ಬಿಗ್​ಬಾಸ್​ ಖ್ಯಾತಿಯ, ಜಗತ್ತಿನ ಕುಳ್ಳ ಕೋಟ್ಯಧಿಪತಿ ಅಬ್ದು ಮದ್ವೆ ರದ್ದು- ಕಾರಣ ಕೇಳಿ ಫ್ಯಾನ್ಸ್ ಶಾಕ್​!

By Suchethana D  |  First Published Sep 18, 2024, 4:50 PM IST

ಜಗತ್ತಿನ ಅತ್ಯಂತ ಕುಳ್ಳ ಕೋಟ್ಯಧಿಪತಿ ಎಂದೇ ಫೇಮಸ್​ ಆಗಿದ್ದ, ಎಂಗೇಜ್​ಮೆಂಟ್​ ಮಾಡಿಕೊಳ್ಳುವ ಮೂಲಕ ಕನಸಿನ ಹುಡುಗಿಯನ್ನು ವರಿಸಿದ್ದ ಬಿಗ್​ಬಾಸ್​ ಖ್ಯಾತಿಯ ಗಾಯಕ ಅಬ್ದು ರೋಜಿಕ್​ ಮದ್ವೆ ಕ್ಯಾನ್ಸಲ್​ ಮಾಡಿದ್ದಾರೆ. ಇದಕ್ಕೆ ಕಾರಣವೇನು?
 


ಅಬ್ದು ರೋಜಿಕ್ ಹೆಸರು ಟಿ.ವಿ ವೀಕ್ಷಕರಿಗೆ ಹೊಸತೇನಲ್ಲ. ‘ಬಿಗ್ ಬಾಸ್’ (Bigg Boss) ಮೂಲಕ ಖ್ಯಾತಿ ಪಡೆದ ಜಗತ್ತಿನ ಅತಿ ಕುಳ್ಳ ಗಾಯಕ ಎಂದೇ ಫೇಮಸ್​ ಆಗಿದ್ದಾರೆ ಅಬ್ದು.  ಕೋಟ್ಯಧಿಪತಿಯೂ ಆಗಿರುವ ತಜಿಕಿಸ್ತಾನ್​ ದೇಶದ ಈ ಗಾಯಕ,   ಬಿಗ್ ಬಾಸ್​ನಲ್ಲಿ ಸಖತ್ ಸುದ್ದಿ ಆಗಿದ್ದರು. 20 ವರ್ಷದ ಕುಳ್ಳ ಕೆಲ ತಿಂಗಳಿನಿಂದ ಸುದ್ದಿಯಲ್ಲಿ ಇರುವುದು ಮದುವೆಯಿಂದಾಗಿ!  19 ವರ್ಷದ ಯುವತಿ ಅಮೀರಾರರನ್ನು ತಾವು ವಿವಾಹವಾಗಲಿರುವುದಾಗಿ  ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.  ನೋಡಲು  ಚಿಕ್ಕ ಹುಡುಗನಂತೆ ಕಾಣುವ 20 ವರ್ಷದ ಅಬ್ದು ಅವರ ಮದುವೆಯ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳು ಸಂತೋಷದಿಂದ ಕುಣಿದಾಡಿದ್ದರು. ಹಿಂದೊಮ್ಮೆ ಮದುವೆಯನ್ನು ಮುಂದೂಡಿದ್ದ ಅಬ್ದು ರೋಜಿಕ್, ಈಗ ಅಮೀರಾ ಜೊತೆ ಮದುವೆಯನ್ನು ಕ್ಯಾನ್ಸಲ್​ ಮಾಡಿ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ.

ಸಾಂಸ್ಕೃತಿಕ ಭಿನ್ನಾಭಿಪ್ರಾಯ ಇರುವ ಹಿನ್ನೆಲೆಯಲ್ಲಿ ಈ  ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.  ನಮ್ಮಿಬ್ಬರ ನಡುವೆ ಅನ್ಯೋನ್ಯತೆ ಬೆಳೆದಂತೆ ಇಬ್ಬರೂ  ಕೆಲವು ಸಾಂಸ್ಕೃತಿಕ ವ್ಯತ್ಯಾಸಗಳನ್ನು ಗಮನಿಸಿದೆವು. ಇದನ್ನು ಮುಂದುವರೆಸುವುದು ಸರಿಯಲ್ಲ ಎನಿಸಿತು.  ಅಮೀರಾ ಜೊತೆ ನನ್ನ ಭಾವನೆ ಆಳವಾಗಿದೆ. ಆದರೆ  ಭಿನ್ನಾಭಿಪ್ರಾಯಗಳು ಸಂಬಂಧವನ್ನು ಮುಂದುವರಿಸಲು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ ಅಬ್ದು.  ನಿಮಗೆಲ್ಲ ತಿಳಿದಿರುವಂತೆ, ನಾನು ದಿನನಿತ್ಯದ ಜೀವನದಲ್ಲಿ ಸವಾಲುಗಳನ್ನು ತರುವ ದೃಢಸಂಕಲ್ಪದ ವ್ಯಕ್ತಿ. ಇದಕ್ಕೆ ಮಾನಸಿಕವಾಗಿ ಚೇತರಿಸಿಕೊಳ್ಳುವ ಪಾರ್ಟನರ್​ ಅಗತ್ಯವಿದೆ ಎಂದಿದ್ದಾರೆ. ಇದೇ ವೇಳೆ, ಅಮೀರಾ ಜೊತೆ ಬೇರೆಯಾಗುವ ನಿರ್ಧಾರವು ಸುಲಭವಲ್ಲ ಎಂದಿದ್ದಾರೆ.  ಭಾವನಾತ್ಮಕ ಪ್ರಕ್ಷುಬ್ಧತೆಯ ಹೊರತಾಗಿಯೂ, ಅಬ್ದು ಭವಿಷ್ಯದ ಬಗ್ಗೆ ಆಶಾವಾದಿಯಾಗಿದ್ದಾರೆ. ಸಮಯ ಬಂದಾಗ ಪ್ರೀತಿಯು ನನ್ನನ್ನು ಮತ್ತೆ ಹುಡುಕುತ್ತದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.  

Tap to resize

Latest Videos

ನಿನ್ನ ಜೊತೆ ಮಲಗಬೇಕು ಎಂದು ಆ ಹುಡುಗಿ ನೇರವಾಗೇ ಕೇಳಿದ್ಲು, ಆಮೇಲೆ... ಆಮೀರ್​ ಮಾತಿಗೆ ಪತ್ನಿ ಶಾಕ್​!


ಇನ್ನು ಅಬ್ದು ಅವರ ಕುರಿತು ಒಂದಿಷ್ಟು ಹೇಳುವುದಾದರೆ, ಇವರು,  ತಜಿಕಿಸ್ತಾನ್​ ದೇಶದ  ಗಾಯಕ. ಸಾಕಷ್ಟು ಜನಪ್ರಿಯತೆ ಪಡೆದಿರುವ  ಕೋಟ್ಯಧಿಪತಿ. ಇವರು   ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಕೂಡ ಹೌದು.  ಇನ್ಸ್ಟಾಗ್ರಾಮ್‌ ಖಾತೆಯಲ್ಲಿ 8 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್​ಸ್ಟಾದಲ್ಲಿ ಎಂಗೇಜ್​ಮೆಂಟ್​ ಉಂಗುರ ಹಿಡಿದುಕೊಂಡು ಮದುವೆಯ ಸುದ್ದಿಯನ್ನು ಹೇಳಿಕೊಂಡಿದ್ದರು. ಡೈಮಂಡ್ ರಿಂಗ್ ಹಿಡಿದುಕೊಂಡಿರೋ ಫೋಟೋನ ಅಬ್ದು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ನನ್ನನ್ನು ಗೌರವಿಸುವ, ಪ್ರೀತಿಸುವ ಹುಡುಗಿ ಸಿಗುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದಿದ್ದರು. 


'ಗೆಳೆಯರೇ.. ನಿಮಗೆಲ್ಲ ಗೊತ್ತಿರುವಂತೆ ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸುವ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಈ ಹುಡುಗಿ ಸಿಕ್ಕಳು. ನಾನು ಇದನ್ನು ಊಹಿಸಿಯೂ ಇರಲಿಲ್ಲ. ಈ ಖುಷಿಯನ್ನು ಹೇಗೆ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಒಂದು ಸರ್​ಪ್ರೈಸ್​ ಇದೆ' ಎಂದಿರುವ ಅಬ್ದು ರಿಂಗ್ ಓಪನ್ ಮಾಡಿ ತೋರಿಸಿದ್ದರು.  ಜುಲೈ 7ರ ದಿನಾಂಕವನ್ನು ಸೇವ್‌ ಮಾಡಿಕೊಳ್ಳಿ ಎಂದಿದ್ದರು. ನಂತರ ಮದುವೆಯನ್ನು ಮುಂದೂಡಲಾಗಿತ್ತು. ಆದರೆ ಈಗ ಮದುವೆ ಕ್ಯಾನ್ಸಲ್​  ಮಾಡಿದ್ದಾರೆ. ಅಂದಹಾಗೆ ಅಬ್ದು ಅವರು, ಕಳೆದ ಫೆಬ್ರವರಿ ತಿಂಗಳಲ್ಲಿ ಅಬ್ದು ಸಾಕಷ್ಟು ಸುದ್ದಿ ಆಗಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅವರನ್ನು ವಿಚಾರಣೆ ಮಾಡಿದ್ದರು. ‘ಬಿಗ್ ಬಾಸ್ 16’ರ ಸ್ಪರ್ಧಿ ಶಿವ್ ಠಾಕ್ರೆ ಅವರ ಪ್ರಕರಣದಲ್ಲಿ ಅಬ್ದು ಸಾಕ್ಷಿ ಎನ್ನಲಾಗಿದೆ.

ಟಾರ್ಗೆಟ್​ ತಲುಪೋ ಭರದಲ್ಲಿ ಒತ್ತಡದಿಂದ ಕೆಲಸ ಮಾಡಿ ಯುವತಿಯ ಸಾವು! ಕಂಪೆನಿ ಮಾಡಿದ್ದೇನು ನೋಡಿ..

click me!