ಅನುಷಾ ರೈ ಮೇಲೆ ಕೈಮಾಡಿದ ಚೈತ್ರಾ ಕುಂದಾಪುರ; ಮನೆಯಿಂದ ಹೊರ ಹಾಕ್ತಾರಾ ಬಿಗ್ ಬಾಸ್?

By Sathish Kumar KH  |  First Published Nov 4, 2024, 4:00 PM IST

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ನಟಿ ಅನುಷಾ ರೈ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಿಂದೆ ರಂಜಿತ್ ಅವರನ್ನು ಹಲ್ಲೆ ಮಾಡಿದ್ದಕ್ಕೆ ಮನೆಯಿಂದ ಹೊರಹಾಕಲಾಗಿತ್ತು. ಚೈತ್ರಾ ಅವರನ್ನು ಸಹ ಹೊರಹಾಕಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.


ಬೆಂಗಳೂರು (ಅ.04): ಬಿಗ್ ಬಾಸ್ ನಿಯಮಾವಳಿ ಪ್ರಕಾರ ಯಾವುದೇ ಸ್ಪರ್ಧಿಗಳು ತಮ್ಮ ಸಹ ಸ್ಪರ್ಧಿಗಳ ಮೇಲೆ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಆದರೂ, ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿದ್ದ ನಟ ರಂಜಿತ್ ಮನೆಯಿಂದ ಹೊರ ಹೋಗಿದ್ದಾರೆ. ಇದೀಗ ಪುನಃ ಚೈತ್ರಾ ಕುಂದಾಪುರ ಅವರು ನಟಿ ಅನುಷಾ ರೈ ಮೇಲೆ ಕೈ ಮಾಡುವ ಮೂಲಕ ಬಿಗ್ ಬಾಸ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಹಾಗಾದರೆ, ಚೈತ್ರಾ ಕುಂದಾಪುರ ಅವರನ್ನು ಕೂಡ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬಿಗ್ ಬಾಸ್ ಸೀಸನ್ 11ರ ರಿಯಾಲಿಟಿ ಶೋನಲ್ಲಿ ಇದೀಗ ನಾಲ್ಕನೇ ವಾರದ ಕಿಚ್ಚನ ಪಂಚಾಯಿತಿ ಮುಕ್ತಾಯವಾಗಿದೆ. ಎಲ್ಲರಿಗೂ ಮಾನವೀಯತೆಯಿಂದ ಆಟವಾಡುವಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ಇದಾದ ನಂತರವೂ ಸೋಮವಾರ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳಿಗೆ ಪಗಟೆ ಆಟವನ್ನು ಆಡಿಸಿದ್ದಾರೆ. ಇಲ್ಲಿ ಮನೆಯ ಕ್ಯಾಪ್ಟನ್ ಹನುಮಂತು ಅವರು ದಾಳವನ್ನು ಉರುಳಿಸಿದ್ದಾರೆ. ಅದರಂತೆ ಇತರೆ ಸ್ಪರ್ಧಿಗಳು ಕಾಯುಗಳನ್ನು ನಡೆಸುತ್ತಾ ಪಗಡೆಯ ಆವರಣದಲ್ಲಿರುವ ಮಾಹಿತಿಗೆ ಅನುಸಾರ ಮನೆಯ ವಿರೋಧಿ ಪಂಗಡದವನ್ನು ಉಳಿಸುವುದು, ಸ್ವ ತಂಡದ ಅಭ್ಯರ್ಥಿಯನ್ನು ನಾಮಿನೇಟ್ ಅಥವಾ ನಾಮಿನೇಷನ್‌ನಿಂದ ಉಳಿಸುವುದು ಸೇರಿದಂತೆ ಹಲವು ಟಾಸ್ಕ್‌ಗಳನ್ನು ಮಾಡಲಾಗಿದೆ.

Tap to resize

Latest Videos

undefined

ಹನುಮಂತು ಕಾಯಿ ಉರುಳಿಸಿದ ವೇಳೆ ಚೈತ್ರಾ ಕುಂದಾಪುರ ಅವರ ತಂಡದಿಂದ ಕಾಯಿಗಳನ್ನು ನಡೆಸಿದ ನಂತರ ಅಲ್ಲಿ ಇದ್ದ ಮಾಹಿತಿಯಂತೆ ಎದುರಾಳಿ ತಂಡದ ಒಬ್ಬ ಸದಸ್ಯರನ್ನು ನಾಮಿನೇಟ್‌ನಿಂದ ಪಾರು ಮಾಡಬಹುದಾಗಿರುತ್ತದೆ. ಆಗ ಚೈತ್ರಾಳಿಗೆ ಆಪ್ತರಾಗಿದ್ದ ಅನುಷಾ ರೈ, ತ್ರಿವಿಕ್ರಮ್ ಹಾಗೂ ಗೌತಮಿ ಜಾಧವ್ ಎದುರಾಳಿ ತಂಡದಲ್ಲಿರುತ್ತಾರೆ. ಇದೀಗ ಅನುಷಾ ರೈ ಅವರು ನಾಮಿನೇಟ್ ಆಗಿದ್ದು, ಮನೆಯಿಂದ ಹೊರಗೆ ಹೋಗುವ ಆತಂಕದಲ್ಲಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಚೈತ್ರಾ ಕುಂದಾಪುರ ಅನುಷಾ ಅವರನ್ನು ಬಿಟ್ಟು ಗೌತಮಿ ಅವರನ್ನು ಸೇವ್ ಮಾಡಿದ್ದಾರೆ.

ಇದನ್ನೂ ಓದಿ: ಜನರು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಕ್ಕೆ ನಾನು ಹೊರ ಬಂದಿದ್ದು: ಬಿಗ್ ಬಾಸ್ ಮಾನಸ ಹೇಳಿಕೆ ವೈರಲ್

ಈ ಆಟ ಮುಕ್ತಾಯದ ನಂತರ ಸೋಫಾದ ಮೇಲೆ ಅನುಷಾ, ಭವ್ಯಾಗೌಡ, ತ್ರಿವಿಕ್ರಮ್ ಹಾಗೂ ಧರ್ಮ ಅವರು ಒಟ್ಟಿಗೆ ಮಾತನಾಡುವ ಸ್ಥಳಕ್ಕೆ ಚೈತ್ರಾ ಕುಂದಾಪುರ ಬರುತ್ತಾಳೆ. ಆಗ ಅಸಹನೆಯಿಂದ ಇದ್ದ ಅನುಷಾ ಚೈತ್ರಾಳ ಮುಂದೆ ನಾವೆಲ್ಲರೂ ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವಾ ಗೌತಮಿ ಅವರನ್ನು ಸೇವ್ ಮಾಡಿದ್ದೀರಿ ಎಂದು ಹೇಳುತ್ತಾರೆ. ಆಗ, ಚೈತ್ರಾ ಹೌದು ನನ್ನ ಕಣ್ಣಿಗೆ ಕಾಣಿಸಿದರೂ ಕಾಣಿಸದಿರುವವರ ತರಹ ಆಟವಾಡ್ತೇನೆ ಎಂದು ಹೇಳುತ್ತಾರೆ. ಆಗ ಬ್ಯಾಡ ಕಣ್ಣವ್ವಾ ನಮಗೆಲ್ಲಾ ಯಾಕೆ ಎಂದು ಅನುಷಾ ಹೇಳುತ್ತಾರೆ. ಇದರಿಂದ ಕೋಪಗೊಂಡ ಚೈತ್ರಾ ಅವರು ಅನುಷಾ ಅವರ ತಲೆಯ ಮೇಲೆ ಒಂದು ಬಾರಿ ಕುಕ್ಕುತ್ತಾರೆ. ಆಗ ಮತ್ತೆ ತೀವ್ರ ಕೋಪಗೊಂಡ ಅನುಷಾ, ಚೈತ್ರಾಳಿಗೆ ಷಟ್ ಅಪ್, ಗೆಟ್ ಲಾಸ್ಟ್ ಎಂದು ಹೇಳುತ್ತಾರೆ. ನಾನು ನಿಮಗೆ ಸೀರಿಯಸ್ ಆಗಿ ಹೇಳ್ತೇನೆ. ನಿಮಗೆ ಪದೇ ಪದೆ ಹೇಳುವುದಿಲ್ಲ ಎಂದು ಗರಂ ಆಗಿದ್ದಾರೆ.

ಪಗಡೆ ಆಟದ ಮಹಿಮೆಯಲ್ಲಿ ಚೂರಾಯ್ತಾ ಮನಸ್ಸುಗಳು?

ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
pic.twitter.com/QttgRNJa8Z

— Colors Kannada (@ColorsKannada)

ಆಗ ಪುನಃ ಚೈತ್ರಾ ಕುಂದಾಪುರ ಅವರು ಅಮ್ಮಾ... ತಪ್ಪಾಯ್ತು ತಾಯಿ.. ಇನ್ಯಾವತ್ತೂ ಮಾತನಾಡುವುದಿಲ್ಲ.. ನಿಮ್ಮ ಸಹವಾಸ ಬೇಕಾಗಿಲ್ಲ, ಬೇಕಾಗಿಯೇ ಇಲ್ಲಬೆಂದು ಎಂದು ಅನುಷಾಗೆ ಕೈ ಮುಗಿದು ಅಲ್ಲಿಂದ ಎದ್ದು ಹೋಗುತ್ತಾರೆ. ಹೋಗುವಾಗ, ಇದನ್ನು ನಾನು ನೆನಪಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಬೆದರಿಕೆಯ ವಾರ್ನಿಂಗ್ ನೀಡುತ್ತಾರೆ. ಆಗ ಆಯ್ತು ನೆನಪಲ್ಲಿ ಇಟ್ಟುಕೋ, ನಿನಗೆ ಯಾರು ಕೇರ್ ಮಾಡೊಲ್ಲ ಎಂದು ಅನುಷಾ ಮತ್ತೆ ಸಿಡಿಮಿಡಿಗೊಳ್ಳುತ್ತಾರೆ.

ಇದನ್ನೂ ಓದಿ: Bigg Boss Season 11: ಮೋಕ್ಷಿತಾ- ತ್ರಿವಿಕ್ರಂ ಮಧ್ಯೆ ಮತ್ತೆ ಕಿಡಿ ಹಚ್ಚಿ..ಆಟ ನೋಡ್ತಿದ್ದಾರ ಬಿಗ್ ಬಾಸ್!

click me!