ಬೂದಿ ಮುಚ್ಚಿದ ಕೆಂಡ ಕಿಡಿಕಾರಿಯೇ ಬಿಟ್ಟಿತು! ಸತ್ಯ ಬಯಲಾಗೋಯ್ತು.... ಪ್ಲೀಸ್​ ಹೀಗೆ ಮಾಡ್ಬೇಡಿ ಅಂತಿರೋ ಫ್ಯಾನ್ಸ್​...

Published : Oct 15, 2024, 02:35 PM IST
ಬೂದಿ ಮುಚ್ಚಿದ ಕೆಂಡ ಕಿಡಿಕಾರಿಯೇ ಬಿಟ್ಟಿತು! ಸತ್ಯ ಬಯಲಾಗೋಯ್ತು.... ಪ್ಲೀಸ್​ ಹೀಗೆ ಮಾಡ್ಬೇಡಿ ಅಂತಿರೋ ಫ್ಯಾನ್ಸ್​...

ಸಾರಾಂಶ

ಮೇಘಶ್ಯಾಮ್​ಗೆ ಸಿಹಿನೇ ತನ್ನ ಮಗಳು ಅನ್ನೋ ಸತ್ಯ ಗೊತ್ತಾಗೋಗಿದೆ. ಸೀತಾ ರಾಮ್​ ಬಳಿ ಸತ್ಯ ಹೇಳುವ ಮೊದಲೇ ಅನಾಹುತ ಆಗತ್ತಾ? ಫ್ಯಾನ್ಸ್​ ಹೇಳ್ತಿರೋದೇನು?  

ಸತ್ಯ ಎನ್ನೋದು ಬೂದಿ ಮುಚ್ಚಿದ ಕೆಂಡದ ಹಾಗೆ.... ಎನ್ನುವ ಗಾದೆ ಮಾತಿದೆ. ಅದರಂತೆಯೇ ಸಿಹಿಯ ಒಡಲಿನ ರಹಸ್ಯ ಬೂದಿ ಮುಚ್ಚಿದ ಕೆಂಡದಂತಿತ್ತು. ಅದೀಗ ಕಿಡಿಕಾರಿದೆ. ಸತ್ಯ ಬಯಲಾಗಿದೆ. ಸೀತಾಳೇ ಸಿಹಿಯ ಬಾಡಿಗೆ ತಾಯಿ ಎನ್ನುವ ಜನ್ಮರಹಸ್ಯ ಡಾ.ಮೇಘಶ್ಯಾಮ್​  ಮತ್ತು ಶಾಲಿನಿಗೆ ಗೊತ್ತಾಗಿದೆ. ಅತ್ತ ಸೀತಾ ಈ ಸತ್ಯವನ್ನು ಇನ್ನಷ್ಟು ಮುಚ್ಚಿಟ್ಟು ಪ್ರಯೋಜನ ಇಲ್ಲ ಎಂದು ರಾಮ್​ಗೆ ಎಲ್ಲವನ್ನೂ ಹೇಳುವ ತವಕದಲ್ಲಿದ್ದಾಳೆ. ಆದರೆ ಅಷ್ಟರಲ್ಲಿಯೇ ಮೇಘಶ್ಯಾಮ್​ನಿಂದಲೇ ಸತ್ಯ ಗೊತ್ತಾಗತ್ತಾ? ಸೀತಾ ಸತ್ಯ ಮುಚ್ಚಿಟ್ಟಿದ್ದಕ್ಕೆ ರಾಮ್​ಗೆ ಕೋಪ ಬರತ್ತಾ? ಸೀತಾ-ರಾಮರ ಸಂಬಂಧ ಏನಾಗುತ್ತೆ? ಸಿಹಿಯ ಕಥೆ  ಏನು? ಸೀತಾ ಮತ್ತು ಸಿಹಿಯ ಆತ್ಮೀಯ ಸಂಬಂಧ ಗೊತ್ತಿರೋ ಮೇಘಶ್ಯಾಮ್​ ಮುಂದಿನ ನಡೆ ಏನು ಎನ್ನುವುದು ಸದ್ಯಕ್ಕಿರುವ ಕುತೂಹಲ. 

ಇದರ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ, ಅಭಿಮಾನಿಗಳು ದಮ್ಮಯ್ಯ ಅಂತೇವೆ. ಸಿಹಿಯಿಂದ ಸೀತಾಳನ್ನು ದೂರ ಮಾಡಬೇಡಿ ಎಂದು ಗೋಗರೆಯುತ್ತಿದ್ದಾರೆ. ಶಾಲಿನಿ ಒಳ್ಳೆಯ ಅಮ್ಮ ಆಗಲು ಸಾಧ್ಯವೇ ಇಲ್ಲ ಎನ್ನುವುದು ಅವರ ಮಾತು.  ಇದಕ್ಕಾಗಿಯೇ ಸೀತಾ ಮತ್ತು ಸಿಹಿಯ ಸಂಬಂಧದ ಬಗ್ಗೆ ಇದೀಗ ಸೀರಿಯಲ್​ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ. ಸೀತಾ ಮತ್ತು ಸಿಹಿಗೂ ಇರುವ ಸಂಬಂಧ ತಾಯಿ-ಮಗಳದ್ದೇ  ಆಗಿದ್ದರೂ ಅವರು ಕಾನೂನಿನ ದೃಷ್ಟಿಯಲ್ಲಿ ತಾಯಿ-ಮಗಳು ಅಲ್ಲ. ಸೀತಾ ತನ್ನ ಗರ್ಭದಲ್ಲಿ ಈ ಮಗುವನ್ನು ಇಟ್ಟು ಒಂಬತ್ತು ತಿಂಗಳು ಹೊತ್ತು ಹೆತ್ತಿದ್ದರೂ ಆಕೆ ಬಾಡಿಗೆ ತಾಯಿ ಮಾತ್ರ!  ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುವ ಹಾಗೆ ಸಿಹಿ ಮತ್ತು ಡಾ.ಮೇಘಶ್ಯಾಮ್​ ನಡುವೆ ಪ್ರೀತಿ ಹೆಚ್ಚಾಗುತ್ತಿದೆ. ಮೇಘಶ್ಯಾಮ್​ಗೂ ಸಿಹಿಯನ್ನು ಘಳಿಗೆ ಬಿಟ್ಟಿರಲಾಗದ ಸ್ಥಿತಿ. ಶಾಲಿನಿಗೆ ಸಿಹಿಯನ್ನು ಕಂಡರೆ ಆಗದಿದ್ದರೂ, ಅವಳು ತೋರುವ ಪ್ರೀತಿಗೆ ಒಮ್ಮೊಮ್ಮೆ ಸೋತು ಹೋಗಿದ್ದು ಇದೆ. ಅನಿವಾರ್ಯವಾಗಿ ಅವರಿಬ್ಬರಿಗೂ ಸೀತಾಳ ಮನೆಯಲ್ಲಿ ಉಳಿದುಕೊಳ್ಳುವ ಸ್ಥಿತಿ ಬಂದಿದೆ. ಅಪ್ಪ ಮತ್ತು ಮಗಳ ನಡುವೆ ಬಾಂಡಿಂಗ್​ ಹೆಚ್ಚಾಗುತ್ತಿದೆ. ಮೇಘಶ್ಯಾಮ್​  ಅಂತೂ ಸಿಹಿಯನ್ನು ತನ್ನ ಮಗಳಂತೆಯೇ ನೋಡುತ್ತಿದ್ದಾನೆ. 

ಸೈಫ್​ ಅಲಿ ಮಕ್ಕಳು, ರವೀಂದ್ರನಾಥ್​ ಟ್ಯಾಗೋರ್​ರ ಮರಿಮೊಮ್ಮಕ್ಕಳು! ಮತಾಂತರದ ಕುತೂಹಲದ ಇತಿಹಾಸ

 
ಅಷ್ಟಕ್ಕೂ ಸಿಹಿ ಸೀತಾಳ ಮಗಳು ಅಲ್ಲ ಎನ್ನುವುದು ಇದಾಗಲೇ ತಿಳಿದಿದ್ದರೂ, ಆಕೆ ಬಾಡಿಗೆ ತಾಯಿ, ಜನ್ಮ ಕೊಟ್ಟ ತಾಯಿ. ಆದರೆ ಕಾನೂನಿನ ಪ್ರಕಾರ ತಾಯಿಯಲ್ಲ. ಅದೇ ಇನ್ನೊಂದೆಡೆ,  ಡಾ.ಮೇಘಶ್ಯಾಮಗೆ ತಮ್ಮ ಮಗಳು ಬದುಕಿರುವ ಸತ್ಯ ತಿಳಿದಿದೆ. ಸಿಹಿಯ ಮೇಲೆ ಆತನಿಗೆ ಇನ್ನಿಲ್ಲದ ಪ್ರೀತಿ. ಆದರೆ ಅವಳೇ ತನ್ನ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸೀತಾಳಿಗೆ ವಿಷಯ ಗೊತ್ತಾಗಿ ಕಂಗಾಲಾಗಿ ಹೋಗಿದ್ದಾಳೆ.  ಇದರ ನಡುವೆಯೇ ಶಾಲಿನಿ ನಾವು ಬಾಡಿಗೆ ತಾಯಿಯ ಮೋಸಕ್ಕೆ ಒಳಗಾಗಿ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಭಾರ್ಗವಿ   ಮುಂದೆ ಹೇಳಿದ್ದಾಳೆ. ಅವಳು ಸೀತಾಳ ಮುಖದಲ್ಲಿ ಆಗುತ್ತಿದ್ದ ಬದಲಾವಣೆ ಗಮನಿಸಿ, ಸಿಹಿಯೇ ಅವರ ಮಗು ಎನ್ನುವ ಅನುಮಾನ ಶುರುವಾಗಿದೆ.  

ಅದೇ ಇನ್ನೊಂದೆಡೆ,  ಶಾಲಿನಿಗೆ ಈ ಮಗು ಇಷ್ಟವಿಲ್ಲ ಎನ್ನುವುದು ಮೇಘಶ್ಯಾಮ್​ಗೆ ಗೊತ್ತು. ಬಾಡಿಗೆ ತಾಯಿ ಸುಳ್ಳು ಹೇಳಿದ್ದಲ್ಲ, ಬದಲಿಗೆ ಶಾಲಿನಿನೇ ಮಗು ಸತ್ತಿರುವುದಾಗಿ ಸುಳ್ಳು ಹೇಳಿದ್ದಾಳೆ ಎನ್ನುವ ಸತ್ಯ ಅವನಿಗೆ ತಿಳಿದಿದೆ. ಅಷ್ಟೇ  ಅಲ್ಲದೇ, ಸಿಹಿಯ ಮೇಲೆ ಸೀತಾ ಮತ್ತು ರಾಮ್​ ಅದೆಷ್ಟರಮಟ್ಟಿಗೆ ಪ್ರೀತಿಯ ಧಾರೆ ಹರಿಸುತ್ತಿದ್ದಾರೆ ಎನ್ನುವ ವಿಷಯವೂ ಅವನಿಗೆ ಗೊತ್ತು. ಹಾಗಿದ್ದರೆ ಮುಂದೇನು? ಸಿಹಿ ದೂರವಾಗ್ತಾಳಾ? ಶಾಲಿನಿ ಮಗುವನ್ನು ಒಪ್ಪಿಕೊಳ್ತಾಳಾ? ಸೀತಾಳ ಮುಂದಿನ ನಡೆ ಏನು? 

ರಶ್ಮಿಕಾ ಮಂದಣ್ಣ ಈಗ ಸೈಬರ್ ಕ್ರೈಂ ರಾಷ್ಟ್ರೀಯ ರಾಯಭಾರಿ! ಲೈವ್​ನಲ್ಲಿ ಬಂದ ನಟಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!