ಸಾಜೀದಾ ಶೇಖ್‌ಗೆ ಡಿವೋರ್ಸ್‌ ಕೊಟ್ಟು 4 ವರ್ಷಗಳ ಬಳಿಕ ಹಿಂದು ನಟಿಯ ಪ್ರೀತಿಯಲ್ಲಿ ಬಿದ್ದ ಖ್ಯಾತ ಕಿರುತೆರೆ ನಟ!

Published : Feb 06, 2025, 06:35 AM ISTUpdated : Feb 06, 2025, 10:07 AM IST
ಸಾಜೀದಾ ಶೇಖ್‌ಗೆ ಡಿವೋರ್ಸ್‌ ಕೊಟ್ಟು 4 ವರ್ಷಗಳ ಬಳಿಕ ಹಿಂದು ನಟಿಯ ಪ್ರೀತಿಯಲ್ಲಿ ಬಿದ್ದ ಖ್ಯಾತ ಕಿರುತೆರೆ ನಟ!

ಸಾರಾಂಶ

ಸಾಜೀದಾ ಶೇಖ್‌ ಜೊತೆ ಡಿವೋರ್ಸ್‌ ಆದಬಳಿಕ ಆಮಿರ್‌ ಅಲಿ ಅವರು ಬೇರೆ ಹುಡುಗಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.   

ಡಿವೋರ್ಸ್‌ ಆಗಿ ನಾಲ್ಕು ವರ್ಷಗಳ ಬಳಿಕ ನಟ ಆಮಿರ್‌ ಅಲಿ ಅವರು ಮತ್ತೊಮ್ಮೆ ಪ್ರೀತಿಯನ್ನು ಹುಡುಕಿಕೊಂಡಿದ್ದಾರಂತೆ. ಅಷ್ಟೇ ಅಲ್ಲದೆ ಮಗಳು ಆಯ್ರಾ ಜೊತೆಗೂ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ದಾರೆ. 

ಲವ್‌ ಅನುಭವವೇ ವಿಭಿನ್ನ! 
“ತುಂಬ ಸಮಯದ ಬಳಿಕ ನನಗೊಂದು ಲವ್‌ ಸಿಕ್ಕಿದೆ. ಪ್ರತಿಯೊಬ್ಬರಿಗೂ ಪ್ರೀತಿ ಬೇಕು. ಏನಾದರೂ ಆದಾಗ ಕೆಲವರು ಬೇಗ ಮೂವ್‌ ಆನ್‌ ಆಗುತ್ತಾರೆ, ಕೆಲವರು ಆಮೇಲೆ ಮೂವ್‌ ಆನ್‌ ಆಗುತ್ತಾರೆ. ನಾನೀಗ ಓರ್ವ ಹುಡುಗಿಯ ಜೊತೆ ಆತ್ಮೀಯತೆಯಿಂದ ಇದ್ದೇನೆ, ಇದು ಖುಷಿ ಕೊಟ್ಟಿದೆ. ಇದರ ಅನುಭವವೇ ವಿಭಿನ್ನ. ಈ ಕ್ಷಣ ಎಂಜಾಯ್‌ ಮಾಡ್ತಿದ್ದೀನಿ” ಎಂದು 

ನನ್ನಲ್ಲಿ ಹೃದಯ ಇದೆ..! 
“ನನ್ನಲ್ಲಿ ಹೃದಯವಿದೆ ಎನ್ನೋದನ್ನು ತೋರಿಸಿಕೊಟ್ಟಿದ್ದಕ್ಕೆ ನಾನು ನನ್ನ ಹುಡುಗಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಕಳೆದ ಐದು ತಿಂಗಳ ಹಿಂದೆ ಎಲ್ಲ ಶುರುವಾಗಿದೆ. ಈಗಷ್ಟೇ ಆರಂಭವಾಗಿದೆ. ಯಾರಾದರೂ ಪ್ರೀತಿ ಬಗ್ಗೆ ಪ್ರಶ್ನೆ ಮಾಡಿದಾಗ ನಾನು ಎಲ್ಲರೂ ಪ್ರೀತಿಯಲ್ಲಿ ಬೀಳಬೇಕು ಅಂತ ಹೇಳ್ತೀನಿ. ನಾನು ಕೂಡ ಸೆಟಲ್‌ ಆಗ್ತೀನಿ. ನನಗೂ ಕುಟುಂಬ ಬೇಕು ಎನ್ನುವ ಆಸೆ ಇದೆ. ಮಾನಸಿಕವಾಗಿ ನಾನು ಈ ವಿಷಯವನ್ನು ಬಿಡೋದಿಲ್ಲ” ಎಂದು ಆಮಿರ್‌ ಅಲಿ ಹೇಳಿದ್ದಾರೆ. 

ಬಲರಾಮನ ಅಡ್ಡಾಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಆನೆ ವಿನಯ್ ಗೌಡ… ಖಡಕ್ ಲುಕ್ ವೈರಲ್

ಹುಡುಗಿಯನ್ನು ಲವ್‌ ಮಾಡ್ತಿದೀನಿ..! 
“ಹೃದಯದ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಒದ್ದಾಡುತ್ತಿದ್ದೆ ಎಂದು ಅರಿವಾಯ್ತು. ಕೆಲವೊಮ್ಮೆ ಎಲ್ಲವೂ ಸರಿಯಾಗಿದೆ ಎಂದು ಅನಿಸಿದರೂ ಕೂಡ, ನಿಜಕ್ಕೂ ಏನಾಗ್ತಿದೆ ಎನ್ನೋದು ಗೊತ್ತಿರೋದಿಲ್ಲ. ಕಳೆದ ವರ್ಷ ನಾನು ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ, ಕ್ಷಣಾರ್ಧದಲ್ಲಿ ಏನೋ ಒಂದಾಗ್ತಿತ್ತು. ಆಗ ನಾನು ಓಡುತ್ತಿದ್ದೆ. ಆಗೆಲ್ಲ ನಾನು ಪ್ರೀತಿ ಗಳಿಸಲು ಅರ್ಹತೆ ಇಲ್ಲ ಎನ್ನೋದನ್ನು ನಂಬಿರುವಾಗಲೇ ಮತ್ತೆ ಲವ್‌ ಹುಟ್ಟಿತು. ಒಂದು ವಾರದಲ್ಲಿ ಇದೆಲ್ಲ ಆದಾಗ ನಾನ್ಯಾಕೆ ಹೀಗೆ ವರ್ತಿಸುತ್ತಿದ್ದೇನೆ ಅಂತ ಅನಿಸಿತು. ನಾನ್ಯಾಕೆ ಈ ಹುಡುಗಿ ವಿಚಾರದಲ್ಲಿ ಎಮೋಶನಲ್‌ ಆಗ್ತಿದ್ದೀನಿ ಅಂತ ಯೋಚನೆ ಮಾಡಿದಾಗ ನಾನು ಈ ಹುಡುಗಿಯನ್ನು ಪ್ರೀತಿ ಮಾಡ್ತಿದ್ದೀನಿ ಅಂತ ಅರ್ಥ ಆಯ್ತು” ಎಂದು ನಟ ಆಮಿರ್‌ ಅಲಿ ಹೇಳಿದ್ದಾರೆ. 

ಮಾಜಿ ಹೆಂಡ್ತಿ ಬಗ್ಗೆ ಮಾತನಾಡಲ್ಲ..! 
“ನಾನು ಯಾರ ಜೊತೆಯೂ ಕಾಂಟ್ಯಾಕ್ಟ್‌ನಲ್ಲಿ ಇಲ್ಲ. ಇದು ನಿಜಕ್ಕೂ ಸಂಕೀರ್ಣವಾಗಿದೆ. ಎಲ್ರೂ ಚೆನ್ನಾಗಿರಲಿ ಅಂತ ನಾನು ಹಾರೈಸುವೆ, ಆದರೆ ಕಾಂಟ್ಯಾಕ್ಟ್‌ನಲ್ಲಿ ಇಲ್ಲ. ನನಗೆ ಇದರ ಬಗ್ಗೆ ಮಾತನಾಡೋಕೆ ಇಷ್ಟ ಇಲ್ಲ. ನನ್ನ ಹಳೇ ಸಂಬಂಧದ ಬಗ್ಗೆ ಕೆಲವರು ಮಾತಾಡ್ತಾರೆ, ಆದರೆ ನಾವು ಮಾತ್ರ ಮಾತಾಡಬಾರದು ಅಂತ ನಿರ್ಧಾರಕ್ಕೆ ಬಂದಿದ್ದೇವೆ. ಇಲ್ಲ ಅಂದ್ರೆ ಗೌರವ ಇಲ್ಲದೆ ಸಾರ್ವಜನಿಕವಾಗಿ ಏನಾದರೂ ಹೇಳಿಕೆ ಕೊಡುತ್ತಿದ್ದೆವೋ ಏನೋ! ನಾವಿಬ್ಬರು ರಿಲೇಶನ್‌ಶಿಪ್‌ ಶೇರ್‌ ಮಾಡಿಕೊಂಡಿದ್ದಕ್ಕೆ ನನಗೆ ಅವಳ ಬಗ್ಗೆ ಮಾತನಾಡಲು ಇಷ್ಟವಿಲ್ಲ. ನಾನು ಯಾರ ಜೊತೆಗೆ ಇದ್ನೋ ಅವರ ಜೊತೆ ನೆಗೆಟಿವ್‌ ಮಾತನಾಡೋದಿಲ್ಲ. ಯಾರು ಏನೇ ಗಾಸಿಪ್‌ ಮಾತನಾಡಿದರೂ ನಾವು ತಲೆ ಕೆಡಿಸಿಕೊಳ್ಳೋದಿಲ್ಲ” ಎಂದು ಆಮಿರ್‌ ಅಲಿ ಹೇಳಿದ್ದಾರೆ. 

ಮಕ್ಕಳು ಮಾಡಿಕೊಳ್ಳಬೇಕೆಂದು ಅನ್ನಿಸ್ತಿದೆ ಎಂದ ಬಿಗ್‌ಬಾಸ್ ಸ್ಪರ್ಧಿ, ಕಿರುತೆರೆ ನಟಿಯ ಗಂಡ

ಮೊದಲ ಪತ್ನಿ ಯಾಕೆ ದೂರ ಆದ್ರು? 
ಸಂಜೀದಾ ಶೇಖ್‌ ಹಾಗೂ ಆಮಿರ್‌ ಅಲಿ ಅವರು 2012ರಲ್ಲಿ ಮದುವೆಯಾಗಿ 2021ರಲ್ಲಿ ವಿಚ್ಛೇದನ ಪಡೆದರು. ಈ ಬಗ್ಗೆ ಮಾತನಾಡಿದ್ದ ಸಂಜೀದಾ “ನನ್ನ ಜೀವನದಲ್ಲಿ ಏನು ನಡೆದಿದ್ಯೋ ಅದರ ಬಗ್ಗೆ ಖುಷಿ ಇದೆ. ನಾನು ಆಗ ಬೇಸರದಲ್ಲಿ ಇರುತ್ತಿದ್ದೆ. ಈಗ ನಾನು ಖುಷಿಯಾಗಿದ್ದೇನೆ. ನಮ್ಮನ್ನು ಡಿಮೋಟಿವೇಟ್‌ ಮಾಡುವ ಸಂಗಾತಿಗಳು ಇರುತ್ತಾರೆ. ನಮ್ಮಿಂದ ಏನೂ ಆಗೋದಿಲ್ಲ ಅಂತ ಹೇಳ್ತಾರೆ, ಅಂಥವರಿಂದ ದೂರ ಇರೋದು ಒಳ್ಳೆಯದು” ಎಂದು ಹೇಳಿದ್ದಾರೆ. 

ಈಗ ಆಮಿರ್‌ ಅಲಿ ಅವರು ಅಂಕಿತಾ ಕುಕ್ರೆತಿ ಎನ್ನುವವರ ಜೊತೆ ಡೇಟ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂಕಿತಾ, ಆಮಿರ್‌ ಮಧ್ಯೆ ವಯಸ್ಸಿನ ಅಂತರ ಜಾಸ್ತಿ ಇದೆ ಎನ್ನಲಾಗುತ್ತಿದೆ. ಅಂದಹಾಗೆ ಆಮಿರ್‌ ಅಲಿ ಅವರು ಕೆಲ ಸಿನಿಮಾಗಳ ಜೊತೆಗೆ ಅವರು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ