ಸಮರ್ಥ್​ ಕಣ್ಣಮುಂದೆ ತುಳಸಿಯ ಶವ! ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ಅಮ್ಮನನ್ನು ತಬ್ಬಿಕೊಂಡು ಕಣ್ಣೀರು...

By Suchethana D  |  First Published Sep 18, 2024, 4:14 PM IST

ತುಳಸಿ ಗರ್ಭಿಣಿಯಾಗಿದ್ದಾಳೆ. ಆದರೆ ಸಮರ್ಥ್​ ತಿಳಿದುಕೊಂಡಿರುವುದೇ ಬೇರೆ. ಆತನ ಕಣ್ಣಮುಂದೆ ತುಳಸಿಯ ಶವ ಕಾಣಿಸುತ್ತಿದೆ. ಇಷ್ಟಾಗುತ್ತಿದ್ದಂತೆಯೇ ಸಮರ್ಥ್​ ಮಾಡಿದ್ದೇನು? 
 


  ಇನ್ನೇನು ಅಜ್ಜಿಯಾಗುವ ಕನಸು ಕಾಣುತ್ತಿರುವ ಮೂರು ಮಕ್ಕಳ ತುಳಸಿ ಅಮ್ಮಾ... ಮತ್ತೊಮ್ಮೆ ಅಮ್ಮಾ  ಆಗ್ತಿದ್ದಾಳೆ!  ಯಾರ ಊಹೆಗೂ ನಿಲುಕದ ಟ್ವಿಸ್ಟ್​ ಅನ್ನು ಈ ಸೀರಿಯಲ್​ಗೆ ನೀಡಲಾಗಿದೆ. ಒಂದೆಡೆ ಅವಿ ಮತ್ತು ಅಭಿ ಮತ್ತೊಂದೆಡೆ ಸಮರ್ಥ್​, ಹೀಗೆ ಮೂವರು ಮಕ್ಕಳ ನಡುವೆ ಪ್ರೀತಿಯ ವಿಷಯದಲ್ಲಿ ಜಟಾಪಟಿ ಏರ್ಪಡಿಸಿದ್ದ ತುಳಸಿ ಅಮ್ಮಾ, ಈಗ ಮತ್ತೊಂದು ಮಗುವಿನ ತಾಯಿಯಾಗುತ್ತಿದ್ದಾಳೆ.  ಆಸ್ಪತ್ರೆಯ ನರ್ಸ್​​ಗಳು ಮಾಡಿರುವ ಎಡವಟ್ಟಿನಿಂದ ತುಳಸಿಗೆ ಬ್ರೇನ್​ ಟ್ಯೂಮರ್​ ಎಂದು ಸಮರ್ಥ್​ ತಿಳಿದುಕೊಂಡಿದ್ದಾನೆ! ಅಮ್ಮ ಶ್ರೀಮಂತರ ಮನೆಗೆ ಮದುವೆಯಾಗಿ ಹೋದಾಗಿನಿಂದಲೂ ಅವಳನ್ನು ಕಂಡರೆ ಗುರ್​ ಎನ್ನುತ್ತಿದ್ದ ಸಮರ್ಥ್​ಗೆ ಈಗ ತಾಯಿ ಸತ್ತೇ ಹೋಗುತ್ತಾಳೆ ಎನ್ನುವ ಭೀತಿ. ಅವನು ಯಾವುದೇ ಕಾರಣಕ್ಕೂ ಅಮ್ಮನನ್ನು ಬಿಟ್ಟುಕೊಡುವವನಲ್ಲ. ಇದೇ ಕಾರಣಕ್ಕೆ ಅವನು ಓಡೋಡಿ ತುಳಸಿಯ ಮನೆಗೆ ಬಂದಿದ್ದಾನೆ. ಆತನ ಕಣ್ಣೆದುರಿಗೆ ತುಳಸಿಯ ಶವ ಕಾಣಿಸುತ್ತಿದೆ. ಆದರೆ ಹಾಗೆ ಮಾಡಲು ತಾನು ಬಿಡುವುದಿಲ್ಲ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪಣತೊಟ್ಟಿದ್ದಾನೆ.

ಇದೇ ಕಾರಣಕ್ಕೆ ಅಮ್ಮಾ ಎಂದು ಓಡಿ ಬಂದು ತುಳಸಿಯನ್ನು ಅಪ್ಪಿಕೊಂಡಿದ್ದಾನೆ. ತುಳಸಿ ಮದುವೆಯಾಗಿ ಹೋದಾಗಿನಿಂದಲೂ ಮೇಡಂ ಎಂದು ಕರೆಯುತ್ತಿದ್ದ ಸಮರ್ಥ್​, ಇದ್ದಕ್ಕಿದ್ದಂತೆಯೇ ಅಮ್ಮಾ ಎಂದು ಕರೆದದ್ದನ್ನು ನೋಡಿ ತುಳಸಿಗೆ ರೋಮಾಂಚರ, ಆಶ್ಚರ್ಯ ಆಗಿದೆ. ಅವಳ ಸಂತೋಷಕ್ಕೆ ಪಾರವೇ ಇಲ್ಲ. ಸಮರ್ಥ್​ ಓಡಿ ಹೋಗಿ ಅಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾನೆ. ಇಷ್ಟು ದಿನ ನೀವು ಪ್ರೀತಿ ತೋರುತ್ತಿದ್ದರೂ ನಾನು ಅರ್ಥ ಮಾಡಿಕೊಳ್ಳದೇ ನಿಮ್ಮ ಮನಸ್ಸಿಗೆ ನೋವು ಉಂಟು ಮಾಡಿದೆ ಎಂದು ಕಣ್ಣೀರು ಹಾಕಿದ್ದಾನೆ. ಅಷ್ಟಕ್ಕೂ ಅವನ ಕಣ್ಣೆದುರು ತುಳಸಿಯ ಸಾವು ಇರುವುದರಿಂದ ಹೀಗೆ ಮಾಡುತ್ತಿದ್ದಾನೆ. ಅತ್ತ ಅಭಿ ಕೂಡ ತುಳಸಿಯ ಮೇಲೆ ಮಮಕಾರ ತೋರುತ್ತಿದ್ದಾನೆ. ಹೀಗೆ ಎಲ್ಲರೂ ಒಂದಾಗಿದ್ದಾರೆ.  

Tap to resize

Latest Videos

ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್​? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್​!

ಆದರೆ ಸಮರ್ಥ್​ನ ಈ ಏಕಾಏಕಿ ಬದಲಾವಣೆಗೆ ಕಾರಣ ಮಾತ್ರ ಯಾರಿಗೂ ತಿಳಿದಿಲ್ಲ. ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಸಮರ್ಥ್​ ಒಪ್ಪಿಕೊಂಡಿದ್ದಾನೆ ಎಂದು ತುಳಸಿ ತಿಳಿದುಕೊಂಡಿದ್ದಾಳೆ. ಏಕೆಂದರೆ, ಸಮರ್ಥ್​ ತನ್ನ ಅಮ್ಮನಿಗೆ ಸಮಾಧಾನಪಡಿಸಿ ಆಗಿದ್ದು ಆಯ್ತು, ನಿಮ್ಮ ಜೊತೆ ನಾನಿದ್ದೇನೆ. ಭಯಪಡಬೇಡಿ ಎನ್ನುತ್ತಲೇ ಆಕೆಯ ಕೈಹಿಡಿದು ಮನೆಗೆ ಕರೆದುಕೊಂಡು ಬಂದಿದ್ದಾನೆ. ಅಂದ ಮಾತ್ರಕ್ಕೆ ತಾಯಿ ಗರ್ಭಿಣಿ ಎನ್ನುವ ವಿಷಯವನ್ನು ಆತ ಒಪ್ಪಿಕೊಂಡಿದ್ದಾನೆ ಅಂತಲ್ಲ. ಅಷ್ಟಕ್ಕೂ ತಮ್ಮಮಕ್ಕಳ ನಿರೀಕ್ಷೆಯಲ್ಲಿರುವ ಮಕ್ಕಳು, ಅಮ್ಮ ಗರ್ಭಿಣಿ ಎನ್ನುವ ವಿಷಯವನ್ನು ಬಹುತೇಕ ಯಾವ ಮಕ್ಕಳೂ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸತ್ಯವೇ. ಆದರೆ ಸಮರ್ಥ್​ ಆಕೆಗೆ ಬ್ರೇನ್​ ಟ್ಯೂಮರ್​ ಇದೆ ಎಂದು ತಿಳಿದುಕೊಂಡಿದ್ದಾನೆ.

ಅಷ್ಟಕ್ಕೂ ಆಗಿದ್ದೇನೆಂದರೆ, ತುಳಸಿ ಎಚ್ಚರ ತಪ್ಪಿ ಬಿದ್ದಾಗ ಆಸ್ಪತ್ರೆಗೆ ಅಡ್ಮಿಟ್​ ಮಾಡಿದ್ದರು. ಸಮರ್ಥ್​ ಅಲ್ಲಿಯೇ ಇದ್ದ. ಆಗ ತಾನೇ ಆಸ್ಪತ್ರೆಗೆ ಅಡ್ಮಿಟ್​ ಆಗಿರುವ ಪೇಷಂಟ್​ ಬಗ್ಗೆ ನರ್ಸ್​ಗಳು ಮಾತನಾಡಿಕೊಳ್ಳುತ್ತಿದ್ದರು. ಅವರು ಉಳಿಯುವುದು ಇನ್ನು ಮೂರೇ ತಿಂಗಳು, ತುಂಬಾ ಚೆನ್ನಾಗಿ ನೋಡಿಕೊಂಡರೆ ಸ್ವಲ್ಪ ವರ್ಷ ಬದುಕುತ್ತಾರೆ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದರು. ಅದನ್ನು ಕೇಳಿಸಿಕೊಂಡ ಸಮರ್ಥ್​ ಅದು ತುಳಸಿಯೇ ಎಂದುಕೊಂಡು ಬಿಟ್ಟಿದ್ದಾನೆ. ಆ ಬಗ್ಗೆ ನರ್ಸ್​ಗೆ ಆತ ಕೇಳಿದಾಗ, ಅವರೂ ಕನ್​ಫ್ಯೂಸ್​ ಮಾಡಿಕೊಂಡು ಅವರು ಬದುಕೋ ಛಾನ್ಸ್​ ತುಂಬಾ ಕಡಿಮೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ, ಹೆಚ್ಚು ವರ್ಷ ಬದುಕುತ್ತಾರೆ ಎಂದರು. ಇದನ್ನು ಕೇಳಿ ಆಕಾಶವೇ ಕಳಚಿಬಿದ್ದ ಅನುಭವ ಸಮರ್ಥ್​ಗೆ. ಆದ್ದರಿಂದ ಆತ ತನ್ನ ತಾಯಿಯನ್ನು ಜೋಪಾನ ಮಾಡುವ ಜವಾಬ್ದಾರಿ ಹೊತ್ತಿದ್ದಾನೆ. ಅಮ್ಮ-ಮಗನ ನಡುವೆ ಮಾತುಕತೆ ನಡೆದಿದೆ. ತನ್ನ ತಾಯಿಗೆ ಬ್ರೇನ್​ ಟ್ಯೂಮರ್ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಮರ್ಥ್​ ಮಾತನಾಡಿದ್ದರೆ, ಅವನಿಗೆ ತಾನು ಗರ್ಭಿಣಿ ಎನ್ನುವ ವಿಷಯ ತಿಳಿದಿದ್ದರೂ ಆತ ಅದನ್ನು ಒಪ್ಪಿಕೊಂಡಿದ್ದಾನೆ ಎಂದು ತುಳಸಿ ಎಂದುಕೊಂಡಿದ್ದಾಳೆ. ಒಟ್ಟಿನಲ್ಲಿ ಎಲ್ಲರೂ ಒಂದಾಗಿದ್ದಾರೆ. ಆದರೆ ನಿಜ ತಿಳಿದ ಮೇಲೆ ಸ್ಥಿತಿ ಏನು ಎನ್ನುವುದನ್ನು ನೋಡಬೇಕಿದೆಯಷ್ಟೇ. 

ಮಗು ಹೆರುವುದು ಸರಿಯೋ-ತಪ್ಪೊ? ಹೆಣ್ಣಿನ ಮೂರು ರೂಪಗಳಿವು- ಸೀತಾ, ಸಾಧನಾ, ಶಾಲಿನಿ...
 

click me!