ನರಕದಲ್ಲಿದ್ರೂ ಎಲ್ಲೋ ಒಂದೊಂದು ಕಡೆ ನರಕ ಅಂತ ಫೀಲ್ ಆಗ್ತಿತ್ತು. ಅದು ಬಿಟ್ರೆ ತುಂಬಾ ಖುಷಿಯಾಗಿಯೇ ಇದ್ದೆ.
ಸುದೀಪ್: ಎಲ್ಲಿಯಾದ್ರೂ ಅನಾನುಕೂಲ? ಯಾಕೆಂದರೆ ಹೊರಗಡೆ ಮಹಿಳಾ ಆಯೋಗದವರು ನಮ್ಮನ್ನು ಪ್ರಶ್ನಿಸಿ ಮಹಿಳೆಯರನ್ನು ಹೊರಗಡೆ ಕರೆಸಿ ಎಂದು ಹೇಳಿದ್ದಾರೆ.
ತುಕಾಲಿ ಮಾನಸ: ನನಗೆ ಅಂತಹ ತೊಂದರೆ ಏನೂ ಆಗಿಲ್ಲ. ದೊಡ್ಡದೇನೂ ಸಮಸ್ಯೆ ಆಗಿಲ್ಲ. ಊಟದ್ದು ಒಂದು ಬಿಟ್ರೆ ಎಲ್ಲಾ ಚೆನ್ನಾಗಿ ಇತ್ತು. ಇನ್ನು ಮೋಕ್ಷಿತಾ ಅವರು ಕೂಡ ಏನೂ ಸಮಸ್ಯೆ ಆಗಿಲ್ಲ ಎಂದರು.
ಧರ್ಮ ಸಂಕಟದಲ್ಲಿ ತ್ರಿಕೋನ ಪ್ರೇಮಕಥೆ: ಸುರೇಶ್ ಹಿಂದಿನ ಲವ್‌ಸ್ಟೋರಿ ತೆಗೆದಿದ್ದಕ್ಕೆ ಅನುಷಾ ಕೆಂಡಾಮಂಡಲ!
ಚೈತ್ರಾ ಕುಂದಾಪುರ ಪ್ರತಿಕ್ರಿಯೆ ನೀಡಿ, ಅಂತದ್ದೇನೂ ಸಮಸ್ಯೆ ಕಾಣಿಸಿಲ್ಲ. ಬಹುಷಃ ಸ್ಕ್ರೀನ್ ಅಲ್ಲಿ ಹೇಗೆ ಕಾಣುತ್ತಿತ್ತು ಅನ್ನೋದು ನಮಗೆ ಗೊತ್ತಿಲ್ಲದ ಕಾರಣ ಹೊರಗಡೆ ಹಾಗೆ ಪೋಟ್ರೆಟ್ ಆಗಿದ್ಯೋ ಗೊತ್ತಿಲ್ಲ, ಬ್ಲೈಂಡ್ಸ್ ಡೌನ್ ಆದಾಗ ನಮಗೆ ಸ್ವರ್ಗದ ಬಾತ್‌ರೂಂ ಬಳಸಲು ಅವಕಾಶ ಇತ್ತು. ರೆಗ್ಯುಲರ್ ಮನೆಗಳಲ್ಲಿ ಹೇಗಿರುತ್ತೋ ಹಾಗೆಯೇ ವಾಶ್ ರೂಂ ಕಂಫರ್ಟೆಬಲ್ ಇತ್ತು. ನೀರಿನ ಸಮಸ್ಯೆ ಬರಲಿಲ್ಲ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಬೇಕಾಗೋದೇ ನೀರು ಮತ್ತು ಶೌಚಾಲಯ ನೀಟಾಗಿ ಇದ್ರೆ ಸಾಕು. ಆ ವಿಚಾರದಲ್ಲಿ ನಮಗೆ ಯಾವುತ್ತೂ ಸಮಸ್ಯೆ ಬಂದಿಲ್ಲ. ಒಂದು ಖುಷಿ ಏನೆಂದರೆ ಬಿಗ್‌ಬಾದ್ ಟೀಂ ಬಗ್ಗೆ, ಟಾಸ್ಕ್ ಮುಗಿಸಿ ಬಂದು, ಬ್ಲೈಂಡ್ಸ್ ಡೌನ್ ಆಗಿದೆ. ವಾಶ್ ರೂಂ ಅಗತ್ಯ ಇದೆ ಎಂದು ಕ್ಯಾಮಾರ ಮುಂದೆ ಕೇಳಿದ್ದಕ್ಕೆ ವಿದ್ ಇನ್ 5 ಮಿನಿಟ್ ಸ್ವರ್ಗದ ವಾಶ್ ರೂಂ ಯಾವಾಗ ಬೇಕಾದ್ರೂ ಮಹಿಳಾ ನರಕವಾಸಿಗಳು ಯೂಸ್ ಮಾಡಬಹುದು ಎಂದು ಲೆಟರ್ ಬಂದಿತ್ತು. ಆ ಸೂಕ್ಷ್ಮತೆಯನ್ನು ಗಮನಿಸಿ ಬಿಗ್‌ಬಾಸ್ ತಂಡ ಅನುಕೂಲ ಮಾಡಿ ಕೊಡುತ್ತೆ. ಹಾಗಾಗಿ ಕಂಪ್ಲೆಂಟ್ ಮಾಡೋದು ಸಾಧ್ಯನೇ ಇಲ್ಲದಿರುವ ವಿಷ್ಯ ಎಂದು ನಾನು ಭಾವಿಸುತ್ತೇನೆ ಎಂದರು.
ಇದಕ್ಕೆ ಥ್ಯಾಂಕ್ಯೂ ಸೋ ಮಚ್ ಎಂದ ಸುದೀಪ್, ಅವರ ಕಡೆಯಿಂದನೂ ಈ ಪ್ರಶ್ನೆ ಅಥವಾ ಪತ್ರ ಬಂದಾಗ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಯಾಕಂದ್ರೆ ಎಲ್ಲೂ ಒಂದು ಕಡೆ ಕೂತು ಅವರು ನಿಮ್ಮ ಮೇಲೆ, ಹೆಣ್ಮಕ್ಕಳ ಮೇಲೆ ಇಟ್ಟಿರುವ ಕಾಳಜಿ, ಎದ್ದು ಕಾಣುತ್ತೆ. ಅದನ್ನು 100% ಯಾರೂ ತಪ್ಪಬಾರದು ಅದು ಮನೆಯಾಗಿರುಬಹುದು ಅಥವಾ ಎಲ್ಲೇ ಆಗಿರಬಹುದು. ನಮ್ಮ ಸ್ಪರ್ಧಿಗಳ ಬಾಯಿಂದ ಏನು ಬಂತೆಂದು ನೀವೇ ಕೇಳಿದಿರಿ ಎಂದು ಸುದೀಪ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.