ಅಮ್ಮ ಓಡಾಡ್ಕೊಂಡು ಆರೋಗ್ಯವಾಗಿರ ಬೇಕು ಅಂತ ದಿನ ದೇವರಲ್ಲಿ ಬೇಡಿಕೊಳ್ಳುತ್ತೀನಿ; ಕಣ್ಣೀರಿಟ್ಟ ಬಿಗ್ ಬಾಸ್ ತನಿಷಾ!

By Vaishnavi Chandrashekar  |  First Published Oct 15, 2024, 4:09 PM IST

ಸುವರ್ಣ ಸೂಪರ್ ಸ್ಟಾರ್ ವೇದಿಕೆಯಲ್ಲಿ ತಾಯಿಗೆ ಚಿನ್ನದ ಉಂಗುರ ಗಿಫ್ಟ್ ಕೊಟ್ಟ ತನಿಷಾ. ಅಮ್ಮ ಆರೋಗ್ಯ ಅಷ್ಟೇ ನನಗೆ ಮುಖ್ಯ ಎಂದ ನಟಿ.....


ಕನ್ನಡ ಚಿತ್ರರಂಗದಲ್ಲಿ ಹಿಸ್ಟರ್ ಕ್ರಿಯೇಟ್ ಮಾಡಿದ ದಂಡುಪಾಳ್ಯ ಚಿತ್ರದಲ್ಲಿ ಪೂಜಾ ಗಾಂಧಿ ಜೊತೆ ಕಿಸ್ಸಿಂಗ್ ಸೀನ್ ಮಾಡಿ ವೈರಲ್ ಆದ ನಟಿ ತನಿಷಾ ಕುಪ್ಪಂಡ. ಬಿಗ್ ಬಾಸ್ ಸೀಸನ್ 10ರಲ್ಲಿ ಫಿನಾಲೆ ವಾರಕ್ಕೆ ಕಾಲಿಟ್ಟ ತನಿಷಾ ಕುಪ್ಪಂಡ ಕರ್ನಾಟಕದ ಜನತೆಯ ಪ್ರೀತಿ ಗಳಿಸಿದ್ದರು. ರಿಯಾಲಿಟಿ ಶೋಯಿಂದ ಹೊರ ಬರುತ್ತಿದ್ದಂತೆ ತಮ್ಮದೆ ಜ್ಯುವೆಲರಿ ಶಾಪ್ ಓಪನ್ ಮಾಡಿದ್ದರು, ಇದರ ಜೊತೆಗೆ ಅಪ್ಪು ಕಿಚನ್ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಇತ್ತೀಚಿಗೆ ಸುವರ್ಣ ವಾಹಿನಿಯಲ್ಲಿ ನಡೆದ ಸುವರ್ಣ ಸೂಪರ್ ಸ್ಟಾರ್ ದಸರ ದರ್ಬಾರ್ ಕಾರ್ಯಕ್ರಮದಲ್ಲಿ ತನಿಷಾ ತಮ್ಮ ತಾಯಿ ಜೊತೆ ಭಾಗವಹಿಸಿದ್ದರು. ಈ ವೇಳೆ ಮಂಡಿಯೂರಿ ತಾಯಿಗೆ ಚಿನ್ನ ಉಂಗುರ ಧರಿಸಿದ್ದಾರೆ

ಅಮ್ಮ ತುಂಬಾ ಮುಖ್ಯ:

Tap to resize

Latest Videos

undefined

'ತಾಯಿ ಬಗ್ಗೆ ಮಾತನಾಡುವಾಗ ನಾನು ತುಂಬಾ ಎಮೋಷನ್ ಆಗಿಬಿಡುತ್ತೀನಿ. ದಿನನಿತ್ಯ ನಮ್ಮ ಕೆಲಸದ ನಡುವೆ ನನ್ನ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತ ಪಡಿಸಿಕೊಳ್ಳುವುದಿಲ್ಲ. ಪ್ರಪಂಚದಲ್ಲಿ ಯಾರೇ ಇದ್ದರೂ ಹೇಗೇ ಇದ್ದರೂ ಅಮ್ಮ ನಾನು ನಿನ್ನನ್ನು ಸದಾ ಪ್ರೀತಿಸುತ್ತೇನೆ. ನಾನು ಏನೇ ಕೆಲಸ ಮಾಡಿದ್ದರೂ...ಅದರಿಂದ ಖುಷಿಯಾಗಿ ಇರಲಿ ದುಖಃ ಆಗಿರಲಿ ನನಗೆ ಮೊದಲು ನೆನಪಾಗುವುದು ಅಮ್ಮನೇ. ಬೆಳಗ್ಗೆ ಎದ್ದ ತಕ್ಷಣ ನಾನು ಪ್ರಾರ್ಥನೆ ಮಾಡುತ್ತೀನಿ ...ಅಮ್ಮಾ ಯಾವಾಗಲೂ ಆರೋಗ್ಯವಾಗಿ ನಡೆಯುತ್ತಿರಲಿಲ್ಲ ಎಂದು. ಕಾರ್ಯಕ್ರಮಕ್ಕೆ ರೆಡಿ ಮಾಡಿಸಿಕೊಂಡು ಬರುವ ಪ್ಲ್ಯಾನ್‌ನಲ್ಲಿ ಇದ್ದಾಗ ಆಗಲ್ಲ ಅಂತ ಮಲ್ಕೊಂಡಿದ್ದರು ಆದರೆ ಈ ಸ್ಕೂಲ್ ಮಕ್ಕಳನ್ನು ಬೈದು ರೆಡಿ ಮಾಡಿಸುವ ರೀತಿಯಲ್ಲಿ ಅಮ್ಮನಿಗೆ ನಾನು ರೆಡಿ ಮಾಡಿದ್ದೀನಿ. ನನ್ನನ್ನು ಸಣ್ಣ ವಯಸ್ಸಿನಿಂದ ಹೇಗೆ ನೋಡಿಕೊಳ್ಳುತ್ತಿದ್ದರು ಅಮ್ಮ...ಅದೇ ರೀತಿ ಈಗ ನಾನು ಅವರನ್ನು ನೋಡಿಕೊಳ್ಳುತ್ತಿದ್ದೀನಿ. ದಿನ ಬೆಳಗ್ಗೆ ಎದ್ದೇಳುವಾಗ ರಾತ್ರಿ ಮಲಗುವಾಗ ನಾನು ದೇವರಲ್ಲಿ ಬೇಡಿಕೊಳ್ಳುವುದು ಒಂದೇ ಅಮ್ಮ ಆರೋಗ್ಯವಾಗಿ ಇರಬೇಕು ಎದ್ದು ಚೆನ್ನಾಗಿ ಓಡಾಡಬೇಕು' ಎಂದು ತನಿಷಾ ಮಾತನಾಡಿದ್ದಾರೆ.

ಮನೆ ತುಂಬಿಸಿಕೊಳ್ಳುವ ಶಾಸ್ತ್ರ ದಿನವೇ ರಾತ್ರಿ 2 ಗಂಟೆಗೆ ಪನ್ನಗಾ ಮನೆಯಲ್ಲಿ ಪಾರ್ಟಿಗೆ ಕರೆದರು ಚಿರು: ಮೇಘನಾ ರಾಜ್

ಚಿನ್ನದ ಉಂಗುರ:

ನನ್ನ ತಾಯಿಗೆ ಏನೇ ಗಿಫ್ಟ್ ಕೊಡುವ ಪ್ಲ್ಯಾನ್ ಮಾಡಿದ್ದರೂ ಅವರನ್ನು ಜೊತೆಗೆ ಕರೆದುಕೊಂಡು ಹೋಗಬೇಕು ಏಕೆಂದರೆ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ....ಅಮ್ಮ ಏನೇ ಕೇಳಿದ್ದರೂ ಕೊಡಿಸಬೇಕು ಅನ್ನೋದು ನನ್ನ ಆಸೆ...ಹೀಗಾಗಿ ಚೆನ್ನದಂತ ಅಮ್ಮನಿಗೆ ಚಿನ್ನದ ಉಂಗುರ ಕೊಡಿಸುತ್ತಿರುವೆ ಎಂದಿದ್ದಾರೆ ತನಿಷಾ.

ಹಸು ಮೇಯಿಸಿ, ಎಲೆ ಕಟ್ಟಿ ನನ್ನನ್ನು ಗಾಯಕಿ ಮಾಡಿದ್ದು ಅಮ್ಮ, ಗಂಡ ನನ್ನ ಶಕ್ತಿ; ವೇದಿಕೆ ಮೇಲೆ ಕಣ್ಣೀರಿಟ್ಟ ಡಾ. ಅನಂತಲಕ್ಷ್ಮಿ

click me!