ಸಾಕ್ಷಿ ಸಮೇತ ಗೋಲ್ಡ್‌ ಸುರೇಶ್ ಡಬಲ್ ಗೇಮ್ ಎಕ್ಸ್‌ಪೋಸ್‌ ಮಾಡಿದ ಬಿಗ್ ಬಾಸ್; ಕಣ್ಮುಂದೆ ವಿಡಿಯೋ ಇದ್ದರೂ ವಾದ!

By Vaishnavi Chandrashekar  |  First Published Nov 5, 2024, 11:02 AM IST

ಸುಳ್ಳಿ ಹೇಳಿ ವಾದಿಸುತ್ತಿದ್ದ ಗೋಲ್ಡ್‌ ಸುರೇಶ್‌ಗೆ ಪಾಠ ಕಲಿಸಿದ ಬಿಗ್ ಬಾಸ್. ಸತ್ಯ ಎಕ್ಸ್‌ಪೋಸ್ ಮಾಡಿದ್ದರೂ ವಾದಿಸೋದು ಕಮ್ಮಿ ಆಗಿಲ್ಲ..... 


6ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ವಾರ ಕೊಂಚ ವಿಭಿನ್ನವಾಗಿ ಲಷ್ಯುರಿ ಬಜೆಟ್ ಟಾಸ್ಕ್‌ ನೀಡಿದ್ದರು. ಲಿವಿಂಗ್ ಏರಿಯಾದಲ್ಲಿ ಇರುವ ಟಿವಿಯಲ್ಲಿ ಮೊದಲು ಸ್ಪರ್ಧಿಗಳ ಹೆಸರು ತೋರಿಸಲಾಗುತ್ತದೆ, ಆ ಸ್ಪರ್ಧಿಗಳು ತಾವೇ ಮಾತನಾಡಿರುವ ವಿಡಿಯೋವನ್ನು ಬಿಗ್ ಬಾಸ್ ಪ್ಲೇ ಮಾಡುತ್ತಾರೆ. ಬಿಗ್ ಬಾಸ್ ಮನೆಯ ಯಾವ ಜಾಗದಲ್ಲಿ ಈ ರೀತಿ ಮಾತನಾಡಿದ್ದು ಎಂದು ಗಾರ್ಡನ್ ಏರಿಯಾದಲ್ಲಿ ಇರುವ ಮ್ಯಾಪ್‌ ಮೇಲೆ ಬಜರ್ ಆಗುವವರೆಗೂ ಸ್ಪರ್ಧಿಗಳು ನಿಲ್ಲಬೇಕು. ಸರಿಯಾಗಿದ್ದರೆ ಲಷ್ಯುರಿ ಬಜೆಟ್ ಗೆಲ್ಲುತ್ತಾರೆ ಸೋತರೆ ಬಜೆಟ್ ಕಡಿಮೆ ಆಗುತ್ತದೆ. ಇಲ್ಲಿರುವ ಟ್ವಿಸ್ಟ್ ಏನೆಂದರೆ ಸರಿ ತಪ್ಪು ಹೇಳಿದ ಮೇಲೆ ಟಿವಿಯಲ್ಲಿ ಆ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತದೆ. ಇಲ್ಲಿ ನೋಡಿ ಪ್ರತಿಯೊಬ್ಬರ ಅಸಲಿ ಮುಖ ಭಯಲಾಗುತ್ತದೆ. 

ಗೋಲ್ಡ್‌ ಸುರೇಶ್ ಲಾಕ್!

Tap to resize

Latest Videos

undefined

ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರ ಪೋಟೋ ಯಾರು ತೆಗೆದುಕೊಂಡು ಬರುತ್ತಾರೆ ಎಂಬ ಚರ್ಚೆ ನಡೆಯಿತ್ತು. ಆಗ ಗೋಲ್ಡ್ ಸುರೇಶ್ ಸ್ಪಷ್ಟವಾಗಿ ನಾನು ಶಿಶರ್ ಫೋಟೋ ತೆಗೆದುಕೊಂಡು ಬರುತ್ತೀನಿ ನನ್ನ ಫೋಟೋವನ್ನು ಚೈತ್ರ ತೆಗೆದುಕೊಂಡು ಬರಲಿ ಎಂದಿದ್ದರು. ಆದರೆ ಆಟ ಶುರುವಾದ ಮೇಲೆ ಗೋಲ್ಡ್‌ ಸುರೇಶ್ ಶಿಶಿರ್ ಫೋಟೋವನ್ನು ಬಿಟ್ಟು ಚೈತ್ರಾ ಫೋಟೋ ಹಿಡಿದುಕೊಂಡು ಬರುತ್ತಾರೆ, ಚೈತ್ರಾ ಅವರು ಸುರೇಶ್ ಫೋಟೋ ಹಿಡಿದು ಬರುತ್ತಾರೆ. ಆಗ ಆಯ್ಕೆ ಇಲ್ಲದೆ ಐಶ್ವರ್ಯ ಶಿಶಿರ್ ಫೋಟೋವನ್ನು ತೆಗೆದುಕೊಂಡು ಬರುತ್ತಾರೆ. ಯಾಕೆ ಈ ರೀತಿ ಆಯ್ತು ಎಂದು ಗೋಲ್ಡ್ ಸುರೇಶ್‌ನ ಪ್ರಶ್ನೆ ಮಾಡಿದಾಗ ನಾನು ನಿಮ್ಮ ಫೋಟೋವನ್ನು ತರುತ್ತೀನಿ ಎಂದು ಹೇಳೇ ಇಲ್ಲ ಎಂದು ವಾದ ಮಾಡುತ್ತಾರೆ. 

ಅಶ್ವಿನಿ ಪುನೀತ್ ರಾಜ್‌ಕುಮಾರ್ ಫೋಟೋ ದುರ್ಬಳಕೆ; ಯೂಟ್ಯೂಬರ್‌ಗಳಿಗೆ ಬಿ ಗಣಪತಿ

ಈಗ ಟಾಸ್ಕ್‌ ವಿಚಾರದಲ್ಲಿ ಬಿಗ್ ಬಾಸ್ ಈ ವಿಡಿಯೋವನ್ನು ಪ್ಲೇ ಮಾಡಿಬಿಟ್ಟರು. ವಿಡಿಯೋ ಸಮೇತ ಸಿಕ್ಕಿಬಿದ್ದರೂ ನಾನು ಸರಿಯಾಗಿ ಮಾತನಾಡಿದ್ದೀನಿ ಕೇವಲ ಒಂದು ನಿಮಿಷ ವಿಡಿಯೋವನ್ನು ತೋರಿಸಿದ್ದಾರೆ ನಾನು ಹಾಗೆ ಹೇಳಿಲ್ಲ ಪೂರ್ತಿ ಕೇಳಿಸಿಕೊಂಡಿಲ್ಲ ಅಂದ್ರೆ ಮಾತನಾಡಬೇಡಿ ಹಾಗೆ ಹೀಗೆ ಎಂದು ಗೋಲ್ಡ್ ಸುರೇಶ್ ಮತ್ತೆ ವಾದ ಮಾಡಲು ಶುರು ಮಾಡುತ್ತಾರೆ. ವಿಡಿಯೋ ಸಮೇತ ಸಿಕ್ಕಿಬಿದ್ದಿದ್ದೀರಿ ಎಂದು ಶಿಶಿರ್ ಹೇಳಿದ್ದರೂ ಸುರೇಶ್ ಕೇಳಲು ರೆಡಿ ಇಲ್ಲದೆ ಮಾತಿಗೆ ಮಾತು ಬೆಳೆಸಿ ಸ್ಥಳದಿಂದ ಮಾಯವಾಗುತ್ತಾರೆ. 

ಲೇ ಸುಂದರಿ ಅಂದವರೆಲ್ಲಾ ಈಗ ಬಕೆಟ್ ರಾಣಿ ಅಂತಿದ್ದಾರೆ; ಬಿಗ್ ಬಾಸ್ ಭವ್ಯಾ ಗೌಡ ಹಿಗ್ಗಾಮುಗ್ಗಾ ಟ್ರೋಲ್

 

click me!