ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ; ಬಿಗ್ ಬಾಸ್ ಹನುಮಂತನಿಗೆ ಅವಮಾನಿಸಿದ್ದಕ್ಕೆ ಕ್ಷಮೆಯಾಚಿಸಿದ ಹಂಸಾ

Published : Feb 06, 2025, 10:29 AM ISTUpdated : Feb 06, 2025, 10:52 AM IST
ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ; ಬಿಗ್ ಬಾಸ್ ಹನುಮಂತನಿಗೆ ಅವಮಾನಿಸಿದ್ದಕ್ಕೆ ಕ್ಷಮೆಯಾಚಿಸಿದ ಹಂಸಾ

ಸಾರಾಂಶ

ಹನುಮಂತ ಲಮಾಣಿ ಬಿಗ್ ಬಾಸ್ ಸೀಸನ್ ೧೧ರಲ್ಲಿ ದಾಖಲೆಯ ೫ ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಜಯಗಳಿಸಿದರು. ಆದರೆ, ನಟಿ ಹಂಸ ಅವರ ಹೇಳಿಕೆಯಿಂದ ಜಾತಿ ವಿವಾದ ಎದ್ದಿದ್ದು, ಹಂಸ ಕ್ಷಮೆ ಯಾಚಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಹನುಮಂತ ಗೆಲುವು ಅಚ್ಚರಿ ಮೂಡಿಸಿಲ್ಲ. ಅವರ ಗೆಲುವನ್ನು "ರಿಯಲ್ ಬಿಗ್ ಬಾಸ್" ಎಂದು ಜನ ಬಣ್ಣಿಸಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಲಮಾಣಿ ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ. 10 ಸೀಸನ್‌ಗಳಲ್ಲಿ ಯಾರೂ ಪಡೆಯದಷ್ಟು ವೋಟ್‌ಗಳು ಅಂದ್ರೆ 5 ಕೋಟಿಗೂ ಹೆಚ್ಚು ವೋಟ್‌ಗಳನ್ನು ಪಡೆದು ವಿನ್ನರ್ ಟ್ರೋಫಿ ಹಿಡಿದಿದ್ದಾರೆ. ಆದರೆ ಹನುಮಂತು ಗೆಲುವು ಹಲವರಿಗೆ ಬೇಸರ ತಂದಿದೆ. ಸಿಂಪತಿ ಕಾರ್ಡ್, ಜಾತಿ ಹೀಗೆ ಏನ್ ಏನೋ ಹೇಳಿ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಹನುಮಂತು ಪರ ನಿಂತ ನೆಟ್ಟಿಗರು ಯಾರೆಲ್ಲಾ ಈ ರೀತಿ ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಿಜಕ್ಕೂ ಏನ್ ಆಯ್ತು? 

ಸಂದರ್ಶನ ಒಂದರಲ್ಲಿ ಎಲಿಮಿನೇಟ್ ಆಗಿ ಹೊರ ಬಂದಿರುವ ನಟಿ ಹಂಸ ಹನುಮಂತು ಬಗ್ಗೆ ಮಾತನಾಡಿದ್ದರು. 'ನಾವು ಶಾಲೆ ಕಾಲೇಜ್‌ಗಳಲ್ಲಿ ಓದುತ್ತಿದ್ದಾಗ ಜನರಲ್‌ ಕ್ಯಾಟಗರಿಯವರು ಎಂದು ಎಷ್ಟೇ ಓದಿ ದಬಾಕಿದ್ರುನೂ ಕಡೆಗಣಿಸುತ್ತಿದ್ದರು. ಇಲ್ಲಿ ಬಡವರು, ಹಳ್ಳಿಯವರು ಎಂದು ತಕ್ಷಣ ಜನ ತಲೆ ಮೇಲೆ ಹೊತ್ತು ಮೆರೆಸುತ್ತಾರೆ' ಎಂದು ಹಂಸ ಹೇಳಿದ್ದರಂತೆ. ಈಗ ಆ ವಿಡಿಯೋ ಸಿಗುತ್ತಿಲ್ಲವಾದರೂ ಅವರ ಹೇಳಿಕೆಯನ್ನು ಹಲವು ವೆಬ್‌ಸೈಟ್‌ಗಳಲ್ಲಿ ಬರೆಯಲಾಗಿದೆ. ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪರೋಕ್ಷವಾಗಿ ಹನುಮಂತು ಜಾತಿ ಬಗ್ಗೆ ವಿಚಾರ ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ನಟಿ ಹಂಸ ಕ್ಷಮೆ ಕೇಳಿದ್ದಾರೆ.

ಅಂದು ಪತ್ನಿಗೆ ಕೈ ಹಿಡಿದು ನಡೆಸಿದ್ದು ಶಿವಣ್ಣ, ಇಂದು ಶಕ್ತಿಯಾಗಿ ನಿಂತಿದ್ದು ಗೀತಕ್ಕ; ಭಾವುಕರಾದ ತಾರಾ- ಶ್ರುತಿ

ಹಂಸ ಕ್ಷಮೆ:  

'ನಮಸ್ತೆ ನಾನು ಹಂಸ. ನಾನು ಒಂದು ಚಾನೆಲ್‌ನಲ್ಲಿ ಕೊಟ್ಟ ಸಂದರ್ಶನದಲ್ಲಿ ಹೇಳಿರುವ ಒಂದು ಮಾತು ತುಂಬಾ ಕಾಂಟ್ರವರ್ಸಿ ತಿರುವು ಪಡೆದುಕೊಂಡಿದೆ. ಖಂಡಿತಾ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ. ಕೆಲವರು ಅದನ್ನು ಬೇರೆ ರೀತಿಯಲ್ಲಿ ಅರ್ಥಯಿಸಿಕೊಂಡು ಬೇರೆ ಬೇರೆ ತೀರುವುಗಳನ್ನು ಕೊಡುತ್ತಿದ್ದಾರೆ. ನನ್ನ ಮಾತಿನಿಂದ ಯಾರಿಗೆಲ್ಲಾ ಬೇಸರ ಆಗಿದೆ ಅವರಿಗೆ ನಾನು ಕ್ಷಮೆ ಕೇಳುತ್ತೀನಿ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ. ದೊಡ್ಡ ಮನಸ್ಸು ಮಾಡಿ ನನ್ನನ್ನು ಕ್ಷಮಿಸಿ ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡಿ' ಎಂದು ಹಂಸ ಮಾತನಾಡಿದ್ದಾರೆ.

ಸಾಕ್ಷಾತ್ ಮಹಾಲಕ್ಷ್ಮಿ ತರ ನಮ್ಮ ತಾರಾ ಎಂದ ನೆಟ್ಟಿಗರು; ಫೋಟೋ ವೈರಲ್

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಯಾವ ಸ್ಪರ್ಧಿಗೂ ಫಿನಾಲೆ ವಾರಕ್ಕೆ ಬಂದಿಲ್ಲ ಹಾಗೂ ವಿನ್ನರ್ ಟ್ರೋಫಿ ಹತ್ತಿರವೂ ಸುಳಿದಿಲ್ಲ. ಆದರೆ ಈ ಸಲ ರಜತ್ ಕಿಶನ್ ಮತ್ತು ಹನುಮಂತು ಫಿನಾಲೆ ವಾರಕ್ಕೆ ಕಾಲಿಟ್ಟು....ಟಾಪ್ 3 ಸ್ಥಾನದಲ್ಲಿ ನಿಂತಿದ್ದರು. ಮೂರನೇ ಸ್ಥಾನ ರಜತ್ ಪಡೆದರು ಖುಷಿ ವ್ಯಕ್ತ ಪಡಿಸಿದ್ದರು ಆದರೆ ಹನುಮಂತು ಮೊದಲ ಸ್ಥಾನ ಪಡೆದಿದ್ದು ಸ್ಪರ್ಧಿಗಳಿಗೆ ಶಾಕ್ ಆದರೆ ಜನರಿಗೆ ಈ ಗೆಲುವು ಗೊತ್ತಿತ್ತು. ಮೊದಲ ಸ್ಥಾನವನ್ನು ಹನುಮಂತು ಪಡೆದಿರುವುದಕ್ಕೆ ಇದು ರಿಯಲ್ ಬಿಗ್ ಬಾಸ್ ಈ ವರ್ಷ ಮೋಸ ಮಾಡಿಲ್ಲ ಎಂದು ಹೇಳಿದ್ದಾರೆ. 

ಸುಮ್ಮನಿದ್ದವಳನ್ನು ಕರೆಸಿ ಅವಮಾನ ಮಾಡಿದ್ರು, ನಾನಾಗಿ ಸತ್ರೆ ಯಾರು ಹೊಣೆ : ಚಿತ್ರಾಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ