
ಮಾಡಲ್ ಕಮ್ ಹಿಂದಿ ಕಿರುತೆರೆ ನಟಿ ಡಿಂಪಿ ಗಂಗೂಲಿ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಮಕ್ಕಳ ಜೊತೆ ಫ್ಲೋರಲ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಂಡ ನಂತರ ಡಿಂಪಿ ಪರ್ಸನಲ್ ಲೈಫ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮಗಳು ಮತ್ತು ಮಗನ ಜೊತೆಗಿರುವ ಫೋಟೋ ಮತ್ತು ವಿಡಿಯೋ ಆಗಾಗ ಅಪ್ಲೋಡ್ ಮಾಡುತ್ತಾರೆ.
ಡಿಂಪಿ ಮಾತು:
'ನಾನು ಜೀವನದಲ್ಲಿ gratifying ಮತ್ತು fulfilling ಪ್ರೀತಿಯನ್ನು ಪಡೆದುಕೊಂಡಿರುವುದು, ಅನುಭವಿಸುತ್ತಿರುವುದು ನನ್ನ ಮಕ್ಕಳಿಂದ. That selflessly selfish yet selfishly selfless kind, ಅವರ ಸಂತೋಷದ ಕ್ಷಣ, ದುಖಃ, ಕೋಪ, ಹಠ ಮತ್ತು ಮ್ಯಾಜಿಕಲ್ ಕ್ಷಣಗಳನ್ನು ಎದುರಿಸುವಾಗ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ದೇವರ ಸ್ಥಾನದಲ್ಲಿ ನಿಮ್ಮನ್ನು ನಿಲ್ಲಿಸುತ್ತಾರೆ ನೀವು ಇದ್ದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ನಂಬುತ್ತಾರೆ. ಅವರ ಈ ನಂಬಿಕೆ ಪ್ರತಿ ದಿನ ನನಗೆ ಶಕ್ತಿ ಕೊಡುತ್ತದೆ ದಿನ ಕಳೆಯುತ್ತಿದ್ದಂತೆ ನಾನು ಸ್ಟ್ರಾಂಗ್ ಆಗಲು ಸಹಾಯ ಮಾಡುತ್ತದೆ. ಎಂಥ ಕೆಟ್ಟ ಸಮಯ ಎದುರಾದರೂ ಪಾಸಿಟಿವ್ ಆಗಿ ಜೀವನ ನೋಡಲು ಮನಸ್ಸಿದೆ. ಜೀವನದಲ್ಲಿ ಸದಾ ಖುಷಿಯಾಗಿರಬೇಕು, ಜನರು ನಿಮ್ಮ ಬಗ್ಗೆ ಏನೇ ಜಡ್ಜಮೆಂಟ್ ಮಾಡಿದ್ದರೂ ತಲೆ ಕೆಡಿಸಿಕೊಳ್ಳಬೇಡಿ. ನಾನು ಅವರ ಅಮ್ಮ. ಇದೆಲ್ಲಾ ನನಗೆ ಹೇಗೆ ತಿಳಿಯಬೇಕು ಅಂತಾನಾ? ಏಕೆಂದರೆ ನಾನು ಈಗಲೂ ಕೂಡ ಹಾಗೆ ಇರುವುದು. ಶೀಘ್ರದಲ್ಲಿ ನಾವು ಮೂರನೇ ಮಗು ಬರ ಮಾಡಿಕೊಳ್ಳುತ್ತಿದ್ದೀನಿ ನಂಬಲು ಆಗುತ್ತಿಲ್ಲ. UAEಯಿಂದ ಎಲ್ಲರಿಗೂ ಪ್ರೀತಿ ಹಂಚುತ್ತಿರುವೆ' ಎಂದು ಡಿಂಪಿ ಬರೆದುಕೊಂಡಿದ್ದಾರೆ.
ಡಿಂಪಿ ಮತ್ತು ರಾಹುಲ್ ಮಹಾಜನ್ ಪ್ರೀತಿಸಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಆದರೆ ರಾಹುಲ್ ಎರಡನೇ ಹೆಂಡತಿ ದೌರ್ಜನ್ಯದ ಆರೋಪ ಮಾಡಿದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈ ವಿಚಾರ ಕೇಳಿ 2014ರಲ್ಲಿ ಡಿಂಪಿ ಮತ್ತು ರಾಹುಲ್ ಡಿವೋರ್ಸ್ ಪಡೆದುಕೊಂಡರು. ಈ ಮದುವೆ ಮುರಿದು ಬಿದ್ದ ನಂತರ ಡಿಂಪಿ 2015ರಲ್ಲಿ ರೋಹಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2016ರಲ್ಲಿ ಮಗಳನ್ನು 2020ರಲ್ಲಿ ಮಗನನ್ನು ಬರ ಮಾಡಿಕೊಂಡರು. 2022ರಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಡಿಂಪಿ ಬಣ್ಣದ ಜರ್ನಿಯಿಂದ ದೂರ ಉಳಿದಿದ್ದಾರೆ. ಬಸಂತ್ ಪಂಚಮಿ ದಿನ ಡಿಂಪಿ ಹೊಸ ಕಾರು ಖರೀದಿಸಿದ್ದಾರೆ. ಇಡೀ ಕುಟುಂಬ ಒಂದೇ ಕಾಂಬಿನೇಷನ್ ಉಡುಪು ಧರಿಸಿ ಕೆಂಪು ಕಾರಿನ ಮುಂದೆ ನಿಂತಿದ್ದಾರೆ. ಕಾರ್ ನಂಬರ್ ಬಹಿರಂಗ ಪಡಿಸಿಲ್ಲ. 'ಇಂದು ಈ ಮ್ಯಾಜಿಕ್ ನಡೆಯಿತು. ನಾವೆಲ್ಲರೂ ಸದಾ ಒಟ್ಟಿಗೆ ಸರಿಯಾಗಿ ಫೋಟೋಗೆ ನಿಂತವರೇ ಅಲ್ಲ,' ಎಂದು ಬರೆದುಕೊಂಡಿದ್ದಾರೆ.ಇದು ಕೆಂಪು ಬಣ್ಣದ ರೇಂಜ್ ರೋವರ್ ವೆಲಾರ್ (Range Rover) ಆಗಿದ್ದು ಸುಮಾರು 80 ಲಕ್ಷ ರೂಪಾಯಿ ಎಕ್ಸ್ ಶೋರೂಮ್ ಬೆಲೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.