ಬಿಸಿ ನೀರಿಗೆ ನಿಂಬೆ ರಸ slow poison: ವೈಷ್ಣವಿ ಡಯಟ್‌ ಗುಟ್ಟು ರಟ್ಟು

By Vaishnavi ChandrashekarFirst Published Jul 16, 2022, 1:24 PM IST
Highlights

12 ವರ್ಷಗಳಾಯ್ತು ನಾನ್‌ ವೆಜ್ ತಿನ್ನೋದು ಬಿಟ್ಟು. ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ?

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನೆ ಮಗಳಾದ ವೈಷ್ಣವಿ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಧಾರಾವಾಹಿಗಳಿಂದ ಬ್ರೇಕ್ ತೆಗೆದುಕೊಂಡು ವೈಷ್ಣವಿ ಯೂಟ್ಯೂಬ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಬ್ಯೂಟಿ ಕೇರ್, ಸ್ಕಿನ್ ಕೇರ್ ಮತ್ತು ಆರೋಗ್ಯ ಟಿಪ್ಸ್‌ ಹಂಚಿಕೊಳ್ಳುವ ವೈಷ್ಣವಿ ಈ ಸಲ ದಿನದಲ್ಲಿ ಏನೆಲ್ಲಾ ತಿನ್ನುತ್ತಾರೆ ಏನು ತಿಂದರೆ ಸಣ್ಣ ಆಗಬಹುದು ಎಂದು ಮಾತನಾಡಿದ್ದಾರೆ. 

'ಬೆಳಗ್ಗೆ ಎದ್ದು ನಾನು ಮೊದಲು ಧ್ಯಾನ ಮಾಡುವೆ. ಊಟ ಸರಿಯಾದ ಸಮಯಕ್ಕೆ ತಿನ್ನುತ್ತೀನೋ ಇಲ್ವೋ ಗೊತ್ತಿಲ್ಲ ಆದರೆ ನೀರು ಜಾಸ್ತಿ ಕುಡಿಯುವೆ. ನೀರಿದೆ ಅಂತ ಸುಮ್ಮನೆ ಕುಡಿಯಬಾರದು ಬಾಯಾರಿಕೆ ಆದರೆ ಮಾತ್ರ ಕುಡಿಯಬೇಕು. ಬಿಸಿ ನೀರು ನಿಂಬೆ ರಸ ಕುಡಿಯುವೆ. ತುಂಬಾ ಜನ ಒಂದು ತಪ್ಪು ಮಾಡುತ್ತಾರೆ, ಬಿಸಿ ನೀರು ನಿಂಬೆ ರಸ ಒಂದು ರೀತಿ ಸ್ಲೋ ಪಾಯಿಸನ್ ಈ ರೀತಿ ಮಾಡಬೇಡಿ.  ಸಕ್ಕರೆ ಇಷ್ಟ ಇಲ್ಲದವರು ಬೆಲ್ಲ ಅಥವಾ ಉಪ್ಪು ಸೇರಿಸಬಹುದು. ಹೊರಗಡೆ ನಾನು ತಿನ್ನುವುದಕ್ಕೆ ಇಷ್ಟ ಪಡುವುದಿಲ್ಲ ಮನೆಯಲ್ಲಿ ಮಾಡುವ ಊಟ ಮಾತ್ರ ತಿನ್ನುವುದು' ಎಂದು ವೈಷ್ಣವಿ ಹೇಳಿದ್ದಾರೆ.

'ಶೂಟಿಂಗ್ ಹೋಗುವ ದಿನ ನಾನು ಲೈಟ್ ಆಗಿ ಆಹಾರ ಸೇವಿಸುವೆ. ಡ್ರೈ ಫ್ರೂಟ್ಸ್‌ ಮತ್ತು ಬ್ರೆಡ್‌ ಪೀನಟ್‌ ಬಟರ್‌ ತಿಂಡಿಯಾಗಿ ತಿನ್ನುವೆ. ಮಧ್ಯಾಹ್ನ ಊಟಕ್ಕೆ ಅನ್ನ ಮತ್ತು ಟೋಮ್ಯಾಟೋ ಸಾಂಬರ್ ತಿನ್ನುವೆ. ದಿನವೂ ಒಂದೊಂದು ವೆರೈಟಿ ಇರುತ್ತೆ. ಊಟ ಆದ್ಮೇಲೆ ನನಗೆ ಒಂದು ಅಭ್ಯಾಸ ಇದೆ. ಸೋಂಪು ಕಾಳು ಸೇವಿಸುವೆ. ಜೀರ್ಣ ಚೆನ್ನಾಗಿ ಆಗುತ್ತದೆ ಆದರೆ ಕೆಲವರು ಇದು ಕೆಟ್ಟ ಅಭ್ಯಾಸ ಎಂದು ಹೇಳುತ್ತಾರೆ. ಊಟ ಆದ್ಮೇಲೆ ಸ್ವಲ್ಪ ವಾಕಿಂಗ್ ಮಾಡುವೆ' ಎಂದು ವೈಷ್ಣವಿ ವಿಡಿಯೋದಲ್ಲಿ ಮಾತನಾಡಿದ್ದಾರೆ. 

30 ಜೊತೆ ಬಟ್ಟೆ, ಚಪ್ಪಲಿ ಬೇಕೆ ಬೇಕು; Mrs India ಸತ್ಯ ಬಯಲು ಮಾಡಿದ ನಿವೇದಿತಾ ಗೌಡ!

'ನಾನ್‌ ವೆಜ್‌ ಬಿಟ್ಟು 12 ವರ್ಷ ಆಯ್ತು. ಸೋಮವಾರ, ಗುರುವಾರ ಮತ್ತು ಶನಿವಾರ ಬಿಟ್ಟು ಬೇರೆ ಎಲ್ಲಾ ದಿನ ಮಾಂಸ ಮಾಡುತ್ತಿದ್ದರು. ಮಾಂಸ ತಿನ್ನುವಾಗ ಆಕ್ಟಿವ್ ಆಗಿರುವುದಕ್ಕೆ ಆಗುತ್ತಿರಲಿಲ್ಲ ಮುಖ ಪಿಂಪಲ್ ಆಗುತ್ತಿತ್ತು ಹೊಟ್ಟೆ ಊದಿಕೊಳ್ಳುತ್ತಿತ್ತು. ನಾನ್‌ ವೆಬ್‌ ಬಿಡುವ ಒಳ್ಳೆಯ ನಿರ್ಧಾರ ತೆಗೆದುಕೊಂಡೆ ಅನಿಸುತ್ತದೆ. ತುಂಬಾ ಜನ ಪ್ರೂವ್ ಮಾಡಿದ್ದಾರೆ ನಾನ್‌ ವೆಚ್‌ ಮನುಷ್ಯರಿಗಲ್ಲ ಎಂದು. ಮಾಂಸ ನಮ್ಮ ರಕ್ತ ಜೊತೆ ಬೆರೆಯುವುದಕ್ಕೆ 60 ದಿನ ತೆಗೆದುಕೊಳ್ಳುತ್ತದೆ. ವೆಜ್ ಆಗಿರುವ ಕಾರಣ ನಾನು ಆರೋಗ್ಯವಾಗಿರುವುದನೇ ಸೇವಿಸುತ್ತಿ. ಊಟ ಮಾಡುವಾಗ ಎಂಜಾಯ್ ಮಾಡಿ ಏನೇ ಇದ್ದರೂ ಜೀರ್ಣ ಆಗುತ್ತೆ ಆರೋಗ್ಯವಾಗಿರಬಹುದು' ಎಂದಿದ್ದಾರೆ ವೈಷ್ಣವಿ.

6 ವರ್ಷ ಕಷ್ಟ ಪಟ್ಟು ಬೆಳೆಸಿದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿದ ಸುಶ್ಮಿತಾ ಗೌಡ!

'ಅನೇಕರು ಸಣ್ಣ ಆಗಲು ಏನೋ ಪೌಡರ್ ಕುಡಿಯುತ್ತಾರೆ, ಕಡಿಮೆ ತಿನ್ನಬೇಕು, ಜ್ಯೂಸ್‌ ಮಾತ್ರ ಸೇವಿಸಬೇಕು ಎನ್ನುತ್ತಾರೆ ಅದೆಲ್ಲಾ ಯಾವತ್ತೂ ಮಾಡಬೇಡಿ. ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರ ಅಹಾರ ಸೇವಿಸಬೇಕು. ನಿದ್ರೆ ಸರಿಯಾಗಿ ಮಾಡಿಲ್ಲ ಅಂದ್ರೆ ದಪ್ಪ ಆಗುತ್ತಾರೆ. ಬಾಡಿಗೆ ಸರಿಯಾಗಿ ರೆಸ್ಟ್‌ ಕೊಡಬೇಕು. ದಿನವೂ ತಪ್ಪದೆ ವರ್ಕೌಟ್ ಮಾಡಬೇಕು. Easting sleeping and workout ಜೀವನಕ್ಕೆ ತುಂಬಾನೇ ಮುಖ್ಯ. ನಾನು ದಪ್ಪ ಇದ್ದಾಗ ತುಂಬಾ ರೀಗಿಸುತ್ತಿದ್ದರು ಆಗ ನಾನು ಡ್ಯಾನ್ಸ್‌ ಮಾಡುತ್ತಿದ್ದೆ ಅದರಿಂದ ಸ್ಪಲ್ಪ ಸಣ್ಣ ಆದೆ' ಎಂದು ವೈಷ್ಣವಿ ಹೇಳಿದ್ದಾರೆ.

 

click me!