ಅಮೇಜಾನ್ ಮಿನಿ ಟಿವಿಯಲ್ಲಿ ಜಹಾನ್ ಸಿನಿಮಾ ರಿಲೀಸ್!

Suvarna News   | Asianet News
Published : Mar 18, 2022, 04:03 PM ISTUpdated : Mar 18, 2022, 04:04 PM IST
ಅಮೇಜಾನ್ ಮಿನಿ ಟಿವಿಯಲ್ಲಿ ಜಹಾನ್ ಸಿನಿಮಾ ರಿಲೀಸ್!

ಸಾರಾಂಶ

ಎಲ್ಲರ ಗಮನ ಸೆಳೆಯುತ್ತಿದೆ ಜಹಾನ್ ಸಿನಿಮಾ. ಶಾಪಿಂಗ್ ಆಪ್‌ನಲ್ಲಿ ಸಿನಿಮಾ ನೋಡಿ ಥ್ರಿಲ್ ಆದ ವೀಕ್ಷಕರು..  

ಕೊರೋನಾ ಲಾಕ್‌ಡೌನ್‌ ನಂತರದ ದಿನಗಳಲ್ಲಿ ಓಟಿಟಿ ಪ್ಲ್ಯಾಟ್‌ಫಾರ್ಮ್ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ಜನರು ಹೋಗದಿದ್ದರು ಓಟಿಟಿಯಲ್ಲಿ ನೋಡೇ ನೋಡುತ್ತಾರೆ ಅನ್ನುವ ನಂಬಿಕೆ ಹುಟ್ಟಿಕೊಂಡಿದೆ. ಹೀಗಾಗಿ ಅಮೇಜಾನ್‌ ಶಾಪಿಂಗ್‌ ಆಪ್‌ನಲ್ಲಿ ಇದೀಗ ಮಿನಿ ಟಿವಿ ಶುರುವಾಗಿದೆ. ಸಣ್ಣ ಬಜೆಟ್‌ ಒಳ್ಳೆ ಕಥೆ ಸಿನಿಮಾ ಮತ್ತು ಶಾರ್ಟ್‌ ಫಿಲ್ಮಂಗಳನ್ನು ಇಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದೇ ಮಾರ್ಚ್‌ 17ರಂದು ಜಹಾನ್ ಬಿಡುಗಡೆಯಾಗಿದೆ. 

ರೊಮ್ಯಾಂಟಿಕ್ ಸಸ್ಪೆನ್ಸ್‌ ಥ್ರಿಲರ್ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಮತ್ತು ಅವಿನಾಶ್ ತಿವಾರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲಿನಾ ಜಾನ್ ನಿರ್ದೇಶನ ಮಾಡಿದ್ದು ಅನ್ಬಾಕ್ಸ್ ಫಿಲ್ಮ್ಸ್ ಬಂಡವಾಳ ಹಾಕಿದೆ.  ಅಮೇಜಾನ್ ಮಿನಿ ಟಿವಿಯಲ್ಲಿ ಎಲ್ಲರೂ ಉಚಿತವಾಗಿ ಈ ಸಿನಿಮಾನ ನೋಡಬಹುದು. 'ಇತ್ತೀಚಿನ ದಿನಗಳಲ್ಲಿ ಅಮೇಜಾನ್ ಮಿನಿ ಟಿವಿಯಲ್ಲಿ ಒಳ್ಳೆಯ ಸಂದೇಶ ಹೊಂದಿರುವ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ನಾನು ಆಯ್ಕೆ ಮಾಡುವ ಸಿನಿಮಾಗಳು ನಮ್ಮ ವೀಕ್ಷಕರಿಗೆ ಕನೆಕ್ಟ್ ಆಗಬೇಕು ಅನ್ನೋದು ನಮ್ಮ ಉದ್ದೇಶ. ಜಹಾನ್‌ ಒಂದು ಶಾರ್ಟ್‌ ಸಿನಿಮಾ ಆಗಿದ್ದು ಮಿನಿ ಟಿವಿಯಲ್ಲಿ ಪ್ರಸಾರ ಮಾಡುವುದಕ್ಕೆ ನಮಗೆ ಖುಷಿಯಿದೆ' ಎಂದು ಅಮೇಜಾನ್ ಮುಖ್ಯಸ್ಥರಾದ ಗಿರೀಶ್ ಪ್ರಭು ಹೇಳಿದ್ದಾರೆ.

ಜಹಾನ್‌ ಶಾರ್ಟ್ ಸಿನಿಮಾದಲ್ಲಿ ಯಂಗ್ ಕಪಲ್‌ಗಳ ಕಥೆ ಹೇಳುತ್ತದೆ. ಗಜಲ್ ಮತ್ತು ಇಂದರ್ ಪ್ರೀತಿಯಲ್ಲಿ ಮುಳುಗಿರುತ್ತಾರೆ. ಮದುವೆಯಾದ ನಂತರ ಇಬ್ಬರು ಜೀವನದಲ್ಲಿ ತುಂಬಾನೇ ಏಳು ಬೀಳುಗಳನ್ನು ಎದುರಿಸುತ್ತಿರುತ್ತಾರೆ. ಇದೇ ಸಮಯಕ್ಕೆ ಮನೆ ಮಾಲೀಕರು ಕಾಲಿ ಮಾಡುವುದಕ್ಕೆ ಹೇಳುತ್ತಾರೆ. 'ಜಹಾನ್‌ ತುಂಬಾನೇ ಸ್ಪೆಷಲ್ ಪ್ರಾಜೆಕ್ಟ್‌. ಇದೊಂದು ಇನೋಸೆಂಟ್ ಪ್ರೇಮ ಕತೆ. ಯಾವ ವಯಸ್ಸಿನ ಲಿಮಿಟ್‌ ಇಲ್ಲಿದೆ ಈ ಸಿನಿಮಾ ನೋಡಬಹುದು. ಇದರಿಂದ ಅಮೇಜಾನ್‌ ಆಪ್‌ಗೆ ಭೇಟಿ ಕೊಡುವುದು ಹೆಚ್ಚಾಗುತ್ತದೆ' ಎಂದು ನಿರ್ಮಾಪಕ ಸಂಜಯ್ ಶರ್ಮಾ ಹೇಳಿದ್ದಾರೆ. 

RRR Movie: ರಾಜಮೌಳಿ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ಗೆ ಚಿಕ್ಕಬಳ್ಳಾಪುರದಲ್ಲಿ ವೇದಿಕೆ ಸಜ್ಜು!

ಜಹಾನ್ ಸಿನಿಮಾ ಈಗಾಗಲೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಹಲವಾರು ಪ್ರಶಸ್ತಿಗಳು ಪಡೆದುಕೊಂಡಿದೆ. ಹಾಲಿವುಡ್ ಗೋಲ್ಡ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಬೆಸ್ಟ್‌ ನಿರ್ಮಾಪಕ ಅವಾರ್ಡ್‌ ಪಡೆದುಕೊಂಡಿದೆ ಹಾಗೇ ವರ್ಲ್ಡ್ ಫಿಲ್ಮ್ ಕಾರ್ನಿವಲ್ ಮತ್ತು ಬೆಂಗಳೂರು ಫಿಲ್ಮಂ ಫೆಸ್ಟಿವಲ್‌ನಲ್ಲಿ ಪ್ರಸಾರ ಮಾಡಲಾಗಿತ್ತು.

ಅಮೇಜಾನ್ ಮಿನಿ ಟಿವಿಯಲ್ಲಿ ನೀವು ತಪ್ಪದೆ ನೋಡಬೇಕಾದ 5 ಸಿನಿಮಾಗಳ ಲಿಸ್ಟ್‌ ಇಲ್ಲಿದೆ. 

ಪ್ಲೀಸ್‌ ಫೈಂಡ್ ಅಟ್ಯಾಚ್‌ಮೆಂಟ್
ಈ ಸಿನಿಮಾ ಒಂದು  ಕ್ಯೂಟ್ ಲವ್ ಸ್ಟೋರಿ. ಇಬ್ಬರು ಒಂದೇ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದು ಆರಂಭದಲ್ಲಿ ಸ್ನೇಹಿತರಾಗಿ ಪ್ರೀತಿಸಲು ಶುರು ಮಾಡುತ್ತಾರೆ. ಆಯುಷ್ ಮೆಹ್ರಾ, ಬರ್ಖಾ ಸಿಂಗ್ ಮತ್ತು ವೈಭವಿ ಉಪಾಧ್ಯಾಯ ನಟಿಸಿದ್ದಾರೆ.

ಕ್ರಶ್ಡ್‌
ಹೈಸ್ಕೂಲ್ ಡ್ರಾಮ ಇಷ್ಟ ಪಡುವ ವ್ಯಕ್ತಿಗಳಿಗೆ ಇದು ಸೂಕ್ತವಾದ ಕಾಮಿಡಿ ಡ್ರಾಮ. ಒಂದು ಗುಂಪಿನಲ್ಲಿರುವ ಪಾಪ್ಯೂಲರ್ ವ್ಯಕ್ತಿಗಳ ನಡುವೆ ಸೈಲೆಂಟ್ ಆಗಿರುವ ಇಬ್ಬರು ಪ್ರೀತಿಸಲು ಆರಂಭಿಸುತ್ತಾರೆ. ಯಾರಿಗೂ ಗೊತ್ತಾಗದಂತೆ ಪ್ರೀತಿಸುತ್ತಾರೆ.

ಕೈಯಲ್ಲಿ 5 ಸಿನಿಮಾಗಳಿವೆ, ನಾನು ಫುಲ್ ಬ್ಯುಸಿ: ಜೊತೆ ಜೊತೆಯಲಿ ನಟಿ ಸೋನು ಗೌಡ

ಕಲಪ್ ಗೋಲ್ಸ್‌
ನಾವು ಇಷ್ಟ ಪಟ್ಟ ಸಂಗಾತಿ ಜೊತೆ ಜೀವನ ನಡೆಸಲು ಏನೆಲ್ಲಾ ಕಾಂಪ್ರಮೈಸ್ ಮಾಡಿಕೊಳ್ಳಬೇಕು ಎಂದು ಇದರಲ್ಲಿ ತೋರಿಸಲಾಗಿದೆ. ಇದೊಂದು ಡ್ರಾಮ ವಿತ್ ರೊಮ್ಯಾನ್ಸ್‌ ಸಿನಿಮಾ. ಪಕ್ಕಾ ಯುವಕರಿಗೆ ಮಾಡಿರುವ ಸಿನಿಮಾ ಇದಾಗಿದ್ದು ಕೃತಿಕಾ ಅವಸ್ತಿ ಮತ್ತು ನಿಖಿಲ್ ವಿಜಯ್ ನಟಿಸಿದ್ದಾರೆ. 

Adulting
ಟೈಟಲ್‌ ನೋಡಲು ಹೀಗಿರಬಹುದು ಆದರೆ ಇದು ಪಕ್ಕಾ ಕಾಮಿಡಿ ಶೋ.ಮುಂಬೈನಲ್ಲಿ ವಾಸವಿರುವ ಇಬ್ಬರು ಇಂಡಿಪೆಂಡೆಂಟ್‌ ಹುಡುಗಿಯರು ತಮ್ಮ ಜವಾಬ್ದಾರಿಳನ್ನು ನಿಭಾಯಿಸಲು ಎಷ್ಟು ಕಷ್ಟ ಪಡುತ್ತಾರೆಂದು ತೋರಿಸಲಾಗಿದೆ ಇದು ಎರಡು ಸೀರಿಸ್‌ನಲ್ಲಿ ಬಿಡುಗಡೆಯಾಗುತ್ತಿದೆ. 

ಗುಪ್ತಾ ಗ್ಯಾನ್
ಹೈ ಸ್ಕೂಲ್ ಮಕ್ಕಳ ಪ್ರೇಮ ಕಥೆ. ತಿಂಗಳ ಪೀರಿಯಡ್ಸ್‌ ತಡವಾಗಿ ಮಿಸ್ ಆಗುತ್ತದೆ ಚೆಕ್ ಮಾಡಿದಾಗ ಗರ್ಭಿಣಿ ಎಂದು ತಿಳಿಯುತ್ತದೆ. ಯಾರಿಗೂ ಹೇಳದೆ ಇಬ್ಬರು ಹೇಗೆ ಇದರಿಂದ ಹೊರ ಬರುತ್ತಾರೆ ಅನ್ನೋದು ಒನ್‌ ಲೈನ್ ಸ್ಟೋರಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial: ತಾನು ಪ್ರೀತಿಸಿದ ಹುಡುಗ ಬೇರೊಬ್ಬಳ ತೆಕ್ಕೆಯಲ್ಲಿ; ನಿತ್ಯಾಳ ಮನದಲ್ಲಿ ಯುದ್ಧ? ತಂಗಿಗೆ ಅಕ್ಕನೇ ವಿಲನ್​
ವಿದೇಶದಲ್ಲೂ ನಿಷಿದ್ಧವಾದ ಕೆಲಸವನ್ನು ಮಾಡಿದ ಬಿಗ್‌ ಬಾಸ್ Sonu Srinivas Gowda; ಜನರಿಂದ ಆಕ್ರೋಶ!