ಡ್ರೋನ್​ ಪ್ರತಾಪ್​ಗೆ ತುಕಾಲಿ ಸಂತೋಷ್​ ಕೇಳೋ ಈ ಪ್ರಶ್ನೆಗೆ ಉತ್ರ ಕೊಟ್ರೆ ನೀವೇ ಗ್ರೇಟ್​!

By Suvarna News  |  First Published Dec 3, 2023, 6:00 PM IST

ಬಿಗ್​ಬಾಸ್​  ಮನೆಯಲ್ಲಿ ತುಕಾಲಿ ಸಂತೋಷ್​ ಅವರು ತರ್ಲೆ ಪ್ರಶ್ನೆಯೊಂದನ್ನು ಡ್ರೋನ್​ ಪ್ರತಾಪ್​ಗೆ  ಕೇಳಿದ್ದಾರೆ. ನಿಮಗೆ ಏನಾದ್ರೂ ಇದರ ಉತ್ತರ ಗೊತ್ತಾ ನೋಡಿ!
 


ಬಿಗ್ ಬಾಸ್‌ ಕನ್ನಡ 10 ರಿಯಾಲಿಟಿ ಷೋ  ಆರಂಭವಾಗಿ ಎಂಟು ವಾರ ಕಳೆದಿದ್ದು, ಮನೆಯಲ್ಲಿ ದಿನೇ ದಿನೇ ಸ್ಪರ್ಧೆ ಟಫ್​ ಆಗುತ್ತಾ ಸಾಗಿದೆ. ಇದಾಗಲೇ ಹಲವಾರು ಟಾಸ್ಕ್​ಗಳನ್ನು ಸ್ಪರ್ಧಿಗಳು ನಡೆಸಿಕೊಟ್ಟಿದ್ದಾರೆ. ವಿನಯ್​, ತನಿಷಾ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​, ಡ್ರೋನ್​ ಪ್ರತಾಪ್, ಕಾರ್ತಿಕ್​ ಸೇರಿದಂತೆ ಇತರ ಸ್ಪರ್ಧಿಗಳ​ ನಡುವೆ ಸ್ಪರ್ಧೆ ಹೆಚ್ಚಾಗಿದ್ದು, ಬಿಗ್​ಬಾಸ್​ ಮನೆಯ ಹೊರಗೂ ಇವರ ಫ್ಯಾನ್ಸ್​ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಸರ್ಕಸ್​  ಮಾಡುತ್ತಿದ್ದಾರೆ. ಇದರ ನಡುವೆ ವಾರಾಂತ್ಯದಲ್ಲಿ ಕಾಣಿಸಿಕೊಳ್ಳುವ ಕಿಚ್ಚ ಸುದೀಪ್​ ಅವರು ಹಾಸ್ಯದ ಮಾತಿನಿಂದ ಬಿಗ್​ಬಾಸ್​ ಸ್ಪರ್ಧಿಗಳಿಗೆ ನಗುವಿನ ಟಾನಿಕ್​ ನೀಡುತ್ತಿದ್ದಾರೆ. ಇದರ ನಡುವೆನೇ ತುಕಾಲಿ ಸಂತೋಷ್​ ಕೂಡ ಆಗಾಗ್ಗೆ ಜೋಕ್​ ಮಾಡುತ್ತಲೇ ಇರುತ್ತಾರೆ. 

 ಈಗ ಅಂಥದ್ದೇ ಒಂದು ಜೋಕ್​  ಮಾಡುವ ಮೂಲಕ, ಬಿಗ್​ಬಾಸ್​ನ ಮನೆಯಲ್ಲಿ ನಗುವಿನ ಅಲೆ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಅವರು ಡ್ರೋನ್​ ಪ್ರತಾಪ್​ಗೆ ಒಂದು ಪ್ರಶ್ನೆ ಕೇಳಿದ್ದಾರೆ. ಅದೇನೆಂದರೆ, ಒಬ್ಬ ಮನುಷ್ಯ ಒಂದು ಸೆಕೆಂಡ್​ಗೆ ಒಂದು ಹೆಜ್ಜೆ ಹಾಕಿದ್ರೆ, 40 ಕಿಲೋ ಮೀಟರ್​ ಕ್ರಮಿಸಲು ಎಷ್ಟು ಹೆಜ್ಜೆ ಆಗುತ್ತೆ? ಅದು ಎಷ್ಟು ಗಂಟೆ ತೆಗೆದುಕೊಳ್ಳತ್ತೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಡ್ರೋನ್​ ಪ್ರತಾಪ್​, ಸುಮ್ಮನಾಗಿದ್ದಾರೆ. ಆಗ ತುಕಾಲಿ ಗೊತ್ತಾ, ಗೊತ್ತಿಲ್ವಾ ಹೇಳು ಎಂದಿದ್ದಾರೆ. ನಂತರ ಹೆಲ್ಪ್​ಲೈನ್​ ಬೇಕಾ ಕೇಳಿದ್ದಾರೆ. ಇದೇನೋ ತರ್ಲೆ ಪ್ರಶ್ನೆ ಇರ್ಬೇಕು. ನೀವೇ ಉತ್ತರ ಹೇಳಿ ಎಂದಿದ್ದಾರೆ. ಆಗ ವರ್ತೂರು ಸಂತೋಷ್​, 3 ಲಕ್ಷದ 29 ಸಾವಿರದ 538 ಹೆಜ್ಜೆ. ರಾಂಗ್​ ಎನ್ನಿಸಿದ್ರೆ, ನಡೆದುಕೊಂಡು ಹೋಗಿ ಹೇಳು ಬೇಕಾದ್ರೆ ಎಂದು ತಮಾಷೆ ಮಾಡಿದ್ದಾರೆ. ಆಗ ಪ್ರತಾಪ್​ ನಂಗೊತ್ತಿತ್ತು. ಇದೊಂದು ತರ್ಲೆ ಪ್ರಶ್ನೆ ಎಂದು ಎಂದಿದ್ದಾರೆ. ಹಾಗಿದ್ರೆ ಈ ಪ್ರಶ್ನೆಗೆ ಉತ್ತರ ಸರಿ ಇದ್ಯೋ ಇಲ್ವೋ ನೀವೇ ಲೆಕ್ಕಾಚಾರ ಮಾಡಿ ಹೇಳಬೇಕಷ್ಟೇ!  

Tap to resize

Latest Videos

ಅನುಕಂಪ ಗಿಟ್ಟಿಸಿಕೊಳ್ಳಲು ಸುಳ್ಳು ಹೇಳಿ ತಗ್ಲಾಕೊಂಡ್ರಾ ಪ್ರತಾಪ್​? 2 ದಿನಗಳಲ್ಲಿ ತಪ್ಪು ಒಪ್ಪಿಕೊಳ್ಳದಿದ್ರೆ ಕೇಸ್​ ದಾಖಲು!

ಇದೇ  ವೇಳೆ,  ತುಕಾಲಿ ಸಂತೋಷ್​ ಅವರನ್ನು ಉದ್ದೇಶಿಸಿ ಸುದೀಪ್​ ಅವರು, ತುಕಾಲಿಯವರೇ ಒಬ್ಬೊಬ್ಬರ ಭವಿಷ್ಯ ಹೇಳಿ ಎಂದಿದ್ದಾರೆ. ಪ್ರತಾಪ್​ ಹೆಸರನ್ನು ಸುದೀಪ್​ ಅವರು ಹೇಳಿದಾಗ, ತುಕಾಲಿ ಸಂತೋಷ್​ ಅವರು, ಪ್ರತಾಪ್​ ಆರಕ್ಕೆ ಏರ್ತಿಲ್ಲ, ಮೂರಕ್ಕೆ ಇಳಿತೀಲ್ಲ. ಅವನಿಗೆ ನಾನು ಯಾವಾಗ್ಲೂ ಹೇಳ್ತಾನೇ ಇರ್ತೇನೆ.  ಮಗು ಥರ ಇರ್ಬೆಡ್ವೋ... ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಎಂದು ಎಂದು ತಮಾಷೆ ಮಾಡಿದಾಗ ಎಲ್ಲರೂ ನಕ್ಕಿದ್ದಾರೆ. ಇದೇ ವೇಳೆ ತನಿಷಾ ಕಾಲಿಗೆ ಏಟು ಮಾಡಿಕೊಂಡು ಚಿಕಿತ್ಸೆಗೆಂದು ಬಿಗ್​ಬಾಸ್​ನಿಂದ ಎರಡು ದಿನ ಹೊರಕ್ಕೆ ಹೋಗಿದ್ದ ವೇಳೆ ಆಕೆಯನ್ನು ತುಂಬಾ ಮಿಸ್​ ಮಾಡಿಕೊಂಡಿದ್ದ ವರ್ತೂರ್​ ಸಂತೋಷ್​ ಅವರನ್ನು ಕಿಚ್ಚ ಸುದೀಪ್​ ಹಾಗೂ ತುಕಾಲಿ ಸಂತೋಷ್​ ತಮಾಷೆ ಮಾಡಿದ್ದಾರೆ.  

ಇದೇ ಸಂದರ್ಭದಲ್ಲಿ ಡ್ರೋನ್​ ಪ್ರತಾಪ್​ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮಾತನಾಡಿ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಕೋವಿಡ್​ ಸಮಯದಲ್ಲಿ ತಮಗೆ ಅಧಿಕಾರಿಗಳು ಕಷ್ಟ ಕೊಟ್ಟಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪ್ರತಾಪ್​ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಏನಾಗುತ್ತದೋ ಕಾದು ನೋಡಬೇಕಿದೆ. 

ಮಗು ಥರ ಇರ್ಬೆಡ್ವೋ... ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಅಂತ ಡ್ರೋನ್​ಗೆ ಹೇಳ್ತಾನೇ ಇದ್ದೇನೆ...

click me!