ಯಾವುದೇ ಶ್ರಮವಿಲ್ಲದೆ ಕ್ಯಾಪ್ಟನ್ ಪಟ್ಟ ಪಡೆದ ಹಂಸ ಈಗ ಕಳಪೆ; ಕರ್ಮ ಸುಮ್ಮನೆ ಬಿಡಲ್ಲ ಕಣ್ಣಮ್ಮ ಎಂದ ನೆಟ್ಟಿಗರು

Published : Oct 12, 2024, 10:29 AM ISTUpdated : Oct 12, 2024, 10:33 AM IST
ಯಾವುದೇ ಶ್ರಮವಿಲ್ಲದೆ ಕ್ಯಾಪ್ಟನ್ ಪಟ್ಟ ಪಡೆದ ಹಂಸ ಈಗ ಕಳಪೆ; ಕರ್ಮ ಸುಮ್ಮನೆ ಬಿಡಲ್ಲ ಕಣ್ಣಮ್ಮ ಎಂದ ನೆಟ್ಟಿಗರು

ಸಾರಾಂಶ

ಮೊದಲ ವಾರ ಎಲಿಮಿನೇಷನ್‌ನಿಂದ ಸೇಫ್‌ ಆದರೂ ಕ್ಯಾಪ್ಟನ್ ಸ್ಥಾನಕ್ಕೆ ಸೂಕ್ತವಲ್ಲ ಎಂದು ಟ್ರೋಲ್  ಆಗುತ್ತಿರುವ ಹಂಸ....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್‌ 11ರ ಮೊದಲ ಕ್ಯಾಪ್ಟನ್ ಆಗಿದ್ದು ಕಿರುತೆರೆ ನಟಿ ಹಂಸ. ರಾಜಾ ರಾಣಿ ರಿಯಾಲಿಟಿ ಶೋ, ಪುಟ್ಟಕ್ಕನ ಮಕ್ಕಳು ಸೇರಿದಂತೆ ಹಲವು ಖ್ಯಾತ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದ ಹಂಸ ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟು ನೆಗೆಟಿವ್ ಕಾಮೆಂಟ್ ಮತ್ತು ನೆಗೆಟಿವ್ ಟ್ರೋಲ್‌ಗೆ ಗುರಿಯಾಗಿದ್ದಾರೆ. ನಗು ನಗುತ್ತಲೇ ಬಿಗ್ ಬಾಸ್ ಜರ್ನಿ ಆರಂಭಿಸಿದ ಹಂಸ ಈಗ ಪ್ರತಿ ದಿನವೂ ಕಣ್ಣೀರಿಡುತ್ತಿದ್ದಾರೆ. ಗ್ರ್ಯಾಂಡ್ ಓಪನಿಂಗ್ ದಿನ ನಟಿ ಹಂಸ ಮತ್ತು ಹಾಸ್ಯ ನಟ ತುಕಾಲಿ ಸಂತೋಷ್ ಪತ್ನಿ ಮಾನಸ ಒಟ್ಟಿಗೆ ಎಂಟ್ರಿ ಕೊಟ್ಟರು. ಅಲ್ಲೇ ಇವರಿಬ್ಬರ ನಡುವೆ ಬೆಂಕಿ ಹುಟ್ಟುಕೊಂಡಿತ್ತು. ಹಂಸಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾನಸಾ ಟಾಂಗ್ ಕೊಟ್ಟಾಗಲೇ ಜಡೆ ಜಗಳು ಶುರುವಾಗಿತ್ತು. 

ನರಕವಾಸಿ ಆಗಿರುವ ರಂಜಿತ್‌ ಶ್ರಮದಿಂದ ಹಂಸಾ ಮೊದಲ ವಾರದ ಕ್ಯಾಪ್ಟನ್ ಆಗಿದ್ದರು. ಮೊದಲ ವಾರ ಆಗಿದ್ದ ಕಾರಣ ಕೆಲವೊಂದು ರೂಲ್ಸ್ ಆಂಡ್ ರೆಗ್ಯೂಲೆಷನ್‌ಗಳಲ್ಲಿ ಗೊಂದಲವಿತ್ತು ಹೀಗಾಗಿ ನಿರ್ಧಾರ ತೆಗೆದುಕೊಳ್ಳುವಾಗ ಇನ್ನಿತರ ಸ್ಪರ್ಧಿಗಳ ಜೊತೆ ಹಂಸ ಚರ್ಚಿಸುತ್ತಿದ್ದರು. ಮೊದಲ ದಿನದಿಂದಲೇ ಕಣ್ಣೀರಿಡುತ್ತ ಕ್ಯಾಪ್ಟನ್ ಟಾಸ್ಕ್‌ ಆರಂಭಿಸಿದ ಹಂತ ಪ್ರತಿಯೊಂದು ನಿರ್ಧಾರದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದ್ದರು. ಒಂದೆರಡು ಸಲ ಗೊಂದಲವಾಗಿದ್ದಕ್ಕೆ ಬಿಗ್ ಬಾಸ್ ಸಹಾಯ ಮಾಡಿದ್ದರು ಆದರೆ ಅದು ಪದೇ ಪದೇ ಆಗುತ್ತಿದ್ದ ಕಾರಣ ನಿರ್ಧಾರವನ್ನು ಕ್ಯಾಪ್ಟನ್‌ಗೆ ಬಿಟ್ಟರು. ಯಾವಾಗ ಬಿಗ್ ಬಾಸ್ ನಿರ್ಧಾರ ತಿಳಿಸುವುದು ಬಿಟ್ಟರು ಆಗ ಮನೆಯ ಸದಸ್ಯರು ಹಂಸ ವಿರುದ್ಧ ತಿರುಗಿಬಿದ್ದರು. 

ಕಾಂತಾರ 1ರಲ್ಲಿ ಮೂಲಪುರುಷನೇ ಮೋಹನ್ ಲಾಲ್; ಕಾಡಬೆಟ್ಟು ಶಿವನ ತಾತನ ಪಾತ್ರ ಓಕೆ ಅಯ್ತಾ?

ಮಾನಸಿಕವಾಗಿ ಕಷ್ಟವಾಗುತ್ತಿದೆ ಎಂದು ಹಂಸ ಎಷ್ಟೇ ಬೇಡಿಕೊಂಡರೂ ಕ್ಯಾಪ್ಟನ್ ಟಾಸ್ಕ್‌ನ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು. ಅಲ್ಲದೆ ಪ್ರತಿ ಟಾಸ್ಕ್‌ನ ವೇಳೆ ಚೈತ್ರಾ ಕುಂದಾಪುರ ಮತ್ತು ಲಾಯರ್ ಜಗದೀಶ್ ಕ್ರಿಯೇಟ್ ಮಾಡುತ್ತಿದ್ದ ಮಾತಿನ ಜಗಳದಲ್ಲಿ ಹಂಸ ಸಿಲುಕಿಕೊಂಡು ಕಷ್ಟ ಪಡುತ್ತಿದ್ದರು. ಹಂಸ ಮುಂದೆ ಪ್ರತಿಯೊಬ್ಬರು ಚೆನ್ನಾಗಿ ಮಾತನಾಡಿಕೊಂಡು ಇದ್ದರೂ ಹಿಂದೆ ಕ್ಯಾಪ್ಟನ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಬೈಯುತ್ತಿದ್ದರು. ಹೊರಗಡೆ ಬಿಗ್ ಬಾಸ್‌ ನೋಡುತ್ತಿರುವ ವೀಕ್ಷಕರು ಈ ವಾರ ಕಳಪೆಯನ್ನು ಹಂಸ ಪಡೆಯಬೇಕು, ಮನೆಯಲ್ಲಿ ಒಂದು ಜೈಲು ಸೃಷ್ಟಿಯಾಗಿ ಅಲ್ಲಿಗೆ ಹೋಗಬೇಕು ಎಂದು ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.  ನರಕವಾಸಿಗಳಿಗೆ ಸಹಾಯ ಮಾಡುವುದಾಗಿ ಮಾತು ಕೊಟ್ಟಿದ್ದ ಕಾರಣ ಸ್ವರ್ಗ ನಿವಾಸಿಗಳ ಪರ ತೀರ್ಮಾನ ಕೊಡುತ್ತಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣಿಸುತ್ತಿದೆ. ಹೀಗಾಗಿ ಈ ವಾರದ ಚರ್ಚೆಯಲ್ಲಿ ಸುದೀಪ್ ಸರಿಯಾದ ತೀರ್ಮಾನ ತೆಗೆದುಕೊಂಡು ಕ್ಲಾಸ್ ತೆಗೆದುಕೊಳ್ಳಬೇಕು ಎಂದು ವೀಕ್ಷಕರು ಒತ್ತಡ ಹಾಕುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ