
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಅವರು ಮದುವೆಯಾಗಿಲ್ಲ, ಇನ್ನೂ ಬ್ಯಾಚುಲರ್ ಲೈಫ್ ಎಂಜಾಯ್ ಮಾಡ್ತಾ ಇದಾರೆ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ, ಆಗಾಗ ಅವರ ಮದುವೆ ಸುದ್ದಿ ಆಗುತ್ತಲೇ ಇರುತ್ತದೆ. ಅಂದ್ರೆ, ಅವ್ರತು ಮದುವೆ ಆಗಿದ್ದಾರೆ ಅನ್ನೋ ಸುದ್ದಿಯಲ್ಲ, ಬದಲಿಗೆ ಮದುವೆಗೆ ಸಂಬಂಧಪಟ್ಟ ಸುದ್ದಿ ಅಷ್ಟೇ. ಯಾರೋ ಒಬ್ಬರು ಅವರನ್ನು ಈ ಬಗ್ಗೆ ಕೇಳುತ್ತಾರೆ, ಅವರೇನೋ ಹೇಳುತ್ತಾರೆ. ಅದು ಸುದ್ದಿಯಾಗುತ್ತ ಜಗತ್ತನ್ನೆಲ್ಲ ಸುತ್ತುತ್ತ ಇರುತ್ತದೆ.
ಆದರೆ, ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ನಡೆದಿರುವುದು ಅದಕ್ಕಿಂತ ಹೆಚ್ಚಿನದು. ಅಂದ್ರೆ, ಸಲ್ಲೂ ಮದ್ವೆ ಆಗೇಹೋಯ್ತ ಅಂತೇನಲ್ಲ. ಆದರೆ, ಇಷ್ಟು ದಿನ ಆದಂತೆ ಯಾರೋ ಕೇಳಿದ್ದಲ್ಲ, ಬದಲಿಗೆ ಹುಡುಗಿಯೊಬ್ಬರು ನೇರವಾಗಿಯೇ ಬಾಲಿವುಡ್ ಭಾಯೀಜಾನ್‌ಗೆ ಪ್ರಪೋಸ್ ಮಾಡಿಬಿಟ್ಟಿದ್ದಾರೆ. 'ಪ್ಲೀಸ್ ನನ್ನನ್ನು ಮದುವೆಯಾಗು ಅಂದಿದ್ದಾರೆ. ಆದರೆ, ಅದಕ್ಕೆ ನಟ ಸಲ್ಮಾನ್ ಖಾನ್ ಒಪ್ಪಿದ್ರಾ? ಅಥವಾ ಏನಾದ್ರೂ ಅಂದ್ರಾ? ಇದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ..
ಹೇಳಿ, ಉಪೇಂದ್ರ ಈ ಡೈಲಾಗ್‌ಗೆ 'ಬುದ್ಧಿವಂತ' ಅಂತೀರಾ ಅಥವಾ ಇನ್ನೇನೋ ಹೆಸರಿಡ್ತೀರಾ?
ಹಿಂದಿ ಬಿಗ್ ಬಾಸ್ ಶೋವನ್ನು ನಟ ಸಲ್ಮಾನ್ ಖಾನ್ ಅವರು ತುಂಬಾ ವರ್ಷಗಳಿಂದ ನಡೆಸಿಕೊಡುತ್ತಿರುವುದು ಗೊತ್ತೇ ಇದೆ. ಈ ಸೀಸನ್‌ನಲ್ಲಿ ಕಂಟೆಸ್ಟಂಟ್ ಆಗಿರುವ ಹುಡುಗಿಯೊಬ್ಬರು ಸಲ್ಲೂಗೆ ಡೈರೆಕ್ಟ್ ಆಗಿ ಪ್ರಪೋಸ್ ಮಾಡಿದ್ದಾರೆ. 'ಪ್ಲೀಸ್ ನನ್ನನ್ನು ಮದುವೆಯಾಗಿ..' ಎಂದು ಬಿಗ್ ಬಾಸ್ ಸ್ಪರ್ಧಿ ಚಾಹತ್ ಪಾಂಡೆ (Chahat Pandey) ನಟ ಸಲ್ಮಾನ್ ಖಾನ್‌ಗೆ ಹೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಸಲ್ಮಾನ್ ಖಾನ್, 'ಇದು ಅಸಾಧ್ಯ, ಏಕೆಂದರೆ ನೀನು ನನ್ನ ಮಗಳ ವಯಸ್ಸಿನವಳು..' ಎಂದಿದ್ದಾರೆ.
ಬಿಗ್ ಬಾಸ್ ಹೋಸ್ಟ್ ಹಾಗು ನಟ ಸಲ್ಮಾನ್ ಖಾನ್ ಉತ್ತರ ಕೇಳಿ ಚಾಹತ್ ಪಾಂಡೆಗೆ ತೀವ್ರು ಮುಜುಗರದ ಜೊತೆಗೆ ದುಃಖವೂ ಆಗಿರಬಹುದು. ಏಕೆಂದರೆ, ಹೇಗೂ ಸಲ್ಲೂಗೆ ಮದುವೆ ಆಗಿಲ್ಲ. ನನ್ನಂಥ ಯಂಗ್ ಲೇಡಿ ಪ್ರಪೋಸ್ ಮಾಡಿದಾಗ ಹಿಂದುಮುಂದೆ ಯೋಚಿಸದೇ 'ಓಕೆ' ಅಂದ್ಬಿಡ್ತಾರೆ ಅಂದ್ಕೊಂಡಿದ್ರು ಅನ್ಸುತ್ತೆ.. ಆದ್ರೆ, ಸಲ್ಲೂ ಉತ್ತರ ಅವರ ಯೋಚನೆ ಹಾಗೂ ಯೋಜನೆಗೆ ವಿರುದ್ಧವಾಗಿತ್ತು. ಆಕೆಗೆ ಅನಿರೀಕ್ಷಿತ ಉತ್ತರ ಸಲ್ಮಾನ್ ಖಾನ್ ಕಡೆಯಿಂದ ಬಂದಿದೆ.
ನವಗ್ರಹದ 'ಜಗ್ಗು' ಪಾತ್ರಕ್ಕೆ ದರ್ಶನ್ ನನ್ನ ಮೊದಲ ಆಯ್ಕೆಯಲ್ಲ; ದಿನಕರ್ ಹೇಳಿಕೆ ವೈರಲ್!
ಆದರೆ ಮಾಡುವುದೇನು? ಮದುವೆ ಅಥವಾ ಲವ್ ಸಕ್ಸಸ್ ಆಗ್ಬೇಕು ಅಂದ್ರೆ ಸಂಬಂಧಪಟ್ಟ ಇಬ್ಬರೂ ಒಪ್ಪಬೇಕಲ್ಲ! ಆದರೆ, ಇಲ್ಲಿ ಚಾಹತ್ ಮನಸ್ಸಿನ ಬಯಕೆಯನ್ನು ಸಲ್ಲೂ ಇಷ್ಟಪಡಲಿಲ್ಲ. ಹೀಗಾಗಿ ಇದು ಒನ್ ವೇ ಲವ್ ಅಂಡ್ ಪ್ರಪೋಸ್ ಆಗಿರುವ ಕಾರಣಕ್ಕೆ ರಿಜೆಕ್ಟ್ ಆಗಿ ಕಸದ ಬುಟ್ಟಿ ಸೇರಿದೆ, ಸಲ್ಲೂ ಈ ಉತ್ತರದಿಂದ ಚಾಹತ್ ಶಾಕ್ ಆಗಿದ್ದಾಳೆ ಅಂತೆಲ್ಲ ಅಂದ್ಕೋಬೇಡಿ..
ಯಾಕಂದ್ರೆ, ಆಕೆ ಹೇಳಿದ್ದು ಜಸ್ಟ್ ತಮಾಷೆಗಾಗಿ ಅಷ್ಟೇ!ಸಲ್ಮಾನ್ ಖಾನ್ ಇಷ್ಟಪಡುವ ಹುಡುಗಿ ಈ ಭೂಮಿಯ ಮೇಲೆ ಇದ್ದಾಳೋ ಅಥವಾ ದೇವಲೋಕದಲ್ಲೇ ಯಾರಿಗೆ ಗೊತ್ತು ಅಂತಿದ್ದಾರೆ ಸಿನಿಪ್ರಿಯರು! ಎಲ್ಲೋ ಇರಬಹುದು ಬಿಡಿ, ಸಿಕ್ಕರೆ ಸಿಕ್ಕಾಗ ಸಲ್ಲೂ ಮದುವೆ ಆಗುತ್ತದೆ. ನಮಗ್ಯಾಕೆ ಆ ಉಸಾಬರಿ ಅಂತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.