
ಭಟ್ ಎನ್ ಭಟ್ ಯುಟ್ಯೂಬ್ ಚಾನೆಲ್ (Bhat N Bhat Youtube Channel) ಖ್ಯಾತಿಯ ಸುದರ್ಶನ್ ಭಟ್ ಎಂಗೇಜ್ ಆಗಿದ್ದಾರೆ ಎನ್ನುವ ಸುದ್ದಿ ನಿಮಗೆಲ್ಲ ಈಗಾಗ್ಲೇ ಗೊತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸುದರ್ಶನ್ ಭಟ್ (Sudarshan Bhatt) ಮತ್ತು ಕೃತಿ (Krithi) ನಿಶ್ಚಿತಾರ್ಥದ ಫೊಟೋಗಳು ವೈರಲ್ ಆಗಿದ್ವು. ಈಗ ಸುದರ್ಶನ್ ಭಟ್ ಹಾಗೂ ಕೃತಿ, ಫ್ರೀ ವೆಡ್ಡಿಂಗ್ ಫೋಟೋ ಶೂಟ್ (Free Wedding Photo Shoot) ಮಾಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸುಂದರ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಸುದರ್ಶನ್ ಹಾಗೂ ಕೃತಿ, ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಭಿನ್ನವಾಗಿದ್ದು, ಅವರ ಕ್ರಿಯೇಟಿವಿಟಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ ಜನರು.
ನಿಮಗೆಲ್ಲ ತಿಳಿದಿರುವಂತೆ ನಮ್ ಭಟ್ರು ಅಡುಗೆ ಮಾಡೋದ್ರಲ್ಲಿ ನಂಬರ್ ಒನ್. ತೋಟಕ್ಕೆ ಹೋಗಿ ತರಕಾರಿ ತಂದು, ಒಲೆಗೆ ಬೆಂಕಿ ಹಚ್ಚಿ, ಒಳಕಲ್ಲಿನಲ್ಲಿ ರುಬ್ಬಿ, ಹಳೆ ಸಂಪ್ರದಾಯದಂತೆ ಅವರು ಮಾಡುವ ಅಡುಗೆ ಎಲ್ಲರಿಗೂ ಇಷ್ಟ. ಈಗ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಗೂ ಅಡುಗೆ ಘಮ ನೀಡಿದ್ದಾರೆ ಸುದರ್ಶನ್ ಹಾಗೂ ಕೃತಿ.
ಇದು ಪ್ರೀ- ವೆಡ್ಡಿಂಗ್ ಶೂಟ್ ಅಂತೆ! ಮದ್ವೆಯಾದ್ಮೇಲಿನ ಫೋಟೋ ನೋಡಲು ತುದಿಗಾಲಲ್ಲಿ ನಿಂತ ನೆಟ್ಟಿಗರು
Thirdeyevisionstudio ಇನ್ಸ್ಟಾಗ್ರಾಮ್ ನಲ್ಲಿ ಇವರಿಬ್ಬರ ಸುಂದರ ಫೋಟೋ ಶೂಟ್ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. ಮೊದಲು ಜೇಡರ ಬಲೆಯಿಂದ ಶುರುವಾಗುವ ವಿಡಿಯೋದಲ್ಲಿ ಸುದರ್ಶನ್ ಭಟ್ ಹಿಂದೆ, ಸಿಂಪಲ್ ಆಗಿರೋ ಕಾಟನ್ ಸೀರೆಯುಟ್ಟು ಬರುವ ಕೃತಿ ಎಲ್ಲರ ಗಮನ ಸೆಳೆದಿದ್ದಾರೆ. ಬಾಳೆ ಹೂವಿನ ರುಚಿ ನೋಡುವ ಕೃತಿಗೆ ತೆಂಗಿನಕಾಯಿ ನೀರು ಕುಡಿಸುವ ಸುದರ್ಶನ್, ಬಾಳೆ ಮೂತಿ ಚಟ್ನಿ ಮಾಡಿದ್ರೆ, ಕೃತಿ ಕುಚ್ಚಲಕ್ಕಿ ಗಂಜಿ ಮಾಡ್ತಾರೆ. ಕಟ್ಟೆ ಮೇಲೆ ಕುಳಿತು, ಸುಟ್ಟ ಹಲಸಿನ ಹಪ್ಪಳದ ಜೊತೆ ಊಟದ ಸವಿ ಸವಿಯುವ ಇವರ ವಿಡಿಯೋವನ್ನು ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.
ಇದು ಬೆಸ್ಟ್ ಫ್ರೀ ವೆಡ್ಡಿಂಗ್ ಶೂಟ್ ಅನ್ನೋದು ನೆಟ್ಟಿಗರ ಮಾತು. ರಪ್ಪ ತಂದುಕೊಡು ಎನ್ನಲು ಭಟ್ರಿಗೆ ಜನ ಸಿಕ್ಕಿದ್ದಾರೆ ಎಂದು ಸುದರ್ಶನ್ ಭಟ್ ವಿಡಿಯೋಕ್ಕೆ ಜನರು ಕಮೆಂಟ್ ಮಾಡಿದ್ದಾರೆ. ಹೊಲ, ಬಸ್ ನಿಲ್ದಾಣದಲ್ಲಿ ಕ್ಲಿಕ್ಕಿಸಲಾದ ಕೆಲ ಫೋಟೋಗಳೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ.
ಈಗಿನ ದಿನಗಳಲ್ಲಿ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಕಾಮನ್ ಆಗಿದೆ. ಆದ್ರೆ ಜನರು ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಹೆಸರಿನಲ್ಲಿ ಏನೇನೋ ಮಾಡ್ತಿದ್ದಾರೆ. ಸಾಹಸ ಮಾಡೋಕೆ ಹೋಗಿ ಸಾವನ್ನಪ್ಪಿದವರು ಕೆಲವರಿದ್ರೆ, ಮತ್ತೆ ಕೆಲವರ ಫೋಟೋಶೂಟ್ ನೋಡೋಕೆ ಸಾಧ್ಯವಿಲ್ಲ. ಕೆಲ ದಿನಗಳ ಹಿಂದೆ ಬಾಳೆ ಎಲೆ ಸುತ್ತಿಕೊಂಡು ಫೋಟೋಶೂಟ್ ಮಾಡಿದ್ದ ಜೋಡಿ ವಿಡಿಯೋ ವೈರಲ್ ಆಗಿತ್ತು. ಈ ಎಲ್ಲರ ಮಧ್ಯೆ ಸುದರ್ಶನ್ ಫೋಟೋ ಶೂಟ್ ತುಂಬಾ ಡೀಸೆಂಟ್ ಆಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ.
ಕಿಚ್ಚ ಸುದೀಪ್ ಆನ್ಸರ್ ಗೆ ರಿಪೋರ್ಟರ್ ಕೌಂಟರ್, ವೈರಲ್ ಆಯ್ತು ಬಾಳೆ ಎಲೆ
ಸುದರ್ಶನ್ ಭಟ್, ಕೃತಿ ಜೊತೆ ಆಗಸ್ಟ್ 23ರಂದು ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಬೆಳಂದೂರಿನ ಕೃತಿ, ಖಾಸಗಿ ಶಾಲೆ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದಾರೆ. ಲುಂಗಿಯುಟ್ಟು, ತಲೆಗೆ ಮುಂಡಾಸ ಕಟ್ಟಿ, ಅಪ್ಪಟ ಕನ್ನಡದಲ್ಲಿ ಮಾತನಾಡುವ ಸುದರ್ಶನ್ ಭಟ್, ತಮ್ಮ ಫ್ರೀ ವೆಡ್ಡಿಂಗ್ ಫೋಟೋಶೂಟ್ ನಲ್ಲೂ ತಮ್ಮ ಸ್ಟೈಲ್ ಬಿಟ್ಟಿಲ್ಲ. ಅವರ ಚಾನೆಲ್ ದೇಶ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. ಸುದರ್ಶನ್ ಹಾಗೂ ಕೃತಿ ಮದುವೆಗೆ ಫ್ಯಾನ್ಸ್ ಕಾಯ್ತಿದ್ದಾರೆ. ಮದುವೆ ಆದ್ಮೇಲೆ ಇಬ್ಬರು ಒಟ್ಟಿಗೆ ಅಡುಗೆ ಮಾಡುವ ಇನ್ನಷ್ಟು ವಿಡಿಯೋಗಳನ್ನು ನೋಡ್ಬಹುದು ಎನ್ನುವ ಆಸೆ ಅಭಿಮಾನಿಗಳದ್ದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.