
ಬಿಗ್‌ಬಾಸ್ ಕನ್ನಡ 11ರ ಮೂರನೇ ವಾರದಲ್ಲಿ ಮನೆಯಲ್ಲಿ ಹಲವು ಬದಲಾವಣೆಗಳು ಆಗುತ್ತಿದೆ. ಬಿಗ್‌ಬಾಸ್ ಸ್ಪರ್ಧಿಗಳಿಂದ ಬೇಸರವಾಗಿದೆ ಎಂದು ಫೋನ್ ಮೂಲಕ ಮನೆಯವರಿಗೆ ತಿಳಿಸುತ್ತಿದ್ದಾರೆ. ಸೂಪರ್ ಸಂಡೇ ವಿಥ್ ಬಾದ್ಷಾ ಸುದೀಪ ಕಾರ್ಯಕ್ರಮದ ಬಳಿಕ ಬಿಗ್‌ಬಾಸ್ ಮನೆಯಲ್ಲಿ ಮಾತ್ರವಲ್ಲ ಬಿಗ್‌ಬಾಸ್ ನಲ್ಲೇ ಬದಲಾವಣೆಗಳು ಕಾಣುತ್ತಿದೆ.
ಆದರೆ ಇದೆಲ್ಲದರ ನಡುವೆ ಇಂದಿನ ಎಪಿಸೋಡ್ ನಲ್ಲಿ ಚೈತ್ರಾ ಕುಂದಾಪುರ ಮತ್ತು ಜಗದೀಶ್ ಅವರ ಜಗಳ ಭಯಂಕರವಾಗಿದೆ. ಜಗದೀಶ್ ಅವರು ಚೈತ್ರಾ ಕುಂದಾಪುರ ಅವರ ಕೋರ್ಟ್ ಪ್ರಕರಣಗಳ ಸಂಖ್ಯೆ ಎತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ ನಡೆದಿದೆ. ಕಲರ್ಸ್ ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ಆಕೆ ಏನು ಮಾತಾಡ್ತಿದ್ದಾಳೆ ಚೈತ್ರಾ, ಆಕೆಗೆ ಏನು ಫಾಲೋವರ್ಸ್ ನಂಗೂ ಫಾಲೋವರ್ಸ್ ಇದ್ದಾರೆ. 28 ಕೇಸ್ ಇದೆ ಆಕೆ ಮೇಲೆ ಎಂದು ಶಿಶಿರ್ ಬಳಿ ಹೇಳುತ್ತಿದ್ದಾರೆ.
ಸದ್ದಿಲ್ಲದೆ ಕದ್ದು ಮುಚ್ಚಿ ಪ್ರೀತಿಯಲ್ಲಿದ್ದಾರಾ ಭವ್ಯಾ-ತ್ರಿವಿಕ್ರಮ್ , ಬಿಗ್‌ಬಾಸ್ ಮನೆಯಲ್ಲಿ ಮೂಡಿದೆ ಅನುಮಾನ!
ಇದಕ್ಕೆ ಕೋಪಗೊಂಡ ಚೈತ್ರಾ ನನ್ನ ಎದುರು ನಿಲ್ಲೋ ತಾಕತ್ತು ಇಲ್ಲ. ಕೊಚ್ಚೆ ಮೇಲೆ ಕಲ್ಲು ಹಾಕಬಾರ್ದು ಅಂತ ಅಷ್ಟೇ ಸುಮ್ಮನಿದ್ದೆ, ತಾಕತ್ತಿದ್ದರೆ ನನ್ನ ಎದುರುಗಡೆ ನಿಂತುಕೊಂಡು ಮಾತನಾಡಿ. ನನ್ನ ಕೇಸ್ ಬಗ್ಗೆ ಮಾತನಾಡೋ ಯೋಗ್ಯತೆ ಯಾವನಿಗೂ ಇಲ್ಲ. 50 ಅಲ್ಲ ನೂರು ಕೇಸ್ ಹಾಕಿಸಿಕೊಳ್ಳುತ್ತೇನೆ. ಇವರಪ್ಪನಿಗೆ ಹೊಡೆದು ಕೋರ್ಟ್‌ನಲ್ಲಿ ಕೇಸ್ ಹಾಕಿಸಿಕೊಂಡಿಲ್ಲ. ಯಾವಾನಾದ್ರೂ ಅಪ್ಪಂಗೆ ಹುಟ್ಟಿದ್ರೆ ನನ್ನ ಕಣ್ಣೆದ್ರು ಬಂದು ಮಾತನಾಡಿ ನನ್ನ ಕೇಸ್ ಬಗ್ಗೆ ಎಂದು ಜಗದೀಶ್ ಗೆ ಅವಾಜ್ ಹಾಕಿರುವುದು ಕಾಣುತ್ತಿದೆ.
ಬಿಗ್‌ಬಾಸ್ ಮಿಡ್ ವೀಕ್ ಎಲಿಮಿನೇಶನ್ ಸೂಚನೆ ಕೊಟ್ರಾ ಕಿಚ್ಚ ಸುದೀಪ್!?
ನಿನ್ನೆಯ ಎಪಿಸೋಡ್ ನಲ್ಲಿ ಅನುಷಾ ಅವರು ನೇರ ನಾಮಿನೇಟ್ ಆಗಿದ್ದರು. ಅದಾದ ನಂತರ ಮನೆಯಲ್ಲಿ ಅನುಷಾ ಮತ್ತು ಐಶ್ವರ್ಯಾ ಮಧ್ಯೆ ನಡೆದ ಗಲಾಟೆಯೇ ಹೆಚ್ಚಾಗಿತ್ತು. ಇಂದಿನ ಎಪಿಸೋಡ್ ನಲ್ಲಿ ಧನ್‌ರಾಜ್ ನೇರ ನಾಮಿನೇಟ್ ಆಗಿದ್ದು ಅತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.