ಬಿಗ್‌ಬಾಸ್‌ ಉರುಳಿಸಿದ ದಾಳಕ್ಕೆ ಈ ವಾರ ಮನೆಯಿಂದ ಹೊರಹೋಗಲು ಬಲಿಷ್ಠ ಸ್ಪರ್ಧಿಗಳೇ ನಾಮಿನೇಟ್‌!

By Gowthami K  |  First Published Nov 4, 2024, 11:57 PM IST

ಬಿಗ್‌ಬಾಸ್ 11ರ 6ನೇ ವಾರದ ನಾಮಿನೇಷನ್ ಪ್ರಕ್ರಿಯೆ ವಿಶಿಷ್ಟ ಆಟದೊಂದಿಗೆ ನಡೆದಿದ್ದು, ಬಲಿಷ್ಠ ಸ್ಪರ್ಧಿಗಳು ಅಪಾಯದಲ್ಲಿದ್ದಾರೆ.


ಬಿಗ್‌ಬಾಸ್‌ 11 ರಲ್ಲಿ 6ನೇ ವಾರ ಮನೆಯಿಂದ ಹೊರಹೋಗಲು ಬಲಿಷ್ಠ ಸ್ಪರ್ಧಿಗಳೇ ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್‌, ಅನುಷಾ ರೈ, ಭವ್ಯಾ ಗೌಡ, ತ್ರಿವಿಕ್ರಮ್‌ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದಾರೆ.

ಟಾಯ್ಲೆಟ್‌ನ ಹಳದಿ ಕಲೆಗಳನ್ನು ತೆಗೆಯುವುದು ಹೇಗೆ? ಇಲ್ಲಿದೆ ಸೂಪರ್ ಟಿಪ್ಸ್

Tap to resize

Latest Videos

undefined

ಈ ಬಾರಿ ನಾಮಿನೇಶನ್ ಪ್ರಕ್ರಿಯೆಗೆ ಬಿಗ್‌ಬಾಸ್‌ ಲೋಡೋ ಆಟ ಕೊಟ್ಟಿದ್ದರು. 4 ಟೀಂಗಳನ್ನು ಮಾಡಬೇಕಿತ್ತು. ನಾಲ್ಕು ನಾಯಕರು ಇರಬೇಕಿತ್ತು.  ಶಿಶಿರ್‌‌ ಟೀಂನಲ್ಲಿ ಧನರಾಜ್‌, ಐಶ್ವರ್ಯಾ ಇದ್ದರೆ, ಗೌತಮಿ ಟೀಂನಲ್ಲಿ   ತ್ರಿವಿಕ್ರಮ್‌ ಮತ್ತು ಅನುಷಾ ಇದ್ದರು. ಚೈತ್ರಾ ಟೀಂನಲ್ಲಿ ಮೋಕ್ಷಿತಾ, ಧರ್ಮ ಕೀರ್ತಿ, ಮಂಜು ಅವರ ಟೀಂನಲ್ಲಿ ಭವ್ಯಾ, ಸುರೇಶ್‌ ಇದ್ದರು.  ಮನೆಯ ಕ್ಯಾಪ್ಟನ್‌ ಹನುಮಂತು ದಾಳವನ್ನು ಉರುಳಿಸಬೇಕಿತ್ತು. 

ದಾಳ ಉರಳಿಸುವ ಗೇಮ್‌ನಲ್ಲಿ ಮೊದಲಿಗೆ ಚೈತ್ರಾ ಅವರ ಟೀಂ ಎದುರಾಳಿ ತಂಡದ ಒಬ್ಬರನ್ನು ಉಳಿಸಿಬೇಕಿತ್ತು. ಅವರು ಗೌತಮಿ ಅವರನ್ನು ಉಳಿಸಿದರು.

ಟಾಟಾ ನ್ಯಾನೋ ಕಾರು ಮತ್ತೆ ಮಾರುಕಟ್ಟೆಗೆ, 30 ಕಿಮೀ ಮೈಲೇಜ್, ಅತೀ ಕಡಿಮೆ ಬೆಲೆ!

ಬಳಿಕ ಮಂಜು ಅವರ ಟೀಂನಿಂದ ಭವ್ಯಾ.   ಚೈತ್ರಾ ಟೀಂನಿಂದ ಧರ್ಮ ಅವರು ನಾಮಿನೇಟ್‌ ಆದರು. ಬಳಿಕ ಗೌತಮಿ ಅವರ ಟೀಂ ನಿಂದ ತ್ರಿವಿಕ್ರಮ್‌ ಮತ್ತು ಅನುಷಾ ಅವರು ಒಮ್ಮತದ ನಿರ್ಧಾರದಿಂದ ಮೋಕ್ಷಿತಾ ಅವರನ್ನು ಸೇವ್‌ ಮಾಡಿದರು.

ಬಳಿಕ ಕೊನೆಯಲ್ಲಿ ದಾಳ ಉರುಳಿಸಿ ಉಗ್ರಂ ಮಂಜು, ಸುರೇಶ್‌, ಐಶ್ವರ್ಯಾ, ಶಿಶಿರ್‌ ಅವರು ಸೇಫ್‌ ಆಟ ಫಿನಿಶ್ ವರೆಗೆ ತಲುಪಿ ಸೇಫ್ ಆದರು.  ಕೊನೆಗೆ ಉಳಿದಿದ್ದು ಚೈತ್ರಾ, ಧರ್ಮ, ಅನುಷಾ, ಭವ್ಯಾ, ತ್ರಿವಿಕ್ರಮ್‌. ಇವರು ನಾಮಿನೇಟ್‌‌ ಆಗಿದ್ದು, ಈ ವಾರ ಬಲಿಷ್ಠ ಅಭ್ಯರ್ಥಿ ಮನೆಯಿಂದ ಹೊರಹೋಗುವುದು ಸುಳ್ಳಲ್ಲ. 
 

click me!