ಬಿಗ್‌ಬಾಸ್ ಆರಂಭಕ್ಕೆ ಇನ್ನು ಕೇವಲ 5 ದಿನ, ರಾಜಾ-ರಾಣಿ ಶೋ ಮುಂಚೆಯೇ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ವೈರಲ್!

By Gowthami K  |  First Published Sep 24, 2024, 6:28 PM IST

ಬಿಗ್‌ಬಾಸ್‌ ಕನ್ನಡ ಸೀಸನ್ 11 ರ ಸ್ಪರ್ಧಿಗಳನ್ನು ರಾಜಾ ರಾಣಿ ವೇದಿಕೆಯಲ್ಲಿ ರಿವೀಲ್ ಮಾಡಲಾಗುತ್ತದೆ. ಈ ಶೋ ನಲ್ಲಿ ವಿಜೇತರಿಗೆ ಬಿಗ್ ಬಾಸ್ ಮನೆಗೆ ನೇರ ಪ್ರವೇಶ ಸಿಗಲಿದೆ. ಕಿರುತೆರೆ ಕಲಾವಿದರು, ಮಾಧ್ಯಮ ವ್ಯಕ್ತಿಗಳು, ಗಾಯಕರು ಸೇರಿದಂತೆ ಹಲವರ ಹೆಸರುಗಳು ಕೇಳಿಬರುತ್ತಿವೆ.


ಬಿಗ್‌ಬಾಸ್‌ ಕನ್ನಡ ಸೀಸನ್ 11 ಕ್ಕೆ ದಿನ ಗಣನೆ ಆರಂಭವಾಗಿದೆ. ಇದೇ ಸೆಪ್ಟೆಂಬರ್ 29ಕ್ಕೆ ಆರಂಭವಾಗುತ್ತಿದೆ. ಅಂದರೆ ಕೇವಲ 5 ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ತಿಳಿಸಿರುವಂತೆ  ಕಂಟೆಸ್ಟೆಂಟ್‌ಗಳ ಹೆಸರನ್ನು ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ಮುಂಚೆಯೇ ರಿವೀಲ್ ಮಾಡಲಾಗುತ್ತದೆ.  ಮತ್ತೊಂದು ರಿಯಾಲಿಟಿ ಶೋ ರಾಜಾ ರಾಣಿ ವೇದಿಕೆಯಲ್ಲಿಯೇ ಬಿಗ್ ಬಾಸ್ ಕಂಟೆಸ್ಟೆಂಟ್‌ಗಳ ಹೆಸರನ್ನು ರಿವೀಲ್ ಮಾಡಲಾಗುತ್ತದೆ. ಈ ಶೋ ನಲ್ಲಿ  ರಿವೀಲ್ ಮಾಡಿದ ನಂತರ ಜನರಿಂದ ಅವರಿಗೆ ಆನ್‌ಲೈನ್ ಮೂಲಕ ವೋಟಿಂಗ್ ಅನ್ನು ಪಡೆಯಲಾಗುತ್ತದೆ. ಅತಿ ಹೆಚ್ಚಿನ ಮತಗಳನ್ನು ಪಡೆದವರಿಗೆ ಬಿಗ್ ಬಾಸ್ ಮನೆಯೊಳಗೆ ಹೋಗಲು ಅವಕಾಶ ನೀಡಲಾಗುತ್ತದೆ.

ಹೀಗಾಗಿ ಈ ಶೋ ನಲ್ಲಿ ವಿನ್‌ ಆದವರಿಗೆ ಅವಕಾಶ ಅಂತೂ ಖಂಡಿತಾ ಇದೆ ಎಂದು ಬಿಗ್‌ಬಾಸ್‌ ವೀಕ್ಷಕರು ಮತ್ತು ರಾಜಾರಾಣಿ ಪ್ರೇಕ್ಷಕರ ಅಭಿಪ್ರಾಯವಾಗಿದೆ. ಹೀಗಾಗಿ ಈ ಬಾರಿ ಯಾರು ರಾಜಾ-ರಾಣಿ ಶೋ ಗೆಲ್ಲುತ್ತಾರೆ ಎಂಬುದನ್ನು ಸೆ.28 ರಂದು ನಡೆಯಲಿರುವ ಗ್ರ್ಯಾಂಡ್ ಫಿನಾಲೆ ದಿನ ಕಾದು ನೋಡಬೇಕಿದೆ. ಇದಲ್ಲದೆ ಈ ಶೋ ಗೆ ಪ್ರವೇಶ ಪಡೆಯಲು ಯಾರನ್ನೆಲ್ಲ ಪರಿಚಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Tap to resize

Latest Videos

ನಾನು ಮೋದಿ ಅಲ್ಲ ಸಿದ್ದರಾಮಯ್ಯ ಅಲ್ಲ ನೀವು ಅವರ ಮನೆ ಮುಂದೆ ಸ್ಟ್ರೈಕ್ ಮಾಡಿ: ರಮ್ಮಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಸುದೀಪ್ ಗರಂ

ಇದೆಲ್ಲದರ ನಡುವೆ ಹಲವು ಸ್ಪರ್ಧಿಗಳ ಹೆಸರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಿರುತೆರೆ  ಕಲಾವಿದರೇ ಹೆಚ್ಚು ಎನ್ನಲಾಗಿದೆ. ಯಾರು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.

ಕಿರುತೆರೆ ಮತ್ತು ಕಾಮಿಡಿ: ಗೀತಾ ಸೀರಿಯಲ್ ನಟಿ  ಶರ್ಮಿತಾ ಗೌಡ ಮತ್ತು ಭವ್ಯಾ ಗೌಡ, ಕಿರುತೆರೆ ನಟಿ ಸುಕೃತಾ ನಾಗ್ , ಗಿಚ್ಚಿಗಿಲಿಗಿಲಿ ವಿನ್ನರ್ ಹುಲಿ ಕಾರ್ತಿಕ್ ಪಕ್ಕಾ ಇರಲಿದ್ದಾರೆನ್ನಲಾಗಿದೆ.

ಮಾಧ್ಯಮ ಕ್ಷೇತ್ರ: ಇನ್ನು ಮಾಧ್ಯಮ ಕ್ಷೇತ್ರದಿಂದ ಈ ಬಾರಿ ಯಾರು ಇರಲಿದ್ದಾರೆ ಎಂಬುದೇ ಕುತೂಹಲದ ವಿಷಯವಾಗಿದೆ. ನಿರೂಪಕಿ ಜಾಹ್ನವಿ,  ಹರೀಶ್‌ ನಾಗರಾಜು ಸೇರಿದಂತೆ ಅನೇಕ ಹೆಸರುಗಳು ಕೇಳಿ ಬರುತ್ತಿದೆ.

ಹಾಡುಗಾರರ ಕ್ಷೇತ್ರ: ಇನ್ನು ಗಾಯಕಿ ಐಶ್ವರ್ಯ ರಂಗರಾಜನ್‌, ಹಿರಿಯ ಗಾಯಕಿ ಸುನಿತಾ, ಮಜಾ ಟಾಕೀಸ್‌ ರೆಮೋ ಅವರ ಹೆಸರು ಕೂಡ ಈ ಪಟ್ಟಿಯಲ್ಲಿದೆ.

ನಟ ತ್ರಿವಿಕ್ರಮ್ 2017ರಲ್ಲಿ ಆರಂಭವಾಗಿ 2019ರಲ್ಲಿ ಮುಕ್ತಾಯವಾದ ಜನಪ್ರಿಯ ಧಾರಾವಾಹಿ 'ಪದ್ಮಾವತಿ' ಯ ನಾಯಕ ನಟನಾಗಿದ್ದರು. ಇತ್ತೀಚೆಗೆ ಅವರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಹೀಗಾಗಿ ಅವರನ್ನು ಈ ಬಾರಿ ಬಿಬಿಕೆ 11 ಗೆ ಕರೆದಿದ್ದಾರೆ ಎನ್ನಲಾಗಿದೆ.

ನನ್ನ ಯೋಗ್ಯತೆ ಎಷ್ಟಿದೆ ಅಷ್ಟೇ ದುಡಿಯುವುದು; ಬಿಗ್ ಬಾಸ್ ಸಂಭಾವನೆ ವಿಚಾರದಲ್ಲಿ ಸುದೀಪ್ ನೇರನುಡಿ!

ನಟಿ ಪ್ರೇಮಾ : ಇದರ ಜೊತೆಗೆ ಹಿರಿಯ ನಟಿ ಪ್ರೇಮಾ ಅವರಿಗೆ ಬಿಗ್‌ ಬಾಸ್ ಆಫರ್ ಹೋಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಂಟೆಂಟ್‌ ಕ್ರೀಯೇಟರ್  ಗೌರವ್ ಶೆಟ್ಟಿ, ಯೂಟ್ಯೂಬ್ ಚಾನೆಲ್ ಲೇಖಿ ರೈಡರ್ ಮೂಲಕ ಗಮನ ಸೆಳೆದ ಲೇಖಿ ಗೋಸ್ವಾಮಿ, ಇನ್ನು ಮಜಾಭಾರತ ಮೂಲಕ ಬೆಳಕಿಗೆ ಬಂದ  ಅವಿನಾಶ್ ಅಲಿಯಾಸ್ ನಕಲಿ ದರ್ಶನ್ ಅವರನ್ನು ಬಿಗ್​ಬಾಸ್​ಗೆ ಕರೆತರಲಾಗುತ್ತದೆ ಎನ್ನಲಾಗಿದೆ. ನಕಲಿ ದರ್ಶನ್ ಅವಿನಾಶ್ ನೋಡಲು ದರ್ಶನ್ ನಂತೆಯೇ ಇದ್ದು ಅವರ ಹಾವ, ಭಾವ ಎಲ್ಲವೂ ದರ್ಶನ್ ರನ್ನೇ ಹೋಲುತ್ತದೆ.

ಇಷ್ಟು ಮಾತ್ರವಲ್ಲ ಬೇರೆ ಭಾಷೆಯಲ್ಲಿ ಹೋಗಿ ಸಾಧನೆ ಮಾಡಿರುವ ಕನ್ನಡಿಗರು. ಅಥವಾ ಕನ್ನಡದ ಬಗ್ಗೆ ಅಭಿಮಾನ ಇರುವ ಸ್ಪರ್ಧಿಗಳು, ಅಥವಾ ಒಂದಲ್ಲ ಒಂದು ರೀತಿಯಲ್ಲಿ ಕನ್ನಡದ ನಂಟಿರುವ ಅಭ್ಯರ್ಥಿಗಳು ಯಾರು ಇರಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಜೊತೆಗೆ ಕ್ರೀಡಾ ಕ್ಷೇತ್ರದಿಂದ ಯಾರನ್ನು ಬಿಗ್‌ಬಾಸ್ ಕರೆತರಲಿದ್ದಾರೆ ಎಂಬುದನ್ನು ನೋಡಬೇಕಿದೆ.

ಟ್ರಾನ್ಸ್ಜೆಂಡರ್ : ಇದರ ಜೊತೆಗೆ ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮ ಮತ್ತು ಜೋಗಿತ್ತಿ ಮಂಜಮ್ಮ ಹೆಸರು ಕೂಡ ಜಾಲ್ತಿಯಲ್ಲಿದೆ. ಏಕೆಂದರೆ ಕಳೆದ ಸೀಸನ್‌ ನಲ್ಲಿ ನೀತು ವನಜಾಕ್ಷಿ ಸ್ಪರ್ಧಿಯಾಗಿದ್ದರು. ಇದರ ಜೊತೆಗೆ ಮೊದಲ ಟ್ರಾನ್ಸ್ ಜೆಂಟರ್ ವೈದ್ಯೆ ಡಾ. ತ್ರಿನೇತ್ರ ಹಲ್ದಾರ್ ಗುಮ್ಮರಾಜು ಅವರ ಹೆಸರು ಕೇಳಿ ಬರುತ್ತಿದೆ ಇವರು ಕೂಡ ಟ್ರಾನ್ಸ್ಜೆಂಡರ್ ಕಾರ್ಯಕತ್ತೆಯಾಗಿದ್ದು, ಬೆಂಗಳೂರಿನಲ್ಲಿ ಹುಟ್ಟಿ ಮಂಗಳೂರಿನಲ್ಲಿ ಓದಿ ಪ್ರಸ್ತುತ ದೆಹಲಿಯಲ್ಲಿ ವೈದ್ಯೆಯಾಗಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲೂ ಇವರು ಸ್ಥಾನ ಪಡೆದಿದ್ದಾರೆ.

ಇಷ್ಟು ಮಾತ್ರವಲ್ಲದೆ ಗಿಚ್ಚಿಗಿಲಿಗಿಲಿ ಖ್ಯಾತಿಯ ರಾಘವೇಂದ್ರ ಅಲಿಯಾಸ್ ರಾಗಿಣಿ , ಕಿರುತೆರೆ ನಟಿಯರಾದ ನಾಯಕಿ ಅಮೂಲ್ಯ ಭಾರಧ್ವಾಜ್‌ ,  ಗೌತಮಿ ಜಾಧವ್, ಮತ್ತು ಶರತ್ ಕುಮಾರ್  ಅವರಂತಹ ಪ್ರಭಾವಿಗಳ ಹೆಸರು ಕೂಡ ಚಾಲ್ತಿಯಲ್ಲಿದೆ. ಜೊತೆಗೆ ಕಲರ್ಸ್ ಕನ್ನಡದಲ್ಲಿ ಮುಗಿಯಲಿರುವ ಸೀರಿಯಲ್‌ ನಿಂದ ಯಾರು ಬರುತ್ತಾರೆ ಎಂಬುದು ಕಾದು ನೋಡಬೇಕಿದೆ.

click me!