ಸ್ನಾನದ ವೀಡಿಯೋ ಪೋಸ್ಟ್ ಮಾಡಿದ ಸೀತಾರಾಮ ಸೀತಾಗೆ ಈಗ ಮನೆಯಲ್ಲಿರೋ ಇರುವೆ ಚಿಂತೆ!

Published : Sep 24, 2024, 05:45 PM ISTUpdated : Sep 25, 2024, 10:32 AM IST
 ಸ್ನಾನದ ವೀಡಿಯೋ ಪೋಸ್ಟ್ ಮಾಡಿದ ಸೀತಾರಾಮ ಸೀತಾಗೆ ಈಗ ಮನೆಯಲ್ಲಿರೋ ಇರುವೆ ಚಿಂತೆ!

ಸಾರಾಂಶ

ಸೀತಾರಾಮ ಸೀರಿಯಲ್​ ಸಿಹಿ ಮತ್ತು ಸೀತಾಳ ಬಾಂಡಿಂಗ್​ಗೆ ಜನರು ಸಿಕ್ಕಾಪಟ್ಟೆ ಮೆಚ್ಚುಕೊಂಡಿದ್ದಾರೆ. ಇದೀಗ ಸೀತಾ ಪಾತ್ರಧಾರಿ ವೈಷ್ಣವಿ ಗೌಡ, ಸಿಹಿ ಪಾತ್ರಧಾರಿ ರೀತು ಸಿಂಗ್ ಮತ್ತು ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ , ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಿಮಗೆ ಅದರ ಉತ್ತರ ಏನಾದ್ರೂ ಗೊತ್ತಾ?   

ಸೀತಾರಾಮ ಸೀರಿಯಲ್​ನಲ್ಲಿ ಸೀತೆಗೆ ಎಲ್ಲಿ ಮಗಳು ಸಿಹಿ ಕೈತಪ್ಪಿ ಹೋಗ್ತಾಳೋ ಎನ್ನುವ ಭಯ ಕಾಡುತ್ತಿದ್ದರೆ, ಅದೇ ಇನ್ನೊಂದೆಡೆ, ಪ್ರಿಯಾಗೆ ಕ್ಯಾನ್ಸರ್​ ಇರುವ ವಿಷಯ ತಿಳಿದು ತತ್ತರಿಸಿ ಹೋಗಿದ್ದಾಳೆ. ಇಬ್ಬರೂ ಸೀರಿಯಲ್​ನಲ್ಲಿ ಆತಂಕದಲ್ಲಿದ್ದಾರೆ. ಆದರೆ ಸೀರಿಯಲ್​ ಹೊರಗೆ ಇಬ್ಬರೂ ಸಕತ್​ ಎಂಜಾಯ್​ ಮಾಡುತ್ತಿದ್ದಾರೆ. ಅಷ್ಟಕ್ಕೂ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಹಲವಾರು ವಿಡಿಯೋ ಶೇರ್​ ಮಾಡುತ್ತಾರೆ.  ಟೈಂ ಸಿಕ್ಕಾಗಲೆಲ್ಲಾ  ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ಎಂಜಾಯ್​ ಮಾಡುತ್ತಾರೆ. ಬಿಜಿ ಷೆಡ್ಯೂಲ್​ ನಡುವೆ ಒಂದಿಷ್ಟು ರಿಲ್ಯಾಕ್ಸ್​  ಮೂಡಿಗೆ ಬರುತ್ತದೆ ಟೀಂ. ಅಷ್ಟಕ್ಕೂ,  ಸೀತಾ ಮತ್ತು ಸಿಹಿಯ ಜೋಡಿ ಮಾತ್ರ ಥೇಟ್​ ಅಮ್ಮ-ಮಗಳಂತೆಯೇ ಇದೆ. ಸೀರಿಯಲ್​ನಲ್ಲಿ ಇವರಿಬ್ಬರೂ ಅಮ್ಮ-ಮಗಳು ಎನ್ನುವುದಕ್ಕಿಂತ ಹೆಚ್ಚಾಗಿ ನಿಜ ಜೀವನದಲ್ಲಿಯೂ ಇವರು ಅಮ್ಮ-ಮಗಳು ಇದ್ದಿರಬಹುದು ಎಂದು ಹಲವರಿಗೆ ಎನ್ನಿಸುವುದು ಉಂಟು. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಮತ್ತು ಸಿಹಿ ಪಾತ್ರಧಾರಿ ರೀತು ಸಿಂಗ್​ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ, ಇವಳು ನಿಮ್ಮ ಮಗಳು ಅಲ್ಲ ಎಂದು ಮನಸ್ಸು ಒಪ್ಪಿಕೊಳ್ಳುವುದೇ ಇಲ್ಲ ಎನ್ನುತ್ತಲೇ ಇರುತ್ತಾರೆ.  

ಇತ್ತೀಚಿಗೆ ಸೀತಾ ಅಂದರೆ ವೈಷ್ಣವಿ ಗೌಡ ಅವರು, ಸೋಪ್​ ಒಂದರ ಜಾಹೀರಾತಿನಲ್ಲಿ ಸೊಂಟದ ಪಟ್ಟಿ ತೋರಿಸಿ ಸೋಷಿಯಲ್​  ಮೀಡಿಯಾದಲ್ಲಿ ಹಚ್​ಲಚ್​ ಸೃಷ್ಟಿಸಿದ್ದರು. ಇದೀಗ ಅವರು, ಪ್ರಿಯಾ ಮತ್ತು ಸಿಹಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ಅದೇನೆಂದರೆ, ನಿಮ್ಮ ಮನೆಯಲ್ಲಿ ಸದಾ ಇರುವೆ ಇದ್ದರೆ ಅದಕ್ಕೇನು ಹೇಳ್ತಾರೆ ಎಂದು ವೈಷ್ಣವಿ ಕೇಳಿದ್ದಾರೆ. ಪ್ರಿಯಾ ಮತ್ತು ಸಿಹಿಗೆ ಈ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಗೊತ್ತಾಗಿಲ್ಲ ಎಂದಿದ್ದಾರೆ. ಅದಕ್ಕೆ ಉತ್ತರವಾಗಿ ವೈಷ್ಣವಿ ಅವರು Permanent ಎಂದಿದ್ದಾರೆ. ಪರ್ಮನೆಂಟ್​ ಶಬ್ದಲ್ಲಿ ಆ್ಯಂಟ್​ ಅಂದ್ರೆ ಇರುವೆ ಇದ್ಯಲ್ಲಾ,  ಅದೇ ಉತ್ತರ ಎಂದಿದ್ದಾರೆ. ಸಿಹಿ ಕೂಡ ಸೀತಮ್ಮನನ್ನೇ ಅನುಸಿರುತ್ತಿದ್ದಾಳೆ. ಇತ್ತೀಚಿಗೆ ಸಿಹಿ ಅಂದ್ರೆ ರೀತು ಸಿಂಗ್​, ವೈಷ್ಣವಿ ಅವರಿಗೆ ಸೊಳ್ಳೆಯ ಪ್ರಶ್ನೆ ಕೇಳಿದ್ದಳು.  ಅದೇನೆಂದರೆ  ಮೂರು ಸೊಳ್ಳೆ ಇರುತ್ತೆ. ಒಂದು ಮಲಗಿರುತ್ತೆ. ಇನ್ನೊಂದು ಮಲಗಿರಲ್ಲ ಯಾಕೆ ಎಂದು. ಇದಕ್ಕೆ ನನಗೆ ಉತ್ತರ ಗೊತ್ತಿಲ್ಲಮ್ಮಾ, ನೀನೇ ಹೇಳು ಎಂದಿದ್ದಳು. ಸೀತಮ್ಮಾ. ಆಗ ಸಿಹಿ, ಅದು ಯಾಕೆ ಅಂದ್ರೆ ಇನ್ನೆರಡು ಸೊಳ್ಳೆಗಳು ಆಡವಾಡುತ್ತಾ ಇರುತ್ತವೆ ಎಂದಿದ್ದಳು. ಹೀಗೆ ಇಡೀ ಟೀಮ್​ ಸಿಲ್ಲಿ ಸಿಲ್ಲಿ ಪ್ರಶ್ನೆ ಕೇಳುತ್ತಾ ರೀಲ್ಸ್​ ಮಾಡುತ್ತಿರುತ್ತದೆ. 

ಬೆಡ್​ರೂಮ್​ನಲ್ಲಿ 3 ಸೊಳ್ಳೆಯಲ್ಲಿ ಒಂದು ಮಲಗಿರುತ್ತೆ, ಎರಡು ಎಚ್ಚರವಿರುತ್ತೆ, ಯಾಕೆ? ಸಿಹಿ ಪ್ರಶ್ನೆಗೆ ಉತ್ತರ ಗೊತ್ತಾ?

ಅಷ್ಟಕ್ಕೂ ಸೀತಾ ಮತ್ತು ಸಿಹಿಯ ಬಾಂಡಿಂಗ್​ ತುಂಬಾ ಚೆನ್ನಾಗಿದೆ. ಇವರಿಬ್ಬರ ಬಾಂಡಿಂಗ್​ ನೋಡಿದವರು,  ನಿಜಕ್ಕೂ ನಿಮ್ಮದು ಹೋದ ಜನ್ಮದಲ್ಲಿ ಅಮ್ಮ-ಮಗಳ ಬಾಂಧವ್ಯವೇ ಆಗಿರಬಹುದು. ಇಲ್ಲದಿದ್ದರೆ ನಿಮ್ಮಿಬ್ಬರ ಕೆಮೆಸ್ಟ್ರಿ ಹೀಗೆ ಆಗುವುದು ಕಷ್ಟವಾಗಿತ್ತು. ಸಿಹಿ ನಿಮ್ಮ ಜೊತೆ ಇರುವಾಗಲೆಲ್ಲಾ ಅವಳು ನಿಮ್ಮದೇ  ಮಗಳು ಎನಿಸುತ್ತದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಬೇಗ ಮದ್ವೆಯಾಗಿ ಮೇಡಂ, ನಿಮಗೂ ಹೀಗೆಯೇ ಸಿಹಿ ಹುಟ್ಟುತ್ತಾಳೆ ಎನ್ನುತ್ತಿದ್ದಾರೆ ಮತ್ತೆ ಕೆಲವರು. ನಿಮಗೆ ಮಗಳು ಹುಟ್ಟಿದ್ರೆ ಸಿಹಿ ಅಂತಾನೇ ಹೆಸರು ಇಡಿ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಹಲವರು ಇವರು ಸೀರಿಯಲ್​ ಅಮ್ಮ-ಮಗಳು ಎನ್ನುವುದನ್ನೇ ಮರೆತು, ಸೀತಾರಾಮ ನಿರ್ದೇಶಕರಿಗೆ ಪ್ಲೀಸ್​ ಅಮ್ಮ-ಮಗಳನ್ನು ಬೇರೆ ಮಾಡಬೇಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಅಮ್ಮ-ಮಗಳು ಬೇರೆಯಾದರೆ ಸೀರಿಯಲ್​ ನೋಡೋದನ್ನೇ ನಿಲ್ಲಿಸ್ತೀವಿ ಅನ್ನುತ್ತಿದ್ದಾರೆ. ಸೀರಿಯಲ್​ ನೋಡಬೇಕೋ, ಬೇಡ್ವೋ ನೀವೇ ಡಿಸೈಡ್ ಮಾಡಿ ಎಂದು ಧಮ್ಕಿಯನ್ನೂ ಕಮೆಂಟ್​​ನಲ್ಲಿ ಹಾಕುತ್ತಿದ್ದಾರೆ! 

ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ನಿಮ್​ ಕಡೆ ಸೊಳ್ಳೆಗೆ ಏನಂತ ಕರೀತಾರೆ? ಅಂಜಲಿ ಪ್ರಶ್ನೆ ಕೇಳಿದ್ರೆ ಸಿಹಿ ಹೀಗೆಲ್ಲಾ ಹೇಳೋದಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!