ಧರ್ಮ ಸಂಕಟದಲ್ಲಿ ತ್ರಿಕೋನ ಪ್ರೇಮಕಥೆ: ಸುರೇಶ್ ಹಿಂದಿನ ಲವ್‌ಸ್ಟೋರಿ ತೆಗೆದಿದ್ದಕ್ಕೆ ಅನುಷಾ ಕೆಂಡಾಮಂಡಲ!

By Gowthami K  |  First Published Oct 14, 2024, 12:56 AM IST

ಬಿಗ್‌ಬಾಸ್‌ ಕನ್ನಡ 11ರಲ್ಲಿ ಐಶ್ವರ್ಯಾ, ಧರ್ಮ ಮತ್ತು ಅನುಷಾ ನಡುವಿನ ತ್ರಿಕೋನ ಪ್ರೇಮಕಥೆ ಸದ್ದು ಮಾಡುತ್ತಿದೆ. ಈ ಬಗ್ಗೆ ಸುದೀಪ್‌ ಕೂಡ ಪ್ರಶ್ನೆ ಮಾಡಿದ್ದು, ಮನೆಯ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  


ಬಿಗ್‌ಬಾಸ್‌ ಕನ್ನಡ 11ರಲ್ಲಿ ಧರ್ಮ ಮತ್ತು ಅನುಷಾ ನಡುವಿನ ಹಿಂದಿನ ಸಂಬಂಧದ ಬಗ್ಗೆ ಐಶ್ವರ್ಯಾ ಸಿಂಧೋಗಿ ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರದ ಬಗ್ಗೆ ಮನೆಯ ಸದಸ್ಯರ ನಡುವೆ ಚರ್ಚೆ ನಡೆದಿದ್ದು, ಐಶ್ವರ್ಯಾ ಭಾವುಕರಾಗಿದ್ದರು. ನಿನ್ನೆಯ ಎಪಿಸೋಡ್‌ ನಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಬಿಗ್​ ಬಾಸ್​ ಮನೆಯಲ್ಲಿ ಪ್ರೀತಿ ಚಿಗುರುವುದು ಹೊಸದೇನೂ ಅಲ್ಲ. ಪ್ರತಿ ಸೀಸನ್​ನಲ್ಲೂ ಆ ರೀತಿಯ ಘಟನೆಗಳು ನಡೆಯುತ್ತವೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಐಶ್ವರ್ಯಾ ಸಿಂಧೋಗಿ, ಧರ್ಮ ಕೀರ್ತಿರಾಜ್​ ಹಾಗೂ ಅನುಷಾ ರೈ ನಡುವೆ ತ್ರಿಕೋನ ಪ್ರೇಮಕಥೆ ಸದ್ದು ಮಾಡುತ್ತಿದೆ.

ಇದೀಗ ಇಂದಿನ ಸೂಪರ್ ಸಂಡೇ ವಿಥ್ ಬಾದ್​ಷಾ ಸುದೀಪ ಕಾರ್ಯಕ್ರಮದಲ್ಲಿ ಎಸ್‌ ಅಥವಾ ನೋ ರೌಂಡ್‌ ನಲ್ಲಿ ಸುದೀಪ್ ಈ ಬಗ್ಗೆ ಪ್ರಶ್ನೆ ಕೇಳಿದ್ದು, ಧರ್ಮ ಅವರು ಅನುಷಾ ಅವರ ಜೊತೆ ಮಾತನಾಡಿದರೆ  ಐಶ್ವರ್ಯಾ ಮುಖ ಸಣ್ಣದಾಗುತ್ತೆ ಎಂದು ಕೇಳಿದರು.

Tap to resize

Latest Videos

undefined

ಇದಕ್ಕೆ ಮನೆಯ ಬಹುತೇಕ ಮಂದಿ ಎಸ್‌ ಎಂದೇ ಬೋರ್ಡ್ ಹಿಡಿದರು. ಗೋಲ್ಡ್ ಸುರೇಶ್‌ ಯಾಕೆ ಎಸ್‌ ಎಂದು ಕಿಚ್ಚ ಕೇಳಿದ್ದಕ್ಕೆ, ಹೌದು ಸರ್‌  ಅದೇನೋ ಹಳೆದು ಲವ್‌ ಸ್ಟೋರಿ ಇದೆಯಂತೆ ಸರ್,   ಇದಕ್ಕೆ ಮನೆಯವರೆಲ್ಲ ಹಾಗೆ ಹೇಳಬಾರದಿತ್ತು ಎಂದು  ರಿಯಾಕ್ಟ್ ಮಾಡಿದರು. ಅದಕ್ಕೆ ಸುರೇಶ್ ನಿಜ ಅದು,  ನಿಜ ತಾನೇ ಅದು ಬೇರೆ ಏನೂ ಉತ್ತರ ಕೊಡಲಿ. ನನಗೆ ಏನು ಗೊತ್ತಿದೆ ಅದನ್ನು ಹೇಳಿದ್ದೇನೆ ಸರ್, ಐಶ್ವರ್ಯಾ ಅವರಿಗೆ ನಿನ್ನೆ ತುಂಬಾ ಬೇಜಾರು ಆಗಿತ್ತು. ನಾನು ಸಮಾಧಾನ ಕೂಡ ಮಾಡಿದೆ ಎಂದರು.

ಇನ್ನು ಭವ್ಯಾ ಕೂಡ ಎಸ್‌ ಬೋರ್ಡ್ ಹಿಡಿದಿದ್ದರು, ಹೌದು ಸರ್, ಅನುಷಾ ಅವರತ್ರ ಧರ್ಮ ಏನಾದ್ರೂ ಹೋದ್ರೆ ಐಶ್ವರ್ಯಾ ನೋಡುತ್ತಿರುತ್ತಾರೆ. ನರಕಕ್ಕೆ ಹೋದ ಐಶ್ವರ್ಯಾ ಪಾತ್ರೆ ತೊಳೆಯಲು ಬಂದಾಗ ಧರ್ಮ ಅವರು ಪೂರ್ತಿ ದಿನ ಅವರಿಗೆ ಸಹಾಯ ಮಾಡಿದ್ದರು. ಅದಾಗಿ ಅನುಷಾ ಅವರು ಪಾತ್ರೆ ತೊಳೆಯಲು ಬಂದರು. ಆಗ ಧರ್ಮ ಇಲ್ಲಿರ್ಲಾ? ಅಲ್ಲಿರ್ಲಾ? ಅಂತ ಗೊಂದಲಕ್ಕೀಡಾದರು ಎಂದರು. ಧರ್ಮ ಅವರ ಹೆಸರು ಹೇಳಿದ ತಕ್ಷಣ ಐಶ್ವರ್ಯಾ ಬ್ಲಶ್ ಆಗುತ್ತಾರೆ ಎಂದರು. 

ಧರ್ಮ ಮಾತ್ರ ನೋ ಬೋರ್ಡ್ ಹಿಡಿದಿದ್ದರು, ಇದಕ್ಕೆ ಸುದೀಪ್ ಉತ್ತರ ಕೇಳಿದ್ದಕ್ಕೆ , ನಂದು ಅನುಷಾ ಅವರದ್ದು 4-5 ವರ್ಷಗಳ ಗೆಳೆತನ, ಮೂರು ಸಿನೆಮಾ ಜೊತೆಗೆ ಮಾಡಿದ್ದೇವೆ. ಅವರು ನರಕದಲ್ಲಿದ್ದದರಿಂದ ಮಾತಾಡೋಕೆ ಆಗುತ್ತಿರಲಿಲ್ಲ. ಅದು ಬಿಟ್ರೆ ಬೇರೆ ಏನೂ ಇಲ್ಲ. ಐಶ್ವರ್ಯಾ ಕೂಡ ನನಗೆ ಗುಡ್‌ ಫ್ರೆಂಡ್‌ ಬಿಟ್ರೆ ಏನೂ ಇಲ್ಲ. ಅವರು ಆ ತರ ಮುಖ ಮಾಡೋದು ಕೂಡ ನನಗೆ ಅನ್ನಿಸೇ ಇಲ್ಲ ಎಂದರು.

ಸ್ಟೇಜ್ ಮೇಲೆ ಎಲ್ಲರೆದುರು ಸಲ್ಮಾನ್‌ ಖಾನ್ ಮುದ್ದಾಡಿದ ಮಲ್ಲಿಕಾ ಶೆರಾವತ್!

ಅನುಷಾ ಎಸ್‌ ಅಂತ ಬೋರ್ಡ್ ಹಿಡಿದಿದ್ದರು. ನಾನು ವಾಶ್ ರೂಂ ವಿಷ್ಯದಲ್ಲಿ ಅದನ್ನು ಗಮನಿಸಿದೆ. ನನಗೆ ಯಮುನಾ ಮೇಡಂ ಹೇಳಿದ್ರು. ಐಶ್ವರ್ಯಾಗೆ ನಿನ್ನನ್ನು ಕರೆದುಕೊಂಡು ಹೋಗೋದು ಇಷ್ಟ ಆಗ್ತಿರ್ಲಿಲ್ಲ ಅಂತ. ಅಲ್ಲಿಂದ ನಾನು ಗಮನಿಸಲು ಆರಂಭಿಸಿದೆ ಎಂದರು

ಐಶ್ವರ್ಯಾ ನೋ ಯಾಕೆ ಎಂದು ಕಿಚ್ಚ ಕೇಳಿದಾಗ, ವೀಕೆಂಡ್ ಎಪಿಸೋಡ್‌ ನಲ್ಲೂ ಹೇಳಿದ್ದೆ, ಅನುಷಾ ಅವರನ್ನು ವಾಶ್ ರೂಂ ಕರೆದುಕೊಂಡು ಹೋಗಿದ್ದು ನೋಡಿದಾಗ ಅವರನ್ನು ಮಾತ್ರ ಕರೆದುಕೊಂಡು ಹೋಗುತ್ತಿಯಾ? ಬಾ ನನ್ನನ್ನು ಒಂದು ರೌಂಡ್ ಕರೆದುಕೊಂಡು ಹೋಗುಎಂದು   ಜಸ್ಟ್ ಜೋಕಿಗಾಗಿ ಹೇಳಿದ್ದು, ಅಷ್ಟು ಬಿಟ್ರೆ ಏನೂ ಇಲ್ಲ. ನಾನು ಅನುಷಾ ಅವರನ್ನು ಗಮನಿಸುತ್ತೇನೆ ಹೊರತು ಧರ್ಮ ಅವರನ್ನಲ್ಲ. ಅನುಷಾ ಅವರಿಗೆ ಬೇಜಾರು ಆಗಬಹುದೇನೋ ನನಗಲ್ಲ. ಅವರ ಮುಖ ಚಿಕ್ಕದಾಗಬಹುದೇನೋ ನನಗಲ್ಲ ಎಂದು ಹೇಳಿದ್ದಾರೆ.

ಇದಾದ ಮೇಲೆ ಬ್ರೇಕ್ ಮಧ್ಯದಲ್ಲಿ, ಐಶು ಮತ್ತು ಅನುಷಾ ಹಗ್‌ ಮಾಡಿ, ವೈಯಕ್ತಿಕ ಏನೂ ಇಲ್ಲ. ನೀವು ಕೊಡೆ ಹಿಡಿದುಕೊಂಡು ಹೋದಾಗ ಹೇಗಾದ್ರೂ ಹಾಳಾಗಿ ಹೋಗ್ಲಿ ಅಂತ ಒಳಗಡೆ ಹೋದೆ ಅಂತ ಹೇಳಿದ್ದು ನನಗೆ ಬೇಜಾರು ಆಯ್ತು ಅಂತ ಅನುಷಾಗೆ ಐಶ್ವರ್ಯಾ ಹೇಳಿದರು. ಅದಕ್ಕೆ ಅನುಷಾ ನನಗೆ ಧರ್ಮ ಮೇಲೆ ಯಾವುದೇ ಫೀಲಿಂಗ್ ಇಲ್ಲ ಎಂದರು. 

ಇದಾದ ನಂತರ ಗೋಲ್ಡ್‌ ಸುರೇಶ್ ಬಳಿ ಬಂದ ಅನುಷಾ ನೀವ್ಯಾಕೆ ಹಾಗೇ ಹೇಳಿದ್ರಿ. ನಾವು ಮಾತಾಡಿರೋದು ಟೆಲಿಕಾಸ್ಟ್ ಆಗದಿರೋ ಏರಿಯಾ. ಅದು ಟ್ರೂಥ್ ಆರ್ ಗೇಮ್ ಆಟ, ಆವಾಗ ನೀವಿದ್ರಾ? ನಿಮಗೊತ್ತಾ ಇದರ ಬಗ್ಗೆ? ಅದು ಕಾಮ್‌ ಸೆನ್ಸ್, ನಿನ್ನ ಪರ್ಸನಲ್ ಲೈಫ್ ತೆಗೆದುಕೊಂಡು ಹೋಗಿ ಹಾಗೇ ಬೀದಿಗಿಡುತ್ತೇನೆ ಬಾ...

ಇದಕ್ಕೆ ಸುರೇಶ್ ನಿನ್ನ ಹಣೆಬರಹ ನಾನೇನು ಮಾಡ್ಲಿ. ಹಾಗೆಲ್ಲ ನನ್ನ ಪರ್ಸನಲ್ ಹೇಳಬೇಡ ಎಂದರು. ಒಂದಂತೂ ಸತ್ಯ ತ್ರಿಕೋನ ಪ್ರೇಮಕಥೆಯ ಧರ್ಮ ಸಂಕಟದಲ್ಲಿ ಸಿಲುಕಿರುವುದು ಧರ್ಮ. ಮನೆಯವರೆಲ್ಲರ ಕಣ್ಣು ಈ ಮೂವರ ಮೇಲೆ ಕೂಡ ಇರುವುದಂತೂ ನಿಜ. ಮುಂದೆ ಎಲ್ಲಿಗೆ ಮುಟ್ಟುತ್ತೋ ಕಾದು ನೊಡಬೇಕು.

ಸುದೀಪ್ ಪಂಚಾಯಿತಿಗೂ ಮುನ್ನ ಮನೆಯಲ್ಲಿ ಇವತ್ತು ನಿಮ್ಮ ದಿನ ಅಂತ ಆಡಿ, ಬದಲಾಗಿ ಎಂದು ಧರ್ಮಗೆ ಐಶ್ವರ್ಯಾ ಸಲಹೆ ನೀಡಿದರು. ಇಲ್ಲಿ ಇರೋದ್ರಲ್ಲಿ ಇಷ್ಟವಾಗಿರುವ ವ್ಯಕ್ತಿ ನೀವು. ಇಲ್ಲಿ ಸಂದರ್ಭಕ್ಕೆ ತಕ್ಕಂತೆ ಒಬ್ಬೊಬ್ಬರು ಒಂದೊಂದು ರೀತಿ ವರ್ತಿಸುತ್ತಾರೆ. ಆದರೆ ನೀವು ಹಾಗಲ್ಲ. ಎಲ್ಲಾ ಸಮಯದಲ್ಲೂ ನೀವು ನೀವಾಗಿರುತ್ತೀರಿ. ನಿಮ್ಮ ಒಪಿನಿಯನ್ ಬಂದಾಗ ನೀವು ಹೇಳಿ ಎಂದು ಗೈಡ್‌ ಮಾಡಿದ್ದನ್ನು ಧರ್ಮ ತೆಗೆದುಕೊಂಡರು. 

click me!