ಸುಳ್ಳು ಹೇಳೋಕೂ ಮುಂಚೆ ಸರಿಯಾಗಿ ಪ್ರಿಪೇರ್​ ಆಗ್ಬೇಕು ತಾನೆ? ಅಡಕತ್ತರಿಯಲ್ಲಿ ಶ್ರೇಷ್ಠಾ, ತಾಂಡವ್​!

Published : Feb 24, 2024, 01:38 PM IST
ಸುಳ್ಳು ಹೇಳೋಕೂ ಮುಂಚೆ ಸರಿಯಾಗಿ ಪ್ರಿಪೇರ್​ ಆಗ್ಬೇಕು ತಾನೆ? ಅಡಕತ್ತರಿಯಲ್ಲಿ ಶ್ರೇಷ್ಠಾ, ತಾಂಡವ್​!

ಸಾರಾಂಶ

ಸುಳ್ಳು ಹೇಳಿ ಶ್ರೇಷ್ಠಾ ಪೇಚಿನಲ್ಲಿ ಸಿಲುಕಿದ್ದಾಳೆ. ಕುಸುಮಳ ಎದುರು ಕಂಗಲಾಗಿದ್ದಾರೆ. ಇದರ ಪ್ರೊಮೋ ನೋಡಿ ನೆಟ್ಟಿಗರು ಏನು ಹೇಳಿದ್ರು ಕೇಳಿ...  

 ಪತ್ನಿಗೆ ಡಿವೋರ್ಸ್​ ಕೊಟ್ಟು ಕಟ್ಟಿಕೊಂಡವಳ ಬಿಟ್ಟು ಇಟ್ಟುಕೊಂಡವಳ ಬಳಿ ಹೋಗುವ ಕನಸು ಕಾಣುತ್ತಿರುವ ತಾಂಡವ್, ತಾನು ಮನೆಯನ್ನು ಚೆನ್ನಾಗಿ ನಿಭಾಯಿಸಬಲ್ಲೆ ಎಂದು ತೋರಿಸಲು ಮಕ್ಕಳನ್ನು ಕರೆದುಕೊಂಡು ರೆಸಾರ್ಟ್​ಗೆ ಬಂದಿದ್ದಾನೆ. ಕುಟುಂಬದವರನ್ನು ಕರೆದುಕೊಂಡು ಹೋಗಿರುವುದನ್ನು ಕೇಳಿ ಪ್ರೇಯಸಿ ಶ್ರೇಷ್ಠಾಳಿಗೆ ಉರಿ ಹತ್ತಿದೆ. ಅವಳು ರೆಸಾರ್ಟ್​ ಹುಡುಕಿಕೊಂಡು ಬಂದಿದ್ದಾಳೆ. ಅವಳನ್ನು ಕಂಡರೆ ಆಗದ ತನ್ವಿ ಚೆನ್ನಾಗಿ ಉಗಿದಿದ್ದಾಳೆ. ತಾಂಡವ್​ ಅಮ್ಮ ಕುಸುಮಾ, ನೀನ್ಯಾಕೆ ಇಲ್ಲಿಗೆ ಬಂದಿದ್ದು ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಶ್ರೇಷ್ಠಾ, ಆಫೀಸ್​ ಕೆಲಸದ ಮೇಲೆ ಬಂದಿರುವುದಾಗಿ ಹೇಳಿದ್ದಾಳೆ. ಇತ್ತ ತಾಂಡವ್​ಗೆ ಶ್ರೇಷ್ಠಾಳನ್ನು ನೋಡಿ ಗಾಬರಿ ಶುರುವಾಗಿದೆ. ಎಲ್ಲಿ ತನ್ನ ಬಣ್ಣ ಬಯಸಲಾಗುವುದೋ ಎಂದು ಶ್ರೇಷ್ಠಾಳನ್ನು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಿದ್ದಾನೆ. ತಾನು ಬಂದಿರುವ ಉದ್ದೇಶ ಮರೆಮಾಚಲು ಆಫೀಸ್​ ಕೆಲಸದ ಕಾರಣವೊಡ್ಡಿದ್ದಾಳೆ ಶ್ರೇಷ್ಠಾ.

ಗಂಡಸ್ರ ಕೊಬ್ಬು ಇಳೀಬೇಕು ಎಂದ್ರೆ ಮನೆ ಕೆಲ್ಸ ಮಾಡಿಸ್ಬೇಕು ಎಂದ ಕುಸುಮಾ! ನಿಜನಾ?

ಹೇಳಿಕೇಳಿ ಕುಸುಮಾ ಮಾಮೂಲಿ ಅತ್ತೆಯಲ್ಲ. ಅವಳಿಗೆ ಡೌಟ್​ ಬಂದಿದೆ. ಸರಿ, ಆಫೀಸ್​ ಕೆಲಸದ ಮೇಲೆ ಬಂದರೆ ಆಫೀಸ್​ನವರು ಎಲ್ಲಿ ಎಂದು ಪ್ರಶ್ನಿಸಿದ್ದಾಳೆ. ಈಗ ಶ್ರೇಷ್ಠಾ ಮತ್ತು ತಾಂಡವ್​ ಇಬ್ಬರಿಗೂ ಅಡಕತ್ತರಿಯಲ್ಲಿ ಸಿಲುಕಿದ ಅನುಭವ. ಕಲರ್ಸ್​ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್​  ಪ್ರೊಮೋ ರಿಲೀಸ್​ ಆಗಿದ್ದು, ಶ್ರೇಷ್ಠಾಳಿಗೆ ನೆಟ್ಟಿಗರುಪಾಠ ಮಾಡುತ್ತಿದ್ದಾರೆ. ಸುಳ್ಳು ಹೇಳುವ ಮೊದಲು, ಅದರಲ್ಲಿಯೂ ಕುಸುಮಳಂತವಳ ಎದುರು ಸುಳ್ಳು ಹೇಳುವ ಮೊದಲು ಚೆನ್ನಾಗಿ ಪ್ರಿಪೇರ್​ ಆಗಬೇಕು ತಾನೆ ಎಂದಿದ್ದಾರೆ. 

ಅಷ್ಟಕ್ಕೂ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಸದ್ಯ ಭಾಗ್ಯ ತವರು ಸೇರಿದ್ದಾಳೆ.  ನಿನ್ನಿಂದಲೇ ನನ್ನ ಬದುಕು ನರಕವಾಗಿದ್ದು, ನೀನು ಇಲ್ಲದಿದ್ದರೆ ನಾನು ಹಾಗೂ ಇಡೀ ಕುಟುಂಬ ಸಂತೋಷವಾಗಿರುತ್ತಿದ್ದೆವು. ನೀನು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗಿರುತ್ತೆ, ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎಂದರೆ ನೀನು ಮನೆಬಿಟ್ಟು ಹೋಗಬೇಕು ಎಂದು ತಾಂಡವ್​ ಪತ್ನಿ ಭಾಗ್ಯಳಿಗೆ ಹೇಳಿದ್ದಾನೆ. ಶ್ರೇಷ್ಠಾಳ ಪ್ರೇಮದ ನಶೆಯಲ್ಲಿ ಕಟ್ಟಿಕೊಂಡ ಹೆಂಡತಿ, ಹೆತ್ತ ಮಕ್ಕಳನ್ನೇ ಬಿಟ್ಟು ಹೋಗಿರುವ ತಾಂಡವ್​ಗೆ ಪತ್ನಿ ಭಾಗ್ಯ ಬೇಡವಾಗಿದೆ. ಆದ್ದರಿಂದ ಡಿವೋರ್ಸ್​ ಕೊಡಲು ಮುಂದಾಗಿದ್ದಾನೆ. ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಹೇಳಿದ್ದಾನೆ. ಆಕೆ ಮನೆ ಬಿಟ್ಟು ಕೂಡ ಹೋಗಿಯಾಗಿದೆ. 

ಮನೆಬಿಟ್ಟು ಹೋಗುವ ಸಮಯದಲ್ಲಿ,  ಭಾಗ್ಯ  ಪತಿಗೆ ಚಾಲೆಂಜ್​ ಹಾಕಿದ್ದಾಳೆ. ಏಳು ದಿನಗಳು ನಾನು ಮನೆಯಲ್ಲಿ ಇರುವುದಿಲ್ಲ. ನೀವು ಈ ಏಳು ದಿನಗಳನ್ನು ಚೆನ್ನಾಗಿ ನಿಭಾಯಿಸಿದ್ದೇ ಆದಲ್ಲಿ ನಿಮ್ಮ ಬಾಳಿನಿಂದ ದೂರ ಹೋಗುತ್ತೇನೆ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್​ ಖುಷಿಯಾಗಿದ್ದಾನೆ. ಹಾಗಿದ್ದರೆ ಗೆಲುವು ಯಾರದ್ದಾಗುತ್ತದೆ? ತಾಂಡವ್​ ಏಳು ದಿನಗಳಲ್ಲಿ ಮನೆಯನ್ನು ನಿಭಾಯಿಸಲು ಶಕ್ಯನಾಗುತ್ತಾನಾ? ಇದೇನು ದೊಡ್ಡ ಷರತ್ತು ಅಲ್ಲ ಎಂದು ಬೀಗುತ್ತಿರುವ ತಾಂಡವ್​ಗೆ ಹೆಂಡತಿ ಇಲ್ಲದೇ ಮನೆಯನ್ನು ನಿಭಾಯಿಸಲು ಸಾಧ್ಯವಾಗುತ್ತಾ? ಒಂದು ವೇಳೆ ಆತ ನಿಭಾಯಿಸಿದರೆ ಏನಾಗುತ್ತದೆ, ಆತ ಸೋತರೆ ಏನಾಗುತ್ತದೆ? ಇಂಥದ್ದೊಂದು ಕುತೂಹಲದ ತಿರುವಿಗೆ ಬಂದು ನಿಂತಿದೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​. 

ಬಾಲ್ಯದಿಂದಲೂ ಕಂಡ ಕನಸನ್ನು ಕುಟುಂಬಕ್ಕಾಗಿ ಹೆಣ್ಣು ತ್ಯಾಗ ಮಾಡೋದು ಸರೀನಾ? ಇದು ಅನಿವಾರ್ಯನಾ?


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?