ಬಿಗ್‌ಬಾಸ್‌ ಮನೆಯಲ್ಲಿ ಅನುಷಾ & ಐಶ್ವರ್ಯಾ ನಡುವೆ ಭರ್ಜರಿ ಜಗಳಕ್ಕೆ ಕಾರಣವಾದ ಶಿಶಿರ್!

By Gowthami K  |  First Published Oct 15, 2024, 1:17 AM IST

ಬಿಗ್‌ಬಾಸ್‌ ಕನ್ನಡ 11 ರಲ್ಲಿ ಶಿಶರ್‌ ನೇರ ನಾಮಿನೇಷನ್‌ ಪ್ರಕ್ರಿಯೆ ಭರ್ಜರಿ ಜಗಳಕ್ಕೆ ಕಾರಣವಾಯಿತು. ಅನುಷಾ & ಐಶ್ವರ್ಯಾ ನಡುವೆ ಮಾತಿನ ಚಕಮಕಿ ನಡೆದು, ಮನೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಮಂಜು ಇಬ್ಬರ ನಡುವಿನ ಜಗಳಕ್ಕೆ ಕಾರಣರಾದ ಐಶ್ವರ್ಯಾ ವಿರುದ್ಧ ಮಾತನಾಡಿದರು.


ಬಿಗ್‌ಬಾಸ್‌ ಕನ್ನಡ 11 ರಲ್ಲಿ ಕೆಲ ದಿನ ಜಗಳಕ್ಕೆ ಬ್ರೇಕ್ ಬಿದ್ದಿದ್ದು ಆದರೆ ಮೂರನೇ ವಾರದ ಮೊದಲ ಎಪಿಸೋಡ್‌ ನಲ್ಲಿ ಮನೆಯಲ್ಲಿ ಭರ್ಜರಿ ಗಲಾಟೆ ನಡೆದಿದೆ. ಮನೆಯ ಕ್ಯಾಪ್ಟನ್‌ ಆದ ಶಿಶರ್‌ ಗೆ ಬಿಗ್‌ಬಾಸ್‌ ಕರೆ ಮಾಡಿ ನೇರವಾಗಿ ನಾಮಿನೇಟ್ ಮಾಡಲು ಮನೆಯಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ಹೇಳಿದರು. ಶಿಶರ್ ಆ ಪ್ರಕಾರ ಅನುಷಾ ಅವರನ್ನು ನೇರ ನಾಮಿನೇಟ್‌ ಮಾಡಿದ್ದು, ಅವರು ಹಾಗಕಾಯಿ ಜ್ಯೂಸ್‌ ಕುಡಿಯಬೇಕಿತ್ತು. ನೇರವಾಗಿ ನಾಮಿನೇಟ್‌ ಮಾಡಲು ಶಿಶಿರ್ , ಹೊರಗೆ ಹೋಗಬಾರದಂತ ವಿಷ್ಯಗಳು ಒಳಗೆ ಉಳಿದುಕೊಳ್ಳಬೇಕಾದಂತಹ ವಿಷ್ಯಗಳು, ಈ ವಿಚಾರದಲ್ಲಿ ಗೊಂದಲವಿತ್ತು. ಆ ಗೊಂದಲವನ್ನು ವ್ಯಕ್ತಪಡಿಸುವ ಭರದಲ್ಲಿ ಮನೆಯಲ್ಲಿ ತುಂಬಾ ಕನ್‌ಫ್ಯೂಷನ್ ಕ್ರಿಯೇಟ್ ಆಯ್ತು.  ಆ ಕನ್‌ಫ್ಯೂಷನ್ ಅವರ ಆಟದ ದಿಕ್ಕನ್ನು ಬದಲಾಯಿಸ್ತಿಲ್ಲ. ಅಥವಾ ಅವರೇ ಆಟದ ದಿಕ್ಕನ್ನು ಬದಲಾಯಿಸಿಕೊಳ್ಳುತ್ತಿದ್ದಾರಾ ಎಂಬ ಕನ್‌ಫ್ಯೂಷನ್ ಇತ್ತು ಎಂದು ಕಾರಣ ನೀಡಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅನುಷಾ ನಾನ್ಯಾವಾಗ ಕನ್‌ಫ್ಯೂಷನ್  ಸ್ಟೇಟಸ್‌ ನಲ್ಲಿ ಇದ್ದೀನಿ. ನಿಮ್ಮ ಕಾರಣ ಹಿಡಿಸಿಲ್ಲ ಎಂದರು. ಇದಾದ 2 ನಿಮಿಷ ಬಳಿಕ ಅದು ಅವನ ಪರ್ಸನಲ್ ಒಪಿನಿಯನ್. ನಮಗೆ ಬಕೆಟ್‌ ಹಿಡಿಯಲು ಬರಲ್ಲ ಗುರು ನಾವು ಇರೋದೆ ಹೀಗೆ. ಅವರಿಗೆ ಬಕೆಟ್‌ ಹಿಡಿದುಕೊಂಡು ಚೆನ್ನಾಗಿ ಮಾತನಾಡಬೇಕು. ನನ್ನಿಂದ   ಹಿಂದೊಂದು ಮುಂದೊಂದು ಮಾಡೋಕೆ ಬರಲ್ಲ. ಕೆಲವೊಬ್ಬ ಜನಗಳು ಈ ರೀತಿ  ಇದ್ದಾರೆ. ನಾನು ಇದ್ದದ್ದನ್ನು ಇದ್ದಾಗೆ ಹೇಳ್ತೀನಿ.  ಹೇಗಾದ್ರೂ ಸತ್ತುಕೊಂಡು ಹಾಳಾಗಿ ಹೋಗ್ಲಿ ಎಂದು ಅನುಷಾ ಹೇಳಿದರು.

Tap to resize

Latest Videos

undefined

ಸದ್ದಿಲ್ಲದೆ ಕದ್ದು ಮುಚ್ಚಿ ಪ್ರೀತಿಯಲ್ಲಿದ್ದಾರಾ ಭವ್ಯಾ-ತ್ರಿವಿಕ್ರಮ್ , ಬಿಗ್‌ಬಾಸ್‌ ಮನೆಯಲ್ಲಿ ಮೂಡಿದೆ ಅನುಮಾನ!

ಇದಕ್ಕೆ ತುಕಾಲಿ ಮಾನಸ ಮಧ್ಯೆ ಬಂದಾಗ ಅನುಷಾ ಅವರ ಕೋಪ ಜಾಸ್ತಿಯಾಗಿ ಬಾಯಿಮುಚ್ಚು ಎಂದರು. ಇದು ಮಾನಸಾಳನ್ನು ಕೆರಳಿಸಿತು ನೀನ್ಯಾರು ನನ್ನನ್ನು ಹೇಳೋಕೆ ಎಂದು ಇಬ್ಬರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಅನುಷಾ ನೀವು ಕೊಟ್ಟಿರೋ ಅಡ್ವೈಸ್‌ ನಿಂದಾನೇ (ತುಕಾಲಿ ಜೊತೆಗೆ ಫೋನ್‌ ಸಂಭಾಷಣೆ) ಇಷ್ಟೆಲ್ಲ ಸಮಸ್ಯೆ ಆಗಿರುವುದು ಎಂದು ಮಾನಸಾಗೆ ಹೇಳೀದರು. ಇದು ಮಾನಸಾರನ್ನು ಕೆರಳಿಸಿತು. ನಾನು ನಿನಗೆ ಅಡ್ವೈಸ್‌ ಕೊಟ್ಟಿಲ್ಲ. ಯಾರಿಗೆ ಕೊಡಬೇಕು ಅಂದಿದ್ದರೋ ಅವರಿಗೆ ಕೊಟ್ಟಿದ್ದೇನೆ.

ಇದನ್ನು ಶಿಶಿರ್ ಬಳಿ ಹೋಗಿ ಐಶ್ವರ್ಯಾ ವರದಿ ಒಪ್ಪಿಸಿದರು. ಹೋಗಿ ಸಾಯ್ಲಿ ಎಲ್ಲಿ ಬೇಕಾದ್ರೂ, ಬಕೆಟ್‌ ಹಿಡಿದುಕೊಂಡು ಓಡಾಡುತ್ತಿದ್ದರೇನೆ ಇಷ್ಟ ಆಗುತ್ತೆ ಎಂಧುಅನುಷಾ ಹೇಳಿದರು ಎಂದಾಗ ಅದು ಶಿಶರ್ ಗೂ ಕೋಪ ತರಿಸಿತು. ಮಾನಸಾ ಶಿಶರ್ ಬಳಿ ಬಂದು ನಾನು ನಿನಗೆ ಅಡ್ವೈಸ್ ಕೊಟ್ನಾ? ಎಂದು ಕೇಳಿ,   ಅನುಷಾ ಬಳಿ ಬಂದು  ಇಬ್ಬರೂ ಜಗಳ  ಮಾಡಿದಾಗ, ನಾನು ನಿಮ್ಮೆ ಯಾರ ಹೆಸರನ್ನು ತೆಗೆದುಕೊಂಡಿಲ್ಲ ಎಂದರು ಅನುಷಾ.

ಇದಾದ ಬಳಿಕ ಅನುಷಾ ಅವರು ತನ್ನ ಬೇಸರವನ್ನು ಧರ್ಮಕೀರ್ತಿ ರಾಜ್ ಬಳಿ ಚರ್ಚೆ ನಡೆಸಿದರು. ಹಂಸಾ ಮತ್ತು ನನ್ನನ್ನು ಎಲ್ಲರೂ ಟಾರ್ಗೆಟ್‌ ಮಾಡ್ತಿದ್ದಾರೆ. ನಂಗೆ ನಾಮಿನೇಷನ್ ಆಗಿದ್ದಕ್ಕೆ ಬೇಜಾರಿಲ್ಲ. ರೀಸನ್‌ ಕೊಟ್ಟಿದ್ದು ಬೇಜಾರಾಯ್ತು ಎಂದು ಅತ್ತಾಗ ಧರ್ಮ ಅವರು ಪೂರ್ತಿ ಸಮಾಧಾನ ಮಾಡಿದರು.

ಬಿಗ್‌ಬಾಸ್‌ ಮಿಡ್‌ ವೀಕ್ ಎಲಿಮಿನೇಶನ್ ಸೂಚನೆ ಕೊಟ್ರಾ ಕಿಚ್ಚ ಸುದೀಪ್‌!?

ಇದಾದ ಬಳಿಕ ಉಗ್ರಂ ಮಂಜು ಅವರು ತುಕಾಲಿ ಮಾನಸ ಬಳಿ, ಅನುಷಾ ಬಕೆಟ್‌ ವಿಷ್ಯ ಮಾತನಾಡಿರುವುದನ್ನು ಐಶು ಬಂದು ಶಿಶಿರ್ ಗೆ ಹಾಕಿ ಕೊಟ್ಟಿರುವುದು. ಅದಾದ ಮೇಲೆ ಜಗಳ ಆಗಿರುವುದು. ಅದಕ್ಕೆ ಅನುಷಾ ಅತ್ತಿದ್ದು. ಅವಳೆಂತ ಕಿಲಾಡಿ ಗೊತ್ತಾ? ನಾವು ಅಪ್ಪ ಅಮ್ಮ ಇಲ್ಲ ಅಂತ ಆ ಸೆಂಟಿಮೆಂಟ್ ಗೆ ಒಳಗಾದ್ವಿ ಎಂದರು ಮಂಜು. 

ಇದಾದ ಬಳಿಕ ಧರ್ಮ, ಭವ್ಯ, ಮಾನಸ, ವಿಕ್ರಂ, ರಂಜಿತ್ ,ಹಂಸ ಕುಳಿತಿದ್ದಲ್ಲಿಗೆ ಬಂದ ಮಂಜು, ಬೇಡದಿರುವ ವಿಚಾರಕ್ಕೆ ಐಶ್ವರ್ಯ  ತಲೆ ತೂರಿಸಿದರು. ಮಧ್ಯದಲ್ಲಿ ಕೇಳಿಸಿಕೊಳ್ಳುವುದು ಮಾತ್ರ ಅವರ ವಿಚಾರವಾಗಬೇಕಿತ್ತು ಎಂದು ಚರ್ಚೆ ನಡೆಸಿ, ಬಳಿಕ  ಐಶ್ವರ್ಯಾ, ಅನುಷಾ, ಗೌತಮಿ , ಮೋಕ್ಷಿತಾ ಕುಳಿತಿದ್ದಲ್ಲಿಗೆ ಬಂದ ಮಂಜು. ಬೇರೆಯವರ ವಿಷ್ಯಗೆ ತಲೆ ತೂರಿಸಬಾರದು. ಚಿಕ್ಕ ವಿಷ್ಯ ದೊಡ್ಡದು ಮಡಬಾರದು. ಆದ್ರೆ ಇಲ್ಲಿ ನಿಂದು ಪ್ರೂವ್ ಆಯ್ತು. ಶಿಶಿರ್‌ ಮತ್ತು ಅನುಷಾ ಮಧ್ಯೆ ಜಗಳಕ್ಕೆ ನೀವು ಕಾರಣರಾದ್ರಿ ಎಂದು ಐಶ್ವರ್ಯಾ ಅವರನ್ನು ಆರೋಪಿಸಿದರು.

ಇದಕ್ಕೆ ಕ್ಲಾರಿಟಿ ಕೊಟ್ಟ ಐಶ್ವರ್ಯಾ, ಅನುಷಾ ಅವರು ಬಕೆಟ್‌ ಹಿಡಿಯೋ  ಅಂದ್ರೆ ಅವನಿಗಿಷ್ಟ ಎಂದರು. ಇದಕ್ಕೆ ಅನುಷಾ ನಾನು ಹೇಳೇ ಇಲ್ಲ ಎಂದು ವಾದಿಸಿದರು. ಮಂಜು ಮಧ್ಯದಲ್ಲಿ ಮಾತನಾಡಿ ಇದನ್ನೆಲ್ಲ ಶಿಶಿರ್‌ ಗೆ ಹೋಗಿ ಹೇಳಿದ್ದು ಐಶ್ವರ್ಯಾ, ಬೇರೆಯವರ ವಿಷ್ಯಕ್ಕೆ ಮೂಗು ತೋರಿಸಬಾರದು. ಚಿಕ್ಕ ವಿಷ್ಯ ದೊಡ್ಡದು ಮಾಡೋದು ಇಲ್ಲೇ ಗೊತ್ತಾಯ್ತಲ್ಲ ಎಂದು ಮಂಜು ಹೇಳಿದರು.  ಇದಾದ ಬಳಿಕ ಅನುಷಾ ಮತ್ತು ಯಶ್ವರ್ಯಾ ನಡುವೆ ದೊಡ್ಡ ಗಲಾಟೆ ನಡೆಯಿತು. ಐಶ್ವರ್ಯಾ ಕ್ಲಾರಿಟಿ ತಕೋ ಎಂದರೆ ಅನುಷಾ ಬೇಕಾಗಿಲ್ಲ. ಅಲ್ಲಿ ಎಲ್ಲಾದ್ರೂ ಹೋಗಿ ಬಾಯಿ ಬಡ್ಕೋ. ಮಗುನು ಚಿವುಟು ತೊಟ್ಟಿಲೂ ತೂಗು ಎಂಬ ಕೆಲಸ ಇಲ್ಲಿ  ಮಾಡ್ತಿದ್ದಾರೆ ಎಂದರು. 

ಕೊನೆಗೆ ಗಲಾಟೆ ಅತಿರೇಕಕ್ಕೆ ಹೋಗಿ ಐಶ್ವರ್ಯಾ ಅಲ್ಲಿಂದ ಎದ್ದು ಹೋದರು. ಆಗ ಮಂಜು ಸತ್ಯವೇ ನಮ್ಮ ತಾಯಿ ತಂದೆ ನಮ್ಮ ಪಾಲಿಗೆ ಎಂದು  ಜೋರಾಗಿ ಹೇಳಿದರು. ಅಷ್ಟೇ ಜೀವನದಲ್ಲಿ ಜೋರಾಗಿ ಮಾತನಾಡೋದು. ಏನಾದ್ರೂ ಅವರ ತಪ್ಪು ಕಂಡು ಹಿಡಿದು ಬಿಟ್ರೆ ಜೋರಾಗಿ ಮಾತನಾಡೋದು, ಸಿಕ್ತಲ್ಲ 2 ಪಾಯಿಂಟ್ ಈಗ, ಬೇರೆಯವರ ವಿಚಾರಕ್ಕೆ ಮೂಗು ತೂರಿಸೋದು. ಚಿಕ್ಕ ವಿಚಾರ ದೊಡ್ಡದು ಮಾಡೋದು. ಇದೇ ತಾನೇ ಈವಾಗ ಆಗಿದ್ದು ಎಂದು ಮಂಜು ಹೇಳಿದರು. 

ಕೊನೆಗೆ ಬೆಡ್‌ ರೂಂ ಗೆ ಅನುಷಾ ಬಂದಾಗ ಅಲ್ಲೂ ವಾಗ್ವಾದ ನಡೆಯಿತು. ಏನ್ ಗೊತ್ತಾ ಮಂಜಣ್ಣಗೆ ಅವರ ಪಾಯಿಂಟ್ ಪ್ರೂವ್ ಮಾಡಬೇಕಿತ್ತು, ನೀನು ಇಲ್ಲಿ ಬಕ್ರಾ ಆಗಿದ್ಯಾ ಅಷ್ಟೇ ಎಂದ ಐಶ್ವರ್ಯಾ ಅಲ್ಲಿಂದ ತೆರಳಿದರು.

click me!