ಅಯ್ಯಯ್ಯೋ... ಡಾನ್ಸ್​ ಮಾಡ್ತಾ ಮಾಡ್ತಾ ಭಾಗ್ಯಳ ಅಮ್ಮಂಗೆ ಇದೇನಾಗೋಯ್ತು? ವಿಡಿಯೋಗೆ ಫ್ಯಾನ್ಸ್​ ಶಾಕ್​!

ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ಅರ್ಥಾತ್​ ಸುಷ್ಮಾ ಕೆ.ರಾವ್​, ಸುನಂದಾ ಪಾತ್ರಧಾರಿ ಸುನೀತಾ ಶೆಟ್ಟಿ, ತನ್ವಿ ಮತ್ತು ಗುಂಡ ಪಾತ್ರಧಾರಿಗಳಾದ ಅಮೃತಾ ಮತ್ತು ನಿಹಾರ್​ ರೀಲ್ಸ್​ ಮಾಡಿದ್ದಾರೆ.
 

Bhagya Lakshmi Serial Bhagya urf Susham Rao Sunanda Tanvi and Gunda reels fans reacts suc

ಹಲವು ಹೆಣ್ಣುಮಕ್ಕಳಿಗೆ ಮಾದರಿ ಎಂದೇ ಬಿಂಬಿತವಾಗಿರೋ ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ   ಈಗ ಡೋಲಾಯಮಯ ಸ್ಥಿತಿಯಲ್ಲಿಯೂ ಮತ್ತೆ ಚಿಗುರಿದ್ದಾಳೆ.  ಎಷ್ಟೆಲ್ಲಾ ಸಾಧನೆ ಮಾಡಿದರೂ  ಜೋಕರ್​ ಆಗಿ ಕೆಲಸ ಮಾಡುವ ಸ್ಥಿತಿಗೆ ಬಂದು ತಲುಪಿದ್ದರೂ, ಆ ಕೆಲಸವನ್ನೂ ಶ್ರದ್ಧೆಯಿಂದ ಮಾಡಿದವಳು ಭಾಗ್ಯ. ಆದರೆ,  ಆಕೆಯನ್ನು ಎಲ್ಲಿಯೂ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ತಾಂಡವ್​ ಶತ ಪ್ರಯತ್ನ ಮಾಡುತ್ತಿದ್ದಾನೆ. ಅಮ್ಮ ತನ್ನ ಫೀಸ್​ಗೋಸ್ಕರ ಇಷ್ಟೆಲ್ಲಾ  ಕೆಲಸ ಮಾಡುತ್ತಿದ್ದಾಳೆ ಎಂದು ಅರಿತಿರೋ ಗುಂಡ,  ಶೂಸ್​ ಪಾಲಿಷ್​ ಮಾಡಲು ಹೋಗಿ  ಸಿಕ್ಕಿಹಾಕಿಕೊಂಡಿದ್ದಾನೆ.  ಮೊದಲೇ ಭಾಗ್ಯಳನ್ನು ಹಂಗಿಸಲು ಏನು ಸಿಗುತ್ತದೆ ಎಂದು ಕಾಯುತ್ತಿರುವ ತಾಂಡವ್​ಗೆ ಈಗ ಇದು ಅಸ್ತ್ರವಾಗಿದೆ. ಮನೆಯವರಿಗೆಲ್ಲಾ ವಿಷಯ ತಿಳಿಸಿದ್ದಾನೆ. ಇದರಿಂದ ಎಲ್ಲರೂ ಸಿಟ್ಟುಗೊಂಡಿದ್ದಾರೆ. ಆದರೆ ಭಾಗ್ಯಳನ್ನು ನೆಮ್ಮದಿಯಿಂದ ಇಡಲು ಬಿಡಬಾರದು ಎನ್ನುವ ಕಾರಣಕ್ಕೆ ತಾಂಡವ್​ ಆ ಕೆಲಸವನ್ನೂ ಕಸಿದುಕೊಂಡಿದ್ದಾನೆ.

ಆದರೆ ಇವೆಲ್ಲವನ್ನೂ ಮೀರಿ ಭಾಗ್ಯ ಅಡುಗೆ ಮಾಡಿ ಅದನ್ನು ನೀಡುವ ಕಾರ್ಯದಲ್ಲಿ ತೊಡಗಿದ್ದಾಳೆ. ಈ ಕಾರ್ಯಕ್ಕೂ ಕಲ್ಲು ಹಾಕಲು ಬಂದಿದ್ದಾಳೆ ಕನ್ನಿಕಾ. ಅದೇ ಇನ್ನೊಂದೆಡೆ, ಮಗಳು ತನ್ವಿಯನ್ನು ತನ್ನೆಡೆ ಸೆಳೆದುಕೊಂಡು ಭಾಗ್ಯಳಿಗೆ ಒಂದು ಗತಿ ಕಾಣಿಸುವ ತವಕದಲ್ಲಿರುವ ಶ್ರೇಷ್ಠಾ, ತನ್ವಿಯನ್ನು ಗುಟ್ಟಾಗಿ ಸ್ನೇಹಿತರ ಜೊತೆ ಟ್ರಿಪ್​ಗೆ ಕಳುಹಿಸಿದ್ದಾಳೆ. ಚಿಕ್ಕ ಉಡುಗೆಯನ್ನೂ ಗಿಫ್ಟ್​ ಆಗಿ ಕೊಟ್ಟು ಕಳುಹಿಸಿದ್ದಾಳೆ. ಮುಂದೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ತನ್ವಿಗೆ ಟ್ರಿಪ್​ನಲ್ಲಿ ಸಮಸ್ಯೆಯಾಗಿ, ಕೊನೆಗೆ ತಾಂಡವ್​ ಶ್ರೇಷ್ಠಾಳ ಜಗಳ ಆಗಬಹುದು ಎನ್ನುವ ನೀರಿಕ್ಷೆಯಲ್ಲಿದ್ದಾರೆ ಭಾಗ್ಯಲಕ್ಷ್ಮಿ ಸೀರಿಯಲ್​ ಪ್ರೇಮಿಗಳು.

Latest Videos

ಭಾಗ್ಯಳ ಬಾಳಲ್ಲಿ ಬೆಳಕಾಗಿ ಬಂದ ಕೆಜಿಎಫ್​ ರಾಕಿಭಾಯ್! ಲೈಫೇ ಚೇಂಜೋಗೋಯ್ತು... ಇದೇನಿದು ಬಿಗ್​ ಟ್ವಿಸ್ಟ್​?

ಇದರ ನಡುವೆಯೇ, ಇದೀಗ ಭಾಗ್ಯ, ಆಕೆಯ ಅಮ್ಮ ಸುನಂದ ಮತ್ತು ಮಕ್ಕಳಾದ ತನ್ವಿ ಮತ್ತು ಗುಂಡ ಸಕತ್​ ರೀಲ್ಸ್​  ಮಾಡಿದ್ದಾರೆ. ಹೇಳಿಕೇಳಿ ಇವತ್ತು ಭಯಾನಕ ಅಮವಾಸ್ಯೆ. ಅದನ್ನೇ ಹೇಳಿಕೊಂಡು ನೆಟ್ಟಿಗರು ಭಾಗ್ಯಳ ಅಮ್ಮನ ಕಾಲೆಳೆಯುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಇದರಲ್ಲಿ ಭಾಗ್ಯಳ ಅಮ್ಮ ಸುನಂದನೇ ಒಂದು ರೀತಿ ಮಗಳಿಗೆ ವಿಲನ್​. ಅಮ್ಮನಾಗಿ ನೋಡುವುದಾದರೆ, ಆಕೆಗೆ ಭಾಗ್ಯ ಎಲ್ಲಿ ಸೋತುಬಿಡುತ್ತಾಳೋ ಎನ್ನುವ ಆತಂಕ. ಇದೇ ಕಾರಣಕ್ಕೆ ಪದೇ ಪದೇ ಅವಳು ಭಾಗ್ಯ ಮಾಡಿದ್ದಕ್ಕೆಲ್ಲಾ ಬೈಯುತ್ತಲೇ ಇರುತ್ತಾಳೆ. ಅಷ್ಟೇ ಅಲ್ಲದೇ ಅಲ್ಲಿ ಗಂಡನನ್ನು ಬಿಟ್ಟು ಮಗಳ ಮನೆಯಲ್ಲಿ ಠಿಕಾಣಿ ಹೂಡಿ ಸದಾ ಕಾಲು ಕೆದರಿ ಜಗಳಕ್ಕೆ ಬರುವ ಸುನಂದಾ ಎಂದರೆ ಸೀರಿಯಲ್​ ಪ್ರೇಮಿಗಳಿಗೆ ಇನ್ನಿಲ್ಲದ ಕೋಪ.

ಇದೇ ಕಾರಣಕ್ಕೆ ಈ ರೀಲ್ಸ್​ ನೋಡಿ ಸುನಂದಾಳೇ ಟಾರ್ಗೆಟ್​ ಆಗಿದ್ದಾಳೆ. ಅಮವಾಸ್ಯೆಯ ದಿನ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​ ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ಅವರ ಸೀರಿಯಲ್​ನ ತಮ್ಮ ಅಮ್ಮ ಸುನಂದಾ ಅರ್ಥಾತ್​ ನಟಿ ಸುನೀತಾ ಶೆಟ್ಟಿ ಹಾಗೂ ಮಕ್ಕಳಾದ ತನ್ವಿ ಮತ್ತು ಗುಂಡ ಅರ್ಥಾತ್​ ಅಮೃತಾ ಗೌಡ ಹಾಗೂ ಗುಂಡಣ್ಣನ ಪಾತ್ರಧಾರಿ ನಿಹಾರ್ ಗೌಡ ಜೊತೆ ಸಕತ್​ ಸ್ಟೆಪ್​  ಹಾಕಿದ್ದಾರೆ. ಇದರಲ್ಲಿ ಎಲ್ಲರೂ ಭರ್ಜರಿ ಹೆಜ್ಜೆ ಹಾಕಿದ್ದು ಅಭಿಮಾನಿಗಳು ಖುಷಿ ಪಟ್ಟಿದ್ದರೆ, ಸುನಂದಾ ಪಾತ್ರದ ಮೇಲಿನ ಸಿಟ್ಟಿನಿಂದ ಕಾಲೆಯುತ್ತಿದ್ದಾರೆ. 

ಸಂಸಾರದ ನೊಗ ಹೊತ್ತು ಸುಸ್ತಾಗೋದ ಭಾಗ್ಯ ಈ ಪರಿ ಸೊಂಟ ಬಳುಕಿಸೋದಾ? ಬೇಡ ಕಣಮ್ಮಿ ಅಂತಿರೋ ಫ್ಯಾನ್ಸ್​

vuukle one pixel image
click me!