ಸದ್ದಿಲ್ಲದೆ ಕದ್ದು ಮುಚ್ಚಿ ಪ್ರೀತಿಯಲ್ಲಿದ್ದಾರಾ ಭವ್ಯಾ-ತ್ರಿವಿಕ್ರಮ್ , ಬಿಗ್‌ಬಾಸ್‌ ಮನೆಯಲ್ಲಿ ಮೂಡಿದೆ ಅನುಮಾನ!

By Gowthami K  |  First Published Oct 14, 2024, 11:49 PM IST

ಬಿಗ್‌ಬಾಸ್‌ ಮನೆಯಲ್ಲಿ ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ನಡುವೆ ಪ್ರೀತಿ ಚಿಗುರುತ್ತಿದೆ ಎಂಬ ಅನುಮಾನ ಮನೆಮಂದಿಗೆ ಶುರುವಾಗಿದೆ. ರಂಜಿತ್‌ಗೆ ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂಬ ಅನುಮಾನ ಮೂಡಿದ್ದು, ತುಕಾಲಿ ಮಾನಸ ಜೊತೆ ಹಂಚಿಕೊಂಡಿದ್ದಾರೆ.  


ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಅವರು ಲವ್‌ ನಲ್ಲಿದ್ದಾರೆ ಎಂದು ಕುಚಿಕು ಗೆಳೆಯ ರಂಜಿತ್ ಅವರು ಅನುಮಾನ ವ್ಯಕ್ತಪಡಿಸಿ ತುಕಾಲಿ ಮಾನಸ ಅವರ ಜೊತೆಗೆ ಹೇಳಿಕೊಂಡಿದ್ದರು.  ಭವ್ಯಾ ಅವರನ್ನು ಲವ್ ಮಾಡ್ತಿದ್ದಾರೆ ಅನ್ನುವ ಬಗ್ಗೆ ತ್ರಿವಿಕ್ರಮ್  ನನ್ನ ಬಳಿ ಇನ್ನೂ ಏನನ್ನೂ ಹೇಳಿಲ್ಲ ಎಂದು ಕೂಡ ಇದೇ ವೇಳೆ  ಹಳೆಯ ಎಪಿಸೋಡ್‌ ನಲ್ಲಿ ರಂಜಿತ್ ಹೇಳಿದ್ದರು.

ಇದಕ್ಕೆ ಪುಷ್ಟಿ ನೀಡುವಂತೆ ಅಕ್ಟೋಬರ್ 14 ರ ಎಪಿಸೋಡ್‌ ನಲ್ಲಿ ತುಕಾಲಿ ಮಾನಸಾಗೆ ಪತಿ ತುಕಾಲಿ ಸಂತು ಕರೆ ಮಾಡಿದ್ದು, ಒಬ್ಬೊಬ್ಬ ಸದಸ್ಯದರಿಗೆ ಆಡಲು ಮಾನಸ ಮೂಲಕ ಟಿಪ್ಸ್ ಕೊಡು ಈ ವೇಳೆ ತ್ರಿವಿಕ್ರಮ್‌ ಕೂಡ ಟಿಪ್ಸ್ ಕೊಟ್ಟಿರುವ ಸಂದೇಶ ತಲುಪಿಸು ಎಂದು ಹೇಳಿದ್ರು.

Tap to resize

Latest Videos

undefined

ಬಿಗ್‌ಬಾಸ್‌ ಮಿಡ್‌ ವೀಕ್ ಎಲಿಮಿನೇಶನ್ ಸೂಚನೆ ಕೊಟ್ರಾ ಕಿಚ್ಚ ಸುದೀಪ್‌!?

ಮಾನಸ: ಭವ್ಯಾ ಮತ್ತು ತ್ರಿವಿಕ್ರಮ್ ಲವ್‌ ಮಾಡ್ತಿದ್ದಾರೆ ಎಂದು ಕೇಳ್ಪಟ್ಟೆ, ಹಂಗೆ ಇರಬೇಕು ಅಂತ ಮಾತನಾಡುತ್ತಿದ್ದರು .
ತುಕಾಲಿ ಸಂತು: ಮತ್ತೆ ಈ ಬಗ್ಗೆ ಏನೂ ತೋರಿಸ್ತಾ ಇಲ್ಲ. ಅವನೆಲ್ಲಿ ಲವ್‌ ಮಾಡ್ತಿದ್ದಾನೆ ಕಣ್ಣೊಳಗೆ ಲವ್‌ ಮಾಡ್ತವ್ನ, ಮನಸೊಳಗೆ ಲವ್ ಮಾಡ್ತವ್ನ. ಲವ್‌ ಮಾಡಿ ಅದನಾದ್ರೂ ಪರದೆ ಮೇಲೆ ತೋರಿಸೋಕೆ ಹೇಳು .
ಮಾನಸ: ಏನು ಗೊತ್ತಿಲ್ಲಪ್ಪ ಸೀಕ್ರೆಟ್‌ ಆಗಿ ಅವರಿಬ್ಬರ ಮಧ್ಯೆ ಏನೋ ನಡಿತಿದೆ. ಗುಸು ಗುಸು ಪಿಸ ಪಿಸ ಅಂತಾರೆ
ತುಕಾಲಿ ಸಂತು: ಅವರಿಬ್ಬರ ಲವ್ ಸಕ್ಸಸ್ ಆಗ್ಲಿ. ಹೋಗಿ ತ್ರಿವಿಕ್ರಮ್‌ ಹೇಳು. ಅರ್ಥ ಆಯ್ತಾ. 

ಈಗ ವಿಷ್ಯ ಅದಲ್ಲ ನಟ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಅವರು ಈ ಹಿಂದೆಯೇ ಬಿಗ್‌ಬಾಸ್‌ ಮಿನಿ ಸೀಸನ್‌ ಶೋ ನಲ್ಲಿ ಭಾಗವಹಿಸಿದ್ದರು. ಆವಾಗಿಂದಲೇ ಅವರಿಬ್ಬರೂ ಪರಿಚಯ. ಆದರೆ ಶೋ ಗ್ರಾಂಡ್ ಓಪನಿಂಗ್ ದಿನ ತ್ರಿವಿಕ್ರಮ್ ಮೊದಲೇ ಪರಿಚಯ ಒಂದೆರಡು ಬಾರಿ ಸಿಕ್ಕಿದಾಗ ಹಾಯ್ ಎಂದು ಹೇಳಿದ್ದಷ್ಟೇ ಎಂದು ಹೇಳಿದ್ದರು. ಆದರೆ ಸ್ಟೇಜ್ ಮೇಲಿದ್ದ ಸುದೀಪ್ ಮತ್ತು ಶಿಶಿರ್ ಅವರು , ಭವ್ಯಾ ಮತ್ತು ತ್ರಿವಿಕ್ರಮ್ ಅವರ ಕಾಲೆಳೆದಿದ್ದರು.

ಧರ್ಮ ಸಂಕಟದಲ್ಲಿ ತ್ರಿಕೋನ ಪ್ರೇಮಕಥೆ: ಸುರೇಶ್ ಹಿಂದಿನ ಲವ್‌ಸ್ಟೋರಿ ತೆಗೆದಿದ್ದಕ್ಕೆ ಅನುಷಾ ಕೆಂಡಾಮಂಡಲ!

ಬಿಗ್‌ಬಾಸ್‌ ಮನೆಯಲ್ಲಿ ಕೂಡ ತ್ರಿವಿಕ್ರಮ್ ಮತ್ತು ಭವ್ಯ ಗೌಡ ಉತ್ತಮ ಬಾಂಧವ್ಯ ಹೊಂದಿದ್ದು, ಉತ್ತಮ ಗೆಳೆತನ ಹೊಂದಿದ್ದಾರೆ. ಕ್ಲೋಸ್‌ ಆಗಿ ಮಾತನಾಡುತ್ತಾರೆ. ತ್ರಿವಿಕ್ರಮ್‌ ಗೆ ಕುಚಿಕು ಗೆಳೆಯ ಅಂದರೆ ಅದು ರಂಜಿತ್, 10 ವರ್ಷಗಳಿಂದ ಹೆಚ್ಚು ಗೆಳೆತನ ಇವರ ಮಧ್ಯೆ ಇದೆ. ಬಿಗ್‌ಬಾಸ್‌ ಮನೆಯಲ್ಲಿ ಮಾತ್ರವ ರಂಜಿತ್‌ ಗೆ ಭವ್ಯಾ-ತ್ರಿವಿಕ್ರಮ್ ಲವ್ ನಲ್ಲಿದ್ದಾರೆ ಎಂದು ಅನುಮಾನ ಮೂಡಿದೆ. ಇದನ್ನು ತುಕಾಲಿ ಮಾನಸ ಜೊತೆಗೆ ರಂಜಿತ್ ಹಂಚಿಕೊಂಡಿದ್ದು, ಬಿಬಿಕೆಯಿಂದ ಹೊರಗಡೆ ಹೋದ ಮೇಲೆ ತ್ರಿವಿಕ್ರಮ್ ಮಾತಾಡ್ತಾನೆ ಎಂದು ಹಳೆಯ ಎಪಿಸೋಡ್‌ ನಲ್ಲಿ ಹೇಳಿದ್ದರು.

ಈಗಾಗಲೇ ಮನೆಯಲ್ಲಿ ಧರ್ಮ ಕೀರ್ತಿರಾಜ್ ಮತ್ತು ಅನುಷಾ ರೈ ಮತ್ತು ಐಶ್ವರ್ಯಾ ಸಿಂಧೋಗಿ ಮಧ್ಯೆ ಟ್ರಯಾಂಗಲ್ ಲವ್ ಸ್ಟೋರಿ ನಡೆಯುತ್ತಿದೆ. ಇದೆಲ್ಲದರ ನಡುವೆ ಜಗದೀಶ್ ಅವರು ಹಂಸಾ ಜೊತೆಗೆ ಫ್ಲರ್ಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಈಗ ನಿಧಾನವಾಗಿ ಭವ್ಯಾ-ತ್ರಿವಿಕ್ರಮ್ ಜೋಡಿ ಜಂಟಿಯಾಗಲು ಮುಂದಾಗಿದೆ ಅನ್ನುವ ಅನುಮಾನ ಮನೆಯವರಿಗೆ ಎದ್ದಿದೆ. ಇದು ಮನೆಯ ಹೊರಗೆ ಇತ್ತಾ ಅಥವಾ ಬಿಗ್‌ಬಾಸ್‌ ನಲ್ಲಿ ಆರಂಭವಾಗಿದ್ದಾ ಎಂಬುದನ್ನು ಕಾದು ನೋಡಬೇಕಿದೆ.

click me!