ಬಿಗ್‌ಬಾಸ್‌ ನಲ್ಲಿ ಕನ್ನಡಿಗ ನಿಖಿಲ್‌ ಬ್ರೇಕಪ್‌ ಸ್ಟೋರಿ, ನಟಿ ಕಾವ್ಯಶ್ರೀ ಸ್ಟೇಟಸ್ ಹಾಕಿದ್ದು ಯಾರಿಗೆ?

By Gowthami K  |  First Published Nov 18, 2024, 9:02 PM IST

ಬಿಗ್‌ಬಾಸ್‌ನಲ್ಲಿ ನಿಖಿಲ್ ತಮ್ಮ ಲವ್ ಸ್ಟೋರಿ ಹಂಚಿಕೊಂಡಿದ್ದು, ಕಾವ್ಯಾಶ್ರೀ ಟಾಂಗ್ ಕೊಟ್ಟಿದ್ದಾರೆ. ನಿಖಿಲ್ ಕಾರ್ಯಕ್ರಮದಲ್ಲಿ ಭಾವುಕರಾಗಿದ್ದು, ಕಾವ್ಯಾಶ್ರೀ ಇನ್ಸ್ಟಾಗ್ರಾಮ್‌ನಲ್ಲಿ ಪರೋಕ್ಷವಾಗಿ ಟೀಕಿಸಿದ್ದಾರೆ.


ತೆಲುಗು ಬಿಗ್‌ಬಾಸ್ ಸೀಸನ್ 8ರಲ್ಲಿ ಈ ಬಾರಿ ಕನ್ನಡಿಗರದ್ದೇ ಹವಾ. ಅದಕ್ಕಾಗಿ ಅಲ್ಲಿನ ಸ್ಪರ್ಧಿಗಳು ತಿರುಗಿ ಬಿದ್ದಿದ್ದೂ ಇದೆ.  ಒಟ್ಟು ನಾಲ್ವರು ಸ್ಪರ್ಧಿಗಳಾದ ನಿಖಿಲ್‌, ಪೃಥ್ವಿ ಶೆಟ್ಟಿ, ಯಶ್ಮಿ ಗೌಡ, ಪ್ರೇರಣಾ ಆಡುತ್ತಿದ್ದಾರೆ. ಕಳೆದ ಶನಿವಾರದ ಸಂಚಿಕೆಯಲ್ಲಿ ನಿಖಿಲ್ ಮಲಿಯಕ್ಕಳ್ ತಮ್ಮ ಲವ್ ಸ್ಟೋರಿ ಮತ್ತು ಬ್ರೇಕಪ್ ಬಗ್ಗೆ ಹಂಚಿಕೊಂಡಿದ್ದಾರೆ. ಈ ಮಾತುಗಳನ್ನು ಹೇಳುವಾಗ ನಿಖಿಲ್ ಕೂಡ ಕಣ್ಣೀರಿಟ್ಟರು. ಆದರೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಿಖಿಲ್ ಅಭಿಮಾನಿಗಳು ಎಲ್ಲವೂ ತಪ್ಪಾಗಿದೆ ಎಂದು ಕಿಡಿಕಾರಿದ್ದಾರೆ. ಇತ್ತೀಚೆಗೆ ತೆಲುಗು ಕಿರುತೆರೆ ನಟಿ ಕಾವ್ಯಾಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆದ ನಂತರ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಈ ಬಾರಿ ನಿಖಿಲ್ ಅದ್ಬುತ ನಟ ಅಂತ ಕೆಂಡಾಮಂಡಲವಾಗಿದ್ದಾರೆ.

ತೆಲುಗು ಕಿರುತೆರೆ ನಟಿ ಕಾವ್ಯಾಶ್ರೀ ಕೂಡ ಕನ್ನಡದವರೇ ಆಗಿದ್ದಾರೆ. ಗೋರಿಂಟಾಕು ಧಾರಾವಾಹಿಯ ಮೂಲಕ ನಿಖಿಲ್‌ ತೆಲುಗಿನಲ್ಲಿ ತುಂಬಾ ಫೇಮಸ್‌ ಆದರು. ಕಾವ್ಯಶ್ರೀ ಈ ಸೀರಿಯಲ್‌ ನಲ್ಲಿ ಅವರಿಗೆ ಜೋಡಿಯಾಗಿ ನಟಿಸಿದ್ದರು. ಅಲ್ಲಿಂದ ಅವರಿಬ್ಬರು ತುಂಬಾ ಹತ್ತಿರವಾಗಿದ್ದರು ಯಾವುದೇ ಶೋ, ಸಮಾರಂಭಗಳಲ್ಲಿ ಜೋಡಿಯಾಗಿಯೇ ಕಾಣಿಸಿಕೊಂಡಿದ್ದರು. ಮಾತ್ರವಲ್ಲ ಇಬ್ಬರೂ ಜೊತೆಯಾಗಿಯೇ ಯೂಟ್ಯೂಬ್ ಚಾನೆಲ್‌ ಕೂಡ ಆರಂಭಿಸಿದ್ದರು. ಅಲ್ಲಿಂದ ಅವರಿಬ್ಬರನ್ನು ನೋಡಿದ ಜನ ಇವರಿಬ್ಬರು ಪ್ರೀತಿಸುತ್ತಿದ್ದಾರೆಂದು ಭಾವಿಸಿದ್ದರು. ಅದಾದ ಬಳಿಕ ಇಬ್ಬರ ಮಧ್ಯೆ ಏನಾಯ್ತೋ ಗೊತ್ತಿಲ್ಲ. ಇಬ್ಬರ ನಡುವೆ ಅಂತರ ಬೆಳೆಯಿತು. ಯೂಟ್ಯೂಬ್‌ ವಿಡಿಯೋಗಳನ್ನು ಮಾಡುವುದು ಕೂಡ ನಿಲ್ಲಿಸಿದರು.

Tap to resize

Latest Videos

undefined

ಅಡುಗೆಮನೆ ಜಿಗುಟುತನ ಸ್ವಚ್ಛಗೊಳಿಸಿ ಪಳಪಳ ಹೊಳೆಯುವಂತೆ ಆಗಲು 10 ಸಿಂಪಲ್‌ ಟಿಪ್ಸ್!

ಕಳೆದ ಶನಿವಾರದ ಎಪಿಸೋಡ್‌ ನಲ್ಲಿ ಲವ್‌ ಸ್ಟೋರಿ ಬಗ್ಗೆ ಹೇಳಿಕೊಂಡು ಭಾವುಕರಾದರು. 6 ವರ್ಷಗಳ ಪ್ರೀತಿ ಮುರಿದುಕೊಂಡಿದ್ದೇವೆಂದು ನಾನು ಭಾವಿಸುವುದಿಲ್ಲ. ಬಿಗ್‌ಬಾಸ್‌  ಮುಗಿದ ಮೇಲೆ ನಿನ್ನ ಮುಂದೆ ಕಾಣಿಸಿಕೊಳ್ಳುತ್ತೇನೆ. ನೀನು ನನ್ನನ್ನು ಹೊಡೆದರೆ ಅಥವಾ ಶಪಿಸಿದರೆ  ನಾನು ಬೀಳುತ್ತೇನೆ. ನನ್ನನ್ನು ಕ್ಷಮಿಸು. ನೀನು ನನ್ನ ಹೆಂಡತಿ. ಹುಚ್ಚು ಹಿಡಿದರೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ'.

ಇದು ನಿಖಿಲ್‌ ಯಾವ ಪ್ರೀತಿ ಬಗ್ಗೆ ಹೇಳಿದ್ದೆಂಬುದು ಸ್ಪಷ್ಟವಿಲ್ಲ. ಆದ್ರೆ ಕಾವ್ಯಶ್ರೀ ಮಾತ್ರ ಇನ್ಸ್ಟಾ ಸ್ಟೋರಿಯಲ್ಲಿ ಇಂತಹ ವಿಷಯಗಳಿಗೆ ಮರುಳಾಗಬೇಡಿ ಎಂದು ಪೋಸ್ಟ್ ಹಾಕಿದ್ದಾರೆ. ಮಾತ್ರವಲ್ಲ ನಿಖಿಲ್ ಜೊತೆಗಿರುವ ಫೋಟೋಗಳನ್ನು ಕೂಡ ತೆಗೆದು ಹಾಕಿದ್ದು, ಅವರನ್ನು ಫಾಲೋ ಕೂಡ ಮಾಡುತ್ತಿಲ್ಲ. ಹೀಗಾಗಿ ಇಬ್ಬರ ನಡುವೆ ಬ್ರೇಕಪ್‌ ಆಗಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಮಾತ್ರವಲ್ಲ ನಿಖಿಲ್ ಅವರದ್ದೇ ತಪ್ಪು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

8 ಲಕ್ಷದಿಂದ 23 ಸಾವಿರ ಕೋಟಿಗೆ ಸಾಮ್ರಾಜ್ಯ ಬೆಳೆಸಿದ ಮೊಬಿಕ್ವಿಕ್ ಸ್ಥಾಪಕರ ಸಕ್ಸಸ್ ಸ್ಟೋರಿ!

ಎಲ್ಲಿ ಮತ್ತು ಹೇಗೆ ವರ್ತಿಸಬೇಕು ಎಂದು ತಿಳಿದಿದೆ:
“ಕೆಲವರು ಮಹಾನ್ ನಟರು.. ಯಾವಾಗ ಎಲ್ಲಿ ನಟಿಸಬೇಕು ಎಂಬುದು ಅವರಿಗೆ ಗೊತ್ತು. ಅದಕ್ಕಾಗಿಯೇ ಜನರು ತಮ್ಮ ಮುಗ್ಧತೆಯಿಂದ ಮೋಸ ಹೋಗುತ್ತಾರೆ.ಅವರ ನಟನೆಯಿಂದ ನಿಜವಾದ ಬಲಿಪಶುಗಳು ಸಮಾಜದ ಮುಂದೆ ತಪ್ಪಿತಸ್ಥರಾಗಿ ನಿಲ್ಲಬೇಕಾಗುತ್ತದೆ. ಆದರೆ ಅದನ್ನು ಬದಲಾಯಿಸುವುದು ತುಂಬಾ ಕಷ್ಟ. ಅಂತಹ ನಟರ ಬಗ್ಗೆ ಸಾರ್ವಜನಿಕರು ಕನಿಕರ ತೋರುತ್ತಾರೆಂಬ ಅಭಿಪ್ರಾಯ, ಏಕೆಂದರೆ ಅವರೇ ಬಲಿಪಶುಗಳಾಗಿದ್ದಾರೆ ಎಂದು ಕಾವ್ಯಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೊಟೇಶನ್ ಹಾಕಿದ್ದಾರೆ.

ಇದಕ್ಕೂ ಮುನ್ನ ಕಾವ್ಯ ಬೆಳಗ್ಗೆ ಪೋಸ್ಟ್ ಹಾಕಿ ಅವರ ಮುಖವಾಡಗಳಿಗೆ ಮರುಳಾಗಬೇಡಿ.. ನಕಲಿ ಜನರ ನಿಜವಾದ ಬಣ್ಣ ಶೀಘ್ರದಲ್ಲೇ ಹೊರಬರಲಿದೆ.. ಸ್ವಲ್ಪ ಕಾಯಿರಿ ಎಂದು ಪೋಸ್ಟ್ ಮಾಡಿದ್ದರು. ಕಾವ್ಯಾ ಅವರು ನಿಖಿಲ್ ವಿರುದ್ಧ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆಂದು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮತ್ತೊಂದೆಡೆ, ನಿಖಿಲ್ ಆಕೆ ಇನ್ನೂ ತನ್ನ ಪ್ರೇಮಿ ಮತ್ತು ಹೆಂಡತಿ ಎಂದು ಕಾರ್ಯಕ್ರಮದಲ್ಲಿ ಹೇಳಿದರು. ಆರು ವರ್ಷಗಳ ತಮ್ಮ ಬಾಂಧವ್ಯದಲ್ಲಿ ಈ ಬದುಕಿಗೆ ಸಾಕಾಗುವಷ್ಟು ಸವಿನೆನಪುಗಳನ್ನು ಕೊಟ್ಟಿದ್ದಾಳೆ. ಇನ್ನೂ ಅವಳನ್ನು ಬಿಟ್ಟಿಲ್ಲ ಎಂದು ನಿಖಿಲ್ ಹೇಳಿದ್ದಾರೆ. ನಿಖಿಲ್ ಈ ಕಾರ್ಯಕ್ರಮದಿಂದ ಹೊರ ಬಂದ ಕೂಡಲೇ  ಆಕೆಯನ್ನು ಮೊದಲು ಭೇಟಿಯಾಗುತ್ತೇನೆ ಎಂದು ನೋವು ತೋಡಿಕೊಂಡಿದ್ದಾರೆ. ಅದು ಕಾವ್ಯಾಶ್ರೀ ಎಂಬುದೇ ಹಲವರ ಅಭಿಪ್ರಾಯ.

ಈ ಸಂಚಿಕೆ ಪ್ರಸಾರವಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್‌ಗೆ ಪರ-ವಿರೋಧ ವ್ಯಕ್ತವಾಗಿದೆ. ಕಾವ್ಯಾಗೆ ನಿಖಿಲ್ ಕಣ್ಣೀರು ಇನ್ನೂ ಅರ್ಥವಾಗತ್ತೆ.  ಕಾವ್ಯಾ ನಿಖಿಲ್ ಗೆ ಅಸಲಿ ಸತ್ಯ ಯಾರಿಗೂ ಗೊತ್ತಿಲ್ಲ ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ. 

click me!