
ಬಿಗ್ ಬಾಸ್ ಕನ್ನಡ 11ರಲ್ಲಿ ಜಗದೀಶ್ ಅವರ ವರ್ತನೆ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಅಶ್ಲೀಲ ಪದ ಬಳಕೆ ಮತ್ತು ಶೋನಿಂದ ಹೊರಹೋಗುವ ಬೆದರಿಕೆ ಹಾಕಿದ ಜಗದೀಶ್, ಮನೆಯ ಸ್ಪರ್ಧಿಗಳು ಮತ್ತು ಬಿಗ್‌ಬಾಸ್ ಅವರನ್ನೂ ಕೆರಳಿಸಿದ್ದಾರೆ. ಇದೆಲ್ಲದರ ನಡುವೆ ಮೂರನೇ ವಾರ ಕ್ಯಾಪ್ಟನ್ ಶಿಶಿರ್ ಅಕ್ಟೋಬರ್ 15ರ ಎಪಿಸೋಡ್ ನಲ್ಲಿ ಸ್ಪರ್ಧಿಗಳನ್ನು ಬ್ಯಾಕ್ ಟು ಬ್ಯಾಕ್ ನಾಮಿನೇಟ್ ಮಾಡುವ ಅವಕಾಶ ಪಡೆದರು.
ಆದರೆ ಕಾರಣ ಹೇಳುವಾಗ ಕ್ಯಾಪ್ಟನ್ ಶಿಶಿರ್ ಎಡವಿದ್ರಾ ಎಂಬ ಪ್ರಶ್ನೆ ಮೂಡಿದೆ. ಈವರೆಗೆ ಒಟ್ಟು 7 ಜನ ನಾಮಿನೇಟ್ ಆಗಿದ್ದಾರೆ. ಆದರೆ ಶಿಶಿರ್ ನೀಡುವ ಕಾರಣ ಮನೆಯವರಿಗೂ ಹಿಡಿಸಿಲ್ಲ. ವೀಕ್ಷಕರಿಗೂ ಹಿಡಿಸಿಲ್ಲ. ಎಲ್ಲರಿಗೂ ಕಾರಣ ಕೊಡವಾಗ ಕಳೆದು ಹೋಗುತ್ತಿದ್ದೀರಿ ಎಂಬ ಪದವನ್ನು ಅತೀ ಹೆಚ್ಚು ಬಳಕೆ ಮಾಡಿದ್ದಾರೆ.
ಮತ್ತೆ ಬಿಗ್ ಬಾಸ್ ಗೆ ಅವಮಾನಿಸಿದ ಜಗದೀಶ್, ಅಶ್ಲೀಲ ಪದ ಬಳಕೆಗೆ ಬೀಪ್ ಸೌಂಡ್ ಅಷ್ಟೇ!
ಮೊದಲ ದಿನ ಅನುಷಾ ರೈ ಅವರನ್ನು ನೇರ ನಾಮಿನೇಟ್ ಮಾಡಲಾಗಿತ್ತು. ಈ ವೇಳೆ ಕೊಟ್ಟ ಕಾರಣ ಇಡೀ ಮನೆಯಲ್ಲಿ ಹಲವು ಜಗಳಗಳಿಗೆ ದಾರಿ ಮಾಡಿ ಕೊಟ್ಟಿತು. ಅನುಷಾ ರೈ ನಾಮಿನೇಟ್ ಆಗಿದ್ದಕ್ಕೆ ಅತ್ತರು. ಇಂದು ಧನ್‌ರಾಜ್ ಕೂಡ ನಾಮಿನೇಟ್ ಆದಾಗ ಅತ್ತರು. ಇದರ ಜೊತೆಗೆ ಹಂಸಾ, ಧರ್ಮ ಕೀರ್ತಿರಾಜ್, ಗೌತಮಿ ಜಾದವ್ , ಚೈತ್ರಾ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ನಾಮಿನೇಟ್ ಆಗಿದ್ದಾರೆ.
ಮಿಡ್ ವೀಕ್ ಎಲಿಮಿನೇಶನ್ ಸೂಚನೆ ಕೊಟ್ಟರಾ ಬಿಗ್‌ಬಾಸ್?
ಶಿಶಿರ್ ಕೊಟ್ಟ ಕಾರಣಗಳು ಕನ್ಫೂಷನ್ ನಿಂದಲೇ ಕೂಡಿತ್ತು. ಇಷ್ಟು ಮಾತ್ರವಲ್ಲ ಬಿಗ್‌ಬಾಸ್ ಬಳಿ ಫೋನ್ ನಲ್ಲಿ ಕೊಟ್ಟ ಕಾರಣ ಒಂದಾದ್ರೆ ಶಿಶಿರ್ ಸ್ಪರ್ಧಿಗಳಿಗೆ ಹೇಳಿರೋದು ಮತ್ತೊಂದು ಆಗಿತ್ತು. ಇದು ಬಿಗ್ಬಾಸ್ ಗೆ ಸಿಟ್ಟು ತರಿಸಿತ್ತು. ಇದಕ್ಕೆ ಕರೆ ಮಾಡಿ ಶಿಶಿರ್ ಗೆ ಕ್ಲಾಸ್ ತೆಗೆದುಕೊಂಡ ಬಿಗ್‌ಬಾಸ್, ನಾನು ಹೇಳಿದಂತೆ ಹೇಳಬೇಕು ಎಂದರು. ಜೊತೆಗೆ ಕಳೆದ ವಾರ ಯಾರೂ ನಾಮಿನೇಟ್ ಆಗಿಲ್ಲ. ಈ ವಾರ ಯಾವಾಗ ಯಾರ್ಯಾರು ಎಲಿಮಿನೇಟ್ ಆಗಬಹುದು ಎಂಬ ಕಲ್ಪನೆ ಕೂಡ ನಿಮಗಿಲ್ಲ. ಇನ್ನಾದ್ರೂ ಈ ಪ್ರಕ್ರಿಯೆಯನ್ನು ಗಂಭೀರವಾಗಿ ನಡೆಸಿ ಎಂದು ಎಚ್ಚರಿಕೆ ಕೊಟ್ಟರು.
ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ 5 ಸಿನಿಮಾಗಳು ಸೂಪರ್ ಹಿಟ್!
ಹೀಗಾಗಿ ಶಿಶಿರ್ ಗೆ ಕೂಡ ಬಿಗ್‌ಬಾಸ್ ಮಿಡ್ ವೀಕ್ ಎಲಿಮಿನೇಶನ್ ಅಥವಾ ಡಬಲ್ ಎಲಿಮಿನೇಶನ್ ಸುಳಿವು ಕೊಟ್ರಾ ಎಂಬ ಅನುಮಾನ ಎದ್ದಿದೆ. ಯಾಕೆಂದರೆ ಭಾನುವಾರದ ಎಪಿಸೋಡ್ ನಲ್ಲಿ ಕೂಡ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಹೊಸ ಅಧ್ಯಾಯ, ಹೊಸ ಬಿಗ್‌ಬಾಸ್ ನೀವೆಂದೂ ನೋಡಿರಲ್ಲ. ಇಲ್ಲಿಂದ ನೀವು ನೋಡುತ್ತೀರಿ. expect the unexpectedಗೆ ರೆಡಿಯಾಗಿ ಎಂದು ಮುಂದಿನ ವಾರ ಸಿಕ್ತೇನೆ ಎಂದು ಹೇಳಿದ್ರು. ಅದಾದ ನಂತ ವೀಕ್ಷಕರಿಗೆ ತಿಳಿಸಿದ ಸುದೀಪ್, ನಾನು ಎಕ್ಸ್‌ಪೆಟ್‌ಡ್ ದಿ ಅನ್ ಎಕ್ಸ್‌ಪೆಕ್ಟೆಡ್ ಅಂತ ಅವರಿಗೆ ಒಂದು ಮಾತು ಹೇಳಿದೆ. ಇದು ವಾರ್ನ್ ಕೊಟ್ಟ ಹಾಗೆ ಕೂಡ ಇತ್ತು. ತಾವು ಕೂಡ (ವೀಕ್ಷಕರು) ಅವರೊಟ್ಟಿಗೆ expect the unexpected ಗೆ ರೆಡಿಯಾಗಿ ಎಂದು ಹೇಳಿದ್ರು. ಹೀಗಾಗಿ ಈ ಸುಳಿವು ಏನೆಂದು ಈಗ ವೀಕ್ಷಕರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಬಿಗ್ಬಾಸ್ ಇಂದು ಪೋನ್‌ನಲ್ಲಿ ಬಳಸಿದ ವಾಕ್ಯದ ಅರ್ಥ ಏನಾಗಿರಬದೆಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅದೇನೆ ಇದ್ದರೂ ಈ ವಾರದ ಎಲಿಮಿನೇಶನ್ ಗೆ ಕಾಯಲೇಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.