ಕೇವಲ 1 ತಿಂಗಳಿಗೆ 2 ಲಕ್ಷ ರೂ. ಶಾಪಿಂಗ್ ಮಾಡಿದ ಬಿಗ್ ಬಾಸ್ ಐಶ್ವರ್ಯ; ಅಪ್ಪನ ದುಡ್ಡು ಕೊಳಿತಿದ್ಯಾ ಎಂದ ನೆಟ್ಟಿಗರು

By Vaishnavi Chandrashekar  |  First Published Oct 12, 2024, 12:46 PM IST

 ದೊಡ್ಡ ಮನೆಗೆ ಭರ್ಜರಿ ತಯಾರಿ ಮಾಡಿಕೊಂಡ ಐಶ್ವರ್ಯ. ಶಾಪಿಂಗ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ರೋಲ್ ಹೆಚ್ಚಾಯ್ತು....


ಸಪ್ನೋಂಕಿ ರಾಣಿ, ರತ್ನನ್ ಪ್ರಪಂಚ, ಮಮ್ಮಿ ಸೇವ್ ಮಿ, ಸಂಯುಕ್ತಾ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯ ಸಿಂಧೋಗಿ ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾಗಿಣಿ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಮೇಲೆ ಐಶ್ವರ್ಯ ಕಿರುತೆರೆ ಫಾಲೋವರ್ಸ್‌ ಪಡೆದುಕೊಂಡರು. ಐಶ್ವರ್ಯ ಪರ್ಸನಲ್ ಲೈಫ್‌ನಲ್ಲಿ ಎದುರಿಸಿರುವ ಕಷ್ಟಗಳನ್ನು ನೋಡಿ ಅನೇಕರು ಬೇಸರ ವ್ಯಕ್ತ ಪಡಿಸಿದ್ದಾರೆ ಆದರೆ ಆಕೆ ಸ್ಟ್ರಾಂಗ್ ಆಗಿರುವುದನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದರೆ ಈಗ ಐಶ್ವರ್ಯ ಶಾಪಿಂಗ್ ಮಾಡಿರುವುದು ದೊಡ್ಡ ಸುದ್ದಿಯಾಗುತ್ತಿದೆ.

ಸುಮಾರು 12 ಗಂಟೆಗಳ ಕಾಲ ತಮ್ಮ ಪರ್ಸನಲ್ ಫ್ಯಾಷನ್ ಡಿಸೈನರ್‌ ಜೊತೆ ಐಶ್ವರ್ಯ ಶಾಪಿಂಗ್ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಫೀನಿಕ್ಸ್ ಮಾಲ್‌ನಲ್ಲಿ ಶಾಪಿಂಗ್ ಮಾಡಿದ್ದಾರೆ. ಮೊದಲು H&M ಬ್ರ್ಯಾಂಡ್‌ನಲ್ಲಿ 55 ಸಾವಿರ ರೂಪಾಯಿ ಕೊಟ್ಟು ಬಟ್ಟೆ ಖರೀದಿಸಿದ್ದಾರೆ. ಬೆಳಗ್ಗೆ ಮತ್ತು ರಾತ್ರಿ ಎರಡಕ್ಕೂ ಸೂಕ್ತವಾಗುವ ರೀತಿಯಲ್ಲಿ ಬಟ್ಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಾದ ಮೇಲೆ ಮೇಕಪ್‌ ಸಾಮಾಗ್ರಿನಗನ್ನು ಖರೀದಿಸಿ ಅಲ್ಲೂ ಕೂಡ 30 ಸಾವಿರದಷ್ಟು ಹಣ ಖರ್ಚು ಮಾಡಿದ್ದಾರೆ. ಇನ್ನು ವೀಕೆಂಡ್ ವಿತ್ ಸುದೀಪ್ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿರುವ ಡ್ರೆಸ್‌ ಬೇಕು ಎಂದು ಡಿಸೈನರ್‌ಗಳ ಬಳಿ ಹೋಗಿದ್ದಾರೆ. ಐಶ್ವರ್ಯ ಶಾಪಿಂಗ್ ಅಷ್ಟಕ್ಕೆ ಕಡಿಮೆ ಆಗಿಲ್ಲ.

Tap to resize

Latest Videos

undefined

ಯಾವುದೇ ಶ್ರಮವಿಲ್ಲದೆ ಕ್ಯಾಪ್ಟನ್ ಪಟ್ಟ ಪಡೆದ ಹಂಸ ಈಗ ಕಳಪೆ; ಕರ್ಮ ಸುಮ್ಮನೆ ಬಿಡಲ್ಲ ಕಣ್ಣಮ್ಮ ಎಂದ ನೆಟ್ಟಿಗರು

ಹೌದು! ಅಲ್ಲಿಂದ ಸೀದಾ ಓರಾಯನ್ ಮಾಲ್‌ಗೆ ಹೋಗಿ ಅಲ್ಲಿನ ಝಾರಾ  ಬ್ರ್ಯಾಂಡ್‌ನಲ್ಲಿ ಸಿಕ್ಕಾಪಟ್ಟೆ ಬಟ್ಟೆ ಶಾಪಿಂಗ್ ಮಾಡಿದ್ದಾರೆ. ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತದೆ ಆದರೆ ನಾನು ಕೇವಲ 1 ತಿಂಗಳಿಗೆ 2 ಲಕ್ಷ ಹಣ ಖರ್ಚು ಮಾಡಿ ಬಟ್ಟೆ ಶಾಪಿಂಗ್ ಮಾಡಿರುವೆ. ನನ್ನ ಡಿಸೈನರ್ ಪ್ರತಿ ವಾರ ವೀಕೆಂಡ್ ಕಾರ್ಯಕ್ರಮಕ್ಕೆ ಕಳುಹಿಸುತ್ತಾರೆ. ನಾನು ಎಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇರುತ್ತೀನಿ ಎಂದು ಗೊತ್ತಿಲ್ಲ ಆದರೆ ಶಾಪಿಂಗ್ ಮಾತ್ರ ಜೋರಾಗಿ ನಡೆದಿದೆ ಎಂದು ಐಶ್ವರ್ಯ ಹೇಳಿದ್ದಾರೆ.  ಐಶ್ವರ್ಯ ಧರಿಸುವ ಉಡುಪುಗಳು ಅಷ್ಟು ಅಟ್ರಾಕ್ಟಿವ್ ಆಗಿಲ್ಲದಿದ್ದರೂ ದುಬಾರಿಯಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಐ ಲವ್‌ ಮೈಸೂರು ಎಂದ ಇಳಯರಾಜ, ರಾಜ್‌ಕುಮಾರ್‌ಗೆ ಹಾಡುವಂತೆ ಮೊದಲು ಹೇಳಿದ್ದು ನಾನೇ ಎಂದ ಸಂಗೀತ ಮಾಂತ್ರಿಕ!

ಬಿಗ್ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆ ನೇರವಾಗಿ ಸ್ವರ್ಗಕ್ಕೆ ಕಾಲಿಟ್ಟ ಐಶ್ವರ್ಯ ಈಗ ನರಕಕ್ಕೆ ಶಿಫ್ಟ್ ಆಗಿದ್ದಾರೆ. ಕಣ್ಣೀರಿಡುತ್ತ ನರಕಕ್ಕೆ ಬಂದರೂ ಅಲ್ಲಿನ ಸ್ಪರ್ಧಿಗಳ ಜೊತೆ ಲೈಫ್‌ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮೊದಲ ವಾರಕ್ಕೆ ಕಷ್ಟ ಇರುವ ಫಿಸಿಕಲ್ ಟಾಕ್ಸ್ ಕೊಟ್ಟಿರೂ ಐಶ್ವರ್ಯಾ ಅಷ್ಟಾಗಿ ಕಾಣಿಸಿಕೊಂಡಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಕೇವಲ ಒಂದು ವಾರಕ್ಕೆ ಇಷ್ಟೊಂದು ಹಣ ಖರ್ಚು ಮಾಡಿರುವುದಕ್ಕೆ ಅಪ್ಪನ ದುಡ್ಡು ಕೊಳೆಯುತ್ತಿದೆ ಎಂದು ಕಾಲೆಳೆದಿದ್ದಾರೆ. 

 

click me!