ಬಿಗ್​ಬಾಸ್ ಮನೆ ಸೇರಿದ ದರ್ಶನ್​ ಆಪ್ತರು; ಒಂಟಿ ಮನೆಯಲ್ಲೂ ಇರುತ್ತಾ ದಾಸನ ಕಥೆ ವ್ಯಥೆ?

By Vaishnavi Chandrashekar  |  First Published Oct 1, 2024, 5:34 PM IST

ಬಿಗ್ ಬಾಸ್ ಮನೆ ಸೇರಿದ ದಚ್ಚು ಆಪ್ತೆ ಯಮುನಾ ಶ್ರೀನಿಧಿ, ಕ್ಯಾಡ್​ಬೆರಿ ಧರ್ಮಕೀರ್ತಿ ರಾಜ್,ಲಾಯರ್ ಜಗದೀಶ್.


ನಟ ದರ್ಶನ್ ವಿಷಯ ತುಂಬಾ ಸೀರಿಯಸ್ ಆಗಿದೆ. ಎಲ್ಲಿ ಹೋದ್ರು ಅಲ್ಲಿ ದರ್ಶನ್ ಮ್ಯಾಟರ್ ಚರ್ಚೆಗೆ ಬರುತ್ತೆ. ಈಗ ಕಿಚ್ಚ ಸುದೀಪ್​ ಸಾರಥ್ಯದ ಬಿಗ್​ಬಾಸ್​ ಸೀಸನ್11 ಆರಂಭ ಆಗಿದೆ. ಈ ಭಾರಿ ಒಂಟಿ ಮನೆಗೆ ನಾಲ್ಕು ಜನ ದರ್ಶನ್ ಅಪ್ಪಟ ಅಭಿಮಾನಿಗಳು ಬಲಗಾಲಿಟ್ಟಿದ್ದಾರೆ. ಬಿಗ್ ಬಾಸ್ ಕಲರವ ಮತ್ತೊಮ್ಮೆ ಆರಂಭವಾಗಿದೆ. ಒಂಟಿ ಮನೆಗೆ 17 ಜನ ಹೋಗಿದ್ದಾರೆ. ಪ್ರತಿ ವರ್ಷ ಬಿಗ್ ಬಾಸ್ ಮನೆಯಲ್ಲಿ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಈ ಸೀಸನ್ ಕೂಡಾ ಅದಕ್ಕೆ ಹೊರತಾಗಿಲ್ಲ. ಮೈ ತುಂಬಾ ಚಿನ್ನ ಹಾಕಿಕೊಂಡ ಗೋಲ್ಡ್ ಸುರೇಶ್, ಫೇಸ್‌ಬುಕ್‌ ಲೈವ್ ಲಾಯರ್ ಜಗದೀಶ್, ಹಿಂದುತ್ವವಾದಿ ಚೈತ್ರಾ ಕುಂದಾಪುರ, ಹೀಗೆ ಭಿನ್ನ-ವಿಭಿನ್ನ ವ್ಯಕ್ತಿತ್ವ ಮನೆ ಸೇರಿವೆ. ಆದ್ರೆ ಹೀಗೆ ಮನೆಗೆ ಹೋದ 17 ಜನರಲ್ಲಿ 4 ಜನಕ್ಕೆ ದರ್ಶನ್ ಅವರ ಜೊತೆ ಆಪ್ತ ಸಂಬಂಧ ಇಟ್ಟುಕೊಂಡವರು.

ಹೌದು! ದರ್ಶನ್​ ಕಥೆ ವ್ಯಥೆ ಈ ಬಾರಿ ಬಿಗ್​ಬಾಸ್ ಮನೆಯಲ್ಲೂ ಸೌಂಡ್ ಮಾಡೋ ಎಲ್ಲಾ ಸಾಧ್ಯತೆ ಇದೆ. ಯಾಕಂದ್ರೆ ದಚ್ಚು ಆಪ್ತರಾಗಿದ್ದವರು, ದರ್ಶನ್ ಜೈಲು ಸೇರಿದ್ಮೇಲೆ ದರ್ಶನ್ ಪರ ಮಾತನಾಡಿದ್ದವರು ಈಗ ಒಂಟಿಮನೆಯಲ್ಲಿದ್ದಾರೆ. ಅವರಲ್ಲೊಬ್ಬರು ಯಮುನಾ ಶ್ರೀನಿಧಿ.ಯಮುನಾ ಶ್ರೀನಿಧಿ ಕಿರುತೆರೆಯ ಖ್ಯಾತ ಹೆಸರು. ಅಶ್ವಿನಿ ನಕ್ಷತ್ರ, ಅಮೃತ ವರ್ಷಿಣಿ, ರಾಜಾ ರಾಣಿ, ಹೀಗೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿ ಜನ ಮನ ಗೆದ್ದ ಯಮುನಾ ಶ್ರೀನಿಧಿ ದರ್ಶನ್​ ಜೈಲು ಪಾಲಾದಾಗ ಅವರ ಮೇಲಿನ ನನ್ನ ಭಾವನೆಗಳು ಎಂದಿಗೂ ಬದಲಾಗುವುದಿಲ್ಲ ಎಂದು ದರ್ಶನ್ ಪರ ಪೋಸ್ಟ್ ಹಾಕಿದ್ದರು. ಅಷ್ಟೆ ಅಲ್ಲ ದರ್ಶನ್ ಮೇಲೆ ಗೌರವಕ್ಕೆ ಕಾರಣ ಅವರು ನಮ್ಮನ್ನು ನಡೆಸಿಕೊಳ್ಳುವ ರೀತಿ. ದರ್ಶನ್ ಅಭಿಮಾನಿಗಳಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಎಂಬ ಮನವಿ ಕೂಡ ಮಾಡಿಕೊಂಡಿದ್ದರು.ಈಗ ಯಮುನಾ ಶ್ರೀನಿಧಿ ಬಿಗ್​ಬಾಸ್​ ಮನೆಯಲ್ಲಿದ್ದಾರೆ.

Tap to resize

Latest Videos

undefined

ರಾಜ್‌ಕುಮಾರ್ ಮತ್ತು ಪುನೀತ್‌ಗೆ ಊಟ ಬಡಿಸಿದ್ದ ಸಚಿವ ಜಮೀರ್ ಅಹ್ಮದ್; ಫೋಟೋ ವೈರಲ್!

ಧರ್ಮ ಕೀರ್ತಿರಾಜ್, ದರ್ಶನ್ ಅವರ ಮತ್ತೊಬ್ಬ ಅತ್ಯಾಪ್ತ. ಇವತ್ತು ಕೂಡ ಕಣ್ ಕಣ್ಣ ಸಲಿಗೆಯ ಹೀರೋ ಎಂದೇ ಧರ್ಮ ಫೇಮಸ್. ದರ್ಶನ್ ಅವರಿಂದ ಹೇ ಕ್ಯಾಡ್ಬರಿ ಎಂದು ಕರೆಸಿಕೊಳ್ಳುವ ಧರ್ಮ ಕೀರ್ತಿರಾಜ್ ಕೂಡ ಬಿಗ್ ಬಾಸ್ ಮನೆಗೆ ಈ ಬಾರಿ ತೆರಳಿದ್ದಾರೆ. ಮನೆಯೊಳಗೆ ಹೋಗುವ ಮುನ್ನ ಸುದೀಪ್ ಎದುರು ದರ್ಶನ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಇನ್ನೂ ಯಮುನಾ ಶ್ರೀನಿಧಿ, ಧರ್ಮ ಕೀರ್ತಿರಾಜ್​​ರಂತೆಯೇ ನಟಿ ಅನುಷಾ ರೈ ಕೂಡ ಮೈಸೂರಿನ ಆರಡಿ ಕಟೌಟ್​ ಅಭಿಮಾನಿಯೇ. ಯಾಕಂದ್ರೆ ಮೈಸೂರಿನ ಆರಡಿ ವ್ಯಕ್ತಿಯಿಂದ ಇಂತಹ ತಪ್ಪಾಗಿದೆ ಎಂದರೆ ನಂಬಲು ಅಸಾಧ್ಯ ಮೈ ಮೇಲೆ ನನ್ನ ಹೆಸರಿನ ಹಚ್ಚೆ ಹಾಕಿಸಿಕೊಳ್ಳಬೇಡಿ ನಿಮ್ಮ ಅಪ್ಪ ಅಮ್ಮನ ಹೆಸರು ಹಾಕಿಸಿಕೊಳ್ಳಿ ಎಂದು ತಾವೇ ತಮ್ಮ ಎದೆಯ ಮೇಲೆ ಸೆಲೆಬ್ರಿಟೀಸ್ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿಗಳ ದಾಸ ದರ್ಶನ್ ಅಂತ ದಾಸನ ಪರ ನಟಿ ಅನುಷಾ ಮಾತನಾಡಿದ್ದರು. ಈಗ ಅನುಷಾ ಕೂಡ ಒಂಟಿ ಮನೆಯಲ್ಲಿ ದರ್ಶನ್ ಚರ್ಚೆ ಬಂದಾಗೆಲ್ಲಾ ದಾಸನ ಪರ ವಾಯ್ಸ್ ರೈಸ್ ಮಾಡಬಹುದು..

ಅವಮಾನ ಆಗಿದೆ ಅನ್ನೋದು ವೈಯಕ್ತಿಕ, ಸಂಸ್ಥೆ ಮೇಲೆ ಆಪಾದನೆ ಹಾಕೋದು ಅಪರಾಧ: ಖಡಕ್ ಉತ್ತರ ಕೊಟ್ಟ ಕಿಚ್ಚ

ನಟ ದರ್ಶನ್ ಪರ ಹೋರಾಡುತ್ತೇನೆ ಎಂದಿದ್ದ ಫೇಸ್​ಬುಕ್​ ಲಾಯರ್ ಜಗದೀಶ್​ ಈಗ ಒಂಟಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್‌ಗಾಗಿ ಫ್ರೀಡಂ ಪಾರ್ಕ್​ನಲ್ಲಿ ಪ್ರೊಟೆಸ್ಟ್ ಮಾಡಲು ದಾಸನ ಫ್ಯಾನ್ಸ್​ಗೆ ಜಗದೀಶ್ ಆಹ್ವಾನ ಕೊಟ್ಟಿದ್ದರು. ದರ್ಶನ್‌ಗೆ ಸಿಕ್ಕ ರಾಜಾತಿಥ್ಯದ ಫೋಟೋ ತೆಗೆದಿದ್ದು ಯಾರು ಎನ್ನುವ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದರು. ಈಗ ಇದೇ ಲಾಯರ್​ ಜಗದೀಶ್​ ಬಿಗ್​ಬಾಸ್​ ಮನೆಯಲ್ಲಿ ಭದ್ರವಾಗಿದ್ದಾರೆ. ಹೀಗಾಗಿ ಲಾಯರ್ ಜಗದೀಶ್​, ದರ್ಶನ್​ ವಿಷಯದಲ್ಲಿ ಗದ್ದಲ ಮಾಡೋದ್ರಲ್ಲಿ ನೋ ಡೌಟ್.

click me!